Flipkart Scholarship Application-ಫ್ಲಿಪ್‌ಕಾರ್ಟ್ ಸ್ಕಾಲರ್‌ಶಿಪ್! ₹50,000 ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಸಲ್ಲಿಸಿ!

May 19, 2025 | Siddesh
Flipkart Scholarship Application-ಫ್ಲಿಪ್‌ಕಾರ್ಟ್ ಸ್ಕಾಲರ್‌ಶಿಪ್! ₹50,000 ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಸಲ್ಲಿಸಿ!
Share Now:

ಫ್ಲಿಪ್‌ಕಾರ್ಟ್ ಫೌಂಡೇಶನ್‌ನಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಹಾಯವಾಗಲೆಂದು ವಿದ್ಯಾರ್ಥಿವೇತನ ಯೋಜನೆಯನ್ನು(Flipkart Scholarship)ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ರೂ. 50,000 ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತದೆ.

ಪ್ರಸ್ತುತ ಫ್ಲಿಪ್‌ಕಾರ್ಟ್ ಫೌಂಡೇಶನ್‌ನಿಂದ ವಿದ್ಯಾರ್ಥಿವೇತನವನ್ನು(Flipkart Scholarship Application) ನೀಡಲು ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಕುರಿತು ಸಂಪೂರ್ಣ ಅಗತ್ಯವಾದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Sonalika Tractor Offer-ಸೋನಾಲಿಕಾ ಟ್ರ್ಯಾಕ್ಟರ್ ಖರೀದಿ ಮೇಲೆ ಬರೊಬ್ಬರಿ ₹1.00 ಲಕ್ಷ ಡಿಸ್ಕೌಂಟ್!

ಈ ಲೇಖನದಲ್ಲಿ ಫ್ಲಿಪ್‌ಕಾರ್ಟ್(Flipkart) ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಅಗತ್ಯ ದಾಖಲಾತಿಗಳು ಮತ್ತು ಕೊನೆಯ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಈ ಮಾಹಿತಿಯನ್ನು ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸಲು ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸಾಪ್ ಗುಂಪುಗಳಲ್ಲಿ ತಪದೇ ಶೇರ್ ಮಾಡಿ ಸಹಕರಿಸಿ.

Flipkart Scholarship Last Date-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇನ್ನು 2 ದಿನ ಮಾತ್ರ ಬಾಕಿ:

ಫ್ಲಿಪ್‌ಕಾರ್ಟ್ ಫೌಂಡೇಶನ್‌ನಿಂದ ರೂ 50,000 ವಿದ್ಯಾರ್ಥಿವೇತನವನ್ನು ಪಡೆಯಲು ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 20 ಮೇ 2025 ಕೊನೆಯ ದಿನಾಂಕವಾಗಿದ್ದು ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಇನ್ನು 2 ದಿನ ಮಾತ್ರ ಅವಕಾಶವಿರುತ್ತದೆ.

ಇದನ್ನೂ ಓದಿ: Gruhalakshmi Amount-ಈ ಜಿಲ್ಲೆಯ ಮಹಿಳೆಯ ಖಾತೆಗೆ 1,095 ಕೋಟಿ ಗೃಹಲಕ್ಷ್ಮಿ ಹಣ!

Flipkart Scholarship Amount-ವಿದ್ಯಾರ್ಥಿವೇತನ ಮೊತ್ತ ಎಷ್ಟು?

ಫ್ಲಿಪ್‌ಕಾರ್ಟ್ ಫೌಂಡೇಶನ್‌ನಿಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಂದು ಬಾರಿಗೆ ರೂ. 50,000 ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಈ ಹಣವನ್ನು ವಿದ್ಯಾರ್ಥಿಗಳು ಕಾಲೇಜು ಶುಲ್ಕ, ಪುಸ್ತಕಗಳ ಖರೀದಿ ಅಥವಾ ಇತರ ಶೈಕ್ಷಣಿಕ ಖರ್ಚುಗಳಿಗೆ ಬಳಸಿಕೊಳ್ಳಬಹುದು.

scholarship application (

ಇದನ್ನೂ ಓದಿ: Free Hostel-2025: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

Flipkart Scholarship Eligibility-ಫ್ಲಿಪ್‌ಕಾರ್ಟ್ ಸ್ಕಾಲರ್‌ಶಿಪ್‌ಗೆ ಯಾರು ಅರ್ಜಿ ಸಲ್ಲಿಸಬಹುದು?

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವುದು ಕಡ್ಡಾಯ ಎಂದು ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ಇದರ ವಿವರ ಹೀಗಿದೆ:

  • ಅರ್ಜಿದಾರ ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.
  • ವಿದ್ಯಾರ್ಥಿಯ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರು ಕಿರಾಣಿ ಅಂಗಡಿಯ ಮಾಲೀಕರಾಗಿರಬೇಕು.
  • ವಿದ್ಯಾರ್ಥಿಯು ಪ್ರಥಮ ವರ್ಷದ ಪದವಿ, ಇಂಜಿನಿಯರಿಂಗ್(BE Scholarship) ಅಥವಾ ಇತರ ಸಮಾನ ಪದವಿ ಕೋರ್ಸ್‌ನಲ್ಲಿ(Degree scholarship) ವ್ಯಾಸಂಗ ಮಾಡುತ್ತಿರಬೇಕು.
  • ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 60% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
  • ಕುಟುಂಬದ ವಾರ್ಷಿಕ ಆದಾಯ ₹5 ಲಕ್ಷದೊಳಗಿರಬೇಕು.

ಇದನ್ನೂ ಓದಿ: Bembala Bele Yojane- ರೈತರಿಂದ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ!

Flipkart Scholarship Online Apply Method-ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಿಂದಲೇ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ-1:Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಫ್ಲಿಪ್‌ಕಾರ್ಟ್ ಫೌಂಡೇಶನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಮಾಡಬೇಕು.

Flipkart

ಇದನ್ನೂ ಓದಿ: Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!

ಹಂತ-2: ಮೊದಲ ಬಾರಿಗೆ ಈ ಜಾಲತಾಣಕ್ಕೆ ಪ್ರವೇಶ ಮಾಡುತ್ತಿರುವವರು “Create an Account” ಬಟನ್ ಕ್ಲಿಕ್ ಮಾಡಿ ಖಾತೆಯನ್ನು ರಚಿಸಿಕೊಳ್ಳಬೇಕು ಬಳಿಕ ಖಾತೆ ರಚನೆಯಾದ ಬಳಿಕ “Login” ಬಟನ್ ಕ್ಲಿಕ್ ಮಾಡಿ ಲಾಗಿನ್ ಆಗಿ.

ಹಂತ-3: ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆಯುತ್ತದೆ. ಇಲ್ಲಿ ಕೇಳುವ ಎಲ್ಲಾ ಮಾಹಿತಿ ಮತ್ತು ಅಗತ್ಯ ದಾಖಲಾತಿಗಳನ್ನು ಆಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Flipkart Scholarship Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಸಲ್ಲಿಸಲು ಈ ಕೆಳಗೆ ತಿಳಿಸಿರುವ ದಾಖಲಾತಿಗಳನ್ನು ಒದಗಿಸಬೇಕು.

  • ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ/Adhar card.
  • ದ್ವಿತೀಯ ಪಿಯುಸಿ ಅಂಕಪಟ್ಟಿ/Marks Card.
  • ಶಾಲಾ ದಾಖಲಾತಿ ಪ್ರಮಾಣಪತ್ರ/Shool Admission Letter
  • ಕಿರಾಣಿ ಅಂಗಡಿ ಮಾಲೀಕತ್ವದ ದಾಖಲೆ (ಉದಾಹರಣೆ: GST ಪ್ರಮಾಣಪತ್ರ).
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್ ಪ್ರತಿ/Bank Passbook
  • ವಿದ್ಯಾರ್ಥಿಯ ಪಾಸ್‌ಪೋರ್ಟ್ ಗಾತ್ರದ ಫೋಟೋ/Photo

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಉಪಯುಕ್ತ ಮಾಹಿತಿ:

ಅಧಿಕೃತ ವೆಬ್ಸೈಟ್-Click Here
ಅರ್ಜಿ ಸಲ್ಲಿಸಲು ಲಿಂಕ್-Apply Now
ಸಹಾಯವಾಣಿ-011-430-92248 (Ext-364) (Monday to Friday - 10:00AM to 06:00 PM (IST))
Mail- flipkartfoundationscholarship@buddy4study.com

WhatsApp Group Join Now
Telegram Group Join Now
Share Now: