Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!

May 15, 2025 | Siddesh
Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!
Share Now:

ಸಾರ್ವಜನಿಕರು ಬೋರ್ವೆಲ್ ಅನ್ನು(Borewell) ಕೊರೆಸಲು ಕೆಲವು ಅನುಮತಿಗಳನ್ನು ಪಡೆಯುವುದನ್ನು ಸರ್ಕಾರದಿಂದ ಕಡ್ಡಾಯಗೊಳಿಸಲಾಗಿದ್ದು ತಪ್ಪದ್ದಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ದಿನಗಳಲ್ಲಿ ದಿನೇ ದಿನೇ ಏರುಗತಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬೋರ್ ವೆಲ್/ಕೊಳವೆ ಬಾವಿಗಳನ್ನು(Borewell Scheme)ಕೊರೆಸುವವರ ಸಂಖ್ಯೆಯು ಸಹ ಹೆಚ್ಚುತ್ತಲೇ ಸಾಗುತ್ತಿದ್ದು ಇದನ್ನು ಸಮರ್ಪಕವಾಗಿ ನಿರ್ವಹಿಸಲು ಅಂತರ್ಜಲ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯುವುದರ ಕುರಿತು ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನು ಹೊರಡಿಸಿದ್ದು ಇದರ ಕುರಿತು ಸಹ ಈ ಅಂಕಣದಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನೂ ಓದಿ: E-Swathu Documents-ಗ್ರಾಮ ಪಂಚಾಯತಿಯಲ್ಲಿ ಇ ಸ್ವತ್ತು ವಿತರಣೆಗೆ ನೂತನ ಆದೇಶ ಪ್ರಕಟ!

ಪ್ರಸ್ತುತ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊಳವೆ ಬಾವಿ/ಬೋರ್ವೆಲ್ ಅನ್ನು(borewell agency bangalore) ಕೊರೆಸಲು ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು ಎನ್ನುವ ನಿಯಮವನ್ನು ಜಾರಿಗೆ ಮಾಡಲಾಗಿದ್ದು ಇನ್ನಿತರ ಜಿಲ್ಲೆಯ ಸಾರ್ವಜನಿಕರು ಯಾವೆಲ್ಲ ಕ್ರಮಗಳನ್ನು ಪಾಲನೆ ಮಾಡಬೇಕು ಇದಕ್ಕಾಗಿ ಸರ್ಕಾರದಿಂದ ಜಾರಿಯಲ್ಲಿರುವ ನಿಯಮಗಳೇನು ಎನ್ನವ ವಿವರವನ್ನು ಸಹ ಇಲ್ಲಿ ಹಂಚಿಕೊಳ್ಳಲಾಗಿದೆ.

Borewell news in karnataka-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ದಾಖಲೆಯನ್ನು ಪಡೆಯುವುದು ಕಡ್ಡಾಯ!

ಪ್ರಸ್ತುತ ಬೆಂಗಳೂರು ನಗರ ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಬೋರ್ವೆಲ್ ಅನ್ನು ಕೊರೆಸಲು ರಾಜ್ಯ ಅಂತರ್ಜಲ ಪ್ರಾಧಿಕಾರದ ಕಚೇರಿಯಲ್ಲಿ ಸಾರ್ವಜನಿಕರು ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸಿ ಬೋರ್ವೆಲ್ ಕೊರೆಸಲು ಅನುಮತಿಯನ್ನು ತಪ್ಪದೇ ಪಡೆದುಕೊಳ್ಳಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗಿದೆ.

ಇದೇ ಮಾದರಿಯಲ್ಲಿ ಉಳಿದ ಜಿಲ್ಲೆಯ ಸಾರ್ವಜನಿಕರು ತಮ್ಮ ತಮ್ಮ ಜಿಲ್ಲೆಯ ವ್ಯಾಪ್ತಿಯ ಅಂತರ್ಜಲ ಪ್ರಾಧಿಕಾರದ ಕಚೇರಿಯಲ್ಲಿ ಬೋರ್ವೆಲ್ ಅನ್ನು ಕೊರೆಸಲು ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು ಎನ್ನುವ ನಿಯಮವನ್ನು ಜಾರಿಗೆ ತರಲಾಗಿದ್ದು ಅದರೆ ಹಳ್ಳಿ ಮಟ್ಟದಲ್ಲಿ ಈ ನಿಯಮವು ಇನ್ನು ಸಹ ಕಟ್ಟುನಿಟ್ಟಾಗಿ ಪಾಲನೆ ಮಾಡುವ ಹಂತಕ್ಕೆ ಬಂದಿರುವುದಿಲ್ಲ.

ಇದನ್ನೂ ಓದಿ: Bele Parihara List-ಹಿಂಗಾರು ಬೆಳೆ ಪರಿಹಾರ ಹಣ ಬಿಡುಗಡೆ ಪಟ್ಟಿ ಬಿಡುಗಡೆ!

Borewell Permission (3)

Borewell-ಅಕ್ಕ-ಪಕ್ಕದವರು ತಕರಾರು ಅರ್ಜಿ ಸಲ್ಲಿಸಿದ ಕಷ್ಟಕರ:

ಸಾರ್ವಜನಿಕರು ಬೋರ್ವೆಲ್ ಅನ್ನು ಕೊರೆಸುವ ಮುಂಚಿತವಾಗಿ ಯಾವುದೇ ಬಗ್ಗೆಯ ಅನುಮತಿಯನ್ನು ಪಡೆಯದೇ ತಮ್ಮದೇ ಜಾಗ ಎಂದು ಯಾವ ದಾಖಲೆಯನ್ನು ಇಟ್ಟುಕೊಳ್ಳದೇ ಬೋರ್ವೆಲ್ ಅನ್ನು ಕೊರೆಸಲು ಮುಂದಾದ ಒಂದೊಮ್ಮೆ ಅಕ್ಕ-ಪಕ್ಕದ ಜಾಗದ/ಜಮೀನಿನ ಮಾಲೀಕರು ಸಂಬಂಧಪಟ್ಟ ಸರ್ಕಾರಿ ಕಚೇರಿಯಲ್ಲು ಅಧಿಕೃತ ಅಥವಾ ಮಾನ್ಯ ಕಾರಣದ ಸಮೇತ ತಕರಾರು ಅರ್ಜಿ ಸಲ್ಲಿಸಿದ ಇಂತಹ ಸನ್ನಿವೇಶದಲ್ಲಿ ನಿಮಗೆ ಬೋರ್ವೆಲ್ ಕೊರೆಸಲು ಸಾಧ್ಯವಾಗದೇ ಇರಬಹುದು.

Water Resources Department-ರಾಜ್ಯದಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ:

ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿರುವ ಬೋರ್ವೆಲ್ ಗಳಿಂದ ಅಂತರ್ಜಲ ಮಟ್ಟವು ತೀವ್ರ ಕುಸಿತವನ್ನು ಕಾಣುತ್ತಿದ್ದು ಈ ಕಾರಣದಿಂದ ಹೊಸದಾಗಿ ಬೋರ್ವೆಲ್ ಅನ್ನು ಕೊರೆಸಲು ಯೋಜನೆಯನ್ನು ಹಾಕಿಕೊಂಡಿರುವವರು ಅಂತರ್ಜಿಅಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದಡಿ ಕಾರ್ಯನಿರ್ವಹಿಸುವ ಸರ್ಕಾರಿ ಕಚೇರಿಗಳಿಂದ ಆಕ್ಷೇಪಣಾ ಪ್ರಮಾಣ ಪತ್ರ ಮತ್ತು ಆಕ್ಯುಪೆನ್ಸಿ ಪ್ರಮಾಣ ಪತ್ರಕ್ಕೆ ಅನುಮತಿಯನ್ನು ಕಡ್ದಾಯವಾಗಿ ಪಡೆದುಕೊಳ್ಳಬೇಕು ಎಂದು ನೂತನ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bangalore Weather-ಅವಧಿಗೂ ಮುನ್ನ ಮುಂಗಾರು ಮಳೆ! ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ ಮಾಹಿತಿ!

Borewell Permission Application-ಬೆಂಗಳೂರಿನಲ್ಲಿ ಅನುಮತಿ ಪಡೆಯುವುದು ಕಡ್ಡಾಯ:

ಬೋರ್ವೆಲ್ ನೀರನ್ನು ಕಟ್ಟಡಗಳಲ್ಲಿ ವಾಸಿಸುವ ಜನರು ಬಳಕೆ ಮಾಡಿಕೊಳ್ಳಲು ಕೊಳವೆ ಬಾವಿಯನ್ನು ಕೊರೆಸುವವರು ಬೆಂಗಳೂರು ನಗರದಲ್ಲಿ ಕಡ್ಡಾಯವಾಗಿ ಅನುಮತಿಯನ್ನು ಪಡೆದುಕೊಳ್ಳಬೇಕು ಇಲ್ಲವಾದಲ್ಲಿ ನೋಟಿಸ್ ಪಡೆದುಕೊಳ್ಳಬೇಕಾಗುತ್ತದೆ.

Borewell-ಅನುಮತಿ ಪಡೆಯದವರಿಗೆ ನೋಟಿಸ್:

ಬೋರ್ವೆಲ್ ಕೊರೆಸಲು ಅನುಮತಿಯನ್ನು ಪಡೆದುಕೊಳ್ಳದೇ ಇರುವವರಿಗೆ ಪ್ರಾಧಿಕಾರದಿಂದ ನೋಟಿಸ್ ಅನ್ನು ನೀಡಲಾಗುತ್ತಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Ration Card And LPG-ಜೂನ್ 01 ರಿಂದ ರೇಷನ್ ಕಾರ್ಡ ಮತ್ತು LPG ಸಿಲಿಂಡರ್ ವಿತರಣೆಯಲ್ಲಿ ಪ್ರಮುಖ ಬದಲಾವಣೆ!

Borewell Permission Required Documents-ಅನುಮತಿ ಪಡೆಯಲು ಯಾವೆಲ್ಲ ದಾಖಲೆಗಳು ಅವಶ್ಯಕ:

ಬೋರ್ವೆಲ್ ಕೊರೆಸಲು ಅನುಮತಿಯನ್ನು ಪಡೆಯಲು ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಸಲ್ಲಿಸಬೇಕು.

  • ಕೈ ಬರಹದ ಅರ್ಜಿ
  • ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
  • ನಿವೇಶನ/ಜಾಗದ ಮಾಲೀಕತ್ವ ದಾಖಲೆಗಳು
  • ಅರ್ಜಿದಾರರ ಮೊಬೈಲ್ ನಂಬರ್
  • ಪೋಟೋ

ನೀರು ಬರದೇ ಇದ್ದಲ್ಲಿ ತಪ್ಪದೇ ಈ ಕ್ರಮ ಅನುಸರಿಸಿ:

ಕೊಳವೆ ಬಾವಿಯನ್ನು ಕೊರೆಸಿದ ಬಳಿಕ ನೀರು ಬಿಳದೇ ಇದ್ದ ಪಕ್ಷದಲ್ಲಿ ಸಾರ್ವಜನಿಕರು ತಪ್ಪದೇ ಅಗತ್ಯ ವಸ್ತುಗಳನ್ನು ಬಳಕೆ ಮಾಡಿಕೊಂಡು ಆ ಕೊಳವೆ ಬಾವಿಯನ್ನು ಮುಚ್ಚಬೇಕು ಮತ್ತು ಸಣ್ಣ ಮಕ್ಕಳು ಆ ಪ್ರದೇಶದಲ್ಲಿ ಹೋಗಲು ದಾರಿ ಇಲ್ಲದಂತೆ ಅಗತ್ಯ ಕ್ರಮಗಳನ್ನು ತಪ್ಪದೇ ಕೈಗೊಳ್ಳಬೇಕು.

ಇದನ್ನೂ ಓದಿ: Nrega Yojane-2025: ನರೇಗಾ ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ 370/- ರೂ ಪಾವತಿ!

Borewell subsidy schemes-ಬೊರ್ವೆಲ್ ಕೊರೆಸಲು ಸಬ್ಸಿಡಿ ಯೋಜನೆಗಳು:

ಕರ್ನಾಟಕ ರಾಜ್ಯದಲ್ಲಿ ರೈತರು ಕೃಷಿ ಉಪಯೋಗಕ್ಕಾಗಿ ಹಲವು ನಿಗಮಗಳಿಂದ ವಿವಿಧ ಯೋಜನೆಯಡಿ ಸಹಾಯಧನವನ್ನು ಪಡೆದು ಕೊಳವೆ ಬಾವಿಯನ್ನು ಕೊರೆಸಲು ಅವಕಾಶವಿದ್ದು ಆ ಯೋಜನೆಗಳ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

1) ಗಂಗಾ ಕಲ್ಯಾಣ ಯೋಜನೆ
2) ಜೀವಜಲ ಯೋಜನೆ

ಇದನ್ನೂ ಓದಿ: Caste Survey Karnataka-ರಾಜ್ಯಾದ್ಯಂತ ಮನೆ-ಮನೆ ಜಾತಿಗಳ ಸಮೀಕ್ಷೆ ಕುರಿತು ಮಹತ್ವದ ಮಾಹಿತಿ ಪ್ರಕಟ!

Borewell Subsidy Yojana-ಯಾವೆಲ್ಲ ನಿಗಮಗಳಿಂದ ಸಬ್ಸಿಡಿ ಪಡೆಯಲು ಅವಕಾಶವಿದೆ?

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ (Dr. B.R. Ambedkar Development Corporation)
  • ಮಹರ್ಷಿ ವಾಲ್ಮೀಕಿ ಆದಿವಾಸಿ ಅಭಿವೃದ್ಧಿ ನಿಗಮ (Maharshi Valmiki ST Development Corporation)
  • ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (D. Devaraj arasu Backward Classes Development Corporation)
  • ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ(Okalika abhivrudi nigama)
  • ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ(Ligayat nigama)
  • ಕರ್ನಾಟಕ ಉಪ್ಪರ ಅಭಿವೃದ್ಧಿ ನಿಗಮ (Karnataka Uppara Development Corporation)
  • ವಿಶ್ವಕರ್ಮಾ ಅಭಿವೃದ್ಧಿ ನಿಗಮ (Vishwakarma Development Corporation)
  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ (Karnataka Minorities Development Corporation Ltd - KMDC)

ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಯಾ ನಿಗಮದ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ.

WhatsApp Group Join Now
Telegram Group Join Now
Share Now: