Tarpaulin Subsidy-ಕೃಷಿ ಇಲಾಖೆಯಿಂದ ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅವಕಾಶ!

May 21, 2025 | Siddesh
Tarpaulin Subsidy-ಕೃಷಿ ಇಲಾಖೆಯಿಂದ ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅವಕಾಶ!
Share Now:

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಟರ್ಪಾಲಿನ್(Tarpaulin) ಅನ್ನು ವಿತರಣೆ ಮಾಡಲು ಅರ್ಹ ರೈತರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಇದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರತಿ ವರ್ಷದಂತೆ ಈ ವರ್ಷವು ಸಹ ಕೃಷಿ ಇಲಾಖೆಯಿಂದ(Krishi Ilake Subsidy Scheme) ರೈತರಿಗೆ ಸಬ್ಸಿಡಿಯಲ್ಲಿ ಟರ್ಪಾಲಿನ್ ಅನ್ನು ವಿತರಣೆ ಮಾಡಲು ಅರ್ಹ ರೈತರನ್ನು ಗುರುತಿಸಲು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ ರೈತ ಮಿತ್ರ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಮಾಹಿತಿ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Pumpset Repair Training-ಉಚಿತ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Tarpaulin Subsidy Yojana-ಕೃಷಿಕರಿಗೆ ಟರ್ಪಾಲಿನ್ ಪ್ರಾಮುಖ್ಯತೆ:

ಟರ್ಪಾಲಿನ್ ಅಥವಾ ತಾಡಪತ್ರಿ ರೈತರಿಗೆ ಅವಶ್ಯಕವಾಗಿ ಕಡ್ಡಾಯವಾಗಿ ಬೇಕಾಗುವ ಬಹುಮುಖ್ಯ ಪರಿಕರಗಳಲ್ಲಿ ಇದು ಸಹ ಒಂದಾಗಿದ್ದು, ಕೃಷಿ, ನಿರ್ಮಾಣ, ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಣಿಕೆ ಮಾಡಲು ಅವಶ್ಯವಾಗಿದೆ ಮತ್ತು ದೈನಂದಿನ ಜೀವನದಲ್ಲಿ ವಿವಿಧ ಉದ್ದೇಶಗಳಿಗೆ ಬಳಸಲಾಗುತ್ತದೆ. ಇದು ಜಲನಿರೋಧಕ, ಬಾಳಿಕೆ ಬರುವ ಮತ್ತು ವಿವಿಧ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

Tarpaulin Size-ಟರ್ಪಾಲಿನ್ ಅಳತೆ:

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ರೈತರಿಗೆ ವಿತರಣೆ ಮಾಡುವ ಟರ್ಪಾಲಿನ್ ಅಳತೆ ಉದ್ದ-8 ಮೀಟರ್, ಅಗಲಕ್ಕೆ- 6 ಮೀಟರ್ ನಷ್ಟು ಇರುತ್ತದೆ.

ಇದನ್ನೂ ಓದಿ: Best Pension Scheme-ತಿಂಗಳಿಗೆ ರೂ 5,000/- ಪಿಂಚಣಿ ಸೌಲಭ್ಯ! ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ!

Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ರೈತರ ಆಧಾರ್ ಕಾರ್ಡ ಪ್ರತಿ
ಜಮೀನಿನ ಪಹಣಿ
ರೈತರ ಪೋಟೋ
ಬ್ಯಾಂಕ್ ಪಾಸ್ ಬುಕ್
ಮೊಬೈಲ್ ನಂಬರ್

ಇದನ್ನೂ ಓದಿ: Marriage Registration-ಮ್ಯಾರೇಜ್ ರಿಜಿಸ್ಟ್ರೇಷನ್ ಮಾಡಿಸಲು ಈ ದಾಖಲೆ ಕಡ್ಡಾಯ!

Tarpaulin Scheme

ಇದನ್ನೂ ಓದಿ: Free Hostel-2025: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

Tarpaulin Subsidy Amount-ಎಷ್ಟು ಸಹಾಯಧನ ನೀಡಲಾಗುತ್ತದೆ?

ಕೃಷಿ ಇಲಾಖೆಯಿಂದ ಕೃಷಿ ಸಂಸ್ಕರಣೆ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ 50 ಸಬ್ಸಿಡಿಯನ್ನು ನೀಡಲಾಗುತ್ತದೆ. SC/ST ವರ್ಗಕ್ಕೆ ಸೇರಿದ ರೈತರಿಗೆ ಶೇ 90% ಸಬ್ಸಿಡಿಯನ್ನು ನೀಡಲಾಗುತ್ತದೆ.

Tarpaulin Application-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ರೈತರು ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಟರ್ಪಾಲಿನ್ ಅನ್ನು ಪಡೆಯಲು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ತಮ್ಮ ಹಳ್ಳಿ ವ್ಯಾಪ್ತಿಯ ಹೋಬಳಿ ಮಟ್ಟದಲ್ಲಿರುವ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Flipkart Scholarship Application-ಫ್ಲಿಪ್‌ಕಾರ್ಟ್ ಸ್ಕಾಲರ್‌ಶಿಪ್! ₹50,000 ವಿದ್ಯಾರ್ಥಿವೇತನಕ್ಕೆ ಇಂದೇ ಅರ್ಜಿ ಸಲ್ಲಿಸಿ!

Agriculture Department-ಪ್ರಸ್ತುತ ಅರ್ಜಿ ಆಹ್ವಾನಿಸಿದ ಜಿಲ್ಲೆಗಳು:

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೃಷಿ ಇಲಾಖೆಯಿಂದ ಅರ್ಜಿಯನ್ನು ಆಹ್ಚಾನಿಸಲಾಗಿದ್ದು ಇತರ ಜಿಲ್ಲೆಗಳಲ್ಲಿ ಅನುದಾನ ಲಭ್ಯತೆ ಆಧಾರ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ವಿಶೇಷ ಸೂಚನೆ: ರಾಜ್ಯದ ಎಲ್ಲಾ ಭಾಗಗಳಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ವಿತರಣೆ ಮಾಡುವ ಟರ್ಪಾಲಿನ್ ಗಳಿಗೆ ರೈತರಿಂದ ಹೆಚ್ಚು ಬೇಡಿಕೆ ಇದ್ದು ಆಯಾ ಜಿಲ್ಲೆಯಲ್ಲಿ ಲಭ್ಯವಿರುವ ಅನುದಾನದ ಆಧಾರ ಮೇಲೆ ಟರ್ಪಾಲಿನ್ ಗಳನ್ನು ರೈತರಿಗೆ ವಿತರಣೆ ಮಾಡಲಾಗುತ್ತದೆ.

ಕೆಲವೊಂದು ಜಿಲ್ಲೆಗಳಲ್ಲಿ ಮೊದಲು ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಟರ್ಪಾಲಿನ್ ಗಳನ್ನು ನೀಡಲಾಗುತ್ತದೆ ಕೆಲವೊಂದು ಕಡೆ ಲಾಟರಿ ವ್ಯವಸ್ಥೆಯನ್ನು ಬಳಕೆ ಮಾಡಿ ಟರ್ಪಾಲಿನ್ ಗಳನ್ನು ವಿತರಣೆ ಮಾಡಲಾಗುತ್ತದೆ.

ಇದನ್ನೂ ಓದಿ: Sonalika Tractor Offer-ಸೋನಾಲಿಕಾ ಟ್ರ್ಯಾಕ್ಟರ್ ಖರೀದಿ ಮೇಲೆ ಬರೊಬ್ಬರಿ ₹1.00 ಲಕ್ಷ ಡಿಸ್ಕೌಂಟ್!

Subsidy Seeds Distribution-ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬೀಜ ವಿತರಣೆ:

ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ವಿವಿಧ ಬಗ್ಗೆಯ ಬಿತ್ತನೆ ಬೀಜಗಳನ್ನು ಸಬ್ಸಿಡಿಯಲ್ಲಿ ವಿತರಣೆ ಮಾಡಲು ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡುವ ಕಾರ್ಯವು ಭರದಿಂದ ಸಾಗುತ್ತಿದ್ದು ರೈತರಿಗೆ ಶೀಘ್ರದಲ್ಲಿ ಬಿತ್ತನೆ ಬೀಜವನ್ನು ವಿತರಣೆಯನ್ನು ಮಾಡಲು ಕಾರ್ಯಕ್ಕೆ ಚಾಲನೆ ದೊರೆಯಲಿದೆ.

Official Karnataka Agriculture Department Website-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್- Click here

WhatsApp Group Join Now
Telegram Group Join Now
Share Now: