ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಮಾರ್ಗಸೂಚಿ ಪ್ರಕಾರ ಪಡಿತರ ಚೀಟಿ(Cancelled ration card) ಪಡೆಯಲು ಅನರ್ಹರಿರುವ ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಆಹಾರ ಇಲಾಖೆಯಿಂದ(Ahara ilake) ಪ್ರತಿ ತಿಂಗಳು ತನ್ನ ಅಧಿಕೃತ ಜಾಲತಾಣದಲ್ಲಿ ತಾಲ್ಲೂಕುವಾರು ಇಲಾಖೆಯ ಮಾರ್ಗಸೂಚಿ ಪ್ರಕಾರ ರೇಶನ್ ಕಾರ್ಡ(Ration card) ಪಡೆಯಲು ಅನರ್ಹ ಇರುವ ಪಡಿತರ ಚೀಟಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಈ ಪಟ್ಟಿಯನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ನೋಡಲು ಅವಕಾಶವಿದ್ದು ಈ ಅಂಕಣದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.
ಇದನ್ನೂ ಓದಿ: MRI Scan-ಸರಕಾರದಿಂದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ! ಈ ಕಾರ್ಡ ಇದ್ದರೆ ಎಂಆರ್ಐ ಸ್ಕ್ಯಾನ್ ಉಚಿತ!
ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ರದ್ದಾದ ಪಡಿತರ ಚೀಟಿ ಪಟ್ಟಿಯಲ್ಲಿ ಯಾವೆಲ್ಲ ಹೆಸರುಗಳು ಇವೆ ಎಂದು ಆಹಾರ ಇಲಾಖೆಯ(Karnataka Food Department) ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಲು ಅವಕಾಶವಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.
Ration Card Latetst News-ದೊಡ್ಡ ಸಂಖ್ಯೆಯಲ್ಲಿವೆ ಅನರ್ಹ ಬಿಪಿಎಲ್ ಪಡಿತರ ಚೀಟಿಗಳು:
ಆಹಾರ ಇಲಾಖೆಯ ಅಂಕಿ-ಅಂಶದ ಮಾಹಿತಿಯ ಪ್ರಕಾರ ಅರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಸಹ ಬಿಪಿಎಲ್ ಕಾರ್ಡ ಅನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು ಮಾರ್ಗಸೂಚಿ ಪ್ರಕಾರ ಬಿಪಿಎಲ್ ಕಾರ್ಡ ಪಡೆಯಲು ಅರ್ಹ ಇಲ್ಲದತಂಹ ಫಲಾನುಭವಿಗಳನ್ನು ಗುರುತಿಸಿ ಅಂತಹ ಜನರ ಬಿಪಿಎಲ್ ಕಾರ್ಡ ಅನ್ನು ರದ್ದು ಮಾಡಿ ಎಪಿಎಲ್ ಕಾರ್ಡಗೆ ಸೇರ್ಪಡೆ ಮಾಡಲಾಗುತ್ತಿದೆ.

Cancelled ration card list-2025: ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ಮೊಬೈಲ್ ನಲ್ಲಿ ಪಡೆಯುವ ವಿಧಾನ:
ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಆಹಾರ ಇಲಾಖೆಯ ಅಧಿಕೃತ ahara.karnataka.gov.in ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ರದ್ದಾದ ರೇಶನ್ ಕಾರ್ಡ ಪಟ್ಟಿಯಲ್ಲಿ ತಮ್ಮ ಹೆಸರಿ ಇದಿಯಾ ಎಂದು ಚೆಕ್ ಮಾಡಿಕೊಳ್ಳಬಹುದು.
ರದ್ದಾದ ರೇಶನ್ ಕಾರ್ಡ ಪಟ್ಟಿಯನ್ನು ತಿಂಗಳುವಾರು ಇಲಾಖೆಯ ahara ತಂತ್ರಾಂಶದಲ್ಲಿ ಪ್ರಕಟಿಸಲಾಗುತ್ತದೆ. ಗ್ರಾಹಕರು ಕೆಲವು ಆಯ್ಕೆಗಳನ್ನು ಸೆಲೆಕ್ಟ್ ಮಾಡಿಕೊಂಡು Serach ಬಟನ್ ಮೇಲೆ ಕ್ಲಿಕ್ ಮಾಡಿ ಕೆಳಗಿನ ಹಂತಗಳನ್ನು ಅನುಸರಿಸಿ ಪಟ್ಟಿಯನ್ನು ಪಡೆಯಬಹುದು.
ಇದನ್ನೂ ಓದಿ: Gas Safety-ಮನೆಯಲ್ಲಿ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ಕುರಿತು ಈ ಮಾಹಿತಿ ತಪ್ಪದೇ ತಿಳಿಯಿರಿ!
Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Cancelled ration card list ಮಾಡಿ ಅಧಿಕೃತ ಆಹಾರ ಇಲಾಖೆಯ ahara ತಂತ್ರಾಂಶವನ್ನು ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನ ಮುಖಪುಟದಲ್ಲಿ ಕಾಣುವ “ಇ-ಸೇವೆಗಳು” ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ಬಳಿಕ ಇಲ್ಲಿ ಬಲಬದಿಯಲ್ಲಿ ಕಾಣುವ “ಇ-ಪಡಿತರ ಚೀಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-4: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಈ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ತಿಂಗಳು, ವರ್ಷ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆ ತಿಂಗಳಲ್ಲಿ ನಿಮ್ಮ ತಾಲ್ಲೂಕಿನಲ್ಲಿ ರದ್ದಾದ ಪಡಿತರ ಚೀಟಿ ಪಟ್ಟಿಯನ್ನು ನೋಡಬಹುದು.
ಇದನ್ನೂ ಓದಿ: Kisan ID Card-ಪಿಎಂ ಕಿಸಾನ್ ಹಣ ಪಡೆಯಲು ನೂತನ ಐಡಿ ಕಾರ್ಡ! ಇಲ್ಲಿದೆ ಸಂಪೂರ್ಣ ವಿವರ!
Ration Card Village List-ಅರ್ಹ ಪಡಿತರ ಚೀಟಿ ಪಟ್ಟಿಯನ್ನು ಇದೆ ವೆಬ್ಸೈಟ್ ನಲ್ಲಿ ನೋಡಬಹುದು:
ಪಡಿತರ ಚೀಟಿ ಹೊಂದಿರುವ ಹಳ್ಳಿವಾರು ಅರ್ಹ ಫಲಾನುಭವಿಗಳ ಪಟ್ಟಿಯನ್ನು ಈ ತಂತ್ರಾಂಶದಲ್ಲಿ ನೋಡಲು ಅವಕಾಶವಿದ್ದು ಈ ಲಿಂಕ್ Ration Card Village List ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಿ “ಇ-ಪಡಿತರ ಚೀಟಿ” ಬಟನ್ ಮೇಲೆ ಕ್ಲಿಕ್ ಮಾಡಬೇಕು .
ತದನಂತರ ಕೆಳಗೆ ಕಾಣಿಸುವ “ಹಳ್ಳಿ ಪಟ್ಟಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು “Go” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯ ಅರ್ಹ ರೇಶನ್ ಕಾರ್ಡದಾರರ ಪಟ್ಟಿ ತೆರೆದುಕೊಳ್ಳುತ್ತದೆ.