Flipkart Scholarship-ಫ್ಲಿಪ್‌ಕಾರ್ಟ್ ಫೌಂಡೇಶನ್ ನಿಂದ 50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

May 15, 2025 | Siddesh
Flipkart Scholarship-ಫ್ಲಿಪ್‌ಕಾರ್ಟ್ ಫೌಂಡೇಶನ್ ನಿಂದ 50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Share Now:

ಫ್ಲಿಪ್‌ಕಾರ್ಟ್ ಫೌಂಡೇಶನ್ ನಿಂದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ನೆರವು ನೀಡಲು ವಿದ್ಯಾರ್ಥಿವೇತನಕ್ಕಾಗಿ(Flipkart scholarship) ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಫ್ಲಿಪ್‌ಕಾರ್ಟ್ ಫೌಂಡೇಶನ್ ನಿಂದ ವಿದ್ಯಾರ್ಥಿವೇತನವನ್ನು(Flipkart foundation scholarship) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ಆನ್ಲೈನ್ ಮೂಲಕ ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದ್ದು ಅರ್ಹ ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸಲು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!

ಸರ್ಕಾರದಿಂದ ಮತ್ತು ಖಾಸಗಿ ಕಂಪನಿಯ ಫೌಂಡೇಶನ್(scholarship Application) ವತಿಯಿಂದ ಅನೇಕ ವಿದ್ಯಾರ್ಥಿವೇತನ ಯೋಜನೆಗಳು ಜಾರಿಯಲ್ಲಿದ್ದು ಕಾಲಕಾಲಕ್ಕೆ ನಮ್ಮ ಪುಟದಿಂದ ಈ ಯೋಜನೆಗಳ ಮಾಹಿತಿಯನ್ನು ಹಂಚಿಕೊಂಡು ಬರುತ್ತಿದ್ದೆವೆ ಇದೆ ನಿಟ್ಟಿನಲ್ಲಿ ಪ್ರಸ್ತುತ ಈ ಲೇಖನದಲ್ಲಿ ಫ್ಲಿಪ್‌ಕಾರ್ಟ್ ಫೌಂಡೇಶನ್ ನ ಸ್ಕಾಲರ್ಶಿಪ್ ಕುರಿತು ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Flipkart Scholarship Amount-ವಿದ್ಯಾರ್ಥಿವೇತನ ಮೊತ್ತ ಎಷ್ಟು?

ಫ್ಲಿಪ್‌ಕಾರ್ಟ್ ಫೌಂಡೇಶನ್ ನಿಂದ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಒಂದು ಬಾರಿಗೆ ರೂ 50,000 ವಿದ್ಯಾರ್ಥಿವೇತನವನ್ನು ಪಾವತಿ ಮಾಡಲಾಗುತ್ತದೆ ವಿದ್ಯಾರ್ಥಿಗಳು ಈ ಹಣವನ್ನು ಬಳಕೆ ಮಾಡಿಕೊಂಡು ತಮ್ಮ ಕಾಲೇಜಿನ ಶುಲ್ಕವನ್ನು ಪಾವತಿ ಮಾಡಲು ಇನ್ನಿತರೆ ವಿದ್ಯಾಭ್ಯಾಸದ ಖರ್ಚುಗಳಿಗೆ ಈ ಹಣವನ್ನು ಬಳಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: E-Swathu Documents-ಗ್ರಾಮ ಪಂಚಾಯತಿಯಲ್ಲಿ ಇ ಸ್ವತ್ತು ವಿತರಣೆಗೆ ನೂತನ ಆದೇಶ ಪ್ರಕಟ!

scholarship application (

Who Can Apply For Flipkart Scholarship-ಫ್ಲಿಪ್‌ಕಾರ್ಟ್ ಫೌಂಡೇಶನ್ ಸ್ಕಾಲರ್ಶಿಪ್ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರ ವಿದ್ಯಾರ್ಥಿಯು ಭಾರತ ದೇಶದ ಖಾಯಂ ನಿವಾಸಿಯಾಗಿರಬೇಕು.

ವಿದ್ಯಾರ್ಥಿಯ ತಂದೆ ಅಥವಾ ತಾಯಿಯು ಕಿರಾಣಿ ಅಂಗಡಿಯನ್ನು ಹೊಂದಿರಬೇಕು.

ವಿದ್ಯಾರ್ಥಿಯು ಪ್ರಥಮ ವರ್ಷದ ಪದವಿ ಶಿಕ್ಷಣ, ಇಂಜಿನಿಯರಿಂಗ್ ಇನ್ನಿತರೆ ಪೂರಕ ಪದವಿ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಅರ್ಜಿದಾರರ ವಿದ್ಯಾರ್ಥಿಯು ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 60% ಕ್ಕಿಂತ ಹೆಚ್ಚಿನ ಅಂಕವನ್ನು ಪಡೆದಿರಬೇಕು.

ವಿದ್ಯಾರ್ಥಿಯ ಕುಟುಂಬದ ಆದಾಯವು ವಾರ್ಷಿಕ ₹ 5 ಲಕ್ಷದ ಒಳಗಿರಬೇಕು.

Last Date For Flipkart Scholarship-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 20 ಮೇ 2025 ಕೊನೆಯ ದಿನಾಂಕವಾಗಿರುತ್ತದೆ.

ಇದನ್ನೂ ಓದಿ: Bele Parihara List-ಹಿಂಗಾರು ಬೆಳೆ ಪರಿಹಾರ ಹಣ ಬಿಡುಗಡೆ ಪಟ್ಟಿ ಬಿಡುಗಡೆ!

How To Apply For Flipkart Scholarship-ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

Scholarship Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಫ್ಲಿಪ್‌ಕಾರ್ಟ್ ಫೌಂಡೇಶನ್ ಜಾಲತಾಣವನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ Apply Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು, ಬಳಿಕ ಈ ಪೇಜ್ ನಲ್ಲಿ ಕೊನೆಯಲ್ಲಿ ಕಾಣುವ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

ಇದನ್ನೂ ಓದಿ: Bangalore Weather-ಅವಧಿಗೂ ಮುನ್ನ ಮುಂಗಾರು ಮಳೆ! ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ ಮಾಹಿತಿ!

scholarship Application (

Step-2: ಮೊದಲ ಬಾರಿಗೆ ಈ ಜಾಲತಾಣಕ್ಕೆ ಪ್ರವೇಶ ಮಾಡುತ್ತಿರುವವರು ಈ ಪೇಜ್ ನಲ್ಲಿ "Create an account" ಬಟನ್ ಮೇಲೆ ಕ್ಲಿಕ್ ಮಾಡಿ ಖಾತೆಯನ್ನು ರಚನೆ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಅಗತ್ಯ ಮಾಹಿಯನ್ನು ಭರ್ತಿ ಮಾಡಿ ಕೊನೆಯಲ್ಲಿ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Ration Card And LPG-ಜೂನ್ 01 ರಿಂದ ರೇಷನ್ ಕಾರ್ಡ ಮತ್ತು LPG ಸಿಲಿಂಡರ್ ವಿತರಣೆಯಲ್ಲಿ ಪ್ರಮುಖ ಬದಲಾವಣೆ!

Student Scholarship Documents-ಅರ್ಜಿ ಸಲ್ಲಿಸಲು ದಾಖಲೆಗಳು:

ವಿದ್ಯಾರ್ಥಿಯ ಆಧಾರ್ ಕಾರ್ಡ ಪ್ರತಿ.
ದ್ವಿತೀಯ ಪಿಯುಸಿ ಅಂಕಪಟ್ಟಿ.
ಶಾಲಾ ದಾಖಲಾತಿ ಪ್ರಮಾಣ ಪತ್ರ.
ಕಿರಾಣಿ ಅಂಗಡಿ ಮಾಲೀಕತ್ವ ದಾಖಲೆ(GST ಪ್ರಮಾಣ ಪತ್ರ ect..)
ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ.
ವಿದ್ಯಾರ್ಥಿಯ ಪೋಟೋ.

Scholarship Website-ವಿದ್ಯಾರ್ಥಿವೇತನದ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ವೆಬ್ಸೈಟ್ ಲಿಂಕ್- Click here

WhatsApp Group Join Now
Telegram Group Join Now
Share Now: