Property-ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ!ಬಿ-ಖಾತಾ ನೀಡುವ ಅವಧಿ ವಿಸ್ತರಣೆ!

May 16, 2025 | Siddesh
Property-ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ!ಬಿ-ಖಾತಾ ನೀಡುವ ಅವಧಿ ವಿಸ್ತರಣೆ!
Share Now:

ಈಗಾಗಲೇ ರಾಜ್ಯಾದ್ಯಂತ ಅನಧಿಕೃತ ಆಸ್ತಿಗಳಿಗೆ/ನಿವೇಶನಗಳಿಗೆ ಬಿ-ಖಾತಾ(B-khata news) ದಾಖಲೆಯನ್ನು ವಿತರಣೆ ಮಾಡುವ ಅಭಿಯಾನವನ್ನು ಮಾಡಲಾಗುತ್ತಿದ್ದು, ಇದಕ್ಕಾಗಿ ನಿಗದಿಪಡಿಸಿದ ಕೊನೆಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದು ಇದರ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಈ ಲೇಖನದಲ್ಲಿ ಬಿ-ಖಾತಾ(B-khata) ಎಂದರೇನು? ಬಿ-ಖಾತಾ ಪಡೆಯುವುದರಿಂದ ಪ್ರಯೋಜನಗಳೇನು? ಬಿ-ಖಾತಾ ಪಡೆಯಲು ಕೊನೆಯ ದಿನಾಂಕ ಯಾವುದು? ಬಿ-ಖಾತಾ ಪಡೆಯಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಿಬೇಕು ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Flipkart Scholarship-ಫ್ಲಿಪ್‌ಕಾರ್ಟ್ ಫೌಂಡೇಶನ್ ನಿಂದ 50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ-ಖಾತಾ(B-khata Document) ದಾಖಲೆಯನ್ನು ಕಳೆದ 2 ತಿಂಗಳಿನಿಂದ ಆಸ್ತಿಯ ಮಾಲೀಕರಿಗೆ ನೀಡಲಾಗುತ್ತಿದ್ದು ಈ ಕುರಿತು ನೂತನ ಪ್ರಕಟಣೆಯನ್ನು ರಾಜ್ಯ ಸರ್ಕಾರದಿಂದ ಹೊರಡಿಸಲಾಗಿದ್ದು ಇದರ ವಿವರ ಈ ಕೆಳಗಿನಂತಿದೆ.

B-Khata Last Date-ಬಿ-ಖಾತಾ ನೀಡುವ ಅವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಣೆ:

ರಾಜ್ಯದ ವಿವಿಧ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡ ಮತ್ತು ನಿವೇಶನಗಳಿಗೆ ಬಿ-ಖಾತಾ ನೀಡುವ ಅವಧಿಯನ್ನು ಇನ್ನೂ ಮೂರು(3) ತಿಂಗಳು ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!

What is B-Khata-ಬಿ-ಖಾತಾ ಎಂದರೇನು?

ಅನಧಿಕೃತವಾಗಿ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಜಾಗದಲ್ಲಿ ಅಂದರೆ ಕಂದಾಯ ಭೂಮಿ/ಜಾಗದಲ್ಲಿ ಮನೆ/ನಿವೇಶನವನ್ನು ನಿರ್ಮಾಣ ಮಾಡಿಕೊಂಡಿರುವ ಆ ಆಸ್ತಿಯ ಮಾಲೀಕರಿಗೆ ಸರ್ಕಾರದಿಂದ ಅಧಿಕೃತವಾಗಿ ನೀಡುವ ಮಾಲೀಕತ್ವ ದಾಖಲೆಯಾಗಿದ್ದು ಈ ದಾಖಲೆಯ ಸಹಾಯದಿಂದ ತೆರಿಗೆ ಸಂಗ್ರಹಣಕ್ಕೆ ಅನುಕೂಲವಾಗುತ್ತದೆ ಮತ್ತು ಆಸ್ತಿಯ ಮಾಲೀಕರನ್ನು ಗುರುತಿಸಲು ನೆರವಾಗುತ್ತದೆ.

B-Khata Application-ಬಿ-ಖಾತಾ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಕಂದಾಯ/ಕೃಷಿ ಜಮೀನಿನಲ್ಲಿ ನಗರ/ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಭಾಗದಲ್ಲಿ ಅನಧಿಕೃತವಾಗಿ ಮನೆ/ನಿವೇಶನವನ್ನು ನಿರ್ಮಾಣ ಮಾಡಿಕೊಂಡಿರುವವರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಸ್ಥಳೀಯ ಆಡಳಿತ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಬಿ-ಖಾತಾವನ್ನು ಪಡೆಯಬಹುದು.

ಇದನ್ನೂ ಓದಿ: E-Swathu Documents-ಗ್ರಾಮ ಪಂಚಾಯತಿಯಲ್ಲಿ ಇ ಸ್ವತ್ತು ವಿತರಣೆಗೆ ನೂತನ ಆದೇಶ ಪ್ರಕಟ!

B khata application

ಇದನ್ನೂ ಓದಿ: Bele Parihara List-ಹಿಂಗಾರು ಬೆಳೆ ಪರಿಹಾರ ಹಣ ಬಿಡುಗಡೆ ಪಟ್ಟಿ ಬಿಡುಗಡೆ!

Documnets For B-Khata-ಬಿ-ಖಾತಾ ಪಡೆಯಲು ದಾಖಲೆಗಳು:

  • ಮಾಲೀಕರ ಆಧಾರ್ ಕಾರ್ಡ ಪ್ರತಿ
  • ಆಸ್ತಿಯ/ನಿವೇಶನದ ಪೋಟೋ
  • ಅರ್ಜಿದಾರರ ಪೋಟೋ
  • ಆಸ್ತಿ ತೆರಿಗೆ ಪಾವತಿ ರಶೀದಿ
  • ಭೂ ಪರಿವರ್ತನೆ ಆದೇಶ
  • ವಿದ್ಯುತ್ ಬಿಲ್

B-khata Campaign-ರಾಜ್ಯಾದ್ಯಂತ ಬಿ-ಖಾತಾ ಅಭಿಯಾನ:

ಈಗಾಗಲೇ ಕಳೆದ 2-3 ತಿಂಗಳಿನಿಂದ ಬಹುತೇಕ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಿ-ಖಾತಾ ವಿತರಣಾ ಅಭಿಯಾನವನ್ನು ಮಾಡಲಾಗುತ್ತಿದ್ದು ಇದಕ್ಕೆ ಮುಖ್ಯ ಕಾರಣ ಈ ರೀತಿ ಇವೆ ರಾಜ್ಯದಲ್ಲಿಆಸ್ತಿತ್ವದಲ್ಲಿರುವ ಅನಧಿಕೃತ ಲೇಔಟ್ ಪ್ರಕರಣಗಳನ್ನು ಇತ್ಯರ್ಥಪಡಿಸಿ ಹೊಸದಾಗಿ ಈ ರೀತಿಯ ಲೇಔಟ್ ಗಳು ನಿರ್ಮಾಣವಾಗದಂತೆ ಕ್ರಮವಹಿಸಲು ಇದಕ್ಕಾಗಿ ಶಾಶ್ವತ ಪರಿಹಾರವನ್ನು ಒದಗಿಸಲು ಈಗ ಬಿ-ಖಾತಾ ವಿತರಣ ಅಭಿಯಾನವನ್ನು ಮಾಡಲಾಗುತ್ತದೆ.

ಇದನ್ನೂ ಓದಿ: Bangalore Weather-ಅವಧಿಗೂ ಮುನ್ನ ಮುಂಗಾರು ಮಳೆ! ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ ಮಾಹಿತಿ!

ಬಹುತೇಕ ಹೆಚ್ಚಿನ ಸಂಖ್ಯೆಯಲ್ಲಿ ಕಂದಾಯ ಭೂಮಿಯಲ್ಲಿ ಅನಧಿಕೃತವಾಗಿ ಬಡವಾಣೆ/ನಿವೇಶನಗಳನ್ನು ಮಧ್ಯಮ ಮತ್ತು ಬಡ ವರ್ಗದ ಜನರು ಈ ಪ್ರಕರಣಗಳಲ್ಲಿ ಇದ್ದು ಎಲ್ಲರಿಗೂ ಒಂದೇ ಬಾರಿಗೆ ನೆರವಾಗುವಂತೆ ಪ್ರಕರಣಗಳನ್ನು ಇತ್ಯರ್ಥಪಡಿಸುವ ದೇಸೆಯಲ್ಲಿ ಬಿ-ಖಾತಾ ವಿತರಣ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

B-khata to A-Khata: ಬಿ-ಖಾತಾ ದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ:

ಒಮ್ಮೆ ಆಸ್ತಿಯ ಮಾಲೀಕರು ಬಿ-ಖಾತಾವನ್ನು ಪಡೆದುಕೊಂಡ ಬಳಿಕ ಈ ದಾಖಲೆಯೇ ಶಾಶ್ವತವಲ್ಲ ಆಸ್ತಿಯ ಮಾಲೀಕರು ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಕಚೇರಿಯಲ್ಲಿ ಸಲ್ಲಿಸಿ ಬಿ-ಖಾತಾ ದಿಂದ ಎ-ಖಾತಾ ಪರಿವರ್ತನೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಇದನ್ನೂ ಓದಿ: Ration Card And LPG-ಜೂನ್ 01 ರಿಂದ ರೇಷನ್ ಕಾರ್ಡ ಮತ್ತು LPG ಸಿಲಿಂಡರ್ ವಿತರಣೆಯಲ್ಲಿ ಪ್ರಮುಖ ಬದಲಾವಣೆ!

Karnataka State Government Helpline-ಇನ್ನು ಹೆಚ್ಚಿನ ಮಾಹಿತಿಗಾಗಿ:

ರಾಜ್ಯ ಸರ್ಕಾರದ ಅಧಿಕೃತ ಸಹಾಯವಾಣಿ ಸಂಖ್ಯೆ- 1902 ಗೆ ಕರೆ ಮಾಡಿ ಬಿ-ಖಾತಾ ವಿತರಣೆ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ನಿಮ್ಮ ಮೊಬೈಲ್ ಮೂಲಕವೇ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now
Share Now: