Free Hostel-2025: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

May 18, 2025 | Siddesh
Free Hostel-2025: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!
Share Now:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಉಚಿತ ಹಾಸ್ಟೆಲ್(Free Hostel) ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಈ ಕುರಿತು ಅಧಿಕೃತವಾಗಿ ಇಲಾಖೆಯಿಂದ ಹೊರಡಿಸಿರುವ ಪ್ರಕಟಣೆಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

2025-26ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ(Free Hostel Application) ಹೊಸದಾಗಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಅವಕಾಶದ ಪ್ರಯೋಜನವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: Gruhalakshmi Amount-ಈ ಜಿಲ್ಲೆಯ ಮಹಿಳೆಯ ಖಾತೆಗೆ 1,095 ಕೋಟಿ ಗೃಹಲಕ್ಷ್ಮಿ ಹಣ!

ಉಚಿತ ಹಾಸ್ಟೆಲ್ ಪ್ರವೇಶಕ್ಕೆ(BCM Hostel Application)ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Eligibility Criteria For Free Hostel Admission-ಅರ್ಜಿ ಸಲ್ಲಿಸಲು ಅರ್ಹರು:

ಉಚಿತ ಹಾಸ್ಟೆಲ್ ಪ್ರವೇಶ ಪಡೆಯಲು ವಿದ್ಯಾರ್ಥಿಯು ಸರ್ಕಾರಿ ಅಥವಾ ಸರ್ಕಾರಿ ಅಂಗೀಕೃತ ಶಾಲೆಯಲ್ಲಿ 5 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ವಿದ್ಯಾರ್ಥಿ ಪೋಷಕರ ವಾರ್ಷಿಕ ಆದಾಯವು ಪ್ರವರ್ಗ-1ರ ಮತ್ತು ಎಸ್.ಸಿ ಅಥವಾ ಎಸ್.ಟಿ ವಿದ್ಯಾರ್ಥಿಗಳಿಗೆ ರೂ.2.50 ಲಕ್ಷ ಹಾಗೂ ಪ್ರವರ್ಗ 2ಎ, 2ಬಿ, 3ಎ, 3ಬಿಯ ವಿದ್ಯಾರ್ಥಿಗಳಿಗೆ ರೂ.1.00 ಲಕ್ಷ ದ ಒಳಗಿರಬೇಕು.

ಇದನ್ನೂ ಓದಿ: DAP Fertilizer-ರೈತರಿಗೆ ಡಿಎಪಿ ರಸಗೊಬ್ಬರ ಬಳಕೆ ಕುರಿತು ಕೃಷಿ ಇಲಾಖೆಯಿಂದ ಮಹತ್ವದ ಪ್ರಕಟಣೆ!

Karnataka Free Hostel Facility-ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ನಲ್ಲಿರುವ ಸೌಲಭ್ಯಗಳು:

1) ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ.1750/- ವೆಚ್ಚದಲ್ಲಿ 10 ತಿಂಗಳ ಅವಧಿಗೆ ಆಹಾರವನ್ನು ಒದಗಿಸಲು ಸರ್ಕಾರ ವೆಚ್ಚ ಭರಿಸಲಾಗುತ್ತದೆ.

2) ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ವಸತಿ ಸೌಕರ್ಯವನ್ನು ಒದಗಿಸಲಾಗುತ್ತದೆ.

3) ಪ್ರತಿ ವಿದ್ಯಾರ್ಥಿಗೆ ವರ್ಷಕ್ಕೆ 2 ಜೊತೆ ಸಮವಸ್ತ್ರ ವನ್ನು ಒದಗಿಸಲಾಗುತ್ತದೆ.

4) ಪ್ರತಿ ಬಾಲಕ ವಿದ್ಯಾರ್ಥಿಗೆ ಎರಡು ತಿಂಗಳಿಗೊಮ್ಮೆ ರೂ.60/-ರಂತೆ ಕ್ಷೌರದ ವೆಚ್ಚ ನೀಡಲಾಗುತ್ತದೆ (ವಾರ್ಷಿಕ 5 ಬಾರಿಗೆ).

5) ಪ್ರತಿ ವಿದ್ಯಾರ್ಥಿಗೆ ಪಠ್ಯ ಪುಸ್ತಕ ಮತ್ತು ಲೇಖನ ಸಾಮಗ್ರಿ ಒದಗಿಸಲಾಗುತ್ತದೆ.

6) ಪ್ರತಿ ವಿದ್ಯಾರ್ಥಿಗೂ ಸಹ ಆರ್ಥಿಕ ಮಿತಿಗೆ ಒಳಪಟ್ಟು ವೈದ್ಯಕೀಯ ವೆಚ್ಚ ಭರಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Guest Teacher Salary Hike-ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಗೌರವಧನ ಹೆಚ್ಚಳ! ಇಲ್ಲಿದೆ ಅಧಿಕೃತ ಆದೇಶದ ಪ್ರತಿ!

Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಜೂನ್ 2025

Important notice-ಅರ್ಜಿ ಸಲ್ಲಿಸಲು ಪ್ರಮುಖ ಸೂಚನೆಗಳು:

  • ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೆಲವು ಪ್ರಮುಖ ಸೂಚನೆಗಳನ್ನು ಹೊರಡಿಸಲಾಗಿದ್ದು ಅವುಗಳ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
  • ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಕೊನೆಯ ದಿನಾಂಕದ ಒಳಗಾಗಿ ಸಲ್ಲಿಸಬೇಕು.
  • ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ,ಪ್ರವೇಶಾತಿಗೆ ಬೇಕಾದ ಅಗತ್ಯ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: Bembala Bele Yojane- ರೈತರಿಂದ ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ!

BCM Hostel (2)

Free Hostel Online Application-ಆನ್ಲೈನ್ ಮೂಲಕ ಅಪ್ಲಿಕೇಶನ್ ಅನ್ನು ಸಲ್ಲಿಸುವ ವಿಧಾನ:

ಹಾಸ್ಟೆಲ್ ಅನ್ನು ಪಡೆಯಲು ಆಸಕ್ತ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು ಈ ಕೆಳಗಿನ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಪ್ರಥಮದಲ್ಲಿ Online Hostel Application ಇಲ್ಲಿ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ರಾಜ್ಯ ಸರ್ಕಾರದಿಂದ ನಿಗದಿಪಡಿಸಿರುವ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Flipkart Scholarship-ಫ್ಲಿಪ್‌ಕಾರ್ಟ್ ಫೌಂಡೇಶನ್ ನಿಂದ 50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Step-2: ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿದ ನಂತರ ಇಲ್ಲಿ ಮುಖಪುಟದಲ್ಲಿ ಎಡಬದಿಯಲ್ಲಿ ಕಾಣುವ "Pre Matric" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ನಂತರ ಈ ಪೇಜ್ ನಲ್ಲಿ "Do you have State Scholarship Account? Yes/NO ಎಂದು ಪ್ರಶ್ನೆಯನ್ನು ಕೇಳುತ್ತದೆ ಇದಕ್ಕೆ ಉತ್ತರಿಸಿ ಮುಂದಿನ ಪೇಜ್ ನಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ವಿದ್ಯಾರ್ಥಿಗಳು ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents-ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲೆಗಳು:

1) ವಿದ್ಯಾರ್ಥಿಯ ಆಧಾರ್ ಕಾರ್ಡ ಪ್ರತಿ/Aadhar card
2) ವಿದ್ಯಾರ್ಥಿಯ ಶಾಲಾ ದಾಖಲಾತಿ ಪತ್ರ/School Admission
3) ವಿದ್ಯಾರ್ಥಿ ಪೋಟೋ/Photo
4) ವಿದ್ಯಾರ್ಥಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste and Income Certificate
5) ವಿದ್ಯಾರ್ಥಿ ವ್ಯಾಸಂಗ ಪ್ರಮಾಣ ಪತ್ರ/Study Certificate
6) ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Borewell Permission-ಇನ್ಮುಂದೆ ಬೋರ್ ವೆಲ್ ಕೊರೆಸಲು ಈ ಅನುಮತಿ ಕಡ್ಡಾಯ!

karnataka Free Hostel Details-ರಾಜ್ಯದಲ್ಲಿರುವ ವಿದ್ಯಾರ್ಥಿನಿಲಯಗಳ ವಿವರ ಹೀಗಿದೆ:

  • ರಾಜ್ಯದಲ್ಲಿರುವ ಒಟ್ಟು ಮೆಟ್ರಿಕ್-ಪೂರ್ವ ವಿದ್ಯಾರ್ಥಿನಿಲಯಗಳು- 1277
  • ಬಾಲಕರ- 993
  • ಬಾಲಕಿಯರ- 284
  • ಒಟ್ಟು ಎಷ್ಟು ವಿದ್ಯಾರ್ಥಿಗಳು- 68,803

For More Information-ಹಾಸ್ಟೆಲ್ ಪ್ರವೇಶದ ಕುರಿತು ಇನ್ನು ಹೆಚ್ಚಿನ ಅಗತ್ಯ ಮಾಹಿತಿಯನ್ನು ಪಡೆಯಲು ಅಗತ್ಯ ಮಾಹಿತಿ ಈ ಕೆಳಗಿನಂತಿದೆ:

ಅಧಿಕೃತ ಪ್ರಕಟಣೆ ಪ್ರತಿ- Download Now
ಸಹಾಯವಾಣಿ ಸಂಖ್ಯೆ : 8050770004 ಅಥವಾ 8050770005(ಕಛೇರಿ ಸಮಯ: ಬೆಳಿಗ್ಗೆ:10.30 ರಿಂದ ಸಂಜೆ:5.30)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವೆಬ್ಸೈಟ್- Click here
ಅರ್ಜಿ ಸಲ್ಲಿಸಲು ಲಿಂಕ್- Apply Now

WhatsApp Group Join Now
Telegram Group Join Now
Share Now: