Bus Pass Application-ಏಪ್ರಿಲ್ 10ರವರೆಗೆ ಬಸ್ ಪಾಸ್ ಮಾನ್ಯತೆ ವಿಸ್ತರಣೆ, ಹೊಸ ಅರ್ಜಿ ಸಲ್ಲಿಕೆ ಹೇಗೆ?

April 3, 2026 | Siddesh
Bus Pass Application-ಏಪ್ರಿಲ್ 10ರವರೆಗೆ ಬಸ್ ಪಾಸ್ ಮಾನ್ಯತೆ ವಿಸ್ತರಣೆ, ಹೊಸ ಅರ್ಜಿ ಸಲ್ಲಿಕೆ ಹೇಗೆ?
Share Now:

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮಹತ್ವದ ಸುದ್ದಿಯೊಂದನ್ನು ನೀಡಿದೆ. ಸಾಮಾನ್ಯವಾಗಿ ಕಳೆದ ವರ್ಷ ಪಡೆದ ಬಸ್ ಪಾಸ್‌ಗಳ(Student Bus Pass Application) ಅವಧಿ ಮಾರ್ಚ್ 31ಕ್ಕೆ ಮುಕ್ತಾಯಗೊಳ್ಳುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಇನ್ನು ಕೂಡ ಹಲವು ಶೈಕ್ಷಣಿಕ ತರಗತಿಗಳು ಹಾಗೂ ಪರೀಕ್ಷೆಗಳು ಮುಗಿಯದ ಕಾರಣ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಳೆಯ ಪಾಸ್‌ಗಳ ಮಾನ್ಯತೆಯನ್ನು ಏಪ್ರಿಲ್ 10ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಉಂಟಾಗುತ್ತಿದ್ದ ಪ್ರಯಾಣದ ಆತಂಕ ದೂರವಾದಂತಾಗಿದೆ.

ಸಾರಿಗೆ ಸಂಸ್ಥೆಯ ಈ ನಿರ್ಧಾರದಿಂದಾಗಿ ರಾಜ್ಯಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಅಲ್ಲಿಯವರೆಗೆ ಹಳೆಯ ಪಾಸ್(Bus Pass Online Application) ತೋರಿಸಿಯೇ ಎಂದಿನಂತೆ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸಬಹುದಾಗಿದೆ. ಇದರ ಜೊತೆಗೆ, ಮುಂದಿನ ಶೈಕ್ಷಣಿಕ ಸಾಲಿಗೆ ಅಥವಾ ಬಾಕಿ ಇರುವ ದಿನಗಳಿಗೆ ಹೊಸ ಪಾಸ್ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಡಿಪೋಗಳಿಗೆ ಅಲೆದಾಡುವುದನ್ನು ತಪ್ಪಿಸಲು ಈ ಬಾರಿ ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Free Computer Courses-ಉಚಿತ ಕಂಪ್ಯೂಟರ್ ಕಲಿಕಾ ತರಬೇತಿಗೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಿಸಿ!

ವಿದ್ಯಾರ್ಥಿಗಳು ತಮ್ಮ ಹತ್ತಿರದ KSRTC ಡಿಪೋ ಕಚೇರಿ ಅಥವಾ ಗ್ರಾಮ ಒನ್(Grama One) ಹಾಗೂ ಕರ್ನಾಟಕ ಒನ್(Karnataka One) ಕೇಂದ್ರಗಳ ಮೂಲಕವೂ ಭೌತಿಕವಾಗಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ನೀವೇ ಸ್ವತಃ ಅರ್ಜಿ ಸಲ್ಲಿಸುವುದಾದರೆ, ಸೇವಾ ಸಿಂಧು ಪೋರ್ಟಲ್ ಮೂಲಕ ಮೊಬೈಲ್‌ನಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆಧಾರ್ ಕಾರ್ಡ್, ಕಾಲೇಜು ಗುರುತಿನ ಚೀಟಿ ಹಾಗೂ ಫೋಟೋಗಳಂತಹ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಲಾಗಿದೆ.

Student Bus Pass Validity-ಏ.10 ರ ವರೆಗೆ ವಿದ್ಯಾರ್ಥಿ ಬಸ್ ಪಾಸ್ ಮಾನ್ಯತೆ ವಿಸ್ತರಣೆ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯಿಂದ ಕಳೆದ ವರ್ಷ ಪಡೆದ ಬಸ್ ಪಾಸ್ ಮಾರ್ಚ್ 31ಕ್ಕೆ ಮುಕ್ತಾವಾಗಿತ್ತದೆ ಎಂದು ಪಾಸ್ ನಲ್ಲಿ ನಮೂದಿಸಲಾಗುತ್ತದೆ ಅದರೆ ಇನ್ನು ಸಹ ಶೈಕ್ಷಣಿಕ ತರಗತಿಗಳು ಮುಕ್ತಾಯವಾಗದಿರುವ ಹಿನ್ನೆಲೆಯಲ್ಲಿ ಎಪ್ರಿಲ್ 10 ರ ವರೆಗೆ ಕಳೆದ ವರ್ಷದ ಬಸ್ ಪಾಸ್ ಮಾನ್ಯತೆಯನ್ನು ವಿಸ್ತರಣೆ ಮಾಡಲಾಗಿದೆ.

ಇದನ್ನೂ ಓದಿ: Government Office Timings-ಸರ್ಕಾರಿ ಕಚೇರಿಗಳ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆ!

How To Apply For Student Bus Pass-ಎಲ್ಲಿ ಅರ್ಜಿ ಸಲ್ಲಿಸಬೇಕು?

ವಿದ್ಯಾರ್ಥಿಗಳು ಬಸ್ ಪಾಸ್ ಅನ್ನು ಪಡೆಯಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದು ಹತ್ತಿರದ KSRTC ಡಿಪೋ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರ ಮೂಲಕ ಅಥವಾ ಸ್ವಂತ ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ ಬಸ್ ಪಾಸ್ ಅನ್ನು ಪಡೆಯಬಹುದು.

Ducuments For Student Bus Pass-ಬಸ್ ಪಾಸ್ ಪಡೆಯಲು ಅವಶ್ಯಕ ದಾಖಲೆಗಳು:

ವಿದ್ಯಾರ್ಥಿಯ ಆಧಾರ್ ಕಾರ್ಡ್/Aadhar card
ಶಾಲೆ/ಕಾಲೇಜು ಗುರುತಿನ ಚೀಟಿ/Identity card
ವಿದ್ಯಾರ್ಥಿ ಫೋಟೋ/Photocopy
ಜಾತಿ ಪ್ರಮಾಣಪತ್ರ/Cast certificate(ಆನ್ವಯಿಸಿದ್ದಲ್ಲಿ ಮಾತ್ರ)
ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Census-2026: ಇಂದಿನಿಂದ ಮೊಬೈಲ್ ಮೂಲಕ ಸ್ವಯಂ-ಜನಗಣತಿ ಆರಂಭ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

Bus Pass Application

Bus Pass Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿಗಳು KSRTC ಬಸ್ ಪಾಸ್‌ಗಾಗಿ ಅರ್ಜಿಯನ್ನು ಸಲ್ಲಿಸಲು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಾನಗಳಲ್ಲಿಯು ಅವಕಾಶವಿರುತ್ತದೆ. ವಿದ್ಯಾರ್ಥಿಗಳು ಬಸ್ ಡಿಪೋ ಮತ್ತು ಸಾರಿಗೆ ಇಲಾಕೆಯ ಕಚೇರಿಯಲ್ಲಿ ಅಥವಾ ನೇರವಾಗಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.

Step-1: ಬಸ್ ಪಾಸ್ ಅನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಮೊದಲ ಹಂತದಲ್ಲಿ ಈ Ksrtc Bus Pass Online Application ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Marriage Assistance Scheme-ಕಾರ್ಮಿಕ ಮಂಡಳಿಯಿಂದ 60,000 ರೂ ಮದುವೆ ಸಹಾಯಧನಕ್ಕೆ ಅರ್ಜಿ ಆಹ್ವಾನ!

Step-2: ನಂತರ ಇಲ್ಲಿ ಲಾಗಿನ್ ವಿಭಾಗದಲ್ಲಿ ಈಗಾಗಲೇ ನೋಂದಣಿಯನ್ನು ಮಾಡಿಕೊಂಡಿರುವ ಬಳಕೆದಾರರು ತಮ್ಮ ಮೊಬೈಲ್ ನಂಬರ್/ಇಮೇಲ್ ಅನ್ನು ಹಾಕಿ Get OTP ಬಟನ್ ಮೇಲೆ ಕ್ಲಿಕ್ ಮಾಡಿ
ಒಟಿಪಿ ಪಡೆದಿ ಅದನ್ನು ನಮೂದಿಸಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಹಾಕಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು. ಹೊಸ ಬಳಕೆದಾರರು ಅಗತ್ಯ ವಿವರವನ್ನು ಭರ್ತಿ ಮಾಡಿ ಬಳಕೆದಾರ ಐಡಿಯನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

Step-3: ಲಾಗಿನ್ ಅದ ನಂತರ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಸರ್ಚ್ ಕಾಲಂ ನಲ್ಲಿ"Bus pass" ಎಂದು ಸರ್ಚ ಮಾಡಿದರೆ ಅರ್ಜಿ ನಮೂನೆ ಕಾಣಿಸುತ್ತದೆ ಇಲ್ಲಿ Apply Now ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಮತ್ತು ದಾಖಲಾತಿಗಳನ್ನುಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಅರ್ಜಿಯನ್ನು ಸಲ್ಲಿಕೆಯಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: