Gruhalakshmi Amount-ಈ ಜಿಲ್ಲೆಯ ಮಹಿಳೆಯ ಖಾತೆಗೆ 1,095 ಕೋಟಿ ಗೃಹಲಕ್ಷ್ಮಿ ಹಣ!

May 18, 2025 | Siddesh
Gruhalakshmi Amount-ಈ ಜಿಲ್ಲೆಯ ಮಹಿಳೆಯ ಖಾತೆಗೆ 1,095 ಕೋಟಿ ಗೃಹಲಕ್ಷ್ಮಿ ಹಣ!
Share Now:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಇವುಗಳ ಪ್ರಮುಖ ಯೋಜನೆಯಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಹಣ(Gruhalakshmi Amount-2025) ಬಿಡುಗಡೆಗೆ ಕುರಿತಂತೆ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್(Minister Laxmi hebbalkar) ಅವರು ಮೇ-2025 ತಿಂಗಳಲ್ಲಿ ಹಂತ-ಹಂತವಾಗಿ ಇದೆ ತಿಂಗಳಲ್ಲಿ 3 ಕಂತುಗಳ ಒಟ್ಟು 6,000 ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು ಈ ನಿಟ್ಟಿನಲ್ಲಿ ಈ ಯೋಜನೆಯ ಫಲಾನುಭವಿಗಳು ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ: Free Hostel-2025: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು(Karnataka state government) ಗ್ಯಾರಂಟಿ ಯೋಜನೆಗಳನ್ನು(Karnataka guarantee schemes) ಜಾರಿಗೆ ತಂದು ಎರಡು ವರ್ಷ ಪೂರ್ಣಗೊಳಿಸಿದ್ದು ಇದಕ್ಕಾಗಿ ಇದೇ 20 ಮೇ 2025 ರಂದು ಹೊಸಪೇಟೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಬಳಿಕ ರಾಜ್ಯ ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣ ಜಮಾ ಅಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Gruhalakshmi Amount-ಉತ್ತರಕನ್ನಡ ಜಿಲ್ಲೆಯಲ್ಲಿ ಮಹಿಳೆಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯಡಿ 1,095 ಕೋಟಿ ಹಣ ಬಿಡುಗಡೆ:

ಉತ್ತರಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಜಿಯನ್ನು ಸಲ್ಲಿಸಿದ ಅರ್ಹ ಮಹಿಳಾ ಫಲಾನುಭವಿಗಳಿಗೆ ಇಲ್ಲಿಯವರೆಗೆ ಒಟ್ಟು 1095 ಕೋಟಿ ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Bembala Bele Yojane- ರೈತರಿಂದ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ!

Gruhalakshmi Yojana-ಶೇ 99.9 ರಷ್ಟು ಫಲಾನುಭವಿಗಳ ಈ ಯೋಜನೆಯಡಿ ಹಣ ವರ್ಗಾವಣೆ:

ಪ್ರಸ್ತುತ ಈ ಯೋಜನೆಯಡಿ ಜಿಲ್ಲೆಯಲ್ಲಿ ಲಭ್ಯವಿರುವ ಒಟ್ಟು ಪಡಿತರ ಚೀಟಿದಾರರಲ್ಲಿ ಶೇ 99.9 ರಷ್ಟು ಗ್ರಾಹಕರಿಗೆ ಈ ಯೋಜನೆಯಡಿ ಆರ್ಥಿಕ ನೆರವನ್ನು ಜಮಾ ಮಾಡಲಾಗಿದ್ದು, ಒಟ್ಟು ಜಿಲ್ಲೆಯಲ್ಲಿ- 3,61,481 ಪಡಿತರ ಚೀಟಿಗಳು ಅಸ್ತಿತ್ವದಲ್ಲಿದ್ದು ಟ್ಯಾಕ್ಸ್ ಪಾವತಿ, ಮರಣ ಹೊಂದಿರುವವರು, ವಲಸೆ ಹೋಗಿರುವವರು ಸೇರಿ ಒಟ್ಟು 25,676 ಜನರು ಈ ಯೋಜನೆಯಿಂದ ಅನರ್ಹರಾಗಿರುತ್ತಾದೆ.

ಬಾಕಿ ಉಳಿದ ಒಟ್ಟು 3,35,805 ರೇಶನ್ ಕಾರ್ಡ ಫಲಾನುಭವಿಗಳಿ ಈ ಯೋಜನೆಯಡಿ ಪ್ರತಿ ತಿಂಗಳು ರೂ 2,000/- ಆರ್ಥಿಕ ನೆರವನ್ನು ಪಡೆಯುತ್ತಿದ್ದಾರೆ ಎಂದು ಇಲಾಖೆಯಿಂದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!

gruhalakshmi (18)

Gruhalakshmi Beneficiary-ಅನರ್ಹ ಫಲಾನುಭವಿಗಳ ವಿವರ ಹೀಗಿದೆ:

ಗೃಹಲಕ್ಷ್ಮಿ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಸಾಧ್ಯವಾಗದೇ ಇರುವ ಫಲಾನುಭವಿಗಳ ವಿವರ ಈ ಕೆಳಗಿನಂತಿದೆ.

ಆದಾಯ ತೆರಿಗೆ ಪಾವತಿದಾರರು- 10,377
GST ಪಾವತಿದಾರರು- 4,875
ಮರಣ ಹೊಂದಿದವರು- 7,503
ವಲಸೆ ಹೋಗಿರುವವರು- 1,779
ರೇಶನ್ ಕಾರ್ಡ ನಿಷ್ಟ್ರಿಯಗೊಂಡಿರುವವರು ಮತ್ತುಯೋಜನೆಯನ್ನು ನಿರಾಕರಿಸಿರುವವರು- 1,1440

Uttarakannada Gruhalakshmi Grants-ತಾಲ್ಲೂಕುವಾರು ಫಲಾನುಭವಿಗಳ ಮಾಹಿತಿ:

ಗೃಹಲಕ್ಷ್ಮಿ ಯೋಜನೆಯಡಿ ಉತ್ತರಕನ್ನಡ ಜಿಲ್ಲೆಯಲ್ಲಿ ತಾಲ್ಲೂಕುವಾರು ಆರ್ಥಿಕ ನೆರವನ್ನು ಪಡೆಯುತ್ತಿರುವ ಫಲಾನುಭವಿಗಳ ವಿವರ ಈ ಕೆಳಗಿನಂತಿದೆ.

  • ಅಂಕೋಲಾ- 26,973
  • ಭಟ್ಕಳ- 33,858
  • ದಾಂಡೇಲಿ- 13,931
  • ಹಳಿಯಾಳ- 29,739
  • ಹೊನ್ನಾವರ- 39,853
  • ಕಾರವಾರ- 32,728
  • ಕುಮಟಾ- 37,299
  • ಮುಂಡಗೋಡ- 24,450
  • ಸಿದ್ದಾಪುರ- 23,720
  • ಶಿರಸಿ- 41,326
  • ಸೂಪಾ- 12,886
  • ಯಲ್ಲಾಪುರ- 18,735

ಇದನ್ನೂ ಓದಿ: Flipkart Scholarship-ಫ್ಲಿಪ್‌ಕಾರ್ಟ್ ಫೌಂಡೇಶನ್ ನಿಂದ 50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Gruhalakshmi Installment Date 2025-ಗೃಹಲಕ್ಷ್ಮಿ ಹಣ ಯಾವಾಗ ಜಮಾ ಅಗಲಿದೆ?

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000/- ಆರ್ಥಿಕ ನೆರವನ್ನು ಪಡೆಯಲು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ಮಹಿಳೆಯರಿಗೆ ಒಟ್ಟು ಮೂರು ತಿಂಗಳ ಹಣ ಪಾವತಿ ಮಾಡುವುದನ್ನು ರಾಜ್ಯ ಸರ್ಕಾರದ ಬಾಕಿ ಉಳಿಸಿಕೊಂಡಿದ್ದು ಮೇ 20 ರಂದು ಹೊಸಪೇಟೆಯಲ್ಲಿ ಗ್ಯಾರಂಟಿ ಯೋಜನೆಗಳ ಎರಡು ವರ್ಷ ಪೂರ್ಣಗೊಂಡಿರುವುದ ಸಂಬಂಧ ಕಾರ್ಯಕ್ರಮವನ್ನು ಮುಗಿಸಿದ ಬಳಿಕ ಎಲ್ಲ ಫಲಾನುಭವಿಗಳಿಗೆ ಇದೆ ತಿಂಗಳಲ್ಲಿ ಒಟ್ಟು ಮೂರು ಕಂತಿಗಳ ರೂ 6,000/- ಹಣವನ್ನು ಜಮಾ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!

Gruhalakshmi Amount Status-ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ವಿವರವನ್ನು ತಿಳಿಯುವ ವಿಧಾನ:

ಗೃಹಲಕ್ಷ್ಮಿ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯುತ್ತಿರುವ ಅರ್ಹ ಫಲಾನುಭವಿ ಮಹಿಳೆಯರು Gruhalakshmi Amount Status Check ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಪ್ರವೇಶ ಮಾಡಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಲ್ಲೇ ಇಲ್ಲಿಯವರೆಗೆ ಎಷ್ಟು ಮೊತ್ತದ ಗೃಹಲಕ್ಷ್ಮಿ ಹಣ ಜಮಾ ಅಗಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಕಂತುಗಳವಾರು ತಮ್ಮ ಮನೆಯಲ್ಲೇ ಇದ್ದು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ.

Gruhalakshmi

ಗೃಹಲಕ್ಷ್ಮಿ ಯೋಜನೆಯ ಕುರಿತು ಮಹತ್ವದ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ- Gruhalakshmi Scheme

WhatsApp Group Join Now
Telegram Group Join Now
Share Now: