Bele Vime- 81.36 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಿಡುಗಡೆ!

May 22, 2025 | Siddesh
Bele Vime- 81.36 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಿಡುಗಡೆ!
Share Now:

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ರೈತರ ಬೆಳೆಗಳಿಗೆ ಬೆಳೆ ವಿಮೆ ಪರಿಹಾರವನ್ನು(Horticulture Crop Insurance) ಒದಗಿಸಲು ಪ್ರಧಾನ ಮಂತ್ರಿ ಪಸಲ್ ಭೀಮಾ ಯೋಜನೆಯನ್ನು(Fasal bhima yojana) ಅನುಷ್ಠಾನಗೊಳಿಸಲಾಗುತ್ತಿದ್ದು ಈ ಯೋಜನೆಯಡಿ ಬಾಕಿ ಉಳಿಸಿಕೊಂಡಿರುವ ಬೆಳೆ ವಿಮಾ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದ್ದು ಇದರ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ತೋಟಗಾರಿಕೆ ಬೆಳೆಯಾದ ಅಡಿಕೆ(Adike bele vime) ಸೇರಿದಂತೆ ಇನ್ನಿತರೆ ಬೆಳೆಯ ಬೆಳೆ ವಿಮೆ ಪರಿಹಾರದ(Bele vime amount) ಬಾಕಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡಲಾಗಿದ್ದು ರೈತರು ತಮ್ಮ ಮೊಬೈಲ್ ನಲ್ಲಿ ಪರಿಹಾರದ ಹಣ ಜಮಾ ಅಗಿರುವ ವಿವರವನ್ನು ಹೇಗೆ ಪಡೆಯುವುದು ಎಂದು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: MSP Scheme Amount-ಬೆಂಬಲ ಬೆಲೆ ಯೋಜನೆಯಡಿ ರೈತರ ಖಾತೆಗೆ ಹಣ ಬಿಡುಗಡೆ!

ಪ್ರಧಾನ ಮಂತ್ರಿ ಪಸಲ್ ಭೀಮಾ ಯೋಜನೆಯಡಿ(Crop Insurance Scheme) ಯಾವೆಲ್ಲ ಭಾಗದ ರೈತರಿಗೆ ಪ್ರಸ್ತುತ ಬೆಳೆ ವಿಮೆ ಪರಿಹಾರವನ್ನು ವರ್ಗಾವಣೆ ಮಾಡಲಾಗಿದೆ? ಹಣ ವರ್ಗಾವಣೆ ಸ್ಥಿತಿಯನ್ನು ರೈತರು ತಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು?

Crop Insurance Amount-ರೈತರ ಖಾತೆಗೆ ಬೆಳೆ ವಿಮೆ ಹಣ:

ರಾಜ್ಯಾದ್ಯಂತ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಸೌಲಭ್ಯವನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರಧಾನ ಮಂತ್ರಿ ಪಸಲ್ ಭೀಮಾ ಯೋಜನೆ (PMFBY) ಯಡಿ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ (RWBCS) ಯೋಜನೆ ಅನುಷ್ಠಾನಗೊಳಿಸುತ್ತಿದ್ದು,

ಈ ಯೋಜನೆಯಡಿ ಅರ್ಹ ರೈತರ ಖಾತೆಗೆ ಉತ್ತರಕನ್ನಡ ಜಿಲ್ಲೆಯ 136 ವಿಮಾ ಘಟಕಗಳಲ್ಲಿ 193 ವಿಮಾ ಘಟಕ ಬೆಳೆ ಸಂಯೋಜನೆ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಪ್ರಸ್ತುತ ಇದನ್ನು ಪರಿಹರಿಸಲಾಗಿದ್ದು, ವಿಮಾ ಸಂಸ್ಥೆ ವತಿಯಿಂದ 80,191 ರೈತರಿಗೆ ಬೆಳೆ ವಿಮೆ ಪರಿಹಾರವನ್ನು ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: Tarpaulin Subsidy-ಕೃಷಿ ಇಲಾಖೆಯಿಂದ ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅವಕಾಶ!

Crop Insurance Amount Details-80,191 ರೈತರ ಖಾತೆಗೆ 81.36 ಕೋಟಿ ವಿಮಾ ಪರಿಹಾರ ಬಿಡುಗಡೆ!

ಮುಂಗಾರು 2023-2024 ಕ್ಕೆ ಸಂಬಂಧಿಸಿದಂತೆ ಅನುಷ್ಠಾನ ವಿಮಾ ಸಂಸ್ಥೆಯು ಉತ್ತರಕನ್ನಡ ಜಿಲ್ಲೆಯ 136 ವಿಮಾ ಘಟಕಗಳಲ್ಲಿ 193 ವಿಮಾ ಘಟಕ ಬೆಳೆ ಸಂಯೋಜನೆ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿತ್ತು. ಪ್ರಸ್ತುತ ಇದನ್ನು ಪರಿಹರಿಸಲಾಗಿದ್ದು, ವಿಮಾ ಸಂಸ್ಥೆ ವತಿಯಿಂದ 80,191 ರೈತರಿಗೆ ರೂ. 81.36 ಕೋಟಿ ವಿಮಾ ಪರಿಹಾರವನ್ನು ಅರ್ಹ ರೈತರ ಆಧಾರ್ ಜೋಡಿತ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿ ಮಾಡಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Bele vime parihara-ಒಟ್ಟು 1248.55 ಕೋಟಿ ಬೆಳೆ ವಿಮೆ ವರ್ಗಾವಣೆ:

ಒಟ್ಟಾರೆಯಾಗಿ ರಾಜ್ಯದಲ್ಲಿ 2023-2024ಕ್ಕೆ ಸಂಬಂಧಿಸಿದಂತೆ 5.58 ಲಕ್ಷ ಅರ್ಹ ರೈತರಿಗೆ ರೂ. 1248.55 ಕೋಟಿ ವಿಮಾ ಪರಿಹಾರವನ್ನು ಸಂಬಂಧಿತ ವಿಮಾ ಸಂಸ್ಥೆಗಳಿಂದ ಪಾವತಿಯಾಗಿರುತ್ತದೆ. ಈ ಕುರಿತು ಯಾವುದೇ ಬಗ್ಗೆಯ ತಾಂತ್ರಿಕ ಸಮಸ್ಯೆಯಿದ್ದಲ್ಲಿ ಯಾವುದೇ ಸಮಸ್ಯೆಗಳಿಗಾಗಿ ತಮ್ಮ ಬ್ಯಾಂಕ್ ಶಾಖೆ ಅಥವಾ ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖಾ ಕಚೇರಿಗಳಿಗೆ ಸಂಪರ್ಕಿಸುವಂತೆ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Pumpset Repair Training-ಉಚಿತ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Horticulture Crop Insurance Status-ಬೆಳೆ ವಿಮೆ ಹಣ ಜಮಾ ವಿವರವನ್ನು ತಿಳಿಯುವ ವಿಧಾನ:

ರೈತರು ತಮ್ಮ ಮೊಬೈಲ್ ನಲ್ಲೇ ಬೆಳೆ ವಿಮೆ ಪರಿಹಾರ ಹಣ ಜಮಾ ವಿವರವನ್ನು ಮತ್ತು ಬೆಳೆ ವಿಮೆ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಲು ಅವಕಾಶವಿದ್ದು ಇದರ ಕುರಿತು ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Step-1: ಮೊದಲಿಗೆ ಇಲ್ಲಿ ಕ್ಲಿಕ್ Crop Insurance Status Check ಮಾಡಿ ಅಧಿಕೃತ ಬೆಳೆ ವಿಮೆ ಯೋಜನೆಯ ಸಂರಕ್ಷಣೆ ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Best Pension Scheme-ತಿಂಗಳಿಗೆ ರೂ 5,000/- ಪಿಂಚಣಿ ಸೌಲಭ್ಯ! ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ!

Crop Insurance

ಇದನ್ನೂ ಓದಿ: Marriage Registration-ಮ್ಯಾರೇಜ್ ರಿಜಿಸ್ಟ್ರೇಷನ್ ಮಾಡಿಸಲು ಈ ದಾಖಲೆ ಕಡ್ಡಾಯ!

Step-2: ಬಳಿಕ ಈ ಪೇಜ್ ನಲ್ಲಿ "2023-24" ಎಂದು ವರ್ಷವನ್ನು ಆಯ್ಕೆ ಮಾಡಿಕೊಂಡು ಬಳಿಕ ಋತು "Kharif/ಮುಂಗಾರು" ಎಂದು ಆಯ್ಕೆ ಮಾಡಿ "ಮುಂದೆ/Go" ಎಂದು ಗೋಚರಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ತದನಂತರ ಈ ಪುಟದಲ್ಲಿ ಕೆಳಗೆ ಕಾಣುವ "Farmers" ವಿಭಾಗದಲ್ಲಿ "Check Status" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆ ಅಥವಾ ಅರ್ಜಿ ಸಂಖ್ಯೆ ಎರಡರಲ್ಲಿ ಒಂದನ್ನು ಹಾಕಿ ಅಲ್ಲೇ ಕೆಳಗೆ ಕಾಣುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಬೆಳೆ ವಿಮೆ ಅರ್ಜಿ ವಿವರ ಕಾಣಿಸುತ್ತವೆ.

Step-4: ಇದರಲ್ಲಿ ಒಂದು ಅರ್ಜಿಯ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಾಗ ಕೆಳಗೆ "Proposal Status" ಆಯ್ಕೆಯಲ್ಲಿ ಬೆಳೆ ವಿಮೆ ಅರ್ಜಿಯ ಸ್ಥಿತಿ ಗೊಚರಿಸುತ್ತದೆ ಇದರ ಕೆಳಗೆ ಕಾಣುವ "UTR Details" ಆಯ್ಕೆಯಲ್ಲಿ ನಿಮಗೆ ಎಷ್ಟು ಬೆಳೆ ವಿಮೆ ಪರಿಹಾರದ ಹಣ ಜಮಾ ಅಗಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೋಡಬಹುದು.

ಒಂದೊಮ್ಮೆ ಬೆಳೆ ವಿಮೆ ಪರಿಹಾರದ ಹಣ ಜಮಾ ಅಗಿಲ್ಲದಿದ್ದರೆ "No data found" ಎಂದು ಗೋಚರಿಸುತ್ತದೆ.

Bele vime Website-ಬೆಳೆ ವಿಮೆ ಯೋಜನೆಯ ಅಧಿಕೃತ ವೆಬ್ಸೈಟ್- Click here

WhatsApp Group Join Now
Telegram Group Join Now
Share Now: