Bele Parihara-38.5 ಲಕ್ಷ ರೈತರ ಖಾತೆಗೆ 3535 ಕೋಟಿ ಬೆಳೆ ಹಾನಿ ಪರಿಹಾರ!

May 25, 2025 | Siddesh
Bele Parihara-38.5 ಲಕ್ಷ ರೈತರ ಖಾತೆಗೆ 3535 ಕೋಟಿ ಬೆಳೆ ಹಾನಿ ಪರಿಹಾರ!
Share Now:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದು ಮೇ-2025 ತಿಂಗಳಿಗೆ ಎರಡು ವರ್ಷ ಪೂರ್ಣಗೊಳಿಸಿದ್ದು ಈ ಸಮಯದಲ್ಲಿ ಬೆಳೆ ಹಾನಿ(Bele Parihara) ಪರಿಹಾರದ ಹಣ ಬಿಡುಗಡೆ ಕುರಿತು ಸರ್ಕಾರದಿಂದ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದ್ದು್,ಇದರ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

2024-25 ನೇ ಸಾಲಿನಲ್ಲಿ ಒಟ್ಟು ಮೂರು ಹಂಗಾಮು ಅಂದರೆ ಪೂರ್ವ ಮುಂಗಾರು(Mugaru), ಮುಂಗಾರು, ಹಿಂಗಾರು(Hingaru) ಸೇರಿ ಅಧಿಕ ಮಳೆಯಿಂದಾಗಿ ಬೆಳೆ ಹಾನಿಯಾದ ಒಟ್ಟು 38.5 ಲಕ್ಷ ರೈತರ ಖಾತೆಗೆ ಬೆಳೆ ಹಾನಿ ಪರಿಹಾರವನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕೃತವಾಗಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: CET Result 2025-ಸಿಇಟಿ ಫಲಿತಾಂಶ ಪ್ರಕಟ!ಇಲ್ಲಿದೆ ಅಧಿಕೃತ ವೆಬ್ಸೈಟ್ ಲಿಂಕ್!

ಈ ಅಂಕಣದಲ್ಲಿ ಸರ್ಕಾರದಿಂದ ಇಲ್ಲಿಯವರೆಗೆ ಎಷ್ಟು ಮೊತ್ತದ ಬೆಳೆ ಹಾನಿ(Bele Hani Parihara) ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಸಂಪೂರ್ಣ ಅಂಕಿ-ಅಂಶದ ವಿವರವನ್ನು ಮತ್ತು ಬೆಳೆ ಹಾನಿ ಪರಿಹಾರದ ಹಣ ಜಮಾ ವಿವರವನ್ನು ರೈತರು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು? ಎನ್ನುವ ವಿವರವನ್ನು ಸಹ ಈ ಕೆಳಗೆ ಹಂಚಿಕೊಳ್ಳಲಾಗಿದೆ.

Bele Parihara Amount-38.5 ಲಕ್ಷ ರೈತರ ಖಾತೆಗೆ 3535 ಕೋಟಿ ಬೆಳೆ ಹಾನಿ ಪರಿಹಾರ:

ಕಳೆದ ಸಾಲಿನಲ್ಲಿ ಅಂದರೆ 2024 ನೇ ವರ್ಷದಲ್ಲಿ ಮೂರು ಹಂಗಾಮಿನಲ್ಲಿ ಅತೀಯಾದ ಮಳೆಯಿಂದ ಬೆಳೆ ಹಾನಿಗೆ(Crop Loss amount)ಒಳಗಾದ ಅರ್ಹ ರೈತರ ಖಾತೆಗೆ ಇಲ್ಲಿಯವರೆಗೆ ಸರ್ಕಾರದಿಂದ 38.5 ಲಕ್ಷ ರೈತರ ಖಾತೆಗೆ 3535 ಕೋಟಿ ಬೆಳೆ ಹಾನಿ ಪರಿಹಾರವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: Mini Tractor Subsidy-ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಘಟಕಗಳಿಗೆ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Bele Parihara Website-ಬೆಳೆ ಹಾನಿ ಪರಿಹಾರ ವಿತರಣೆಗೆ ತಂತ್ರಾಂಶ:

ರೈತರಿಗೆ ಸಮರ್ಪಕವಾಗಿ ಬೆಳೆ ಹಾನಿ ಪರಿಹಾರವನ್ನು ಒದಗಿಸಲು ಮತ್ತು ಅರ್ಹ ರೈತರಿಗೆ ಈ ಪರಿಹಾರದ ಹಣ ಯಾವುದೇ ಮಧ್ಯವರ್ತಿಗಳಿಲ್ಲದೇ ಜಮಾ ಮಾಡಲು ರಾಜ್ಯ ಸರ್ಕಾರದಿಂದ ಕಂದಾಯ ಇಲಾಖೆಯ ಸಹಯೋಗದಲ್ಲಿ Parihara ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.

ರೈತರ ವೈಯಕ್ತಿಕ ವಿವರ ಮತ್ತು ಜಮೀನಿನ ವಿವರ, ಬ್ಯಾಂಕ್ ಖಾತೆ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ಬೆಳೆ ಹಾನಿಯಾದ ಸಮಯದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಅಪ್ಲೋಡ್ ಮಾಡಿ ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಬೆಳೆ ಹಾನಿಯ ಪರಿಹಾರದ ಹಣವನ್ನು ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಕೊಡದೇ ಹಣವನ್ನು ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: BPL Card Benefits-ಬಿಪಿಎಲ್‌ ಕಾರ್ಡ್‌ದಾರರಿಗೆ ಇನ್ನುಂದೆ ಈ ಚಿಕಿತ್ಸೆ ಉಚಿತ!

Bele Parihara Status- ಮೊಬೈಲ್ ನಲ್ಲೇ ಬೆಳೆ ಹಾನಿ ಪರಿಹಾರದ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿ:

ಸರ್ಕಾರದಿಂದ ಬೆಳೆ ಹಾನಿ ಪರಿಹಾರದ ಹಣ ಜಮಾ ಆಗಿರುವ ಸಂಪೂರ್ಣ ವಿವರವನ್ನು ರೈತರು ತಮ್ಮ ಮನೆಯಲ್ಲೇ ಇದ್ದು ಯಾವುದೇ ಸರ್ಕಾರಿ ಕಚೇರಿಯನ್ನು ಭೇಟಿ ಮಾಡದಯೇ ಎಷ್ಟು ಹಣ ಜಮಾ ಅಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ಒಂದೆರಡು ಕ್ಲಿಕ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ವೆಬ್ಸೈಟ್ ಲಿಂಕ್ Bele Parihara Status Check ಮೇಲೆ ಒತ್ತಿ ಕಂದಾಯ ಇಲಾಖೆಯ Parihara ಜಾಲತಾಣವನ್ನು ಪ್ರವೇಶ ಮಾಡಬೇಕು.

Bele Parihara (14)

Step-2: ತದನಂತರ ಈ ಪೇಜ್ ನ ಕೆಳಗೆ ಎಡಬದಿಯಲ್ಲಿ ತೋರಿಸುವ "Village Wise List" ಆಯ್ಕೆಯ ಮೇಲೆ ಒತ್ತಿ ಮುಂದುವರೆಯಬೇಕು.

Step-3: ಇದಾದ ಬಳಿಕ ಈ ಪೇಜ್ ನಲ್ಲಿ ರೈತರು ವರ್ಷ ಮತ್ತು ಋತು, ವಿಪತ್ತಿನ ವಿಧ, ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು "Get Report/ವರದಿ ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಎಷ್ಟು ಜನರಿಗೆ ಇಲ್ಲಿಯವರೆಗೆ ಒಟ್ಟು ಎಷ್ಟು ಮೊತ್ತದ ಬೆಳೆ ಹಾನಿ ಪರಿಹಾರದ ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ತೋರಿಸುತ್ತದೆ.

ಇದನ್ನೂ ಓದಿ: Subsidy Seeds Rate list-ಕೃಷಿ ಇಲಾಖೆಯಿಂದ ಬಿತ್ತನೆ ಬೀಜದ ದರ ಪಟ್ಟಿ ಬಿಡುಗಡೆ!

Bele Parihara Farmers List-ಪಟ್ಟಿಯಲ್ಲಿ ಯಾವೆಲ್ಲ ಮಾಹಿತಿ ಲಭ್ಯ?

ರೈತರು ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಬೆಳೆ ಹಾನಿ ಪರಿಹಾರದ ಹಣ ಜಮಾ ವಿವರದ ತಮ್ಮ ಹಳ್ಳಿಯ ಪಟ್ಟಿಯನ್ನು ಚೆಕ್ ಮಾಡಿದಾಗ ಈ ಪಟ್ಟಿಯಲ್ಲಿ ರೈತರ ಹೆಸರು, ಹಾನಿಯಾದ ಜಮೀನಿನ ವಿವರ, ಪರಿಹಾರದ ಹಣ ವರ್ಗಾವಣೆ ಅದ ದಿನಾಂಕ, ಎಷ್ಟು ಮೊತ್ತದ ಪರಿಹಾರ ಜಮಾ ಅಗಿದೆ? ಎನ್ನುವ ಸಂಪೂರ್ಣ ವಿವರವನ್ನು ಈ ಪಟ್ಟಿಯಲ್ಲಿ ನೋಡಬಹುದು.

Bele Parihara status (6)

ಇದನ್ನೂ ಓದಿ: Bele Vime- 81.36 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಿಡುಗಡೆ!

Bele Parihara enquiry-ಬೆಳೆ ಹಾನಿ ಪರಿಹಾರದ ಕುರಿತು ಎಲ್ಲಿ ವಿಚಾರಿಸಬೇಕು?

ರೈತರು ಕಳೆದ ವರ್ಷ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯು ಅತೀಯಾದ ಮಳೆಯಿಂದ ಹಾನಿಯಾಗಿದೆ ಎಂದು ಈಗಾಗಲೇ ಅರ್ಜಿಯನ್ನು ಸಲ್ಲಿಸಿ ಪರಿಹಾರಕ್ಕಾಗಿ ಕಾಯುತ್ತಿರುವ ರೈತರು ಒಂದೊಮ್ಮೆ ನಿಮಗ ಬೆಳೆ ಹಾನಿ ಪರಿಹಾರದ ಹಣ ಜಮಾ ಅಗಿಲ್ಲದೇ ಇದ್ದರೆ ಕೂಡಲೇ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಒಮ್ಮೆ ಭೇಟಿ ಮಾಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

Bele Parihara Twitter Post-ಬೆಳೆ ಹಾನಿ ಪರಿಹಾರದ ಹಣ ವರ್ಗಾವಣೆ ಕುರಿತು ಟ್ವಿಟರ್ ಪೋಸ್ಟ್:

ವಾರ್ತಾ ಇಲಾಖೆಯು ತಮ್ಮ ಅಧಿಕೃತ ಟ್ವಿಟರ್/ಎಕ್ಸ್ ಖಾತೆಯಲ್ಲಿ ಬೆಳೆ ಹಾನಿ ಪರಿಹಾರದ ಹಣ ವರ್ಗಾವಣೆ ಕುರಿತು ಹಂಚಿಕೊಂಡಿರುವ ಮಾಹಿತಿ ಈ ಕೆಳಗಿನಂತಿದೆ:


WhatsApp Group Join Now
Telegram Group Join Now
Share Now: