Nrega Yojane-2025: ನರೇಗಾ ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ 370/- ರೂ ಪಾವತಿ!

May 13, 2025 | Siddesh
Nrega Yojane-2025: ನರೇಗಾ ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ 370/- ರೂ ಪಾವತಿ!
Share Now:

ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ(Nrega Scheme)ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರು ದಿನಕ್ಕೆ 370/- ರೂ ಕೂಲಿಯನ್ನು ಪಡೆಯಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಜೊತೆಗೆ ಗ್ರಾಮೀಣ ಭಾಗದಲ್ಲೇ ತಾವು(mgnrega karnataka) ನೆಲೆಸಿರುವ ಹಳ್ಳಿಯಲ್ಲಿ ಉದ್ಯೋಗವನ್ನು ಪಡೆಯಲು ಸರ್ಕಾರದಿಂದ ನರೇಗಾ ಯೋಜನೆಯನ್ನು(MGNREGA)ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಕೆಲಸ ಪಡೆದುಕೊಂಡು ಒಂದು ವರ್ಷದಲ್ಲಿ 100 ದಿನದವರೆಗೆ ಕೆಲಸವನ್ನು ತಾವು ನೆಲೆಸಿರುವ ಹಳ್ಳಿಯಲ್ಲೇ ಪಡೆಯಬಹುದಾಗಿದೆ.

ಇದನ್ನೂ ಓದಿ: Caste Survey Karnataka-ರಾಜ್ಯಾದ್ಯಂತ ಮನೆ-ಮನೆ ಜಾತಿಗಳ ಸಮೀಕ್ಷೆ ಕುರಿತು ಮಹತ್ವದ ಮಾಹಿತಿ ಪ್ರಕಟ!

ಈ ಲೇಖನದಲ್ಲಿ ನರೇಗಾ ಯೋಜನೆಯಡಿ ಜಾಬ್ ಕಾರ್ಡ್(Job Card) ಅನ್ನು ಪಡೆಯುವುದು ಹೇಗೆ? ನಾಗರಿಕರು ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಪಡೆಯುವುದು ಹೇಗೆ? ಜಾಬ್ ಕಾರ್ಡ್ ಪಡೆಯಲು ಅಗತ್ಯ ದಾಖಲಾತಿಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

How To Get Nrega Job Card-ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಪಡೆಯುವುದು ಹೇಗೆ?

ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯಡಿ ಉದ್ಯೋಗವನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಕುಟುಂಬಗಳು ಈ ಯೋಜನೆಯಡಿ ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಜಾಬ್ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯವಾಗಿರುವ ಕಾರಣ ಈ ಕಾರ್ಡ್ ಅನ್ನು ಪಡೆಯುವುದು ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳಾದ ರೇಷನ್ ಕಾರ್ಡ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್, ಪೋಟೋ, ಬುಕ್, ಮೊಬೈಲ್ ನಂಬರ್ ಸಹಿತಿ ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಜಾಬ್ ಕಾರ್ಡ ಅನ್ನು ಪಡೆಯಬಹುದು.

ಇದನ್ನೂ ಓದಿ: Ration Card And LPG-ಜೂನ್ 01 ರಿಂದ ರೇಷನ್ ಕಾರ್ಡ ಮತ್ತು LPG ಸಿಲಿಂಡರ್ ವಿತರಣೆಯಲ್ಲಿ ಪ್ರಮುಖ ಬದಲಾವಣೆ!

Eligibility Criteria For Nrega Job Card-ಜಾಬ್ ಕಾರ್ಡ ಪಡೆಯಲು ಅರ್ಹತೆಗಳು:

ಅರ್ಜಿದಾರರು ಗ್ರಾಮೀಣ ಭಾಗದಲ್ಲಿ ವಾಸವಾಗಿರಬೇಕು ಹಾಗೂ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರಿಗೆ ವರ್ಷ ಭರ್ತಿಯಾಗಿರಬೇಕು.

ಅರ್ಜಿದಾರರು ಯಾವುದೇ ಖಾಸಗಿ ಕಂಪನಿ, ಸರ್ಕಾರಿ ಕಚೇರಿಯಲ್ಲಿ ಕೆಲಸದಲ್ಲಿ ಇರಬಾರದು.

Job Card Application-ಜಾಬ್ ಕಾರ್ಡ ವಿತರಣೆಗೆ ಕಾಲಮಿತಿ:

ಒಮ್ಮೆ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಅರ್ಜಿದಾರರು ಗ್ರಾಮ ಪಂಚಾಯತಿಯಲ್ಲಿ ಅರ್ಜಿಯನ್ನು ಸಲ್ಲಿಸಿದ ಬಳಿಕ 15 ದಿನದ ಒಳಗಾಗಿ ಗ್ರಾಮ ಪಂಚಾಯತಿ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲನೆ ಕೈಗೊಂಡು ಅರ್ಹ ಅರ್ಜಿದಾರರಿಗೆ ಜಾಬ್ ಕಾರ್ಡ ಅನ್ನು ಒದಗಿಸಬೇಕು.

ಇದನ್ನೂ ಓದಿ: Diploma Application-ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ! ತಿಂಗಳಿಗೆ ರೂ. 2,500/- ಶಿಷ್ಯವೇತನ!

nrega karnataka

Narega Yojana Amount-ನರೇಗಾ ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ 370/- ರೂ ಪಾವತಿ:

ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿಯನ್ವಯ ಏಪ್ರಿಲ್-2025 ರಿಂದ ನರೇಗಾ ಯೋಜನೆಯಡಿ ಕೆಲಸ ಪಡೆಯುವ ಕಾರ್ಮಿಕರಿಗೆ ದಿನ ಒಂದಕ್ಕೆ 370/- ರೂ ಕೂಲಿಯನ್ನು ಪಾವತಿ ಮಾಡಲಾಗುತ್ತದೆ.

Karnataka Nrega Yojane-ನರೇಗಾ ಯೋಜನೆಯಡಿ ಕಾಮಗಾರಿಯನ್ನು ಪಡೆಯುವುದು ಹೇಗೆ?

ಗ್ರಾಮೀಣ ಭಾಗದಲ್ಲಿ ವಾಸವಿರುವ ಮತ್ತು ಕೃಷಿ ಜಮೀನನ್ನು ಹೊಂದಿರುವ ಎಲ್ಲ ನಾಗರಿಕರು ಈ ಯೋಜನೆಯಡಿ ಕಾಮಗಾರಿಗಳನ್ನು ಪಡೆಯಲು ಅರ್ಹರಿದ್ದು ಇದಕ್ಕಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಗ್ರಾಮ ಪಂಚಾಯತಿ ಕಚೇರಿಯನ್ನು ಭೇಟಿ ಮಾಡಿ ಕ್ರಿಯಾಯೋಜನೆಯಲ್ಲಿ ಕಾಮಗಾರಿಯನ್ನು ಸೇರಿಸಿ ಅಧಿಕೃತವಾಗಿ ಕಾಮಗಾರಿ ಅನುಷ್ಠಾನ ಮಾಡಲು ಅನುಮೋದನೆಯನ್ನು ಪಡೆದು ಕೆಲಸವನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Birth Certificate-ಇನ್ನೂ ಮುಂದೆ ಜನನ ಪ್ರಮಾಣ ಪತ್ರ ಪಡೆಯುವುದು ಭಾರಿ ಸುಲಭ!

Nrega Yojana Guidelines-ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಯನ್ನು ಪಡೆಯಲು ನಿಯಮಗಳು:

  • ನರೇಗಾ ಫಲಾನುಭವಿ ಜಾಬ್ ಕಾರ್ಡ್ ಹೊಂದಿರುವುದು ಕಡ್ಡಾಯ.
  • ಫಲಾನುಭವಿಯ ಕುಟುಂಬದ ಒಬ್ಬರಾದರೂ ಕೆಲಸ ಮಾಡಬೇಕು.
  • ಒಂದು ಕುಟುಂಬಕ್ಕೆ ಯೋಜನೆಯಡಿ ₹5 ಲಕ್ಷಗಳವರೆಗೆ ವೈಯಕ್ತಿಕ ಕಾಮಗಾರಿಗೆ ಅವಕಾಶ.
  • ಒಟ್ಟು 89 ವೈಯಕ್ತಿಕ ಕಾಮಗಾರಿಗಳನ್ನು ನರೇಗಾ ಅಡಿ ಕೈಗೊಳ್ಳಲು ಅವಕಾಶ.
  • ದನದ ಕೊಟ್ಟಿಗೆ, ಕೃಷಿ ಹೊಂಡ, ಶೆಡ್‌ ಬದು ನಿರ್ಮಾಣ, ಗೊಬ್ಬರ ಗುಂಡಿಗಳ ನಿರ್ಮಾಣ.
  • ಮಾವು, ತೆಂಗು, ಅಡಕೆ ತೋಟಗಳ ಪುನಶ್ವೇತನ, ನರ್ಸರಿ ಕಾಮಗಾರಿಗಳು.

Nrega Scheme Guidelines-ಸಮುದಾಯ ಕಾಮಗಾರಿಯನ್ನು ಪಡೆಯಲು ನಿಯಮಗಳು:

  • ಹಳ್ಳ, ಕೆರೆ, ನಾಲೆ, ಚೆಕ್ ಡ್ಯಾಂಗಳ ಹೂಳೆತ್ತುವುದು.
  • ಜಾನುವಾರುಗಳ ಸಾಕಾಣಿಕೆಗೆ ಶೆಡ್‌ಗಳ ನಿರ್ಮಾಣ.
  • ಕಂದಕ ಬದುಗಳು, ಕೃಷಿ ಹೊಂಡಗಳನ್ನು ನಿರ್ಮಿಸುವುದು.
  • ವೈಯಕ್ತಿಕ, ಶಾಲಾ ಮತ್ತು ಅಂಗನವಾಡಿ ಶೌಚಾಲಯಗಳ ನಿರ್ಮಾಣ
  • ರಸ್ತೆ ಬದಿ ನೆಡುತೋಪು, ಕೃಷಿ ಅರಣೀಕರಣ.
  • ಗ್ರಾಮೀಣ ರಸ್ತೆ ಹಾಗೂ ಚರಂಡಿ ಕಾಮಗಾರಿಗಳು.
  • ತ್ಯಾಜ್ಯ ವಿಲೇವಾರಿ, ಪ್ರಕೃತಿ ವಿಕೋಪ ನಿಯಂತ್ರಣ ಕಾಮಗಾರಿಗಳು.
  • .ಸಮುದಾಯ ಜಮೀನುಗಳಲ್ಲಿ ಭೂ ಅಭಿವೃದ್ಧಿ ಚಟುವಟಿಕೆಗಳು.

Nrega Helpline-ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಪಡೆಯಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 8277506000 ಗೆ ಕರೆ ಮಾಡಿ.Nrega Official Website-ಅಧಿಕೃತ ವೆಬ್ಸೈಟ್- Click Here ನರೇಗಾ ಯೋಜನೆ ಟ್ವಿಟರ್ ಖಾತೆ- Click Here

WhatsApp Group Join Now
Telegram Group Join Now
Share Now: