Best Pension Scheme-ತಿಂಗಳಿಗೆ ರೂ 5,000/- ಪಿಂಚಣಿ ಸೌಲಭ್ಯ! ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ!

May 20, 2025 | Siddesh
Best Pension Scheme-ತಿಂಗಳಿಗೆ ರೂ 5,000/- ಪಿಂಚಣಿ ಸೌಲಭ್ಯ! ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ!
Share Now:

ಅಸಂಘಟಿತ ವಲಯದ ಸಾರ್ವಜನಿಕರಿಗೆ ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಸರ್ಕಾರದಿಂದ ಅಟಲ್ ಪಿಂಚಣಿ ಯೋಜನೆ (APY)ಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಈ ಯೋಜನೆಯಡಿ ತಿಂಗಳಿಗೆ ರೂ 5,000/- ವರೆಗೆ ಪಿಂಚಣಿಯನ್ನು(Atal Pension Yojana) ಪಡೆಯಲು ಅವಕಾಶವಿದ್ದು ಇದರ ಕುರಿತು ಅಂದರೆ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಅಟಲ್ ಪಿಂಚಣಿ ಯೋಜನೆ (APY) ಭಾರತ ಸರ್ಕಾರದ ಪ್ರಮುಖ ಪಿಂಚಣಿ(Best Pension Plan) ಯೋಜನೆಯಾಗಿದ್ದು, ವಿಶೇಷವಾಗಿ ಅಸಂಘಟಿತ ವಲಯದ ಜನರಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDAವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮೂಲಕ ಈ ಯೋಜನೆಯನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ: Marriage Registration-ಮ್ಯಾರೇಜ್ ರಿಜಿಸ್ಟ್ರೇಷನ್ ಮಾಡಿಸಲು ಈ ದಾಖಲೆ ಕಡ್ಡಾಯ!

APY ಯೋಜನೆಯು 60 ವರ್ಷದ ನಂತರ ₹1,000 ರಿಂದ ₹5,000 ವರೆಗಿನ ಖಾತರಿಯಾದ ಮಾಸಿಕ ಪಿಂಚಣಿಯನ್ನು(Monthly Pension Plan) ಒದಗಿಸುತ್ತದೆ, ಇದು ಅರ್ಜಿದಾರರು ಪ್ರತಿ ತಿಂಗಳು ಎಷ್ಟು ಪಾವತಿ ಮಾಡಿ ನೋಂದಣಿ ಮಾಡಿಕೊಳ್ಳುತ್ತಾರೋ ಅದರ ಮೇಲೆ ಅವಲಂಬಿತವಾಗಿರುತ್ತದೆ.

Atal Pension Yojana-2025: ಅಟಲ್ ಪಿಂಚಣಿ ಯೋಜನೆ ಎಂದರೇನು?

2015-16ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾದ APY ಯೋಜನೆಯು, ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರಾದ ಗೃಹ ಕೆಲಸಗಾರರು, ತೋಟಗಾರರು, ಮತ್ತು ವಿತರಣಾ ಕಾರ್ಮಿಕರಂತಹವರಿಗೆ ಸ್ವಯಂಪ್ರೇರಿತ ಉಳಿತಾಯದ ಮೂಲಕ ನಿವೃತ್ತಿಯಲ್ಲಿ ಪಿಂಚಣಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಈ ಯೋಜನೆಯು ಹಿಂದಿನ ಸ್ವಾವಲಂಬನ ಯೋಜನೆಯನ್ನು ಬದಲಾಯಿಸಿದ್ದು, 18 ರಿಂದ 40 ವರ್ಷದೊಳಗಿನ ಎಲ್ಲ ಭಾರತೀಯ ನಾಗರಿಕರಿಗೆ ಲಭ್ಯವಿದೆ. ಭಾರತ ಸರ್ಕಾರದ ಬೆಂಬಲದಿಂದ ಕನಿಷ್ಠ ಪಿಂಚಣಿಯ ಖಾತರಿಯನ್ನು ಒದಗಿಸುವ ಈ ಯೋಜನೆಯಲ್ಲಿ ಗ್ರಾಹಕರು ₹1,000, ₹2,000, ₹3,000, ₹4,000, ಅಥವಾ ₹5,000 ಮಾಸಿಕ ಪಿಂಚಣಿಯನ್ನು ಆಯ್ಕೆ ಮಾಡಬಹುದು, ಇದಕ್ಕೆ ತಕ್ಕಂತೆ ಅರ್ಜಿದಾರರು ತಾವು ಪ್ರತಿ ತಿಂಗಳು ಕಟ್ಟವ ಮೊತ್ತ ಬದಲಾಗುತ್ತದೆ.

ಇದನ್ನೂ ಓದಿ: Flipkart Scholarship Application-ಫ್ಲಿಪ್‌ಕಾರ್ಟ್ ಸ್ಕಾಲರ್‌ಶಿಪ್! ₹50,000 ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಸಲ್ಲಿಸಿ!

How To Apply For Pension Scheme-ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಅಥವಾ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ನಿಗದಿಪಡಿಸಿ ಮೊತ್ತವನ್ನು ಪಾವತಿ ಮಾಡಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆಯಲು ನೋಂದಣಿಯನ್ನು ಮಾಡಿಕೊಳ್ಳಬಹುದು ಅಥವಾ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

Online Apply Method-ಆನ್ಲೈನ್ ಮೂಲಕ ನೋಂದಣಿಯನ್ನು ಮಾಡಿಕೊಳ್ಳುವ ವಿಧಾನ:

ಆಸಕ್ತ ನಾಗರಿಕರು ತಮ್ಮ ಮನೆಯಲ್ಲೇ ಇದ್ದು ಮೊಬೈಲ್ ಮೂಲಕ ಈ ಕೆಳಗೆ ತಿಳಿಸಿರುವ ವಿಧಾನಗಳನ್ನು ಅನುಸರಿಸಿ ಈ ಯೋಜನೆಯಡಿ ಪಿಂಚಣಿ ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಿ ನಿಗದಿತ ಮೊತ್ತವನ್ನು ಪಾವತಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ Register Now ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Sonalika Tractor Offer-ಸೋನಾಲಿಕಾ ಟ್ರ್ಯಾಕ್ಟರ್ ಖರೀದಿ ಮೇಲೆ ಬರೊಬ್ಬರಿ ₹1.00 ಲಕ್ಷ ಡಿಸ್ಕೌಂಟ್!

Atal Pension Yojana (2)

ಇದನ್ನೂ ಓದಿ: Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!

Step-2: ತದನಂತರ ಈ ಪೇಜ್ ನಲ್ಲಿ ಕಾಣುವ "Atal Pension Yojana(APY)"ಬಟನ್ ಮೇಲೆ ಕ್ಲಿಕ್ ಮಾಡಿ "APY Registration" ಮೇಲೆ ಒತ್ತಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-3: ಅರ್ಜಿ ನಮೂನೆಯಲ್ಲಿ ಅರ್ಜಿದಾರರು ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೆಳಗೆ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Continue" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ಈ ಪುಟದಲ್ಲಿ ಅರ್ಜಿದಾರರು ಅಗತ್ಯ ದಾಖಲಾತಿ ಮತ್ತು ನಿಗದಿಪಡಿಸಿದ ಮೊತ್ತವನ್ನು ಪಾವತಿ ಮಾಡಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಗೆ ನಿಮ್ಮ ನೋಂದಣಿಯು ಯಶಸ್ವಿಯಾಗಿರುತ್ತದೆ.

ಇದನ್ನೂ ಓದಿ: Gruhalakshmi Amount-ಈ ಜಿಲ್ಲೆಯ ಮಹಿಳೆಯ ಖಾತೆಗೆ 1,095 ಕೋಟಿ ಗೃಹಲಕ್ಷ್ಮಿ ಹಣ!

Required Documents For Pension Yojana-ಅರ್ಜಿ ಸಲ್ಲಿಸಲು ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
2) ಪೋಟೋ
3) ಬ್ಯಾಂಕ್ ಪಾಸ್ ಬುಕ್ ಪ್ರತಿ
4) ವೋಟರ್ ಐಡಿ ಪ್ರತಿ
5) ಮೊಬೈಲ್ ನಂಬರ್

Pension Monthy Amount-ಪ್ರತಿ ತಿಂಗಳು ಎಷ್ಟು ಮೊತ್ತ ಪಾವತಿ ಮಾಡಬೇಕು?

1) ಈಗ 18 ವರ್ಷ ತುಂಬಿಸುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಪ್ರತಿ ತಿಂಗಳು ಈ ಕೆಳಗೆ ತಿಳಿಸಿರುವ ಪಿಂಚಣಿ ಮೊತ್ತಕ್ಕೆ ಅನುಗುಣವಾಗಿ ಮೊತ್ತವನ್ನು ಪಾವತಿ ಮಾಡಬೇಕು.

₹1000 ಪಿಂಚಣಿಗೆ-₹42
₹2000 ಪಿಂಚಣಿಗೆ-₹84
₹3000 ಪಿಂಚಣಿಗೆ-₹125
₹4000 ಪಿಂಚಣಿಗೆ-₹168
₹5000 ಪಿಂಚಣಿಗೆ-₹210

ಇದನ್ನೂ ಓದಿ: Free Hostel-2025: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

2) 40 ವರ್ಷ ತುಂಬಿಸುವವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಪ್ರತಿ ತಿಂಗಳು ಈ ಕೆಳಗೆ ತಿಳಿಸಿರುವ ಪಿಂಚಣಿ ಮೊತ್ತಕ್ಕೆ ಅನುಗುಣವಾಗಿ ಮೊತ್ತವನ್ನು ಪಾವತಿ ಮಾಡಬೇಕು.

₹1000 ಪಿಂಚಣಿಗೆ-₹291
₹2000 ಪಿಂಚಣಿಗೆ-₹582
₹3000 ಪಿಂಚಣಿಗೆ-₹873
₹4000 ಪಿಂಚಣಿಗೆ-₹1,164
₹5000 ಪಿಂಚಣಿಗೆ-₹1,454

ಇದನ್ನೂ ಓದಿ: Bembala Bele Yojane- ರೈತರಿಂದ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ!

Pension Scheme Details-ಪಿಂಚಣಿ ನೀಡುವ ವಿಧಾನ:

ಅರ್ಜಿದಾರರು 60 ವರ್ಷ ಪೂರ್ಣಗೊಳಿಸಿದ ಬಳಿಕ ತಾವು ಪ್ರತಿ ತಿಂಗಳು ಪಾವತಿ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಪಿಂಚಣಿಯನ್ನು ಪಡೆಯುತ್ತಾರೆ.

ಒಂದೊಮ್ಮೆ ಅರ್ಜಿದಾರರು ಮರಣ ಹೊಂದಿದ್ದರೆ ನಾಮಿನಿದಾರರಿಗೆ(ಅವರ ಹೆಂಡತಿ/ತಂದೆ/ತಾಯಿ/ಮಕ್ಕಳು/ಪೋಷಕರು) ಪಿಂಚಣಿ ಮೊತ್ತ ಸಿಗುತ್ತದೆ.

Atal Pension Yojana Website-ಈ ಯೋಜನ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಅಧಿಕೃತ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ-Click here

WhatsApp Group Join Now
Telegram Group Join Now
Share Now: