CET Result 2025-ಸಿಇಟಿ ಫಲಿತಾಂಶ ಪ್ರಕಟ!ಇಲ್ಲಿದೆ ಅಧಿಕೃತ ವೆಬ್ಸೈಟ್ ಲಿಂಕ್!

May 25, 2025 | Siddesh
CET Result 2025-ಸಿಇಟಿ ಫಲಿತಾಂಶ ಪ್ರಕಟ!ಇಲ್ಲಿದೆ ಅಧಿಕೃತ ವೆಬ್ಸೈಟ್ ಲಿಂಕ್!
Share Now:

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ವರ್ಷದ ಸಿಇಟಿ ಫಲಿತಾಂಶವನ್ನು(CET Result) ತನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ಈ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಹಿದೆ.

ಎಂಜಿನಿಯರಿಂಗ್‌(Engineering admission) ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರು ಫಲಿತಾಂಶ ಪ್ರಕಟಿಸಿದ್ದಾರೆ.

ಇದನ್ನೂ ಓದಿ: Bele Parihara-38.5 ಲಕ್ಷ ರೈತರ ಖಾತೆಗೆ 3535 ಕೋಟಿ ಬೆಳೆ ಹಾನಿ ಪರಿಹಾರ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದರ ಬಗ್ಗೆ ಅಧಿಕೃತ ಪ್ರಕಟಣೆಯನ್ನು(CET Result 2025 Karnataka) ಹೊರಡಿಸಿದ್ದು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶದ ವಿವರಗಳು ಲಭ್ಯವಿದ್ದು ವಿದ್ಯಾರ್ಥಿಗಳು ಈ ವೆಬ್ಸೈಟ್ ಅನ್ನು ಭೇಟಿ ಮಾಡಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.

How To Check CET Result-ಆನ್ಲೈನ್ ನಲ್ಲಿ ಸಿಇಟಿ ಫಲಿತಾಂಶವನ್ನು ನೋಡುವ ವಿಧಾನ:

ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಸಿಇಟಿ ಫಲಿತಾಂಶವನ್ನು ನೋಡಬಹುದಾಗಿದೆ.

ವಿಧಾನ-1: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ವೆಬ್ಸೈಟ್:

Step-1: ಮೊದಲಿಗೆ CET Result Check ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ/Karnataka Examination Authority ದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Mini Tractor Subsidy-ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಘಟಕಗಳಿಗೆ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

CET Result

ಇದನ್ನೂ ಓದಿ: BPL Card Benefits-ಬಿಪಿಎಲ್‌ ಕಾರ್ಡ್‌ದಾರರಿಗೆ ಇನ್ನುಂದೆ ಈ ಚಿಕಿತ್ಸೆ ಉಚಿತ!

Step-2: ಬಳಿಕ ಇಲ್ಲಿ ಮುಖಪುಟದಲ್ಲಿ "ಇತ್ತೀಚಿನ ಪ್ರಕಟಣೆಗಳು" ವಿಭಾಗದಲ್ಲಿ ಕಾಣುವ "24-05 UGCET - 2025 ಫಲಿತಾಂಶಗಳ ಲಿಂಕ್" ಬಟನ್ ಮೇಲೆ ಕ್ಲಿಕ್ ಮಾಡಿದರೆ "UGCET - 2025 examination Result For Professional Courses Admissions" ಪೇಜ್ ತೆರೆದುಕೊಳ್ಳುತ್ತದೆ.

Step-3: ಈ ಪೇಜ್ ನಲ್ಲಿ ವಿದ್ಯಾರ್ಥಿಯ Application Number ಮತ್ತು Date Of Birth ವಿವರವನ್ನು ನಮೂದಿಸಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಿಇಟಿ ಫಲಿತಾಂಶದ ವಿವರ ಗೋಚರಿಸುತ್ತದೆ.

ಇದನ್ನೂ ಓದಿ: Gruhalakshmi-ಗೃಹಲಕ್ಷ್ಮಿ ಯೋಜನೆಯಡಿ ಒಂದು ತಿಂಗಳ ಹಣ ಬಿಡುಗಡೆ!

ವಿಧಾನ-2: Karnataka Examination Results-2025 ವೆಬ್ಸೈಟ್ ನಲ್ಲಿ ಚೆಕ್ ಮಾಡಬಹುದು:

ವಿದ್ಯಾರ್ಥಿಗಳು ಈ ಎರಡನೇ ವಿಧಾನವನ್ನು ಸಹ ಅನುಸರಿಸಿ "ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ"ಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿಯು ಸಹ CET Result-2025 ಅನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ CET Result Status ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Agriculture Department-ಕೃಷಿ ಇಲಾಖೆಯಿಂದ ರೈತರಿಗೆ ಮಹತ್ವದ ಮಾಹಿತಿ ಪ್ರಕಟ!

Step-2: ತದನಂತರ ಈ ಪೇಜ್ ನಲ್ಲಿ "CET ಪರೀಕ್ಷೆ ಫಲಿತಾಂಶ ಪ್ರಕಟಣೆ /CET Examination Results announced on 24th May 2025" ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು

Step-3: ಬಳಿಕ ಈ ಪೇಜ್ ನಲ್ಲಿ ವಿದ್ಯಾರ್ಥಿಗಲು ತಮ್ಮ ಅರ್ಜಿಯ ಸಂಖ್ಯೆ/Application No, ವಿದ್ಯಾರ್ಥ್ಯಿಯ ಹೆಸರು ಹಾಕಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಿಇಟಿ ಫಲಿತಾಂಶದ ವಿವರ ಗೋಚರಿಸುತ್ತದೆ.

ಇದನ್ನೂ ಓದಿ: Subsidy Seeds Rate list-ಕೃಷಿ ಇಲಾಖೆಯಿಂದ ಬಿತ್ತನೆ ಬೀಜದ ದರ ಪಟ್ಟಿ ಬಿಡುಗಡೆ!

CET Result 2025

ಇದನ್ನೂ ಓದಿ: Bele Vime- 81.36 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಿಡುಗಡೆ!

CET Result-2025: ಫಲಿತಾಂಶ ಲಭ್ಯವಾಗದ ವಿದ್ಯಾರ್ಥಿಗಳ ಗಮನಕ್ಕೆ:

ದಿನಾಂಕ 24-05-2025 ರಂದು ಸಿಇಟಿ-2025 ರ ಫಲಿತಾಂಶವನ್ನು ಪ್ರಕಟಿಸಿದ್ದು, ಕೆಲವು ಅಭ್ಯರ್ಥಿಗಳು ಹಿಂದಿನ ವರ್ಷದಲ್ಲಿ 2ನೇ ಪಿಯು / 12ನೇ ತರಗತಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದು, ಆದರೆ ಫಲಿತಾಂಶ ಪ್ರಕಟವಾಗಿಲ್ಲ ಎಂದು ಮನವಿಗಳನ್ನು ಸಲ್ಲಿಸುತ್ತಿರುತ್ತಾರೆ.

ಎಂದು ಸಿಇಟಿ-2025 ರ ಫಲಿತಾಂಶವನ್ನು ಪ್ರಕಟಿಸುವ ಮೊದಲು 2ನೇ ಪಿಯು / 12ನೇ ತರಗತಿ ಅಂಕಗಳನ್ನು ಆಯಾ ಮಂಡಳಿಗಳಿಂದಲೇ ಪಡೆಯಲಾಗುವುದು ಎಂದು ಸೂಚಿಸಲಾಗಿತ್ತು ಮತ್ತು ಅಭ್ಯರ್ಥಿಗಳು ಸರಿಯಾದ ನೊಂದಣಿ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ ಸೂಚಿಸಲಾಗಿರುತ್ತದೆ. ನೋಂದಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸದ ಕಾರಣದಿಂದ ಸಿಇಟಿ-2025 ರ ಫಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳಿಗೆ ಅಂಕಗಳನ್ನು ದಾಖಲಿಸಲು ಅವಕಾಶ ನೀಡುವ ಸಲುವಾಗಿ, 26-05-2025 ರಿಂದ ಆನ್‌ಲೈನ್ ಲಿಂಕ್ ಅನ್ನು ತೆರೆಯಲಾಗುವುದು.

ಸದರಿ ಲಿಂಕ್ ನಲ್ಲಿ ಅಭ್ಯರ್ಥಿಗಳು 2ನೇ ಪಿಯು / 12ನೇ ತರಗತಿ ಅಂಕಗಳನ್ನು ನೋಂದಣಿ ಸಂಖ್ಯೆಯೊಂದಿಗೆ ದಾಖಲಿಸಬೇಕು ಮತ್ತು ಅಂಕಪಟ್ಟಿಯನ್ನು (Marks Card) ಅಪ್ ಲೋಡ್ ಮಾಡಬೇಕು. ಅಭ್ಯರ್ಥಿಗಳು ದಾಖಲಿಸುವ ಅಂಕಗಳನ್ನು ಆಯಾ ಪರೀಕ್ಷಾ ಮಂಡಳಿಯಿಂದ ಪರಿಶೀಲಿಸಿ ಧೃಡೀಕರಿಸಿದ ನಂತರವೇ ಸ್ಪಾಟ್ ರ್ಯಾಂಕ್ ಅನ್ನು ದಿನಾಂಕ 29-05-2025 ರಿಂದ ನೀಡಲು ಕ್ರಮವಹಿಸಲಾಗುವುದು.

ಸ್ಪಾಟ್ ಬ್ಯಾಂಕ್ ಪಡೆಯಲು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಬರುವ ಅವಶ್ಯಕತೆ ಇರುವುದಿಲ್ಲ. ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಅಧಿಕೃತವಾಗಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

WhatsApp Group Join Now
Telegram Group Join Now
Share Now: