Free Sewing Machine-ಉಚಿತ ಹೊಲಿಗೆ ತರಬೇತಿ! ಸಬ್ಸಿಡಿಯಲ್ಲಿ ಯಂತ್ರ ಪಡೆಯಲು ಅವಕಾಶ!

May 16, 2025 | Siddesh
Free Sewing Machine-ಉಚಿತ ಹೊಲಿಗೆ ತರಬೇತಿ! ಸಬ್ಸಿಡಿಯಲ್ಲಿ ಯಂತ್ರ ಪಡೆಯಲು ಅವಕಾಶ!
Share Now:

ಒಂದು ತಿಂಗಳ ಉಚಿತ ಹೊಲಿಗೆ ತರಬೇತಿಯನ್ನು(Free Tailoring Training) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಉಚಿತ ಹೊಲಿಗೆ ಯಂತ್ರ ತರಬೇತಿಯನ್ನು ಪಡೆದು ಸಹಾಯಧನದಲ್ಲಿ ಹೊಲಿಗೆ ಯಂತ್ರವನ್ನು(Holige Yantra Subsidy) ಪಡೆಯಲು ಯಾವೆಲ್ಲ ಯೋಜನೆಗಳು ಇವೆ ಎನ್ನುವ ಮಾಹಿತಿಯನ್ನು ಸಹ ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದ್ದು ಅರ್ಹ ಅಭ್ಯರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸಲು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ.

ಇದನ್ನೂ ಓದಿ: Property-ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ! ಬಿ-ಖಾತಾ ನೀಡುವ ಅವಧಿ ವಿಸ್ತರಣೆ!

ಉಚಿತ ಹೊಲಿಗೆ ಯಂತ್ರ ತರಬೇತಿಯನ್ನು(Holige Yantra Subsidy Yojane) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ತರಬೇತಿ ನಡೆಯುವ ದಿನಾಂಕ, ತರಬೇತಿ ನಡೆಯುವ ಕೇಂದ್ರದ ವಿಳಾಸ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

Tailoring Shop-ಬಹು ಬೇಡಿಕೆಯ ಕ್ಷೇತ್ರ:

ಹೊಲಿಗೆ ಉದ್ದಿಮಿಯು ಪ್ರಸ್ತುತ ದಿನಗಳಲ್ಲಿ ಬಹು ಬೇಡಿಕೆಯ ಉದ್ದಿಮೆಯಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯು ಹೊಲಿಗೆ ತರಬೇತಿಯನ್ನು ಪಡೆದ ಪರಿಣಿತರಿಗೆ ಬೇಡಿಕೆ ಇರುತ್ತದೆ ಇದಲ್ಲದೇ ಸ್ವಂತ ಉದ್ಯೋಗವನ್ನು ಮಾಡಲು ಆಸಕ್ತಿಯನ್ನು ಹೊಂದಿರುವವರಿಗೆ ಈ ಕ್ಷೇತ್ರವು ಒಂದು ಉತ್ತಮ ಆಯ್ಕೆಯಾಗಿದೆ.

Free Tailoring Training- ಉಚಿತ ಹೊಲಿಗೆ ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

  • ಉಚಿತ ಹೊಲಿಗೆ ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಯು ಕರ್ನಾಟಕ ಖಾಯಂ ನಿವಾಸಿಯಾಗಿರಬೇಕು.
  • ಪ್ರಸ್ತುತ ತರಬೇತಿಯು ಪುರುಷರಿಗೆ ಮಾತ್ರ ಇದ್ದು ಮಹಿಳೆಯರು ನೋಂದಣಿಯನ್ನು ಮಾಡಿಕೊಂಡು ಮುಂದಿನ ತರಬೇತಿಯನ್ನು ಭಾಗವಹಿಸಬಹುದು.
  • ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷದ ಒಳಗಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. 
  • ಅಭ್ಯರ್ಥಿಗೆ ಕನ್ನಡ ಬಾಷೆಯನ್ನು ಓದಲು ಮತ್ತು ಬರೆಯಲು ಬರಬೇಕು. 

ಇದನ್ನೂ ಓದಿ: Flipkart Scholarship-ಫ್ಲಿಪ್‌ಕಾರ್ಟ್ ಫೌಂಡೇಶನ್ ನಿಂದ 50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Free Sewing Machine (9)

Free Tailoring Training Date-ಹೊಲಿಗೆ ತರಬೇತಿ ಪ್ರಾರಂಭ ದಿನಾಂಕ:

ಉಚಿತ ಹೊಲಿಗೆ ತರಬೇತಿಯು ದಿನಾಂಕ 02 ಜೂನ್ 2025 ರಿಂದ ಪ್ರಾರಂಭವಾಗಿ ದಿನಾಂಕ 02 ಜುಲೈ 2025 ರವರೆಗೆ ನಡೆಯಲಿದ್ದು, ಈ ತರಬೇತಿಯು ಒಟ್ಟು 31 ದಿನ ನಡೆಯಲಿದೆ.

Tailoring Training Center Address-ತರಬೇತಿ ಎಲ್ಲಿ ನಡೆಯಲಿದೆ?

ಉಚಿತ ಹೊಲಿಗೆ ಯಂತ್ರ ತರಬೇತಿ ನಡೆಯುವ ಕೇಂದ್ರದ ವಿಳಾಸ ಹೀಗಿದೆ ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆಯಲ್ಲಿ ಏರ್ಪಡಿಸಲಾಗಿದೆ.

ಇದನ್ನೂ ಓದಿ: Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!

Free Tailoring Training Application-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದನೇ ವಿಧಾನ ಆನ್ಲೈನ್ ಮೂಲಕ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನೇರವಾಗಿ ಇಲ್ಲಿ ತಿಳಿಸಿರುವ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತರಬೇತಿ ಪ್ರಾರಂಭವಾಗುವ ದಿನ ತರಬೇತಿ ಕೇಂದ್ರಕ್ಕೆ ಭೇಟಿ ಮಾಡಿ ತರಬೇತಿಯಲ್ಲಿ ಭಾಗವಹಿಸಬಹುದು.

Uchita Holige Yantra-ಮುಂಚಿತವಾಗಿ ಹೆಸರು ನೋಂದಣಿ ಮಾಡಲು ಹೀಗಿದೆ ಮಾಡಿ:

ತರಬೇತಿಯಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಮುಂಚಿತವಾಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಸಲು ಈ ಮೊಬೈಲ್ 9449860007, 9538281989, 9916783825, 888044612 ಸಂಖ್ಯೆಗಳಿಗೆ ಕರೆ ಮಾಡಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: E-Swathu Documents-ಗ್ರಾಮ ಪಂಚಾಯತಿಯಲ್ಲಿ ಇ ಸ್ವತ್ತು ವಿತರಣೆಗೆ ನೂತನ ಆದೇಶ ಪ್ರಕಟ!

Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಆನ್ಲೈನ್ ಮೂಲಕವು ಸಹ ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ಗೂಗಲ್ ಪಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ Apply Now ನಿಮ್ಮ ಹೆಸರು, ಇಮೇಲ್, ತಂದೆಯ ಹೆಸರು, ಮೊಬೈಲ್ ಸಂಖ್ಯೆ,  ಇನ್ನಿತರೆ ವಿವರವನ್ನು ಭರ್ತಿ ಮಾಡಿ ಕೊನೆಯ ಕಾಲಂ ನಲ್ಲಿ ತರಬೇತಿಯನ್ನು ಆಯ್ಕೆ ಮಾಡಿಕೊಂಡು ಕೊನೆಯಲ್ಲಿ ಕೆಳಗೆ ಕಾಣುವ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Required documents for Training - ತರಬೇತಿಯಲ್ಲಿ ಭಾಗವಹಿಸಲು ಅವಶ್ಯಕ ದಾಖಲೆಗಳು:

  • ಅರ್ಜಿದಾರರ ಅಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಕುಟುಂಬದ ರೇಶನ್ ಕಾರ್ಡ
  • ಮೊಬೈಲ್ ಸಂಖ್ಯೆ.

ಇದನ್ನೂ ಓದಿ: Bele Parihara List-ಹಿಂಗಾರು ಬೆಳೆ ಪರಿಹಾರ ಹಣ ಬಿಡುಗಡೆ ಪಟ್ಟಿ ಬಿಡುಗಡೆ!

Uchita Holige Yantra Tarabeti-ವಸತಿ-ಊಟ ಸಂಪೂರ್ಣ ಉಚಿತ ತರಬೇತಿ:

ಹೊಲಿಗೆ ಯಂತ್ರ ತರಬೇತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಇದಲ್ಲದೇ ತರಬೇತಿ ನಡೆಯುವ ದಿನಗಳಲ್ಲಿ ಅಭ್ಯರ್ಥಿಯು ವಾಸ್ತವ್ಯ ಮಾಡಲು ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ತರಬೇತಿ ಕೇಂದ್ರದಿಂದಲೇ ಆಯೋಜನೆ ಮಾಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Holige Yantra Subsidy Schemes-ಸಬ್ಸಿಡಿಯಲ್ಲಿ ಯಂತ್ರ ಪಡೆಯಲು ಅವಕಾಶ:

ಒಮ್ಮೆ ತರಬೇತಿಯನ್ನು ಪಡೆದ ಬಳಿಕ ಈ ತರಬೇತಿಯಲ್ಲಿ ಸಬ್ಸಿಡಿಯನ್ನು ಪಡೆಯಲು ಯಾವೆಲ್ಲ ಯೋಜನೆಯಡಿ ಹೊಲಿಗೆ ಯಂತ್ರವನ್ನು ಸರ್ಕಾರದಿಂದ ಪಡೆಯಬಹುದು ಎನ್ನುವ ಮಾಹಿತಿ ಮತ್ತು ಬ್ಯಾಂಕ್ ಮೂಲಕ ಸಾಲವನ್ನು ಪಡೆಯುವುದರ ಕುರಿತು ಮಾರ್ಗದರ್ಶನವನ್ನು ನೀಡಲಾಗುತ್ತದೆ. ಕೆಲವು ಪ್ರಮುಖ ಸಬ್ಸಿಡಿ ಯೋಜನೆಗಳ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

1) ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆ: ಈ ಯೋಜನೆಯಡಿ ಹೊಲಿಗೆ ಯಂತ್ರವನ್ನು ಪಡೆಯಲು ಸಬ್ಸಿಡಿಯನ್ನು ಪಡೆಯಲು ಅವಕಾಶವಿದ್ದು ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲ್ಲಿ ಕ್ಲಿಕ್ Click Here ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ.

2) PMEGP-ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮದಲ್ಲಿ ಸಬ್ಸಿಡಿಯನ್ನು ಪಡೆದುಕೊಂಡು ಹೊಲಿಗೆ ಯಂತ್ರಗಳನ್ನು ಖರೀದಿ ಮಾಡಲು ಅವಕಾಶವಿರುತ್ತದೆ. ಅಧಿಕೃತ ವೆಬ್ಸೈಟ್ ಲಿಂಕ್- Click Here

3) ರಾಜ್ಯ ಸರ್ಕಾರದ ವಿವಿಧ ನಿಗಮಗಳ ಮೂಲಕವು ಸಹ ಹೊಲಿಗೆ ಯಂತ್ರಕ್ಕೆ ಸಹಾಯಧನವನ್ನು ಪಡೆಯಬಹುದು.

4) ಜಿಲ್ಲಾ ಕೈಗಾರಿಕಾ ಕೇಂದ್ರಗಳಲ್ಲಿ ಲಭ್ಯವಿರುವ ಯೋಜನೆಗಳ ಮೂಲಕವು ಸಹ ಹೊಲಿಗೆ ಯಂತ್ರಕ್ಕೆ ಸಹಾಯಧನವನ್ನು ಪಡೆಯಬಹುದು.

WhatsApp Group Join Now
Telegram Group Join Now
Share Now: