Bele Parihara List-ಹಿಂಗಾರು ಬೆಳೆ ಪರಿಹಾರ ಹಣ ಬಿಡುಗಡೆ ಪಟ್ಟಿ ಬಿಡುಗಡೆ!

May 14, 2025 | Siddesh
Bele Parihara List-ಹಿಂಗಾರು ಬೆಳೆ ಪರಿಹಾರ ಹಣ ಬಿಡುಗಡೆ ಪಟ್ಟಿ ಬಿಡುಗಡೆ!
Share Now:

2024-25 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದ ಬೆಳೆ ಹಾನಿಯಾದ(Bele hani) ರೈತರ ಖಾತೆಗೆ ಈಗಾಗಲೇ ಹಣವನ್ನು ಜಮಾ ಮಾಡಲಾಗಿದ್ದು ಇದರ ಕುರಿತು ಅಧಿಕೃತ ಹಳ್ಳಿವಾರು ಪಟ್ಟಿಯನ್ನು ಕಂದಾಯ ಇಲಾಖೆಯ ಪರಿಹಾರ ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ.

ಪ್ರಸ್ತುತ ಈ ಅಂಕಣದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆ ಪರಿಹಾರವನ್ನು(Bele Parihara) ಪಡೆದಿರುವ ಹಳ್ಳಿವಾರು ಪಟ್ಟಿಯನ್ನು ರೈತರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲಿ ಈ ಪಟ್ಟಿಯನ್ನು ಹೇಗೆ ನೋಡುವುದು ಎಂದು ತಿಳಿಸಲಾಗಿದ್ದು ಇದರ ಜೊತೆಗೆ ಬೆಳೆ ಪರಿಹಾರ ಹಣ ಜಮಾ ಕುರಿತು ಇನ್ನಿತರೆ ಅಗತ್ಯ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Bangalore Weather-ಅವಧಿಗೂ ಮುನ್ನ ಮುಂಗಾರು ಮಳೆ! ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ ಮಾಹಿತಿ!

ಇದಲ್ಲದೇ ಪ್ರಕೃತಿ ವಿಕೋಪದಿಂದಾಗಿ ರೈತರು ತಾವು ಬೆಳೆದ ಬೆಳೆಯು ಹಾನಿಯಾದ ಸಮಯದಲ್ಲಿ ಇದಕ್ಕೆ ಬೆಳೆ ಹಾನಿ ಪರಿಹಾರವನ್ನು(Bele Parihara amount) ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇತ್ಯಾದಿ ವಿವರವನ್ನು ಸಹ ಈ ಕೆಳಗೆ ಹಂಚಿಕೊಳ್ಳಲಾಗಿದೆ.

Bele Parihara List-ಹಿಂಗಾರು ಬೆಳೆ ಪರಿಹಾರ ಹಣ ಬಿಡುಗಡೆ ಪಟ್ಟಿ ಬಿಡುಗಡೆ:

2024-25 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದ ಬೆಳೆ ಹಾನಿಯಾದ ಅರ್ಹ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಈಗಾಗಲೇ NDRF ಯೋಜನೆಯಡಿ ಪರಿಹಾರದ ಹಣವನ್ನು ಜಮಾ ಮಾಡಲಾಗಿದ್ದು ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಹಳ್ಳಿವಾರು ಪಟ್ಟಿಯನ್ನು ನೋಡಬಹುದು.

Step-1: ಮೊಟ್ಟ ಮೊದಲಿಗೆ ಈ Bele Parihara Status ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Bele Parihara amount

Step-2: ತದನಂತರ ಅಧಿಕೃತ ಕಂದಾಯ ಇಲಾಖೆಯ ಪರಿಹಾರ ತಂತ್ರಾಂಶ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ ಮುಖಪುಟದಲ್ಲಿ ಎಡ ಬದಿಯಲ್ಲಿ ಕಾಣುವ "Village Wise List" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Nrega Yojane-2025: ನರೇಗಾ ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ 370/- ರೂ ಪಾವತಿ!

Step-3: ಈ ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ ವರ್ಷ ಆಯ್ಕೆ ಮಾಡಿ ಕಾಲಂ ನಲ್ಲಿ: "2024-25" ಎಂದು ಋತ್ತು: ಹಿಂಗಾರು, ವಿಪತ್ತಿನ ವಿಧ: ಪ್ರವಾಹ ಎಂದು ಸೆಲೆಕ್ಟ್ ಮಾಡಿಕೊಂಡು ನಿಮ್ಮ ಜಿಲ್ಲೆ,ತಾಲ್ಲೂಕು, ಹೋಬಳಿ,ಗ್ರಾಮದ ಹೆಸರನ್ನು ಆಯ್ಕೆ ಮಾಡಿ ಇದೆ ಪೇಜ್ ನಲ್ಲಿ ಕೆಳಗೆ ಕಾಣುವ "Get Report/ವರದಿ ಪಡೆಯಿರಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಹಿಂಗಾರು ಹಂಗಾಮಿನಲ್ಲಿ ಬೆಳೆ ಪರಿಹಾರ ಜಮಾ ಅಗಿದೆ ಎನ್ನುವ ರೈತರ ಪಟ್ಟಿ ಗೋಚರಿಸುತ್ತದೆ.

ಗಮನಿಸಿ: ಈ ಪಟ್ಟಿಯಲ್ಲಿ ರೈತರ ಆಧಾರ್ ಕಾರ್ಡನ ಕೊನೆಯ ನಾಲ್ಕು ಸಂಖ್ಯೆ, ರೈತರ ಹೆಸರು, ಜಮೀನಿನ ಸರ್ವ ನಂಬರ್, ಬೆಳೆ ಹೆಸರು, ನಷ್ಟವಾದ ಬೆಳೆ ವಿಸ್ತೀರ್ಣ, ಹಣ ಸಂದಾಯ ಸ್ಥಿತಿ, ಸಂದಾಯ ದಿನಾಂಕ, ಒಟ್ಟೂ ಜಮಾ ಅಗಿರುವ ಹಣ ಎಷ್ಟು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಪಟ್ಟಿಯಲ್ಲಿ ನೋಡಬಹುದು.

ಇದನ್ನೂ ಓದಿ: Caste Survey Karnataka-ರಾಜ್ಯಾದ್ಯಂತ ಮನೆ-ಮನೆ ಜಾತಿಗಳ ಸಮೀಕ್ಷೆ ಕುರಿತು ಮಹತ್ವದ ಮಾಹಿತಿ ಪ್ರಕಟ!

Bele Parihara List

Bele Parihara-2025: ಬೆಳೆ ಹಾನಿ ಪರಿಹಾರವನ್ನು ಪಡೆಯುವುದು ಹೇಗೆ?

ಅಕಾಲಿಕ ಮಳೆಯಿಂದ ಹಾನಿಗೆ ಒಳಗಾಗುವ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ NDRF ಯೋಜನೆಯಡಿ ರೈತರಿಗೆ ಬೆಳೆ ಹಾನಿ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ. ಈ ಯೋಜನೆಯಡಿ ಬೆಳೆ ಹಾನಿ ಪರಿಹಾರದ ಹಣವನ್ನು ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು ಒಂದಿಷ್ಟು ವಿವರ ಹೀಗಿದೆ.

ರೈತರು ತಾವು ಬೆಳೆದ ಬೆಳೆಯು ಹೆಚ್ಚು ಮಳೆಯಿಂದ ಶೇ 50% ಗಿಂತಲು ಹೆಚ್ಚು ನಷ್ಟ ಅದ ಸಮಯದಲ್ಲಿ ಅಥವಾ ನಷ್ಟ ಅದ ಸಮಯದಲ್ಲಿ ನೇರವಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಗ್ರಾಮಕ್ಕೆ ಸಂಬಂಧ ಪಡುವ ಗ್ರಾಮ ಲೆಕ್ಕಾಧಿಕಾರಿ(VA) ಅವರನ್ನು ನೇರವಾಗಿ ಭೇಟಿ ಮಾಡಿ ಬೆಳೆ ಹಾನಿಯಾಗಿರುವುದರ ಕುರಿತು ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Birth Certificate-ಇನ್ನೂ ಮುಂದೆ ಜನನ ಪ್ರಮಾಣ ಪತ್ರ ಪಡೆಯುವುದು ಭಾರಿ ಸುಲಭ!

Documents For Bele Parihara Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ರೈತರ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ಹಾನಿಗೆ ಒಳಗಾದ ಜಮೀನಿನ ಪಹಣಿ/RTC
4) ಮೊಬೈಲ್ ನಂಬರ್

Crop Loss Application process-ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಒಮ್ಮೆ ರೈತರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ತಂಡವು ಹಾನಿಗೆ ಒಳಗಾದ ರೈತರ ಜಮೀನನ್ನು ಭೇಟಿ ಮಾಡಿ ಅರ್ಹ ರೈತರ ದಾಖಲೆಗಳನ್ನು Parihara ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ NDRF ಯೋಜನೆಯಡಿ ಪರಿಹಾರ ಒದಗಿಸಲು ಅನುದಾನ ಬಿಡುಗಡೆ ಅದ ತಕ್ಷಣ ನೇರ ನಗದು ವರ್ಗಾವಣೆ ಮೂಲಕ ರೈತರ ಬ್ಯಾಂಲ್ ಖಾತೆಗೆ ಬೆಳೆ ಪರಿಹಾರದ ಹಣವನ್ನು ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Ration Card And LPG-ಜೂನ್ 01 ರಿಂದ ರೇಷನ್ ಕಾರ್ಡ ಮತ್ತು LPG ಸಿಲಿಂಡರ್ ವಿತರಣೆಯಲ್ಲಿ ಪ್ರಮುಖ ಬದಲಾವಣೆ!

Parihara Website-ಪರಿಹಾರ ತಂತ್ರಾಂಶ:

ಕಂದಾಯ ಇಲಾಖೆಯ ಪರಿಹಾರ/Parihara ತಂತ್ರಾಂಶದಲ್ಲಿ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅವಕಾಶವಿದ್ದು ಇದರ ಜೊತೆಯಲ್ಲಿ ಕಳೆದ ಮೂರು ವರ್ಷದ ಬೆಳೆ ಹಾನಿ ಪರಿಹಾರದ ಹಣ ಜಮಾ ವಿವರವನ್ನು ಈ ವೆಬ್ಸೈಟ್ ನಲ್ಲಿ ಉಚಿತವಾಗಿ ರೈತರು ಯಾವುದೇ ಸಮಯದಲ್ಲಿ ಬೇಕಾದರು ಸಂಪೂರ್ಣ ವಿವರವನ್ನು ಪಡೆಯಲು ಅವಕಾಶವಿರುತ್ತದೆ.

For More Information-ಹೆಚ್ಚಿನ ಮಾಹಿತಿಗಾಗಿ:

Parihara website-ಪರಿಹಾರ ಅಧಿಕೃತ ಜಾಲತಾಣ-Click here
Karnataka Revenue Department-ಕಂದಾಯ ಇಲಾಖೆ ಜಾಲತಾಣ-Click here
Helpline-ಸಹಾಯವಾಣಿ-1902

WhatsApp Group Join Now
Telegram Group Join Now
Share Now: