ವಿಕಲಚೇತನರು ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬರುವ ಬಸ್ ಗಳಲ್ಲಿ ಸಂಚಾರ ಮಾಡಲು ಬಸ್ ಪಾಸ್(Bus Pass Application) ಅನ್ನು ಪಡೆಯಲು ಅರ್ಹ ಅರ್ಜಿದಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿಕಲಚೇತನರಿಗೆ ಒಂದು ಸ್ಥಳ ದಿಂದ ಮತ್ತೊಂದು ಸ್ಥಳಕ್ಕೆ ಸಂಚಾರ ಮಾಡಲು ಬಸ್ ಟಿಕೆಟ್ ಪಡೆಯಲು ರಿಯಾಯಿತಿಯನ್ನು ಒದಗಿಸಲು ಅರ್ಹ ಫಲಾನುಭವಿಗಳನ್ನು ಗುರುತಿಸಿ ಬಸ್ ಪಾಸ್(Bus Pass) ಅನ್ನು ನೀಡಲು ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ.
ಬಸ್ ಪಾಸ್ ಅನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳೇನು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ನಿಗಮದಿಂದ ನಿಗದಿಪಡಿಸಿರುವ ಅರ್ಹತೆಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Cancelled ration card list-ಆಹಾರ ಇಲಾಖೆಯಿಂದ ರದ್ದಾದ ರೇಶನ್ ಕಾರ್ಡ ಪಟ್ಟಿ ಪ್ರಕಟ!
Who Can Apply For Bus Pass- ಅರ್ಜಿ ಸಲ್ಲಿಸಲು ಅರ್ಹರು:
1) ಬಸ್ ಪಾಸ್ ಅನ್ನು ಪಡೆಯಲು ವೈದ್ಯಕೀಯ ದಾಖಲಾತಿ ಪ್ರಕಾರ ವಿಕಲಚೇತನರಾಗಿರಬೇಕು.
2) ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು.
ಇದನ್ನೂ ಓದಿ: Gas Safety-ಮನೆಯಲ್ಲಿ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ಕುರಿತು ಈ ಮಾಹಿತಿ ತಪ್ಪದೇ ತಿಳಿಯಿರಿ!

Documents For Bus Pass- ಅರ್ಜಿ ಸಲ್ಲಿಸಲು ದಾಖಲೆಗಳು:
1) ಅರ್ಜಿದಾರರ ಆಧಾರ್ ಕಾರ್ಡ
2) ರೇಷನ್ ಕಾರ್ಡ್
3) ಪೋಟೋ
4) ಜಾತಿ ಪ್ರಮಾಣ ಪತ್ರ(ಅನ್ವಯಿಸದ್ದಲ್ಲಿ ಮಾತ್ರ)
5) UDID ಪ್ರಮಾಣ ಪತ್ರ
6) ಹಳೆಯ ಬಸ್ ಪಾಸ್(ಲಭ್ಯವಿದ್ದಲ್ಲಿ)
7) ವೈದ್ಯಕೀಯ ಪ್ರಮಾಣ ಪತ್ರ
ಇದನ್ನೂ ಓದಿ: MRI Scan-ಸರಕಾರದಿಂದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ! ಈ ಕಾರ್ಡ ಇದ್ದರೆ ಎಂಆರ್ಐ ಸ್ಕ್ಯಾನ್ ಉಚಿತ!
How to Apply For Ksrtc Bus Pass- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅಥವಾ ನೇರವಾಗಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಸ್ವಂತ ಅರ್ಜಿದಾರರೇ ಖುದ್ದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
KSRTC Bus Pass Benefits- ಬಸ್ ಪಾಸ್ ಪ್ರಯೋಜನಗಳೇನು?
ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯುವ ಎಲ್ಲಾ ಫಲಾನುಭವಿಗಳು ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಸ್ ಗಳಲ್ಲಿ ರಿಯಾಯಿತಿ ದರದಲ್ಲಿ ಸಂಚಾರ ಮಾಡಲು ಅವಕಾಶವಿರುತ್ತದೆ.
ಈ ಪಾಸ್ ಹೊಂದಿದ್ದರೆ ಇತರೆ ಯಾವುದೇ ಪ್ರಕಾರದ ಗುರುತಿನ ಚೀಟಿಗಳನ್ನು ಪ್ರಯಾಣದ ಸಮಯದಲ್ಲಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ.
For More Information- ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಿಗಮದ ಅಧಿಕೃತ ವೆಬ್ಸೈಟ್- Click Here