Pumpset Repair Training-ಉಚಿತ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

May 20, 2025 | Siddesh
Pumpset Repair Training-ಉಚಿತ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಉಚಿತ ಪಂಪ್ ಸೆಟ್ ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಆಯ್ಕೆ ಮಾಡಲು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ(Free Pumpset Repair Training) ಕೇಂದ್ರದಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಅಂಕಣದಲ್ಲಿ ಈ ತರಬೇತಿಯನ್ನು ಪಡೆಯಲು ಅಭ್ಯರ್ಥಿಗಳು ಯಾವೆಲ್ಲ ಕ್ರಮಗಳನ್ನು ಪಾಲಿಸಬೇಕು? ತರಬೇತಿಯ ಪ್ರಯೋಜನಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ(Self employment training courses) ತರಬೇತಿ ಕೇಂದ್ರದಿಂದ ಉಚಿತವಾಗಿ ಯಾವುದೇ ಶುಲ್ಕವಿಲ್ಲದ ಅರ್ಹ ಅಭ್ಯರ್ಥಿಗಳಿಗೆ 30 ದಿನದ ಪಂಪ್ ಸೆಟ್ ರಿಪೇರಿ(Pumpset) ಹಾಗೂ ಗೃಹಬಳಕೆಯ ವಿದ್ಯುತ್ ಉಪಕರಣಗಳಾ ಮಿಕ್ಸರ್,ಗ್ರಾಂಡರ್,ಪ್ಯಾನ್, ಮನೆ ವೈರಿಂಗ್ ಹಾಗೂ ಇತರೆ ಅಗತ್ಯ ಉಪಕರಣಗಳ ರಿಪೇರಿಯ ಕುರಿತು ತರಬೇತಿಯನ್ನು ನೀಡಲು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Best Pension Scheme-ತಿಂಗಳಿಗೆ ರೂ 5,000/- ಪಿಂಚಣಿ ಸೌಲಭ್ಯ! ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ!

ಉಚಿತ ತರಬೇತಿಯನ್ನು(Self employment training) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ತರಬೇತಿ(Pumpset Repair) ಆರಂಭ ದಿನಾಂಕ ಸೇರಿದಂತೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸಲು ತಪ್ಪದೇ ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸಾಪ್ ಗುಂಪುಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ ಸಹಕರಿ.

Free Pumpset Repair Training Application- ತರಬೇತಿಯಲ್ಲಿ ಭಾಗವಹಿಸಲು ನಿಗದಿಪಡಿಸಿದ ಅರ್ಹತೆಗಳು:

(1) ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

(2) ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷದ ಮಿತಿಯಲ್ಲಿರಬೇಕು.

(3) ಅಭ್ಯರ್ಥಿಗೆ ಕನ್ನಡ ಬಾಷೆಯನ್ನು ಓದಲು ಮತ್ತು ಬರೆಯಲು ಬರುವುದು ಕಡ್ಡಾಯವಾಗಿರುತ್ತದೆ. 

(4) ಅರ್ಜಿದಾರ ಅಭ್ಯರ್ಥಿಯು ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಬಿ.ಪಿ.ಎಲ್ ಕಾರ್ಡ ಹೊಂದಿರುವ ಅರ್ಜಿದಾರರಿಗೆ ತರಬೇತಿಯಲ್ಲಿ ಪಾಲ್ಗೊಳಲು ಪ್ರಥಮ ಅದ್ಯತೆಯನ್ನು ನೀಡಲಾಗುತ್ತದೆ ಎಂದು ತರಬೇತಿ ನೀಡುವ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

(5) ಅಭ್ಯರ್ಥಿಯು ತರಬೇತಿಯನ್ನು ಮುಗಿಸಿದ ಬಳಿಕ ಸ್ವಂತ ಉದ್ಯೋಗ ಪ್ರಾರಂಭಿಸುವ ಆಸಕ್ತಿಯನ್ನು ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Marriage Registration-ಮ್ಯಾರೇಜ್ ರಿಜಿಸ್ಟ್ರೇಷನ್ ಮಾಡಿಸಲು ಈ ದಾಖಲೆ ಕಡ್ಡಾಯ!

Free Pumpset Repair

ಇದನ್ನೂ ಓದಿ: Free Hostel-2025: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

Pumpset Repair-ವಸತಿ ಮತ್ತು ಊಟ ಸಹಿತ ಸಂಪೂರ್ಣ ಉಚಿತ ತರಬೇತಿ:

30 ದಿನದ ಈ ತರಬೇತಿಯು ಸಂಪೂರ್ಣವಾಗಿ ಉಚಿತವಾಗಿದ್ದು ಇದಕ್ಕಾಗಿ ಅಭ್ಯರ್ಥಿಗಳು ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಅಭ್ಯರ್ಥಿಗಳು ತರಬೇತಿ ಸಮಯದಲ್ಲಿ ವಾಸ್ತವ್ಯ ಮಾಡಲು ತರಬೇತಿ ಸಂಸ್ಥೆಯಲ್ಲಿ ಈ ಕೇಂದ್ರದಿಂದ ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

Free Pumpset Repair Application-ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಉಚಿತ ಪಂಪ್ ಸೆಟ್ ರಿಪೇರಿ ತರಬೇತಿಯನ್ನು ಪಡೆಯಲು ಆಸಕ್ತ ಅಭ್ಯರ್ಥಿಗಳು ಎರಡು ಕ್ರಮವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು ಒಂದು ಆನ್ಲೈನ್ ಮೂಲಕ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಹಾಕಬಹುದು. 2ನೇ ವಿಧಾನ ತರಬೇತಿ ನಡೆಯುವ ನೇರವಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ತರಬೇತಿ ಕೇಂದ್ರದಲ್ಲಿ ದಾಖಲೆಗಳನ್ನು ಸಲ್ಲಿಸಿ ಈ ತರಬೇತಿಯಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಲು ಈ ಮೊಬೈಲ್ 9449860007, 9538281989, 9916783825, 888044612 ಸಂಖ್ಯೆಗಳಿಗೆ ಕರೆ ಮಾಡಬಹುದು.

ಇದನ್ನೂ ಓದಿ: Flipkart Scholarship Application-ಫ್ಲಿಪ್‌ಕಾರ್ಟ್ ಸ್ಕಾಲರ್‌ಶಿಪ್! ₹50,000 ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಸಲ್ಲಿಸಿ!

Free Pumpset Repair Duration-ತರಬೇತಿ ಪ್ರಾರಂಭವಾಗುವ ದಿನಾಂಕ:

ಉಚಿತ ಪಂಪ್ ಸೆಟ್ ರಿಪೇರಿ ತರಬೇತಿಯು 20 ಜೂನ್ 2025 ರಿಂದ ಆರಂಭವಾಗಿ 19 ಜುಲೈ 2025 ಕ್ಕೆ ಮುಕ್ತಾಯವಾಗಲಿದ್ದು ಒಟ್ಟು 30 ದಿನದ ತರಬೇತಿ ಇದಾಗಿರುತ್ತದೆ.

Required documents for Training - ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಅಭ್ಯರ್ಥಿಗಳು ಈ ತರಬೇತಿಯನ್ನು ಪಡೆಯಲು ಅಗತ್ಯವಾಗಿ ಒದಗಿಸಬೇಕಾದ ದಾಖಲೆಗಳ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

  • ಅರ್ಜಿದಾರರ ಅಧಾರ್ ಕಾರ್ಡ ಪ್ರತಿ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ರೇಶನ್ ಕಾರ್ಡ ಪ್ರತಿ.
  • ಮೊಬೈಲ್ ನಂಬರ್.
  • ಪೋಟೋ.

ಇದನ್ನೂ ಓದಿ: Sonalika Tractor Offer-ಸೋನಾಲಿಕಾ ಟ್ರ್ಯಾಕ್ಟರ್ ಖರೀದಿ ಮೇಲೆ ಬರೊಬ್ಬರಿ ₹1.00 ಲಕ್ಷ ಡಿಸ್ಕೌಂಟ್!

Free Pumpset Repair Info-ಈ ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ತಿಳಿಸಲಾಗುತ್ತದೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪಂಪ್ ಸೆಟ್ ರಿಪೇರಿ ಕುರಿತು ಸಂಪೂರ್ಣ ಮಾಹಿತಿ ಮತ್ತು ಪ್ರಯೋಗಿಕ ತರಬೇತಿ ನೀಡುವುದರ ಜೊತೆಗೆ ಈ ತರಬೇತಿಯಲ್ಲಿ ಗೃಹಬಳಕೆಯ ವಿದ್ಯುತ್ ಉಪಕರಣಗಳಾ ಮಿಕ್ಸರ್,ಗ್ರಾಂಡರ್,ಪ್ಯಾನ್, ಮನೆ ವೈರಿಂಗ್ ಹಾಗೂ ಇತರೆ ಅಗತ್ಯ ಉಪಕರಣಗಳ ರಿಪೇರಿಯ ಕುರಿತು ಸಹ ತರಬೇತಿಯನು ನೀಡಲಾಗುತ್ತದೆ.

ಇದರ ಜೊತೆಗೆ ಕೌಶಲ್ಯ, ಸಾಧನ ಪ್ರೇರಣಾ ತರಬೇತಿ, ಉದ್ಯಮಶೀಲತೇಯ ದಕ್ಷ ಗುಣಗಳು, ಹೊಸ ಉದ್ಯಮದ ಸ್ಥಾಪನೆ ಬಗ್ಗೆ ಮಾಹಿತಿ, ಮಾರುಕಟ್ಟೆ ಸಮೀಕ್ಷೆ, ಮಾರಾಟ ತಂತ್ರಗಳು, ಯಶ್ವಸಿ ಉದ್ಯಮಗಳಿಂದ ಅನುಭವ ಹಂಚಿಕೆ. ಕ್ಷೇತ್ರ ಭೇಟಿ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ, ಬ್ಯಾಂಕಿನಿಂದ ಸಾಲ ಪಡೆದು ಸ್ವಉದ್ಯೋಗ ಪ್ರಾಂಭಿಸಲು ಬೇಕಾದ ಜ್ಞಾನ, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನಿತರ ಮಾಹಿತಿಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Gruhalakshmi Amount-ಈ ಜಿಲ್ಲೆಯ ಮಹಿಳೆಯ ಖಾತೆಗೆ 1,095 ಕೋಟಿ ಗೃಹಲಕ್ಷ್ಮಿ ಹಣ!

Training Center Address-ತರಬೇತಿ ಏರ್ಪಡಿಸಿರುವ ಕೇಂದ್ರದ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರ, ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343, ಹೆಚ್ಚಿನ ಮಾಹಿತಿಗಾಗಿ: 9449860007, 9538281989, 9916783825, 888044612

Online Application Link For Pumpset Repair Training-ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಮೊಬೈಲ್ ನಲ್ಲೇ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು ಅರ್ಜಿದಾರರು ಅಗತ್ಯ ದಾಖಲೆಗಳ ಸಮೇತ ಈ Apply Now ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಕೆಳಗೆ ಇರುವ "Submit" ಬಟನ್ ಮೇಲೆ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now
Telegram Group Join Now
Share Now: