Copra msp price- ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿಗೆ ಅನುಮತಿ! ಅಧಿಕೃತ ಮಾರ್ಗಸೂಚಿ ಬಿಡುಗಡೆ.

2024ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ(copra msp price) ಖರೀದಿಸಲು ಅನುಮತಿ ನೀಡಲಾಗಿದ್ದು ಈ ಕುರಿತು ಸರಕಾರದಿಂದ ಹೊರಡಿಸಿರುವ ಅಧಿಕೃತ ಆದೇಶದ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

Copra msp price- ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿಗೆ ಅನುಮತಿ! ಅಧಿಕೃತ ಮಾರ್ಗಸೂಚಿ ಬಿಡುಗಡೆ.
copra msp price-2024

2024ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ(copra msp price) ಖರೀದಿಸಲು ಅನುಮತಿ ನೀಡಲಾಗಿದ್ದು ಈ ಕುರಿತು ಸರಕಾರದಿಂದ ಹೊರಡಿಸಿರುವ ಅಧಿಕೃತ ಆದೇಶದ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು ಇವರು 2024ನೇ ಸಾಲಿನಲ್ಲಿ ರಾಜ್ಯದಲ್ಲಿ ತೆಂಗು ಬೆಳೆಯನ್ನು 6.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದ್ದು, 60,840 ಲಕ್ಷ ತೆಂಗಿನ ಕಾಯಿ ಉತ್ಪಾದನೆಯಾಗುವುದೆಂದು ಅಂದಾಜಿಸಲಾಗಿದೆ. ವಾರ್ಷಿಕ ಒಟ್ಟು ಉತ್ಪಾದನೆಯಲ್ಲಿ ಅಂದಾಜು 2.50 ಲಕ್ಷ ಮೆಟ್ರಿಕ್ ಟನ್ ಉಂಡೆ ಕೊಬ್ಬರಿ(copra price) ಉತ್ಪಾದನೆಯಾಗುವ ನಿರೀಕ್ಷೆಯಿರುತ್ತದೆ. 

ಕೇಂದ್ರ ಸರ್ಕಾರವು 2022- 23ನೇ ಸಾಲಿಗೆ ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ ಬೆಂಬಲ ಬೆಲೆ ರೂ.11,750/-ಗಳನ್ನು ಘೋಷಿಸಿರುತ್ತದೆ. ಪ್ರಸ್ತುತ ಉಂಡೆ ಕೊಬ್ಬರಿ ಧಾರಣೆಯು ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ.6,900/- ರಿಂದ ರೂ.9,500/-ಗಳ ಧಾರಣೆಯಲ್ಲಿ ಮಾರಾಟವಾಗುತ್ತಿದ್ದು, ತೆಂಗು ಬಹು ವಾರ್ಷಿಕ ಬೆಳೆಯಾಗಿರುವುದರಿಂದ ಕೊಬ್ಬರಿ ಉತ್ಪಾದನೆಯು ವರ್ಷವಿಡೀ ನಡೆಯುವ ಪ್ರಕ್ರಿಯೆಯಾಗಿದ್ದು, 2024ನೇ ಸಾಲಿಗೆ ಜನವರಿ ಮಾಹೆಯಲ್ಲಿ ಘೋಷಿಸುವ ಬೆಂಬಲ ಬೆಲೆ ದರದಂತೆ ವರ್ಷ ಪೂರ್ತಿ ಖರೀದಿ ಪ್ರಕ್ರಿಯೆ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಿರುತ್ತಾರೆ.

ಇದನ್ನೂ ಓದಿ: New ration card- ಹೊಸ ರೇಶನ್ ಕಾರ್ಡಗಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ! ಈ ತಿಂಗಳಲ್ಲಿ ನಿಮ್ಮ ಕೈ ಸೇರಲಿದೆ ರೇಶನ್ ಕಾರ್ಡ.

2024ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಉಂಡ ಕೊಬ್ಬರಿ ಖರೀದಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿತ್ತು. ಕೇಂದ್ರ ಸರ್ಕಾರವು 2024ನೇ ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಗರಿಷ್ಠ 62,500 ಮೆಟ್ರಿಕ್ ಟನ್ ಉಂಡೆ ಕೊಬ್ಬರಿಯನ್ನು ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳನುಸಾರ ರಾಜ್ಯ ಸರ್ಕಾರವು 03 ತಿಂಗಳ ಅವಧಿಯಲ್ಲಿ ಖರೀದಿಸಲು ಅನುಮತಿ ನೀಡಿರುತ್ತದೆ.

2024ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಎಫ್.ಎ.ಕ್ಕೂ ಗುಣಮಟ್ಟದ ಉಂಡೆ ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ ರೂ.12,000/- ರಂತೆ ಗರಿಷ್ಠ 62,500 ಮೆಟ್ರಿಕ್ ಟನ್ ಉಂಡೆ ಕೊಬ್ಬರಿಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಗಳ ಮಾರ್ಗಸೂಚಿಗಳನ್ವಯ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳ ರೈತರಿಂದ ಖರೀದಿಸಲು ಕೆಲವು ಷರತ್ತುಗಳಿಗೊಳಪಟ್ಟು ರೈತರ ನೋಂದಣಿ ಮತ್ತು ಖರೀದಿ ಅವಧಿಯು ದಿನಾಂಕ:01.02.2024ರಿಂದ ಅನ್ವಯವಾಗುವಂತೆ ಅನುಮತಿ ನೀಡಿ ಆದೇಶಿಸಲಾಗಿರುತ್ತದೆ.

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು ಇವರು 2024ನೇ ಸಾಲಿನ "ಬೆಂಬಲ ಬೆಲೆ ಯೋಜನೆಯಡಿ ಉಂಡ ಕೊಬ್ಬರಿಯನ್ನು ಸರ್ಕಾರದ ಆದೇಶ ದಿನಾಂಕ:09.01.2024 ಮತ್ತು 10.01.2024ಗಳನ್ವಯ ಮೈಸೂರು, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಚಾಮರಾಜನಗರ, ಹಾಸನ ಮತ್ತು ರಾಮನಗರ ಜಿಲ್ಲೆಗಳಲ್ಲಿ ಖರೀದಿಸಲು ಕೆಂದ್ರ ಸರ್ಕಾರದ ಖರೀದಿ ಸಂಸ್ಥೆಯಾದ ನಾಫೆಡ್ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿ ಸಂಸ್ಥೆಯನ್ನಾಗಿ ನೇಮಿಸಿ ಆದೇಶಿಸಲಾಗಿರುತ್ತದೆ. 

ಇದನ್ನೂ ಓದಿ: HSRP number plate- ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸದಿದ್ದಲ್ಲಿ ರೂ. 500 ರಿಂದ 1000 ದಂಡ! ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಉಂಡೆ ಕೊಬ್ಬರಿ ಖರೀದಿ ಸಂಬಂಧ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಒಟ್ಟು 09 ಜಿಲ್ಲೆಗಳಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್‌ನಿಂದ ಗುರುತಿಸಲ್ಪಟ್ಟಂತೆ 65 ಖರೀದಿ ಕೇಂದ್ರಗಳನ್ನು ತೆರೆದಿರುತ್ತದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ 6,25,000 ಕ್ವಿಂಟಾಲ್ ಉಂಡೆ ಕೊಬ್ಬರಿಯನ್ನು ಖರೀದಿಸಲು ಅನುಮತಿ ನೀಡಿರುತ್ತದೆ. ದಿನಾಂಕ:05.02.2024 ರಿಂದ ಪ್ರಾರಂಭವಾದ ನೋಂದಣಿ ಪ್ರಕ್ರಿಯೆ ದಿನಾಂಕ:09-02-2024ರಂದು ಮುಕ್ತಾಯವಾಗಿದ್ದು, ರಾಜ್ಯಾದ್ಯಂತ 46,036 ರೈತರಿಂದ 6,25,307 ಕ್ವಿಂಟಾಲ್ ಗರಿಷ್ಠ ಪ್ರಮಾಣ ನೊಂದಣಿಯಾಗಿರುತ್ತದೆ. 

ಆದಾಗ್ಯೂ, ಹೆಚ್ಚಿನ ರೈತರಿಗೆ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಸಾಧ್ಯವಾಗದ ಕಾರಣ ಮತ್ತು ನೋಂದಣಿ ಕಾರ್ಯದಲ್ಲಿ 09 ಉಂಡೆ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಅನಧಿಕೃತ ಉಪಕರಣಗಳನ್ನು ಉಪಯೋಗಿಸಿ ನೋಂದಣಿ ಮಾಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಸದರಿ ಖರೀದಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ ಹಾಗೂ ಕ್ರಿಮಿನಲ್ ಮೊಕದ್ದೊಮೆ ಹೂಡಲು ಶಾಖಾ ವ್ಯವಸ್ಥಾಪಕರುಗಳಿಗೆ ಅಧಿಕಾರ ಪತ್ರ ನೀಡಿ ಕೂಡಲೇ ಕ್ರಮವಹಿಸುವಂತೆ ನಿರ್ದೇಶಿಸಲಾಗಿದೆ. 

ಉಂಡೆ ಕೊಬ್ಬರಿ ಖರೀದಿಯ ನೋಂದಣಿಯಲ್ಲಿ ಅನಧಿಕೃತ ಉಪಕರಣಗಳನ್ನು ಉಪಯೋಗಿಸಿ ನೋಂದಣಿ ಮಾಡಿರುವುದರಿಂದ ಜಿಲ್ಲೆಗಳಲ್ಲಿ ನೋಂದಣಿಯಾಗಿರುವ ಪ್ರಮಾಣದಲ್ಲಿ ತಾರತಮ್ಮ ಉಂಟಾಗಿರುತ್ತದೆ. ಇದರಲ್ಲಿ ರೈತರ ಹೆಸರಿನಲ್ಲಿ ವರ್ತಕರು ನೊಂದಣಿ ಮಾಡಿಸಿರುವ ಅನುಮಾನಗಳು ಕಂಡುಬಂದಿರುತ್ತವೆ. ಈ ಹಿನ್ನೆಲೆಯಲ್ಲಿ ನೈಜ ರೈತರಿಗೆ ಅನ್ಯಾಯವಾಗಬಾರದೆಂಬ ಸದುದ್ಧೇಶದಿಂದ ಈಗಾಗಲೇ ನೊಂದಣಿ ಮಾಡಿರುವ ಎಲ್ಲಾ ನೊಂದಣಿಯನ್ನು ರದ್ದುಗೊಳಿಸಿ, ಹೊಸದಾಗಿ ನೊಂದಣಿ ಮಾಡಲು ಎನ್.ಐ.ಸಿ. ರವರಿಗೆ ನಿರ್ದೇಶನ ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, 

ಇದನ್ನೂ ಓದಿ: Raitavidya nidhi-2024: ರೈತ ವಿದ್ಯಾನಿಧಿ ವಿದ್ಯಾರ್ಥಿವೇತನಕ್ಕಾಗಿ ಆದಾಯ ಪ್ರಮಾಣಪತ್ರ ಸಲ್ಲಿಸಲು ಫೆಬ್ರವರಿ 29 ರವರೆಗೆ ಅವಕಾಶ

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇವರು ಕೋರಿರುತ್ತಾರೆಂದು ಹಾಗೂ ಉಂಡೆ ಕೊಬ್ಬರಿ ಖರೀದಿಯ ನೋಂದಣಿಯಲ್ಲಿ ಅನಧಿಕೃತ ಉಪಕರಣಗಳನ್ನು ಉಪಯೋಗಿಸಿ ನೋಂದಣಿ ಮಾಡಿರುವ ಕುರಿತು ಪ್ರಸ್ತುತ ಜರುಗುತ್ತಿರುವ ಅಧಿವೇಶನದಲ್ಲಿಯೂ ಸಹ ಈ ವಿಷಯವನ್ನು ಪ್ರಸ್ತಾಪಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ, ಮಾನ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಈ ಕುರಿತು ಕ್ರಮವಹಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿರುತ್ತಾರೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುತ್ತಾರೆ.

ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು 2024ನೇ ಸಾಲಿನಲ್ಲಿ ಉಂಡೆ ಕೊಬ್ಬರಿ ಖರೀದಿಯಲ್ಲಿನ ನೋಂದಣಿಯಲ್ಲಿ ಅನಧಿಕೃತ ಉಪಕರಣಗಳನ್ನು ಉಪಯೋಗಿಸಿ ಹಲವೆಡೆ ನೋಂದಣಿ ಮಾಡಿರುವುದರಿಂದ ನೋಂದಣಿ ಪ್ರಮಾಣದಲ್ಲಿ ತಾರತಮ್ಯ ಉಂಟಾಗಿರುವ ಹಿನ್ನೆಲೆಯಲ್ಲಿ ನೈಜ ವಿಷಯವು ಪ್ರಸ್ತುತ ಜರುಗುತ್ತಿರುವ ಅಧಿವೇಶನದಲ್ಲಿ ಪ್ರಸ್ತಾಪಿಸಲ್ಪಡುತ್ತಿದೆ. 

ಆದುದ್ದರಿಂದ, ಉಂಡೆ ಕೊಬ್ಬರಿ ಖರೀದಿಗೆ ಸಂಬಂಧಿಸಿದಂತೆ, ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ನಿಗದಿಪಡಿಸಲು ಹಾಗೂ 2024ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಕೂ ಗುಣಮಟ್ಟದ ಉಂಡೆ ಕೊಬ್ಬರಿಯ ಖರೀದಿಗೆ ಸಂಬಂಧಿಸಿದಂತೆ, ಸರ್ಕಾರದ ಆದೇಶ ದಿನಾಂಕ: 09.01.2024 ಮತ್ತು ಮಾರ್ಪಾಡು ಆದೇಶ ದಿನಾಂಕ:20.01.2024 ಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಪ್ರತಿ ಕ್ವಿಂಟಾಲ್‌ಗೆ ರೂ.12,000/- (ಹನ್ನೆರಡು ಸಾವಿರ ರೂಪಾಯಿಗಳು ಮಾತ್ರ) ರಂತೆ ಗರಿಷ್ಠ 62,500 ಮೆಟ್ರಿಕ್ ಟನ್ ಉಂಡೆ ಕೊಬ್ಬರಿಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಗಳ ಮಾರ್ಗಸೂಚಿಗಳನ್ವಯ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ ಮೈಸೂರು, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳ ರೈತರಿಂದ ಈಗಾಗಲೇ ನೋಂದಣಿ ಮಾಡಿರುವ ನೋಂದಣಿಯನ್ನು ರದ್ದುಗೊಳಿಸಿ ಹೊಸದಾಗಿ ನೋಂದಣಿ ಮಾಡಿ ಖರೀದಿಸಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಅನುಮತಿ ನೀಡಿ ಆದೇಶಿಸಿದೆ:-

ಇದನ್ನೂ ಓದಿ: HSRP number plate last date- ರಾಜ್ಯ ಸರಕಾರದಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕೊನೆಯ ದಿನಾಂಕ ಪ್ರಕಟ!

1) ಉಂಡೆ ಕೊಬ್ಬರಿಯನ್ನು ಖರೀದಿಸಲು ನಾಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ 2024ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಕೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ತುಮಕೂರು, ಮೈಸೂರು ಮತ್ತು ಚಾಮರಾಜನಗರ ಈ 03 ಜಿಲ್ಲೆಗಳಲ್ಲಿ ಖರೀದಿಸಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಹಾಗೂ ಇನ್ನುಳಿದ 06 ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ ದಕ್ಷಿಣ ಕನ್ನಡ, ಮತ್ತು ರಾಮನಗರ ಈ ಜಿಲ್ಲೆಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಈ ಸಂಸ್ಥೆಗಳನ್ನು ರಾಜ್ಯ ಸರ್ಕಾರದ ಖರೀದಿ ಸಂಸ್ಥೆಗಳನ್ನಾಗಿ ನೇಮಿಸಿದೆ.

2) 20 ಖರೀದಿ ಪ್ರಕ್ರಿಯೆಗೆ ನಿಯಮಾನುಸಾರ ಅವಶ್ಯವಿರುವ ಪ್ರಕ್ರಿಯೆಗಳನ್ನು ಜಿಲ್ಲಾಡಳಿತ ಹಾಗೂ ಖರೀದಿ ಏಜನ್ಸಿಗಳು ಪೂರ್ವಭಾವಿ ಸಿದ್ಧತೆಯನ್ನು ಅವಶ್ಯವಿರುವ ತಂತ್ರಾಂಶವನ್ನು ಅಳವಡಿಸಿಕೊಂಡ ತಕ್ಷಣದಿಂದ ಜಾರಿಗೆ ಬರುವಂತೆ 45 ದಿನಗಳವರೆಗೆ ರೈತರ ನೋಂದಣಿ ಹಾಗೂ ನೋಂದಣಿ ಪ್ರಕ್ರಿಯೆ ಜೊತೆಗೆ ಖರೀದಿ ಅವಧಿಯನ್ನು 03 ತಿಂಗಳವರೆಗೆ ನಿಗದಿಪಡಿಸಿದೆ.

3) ಪ್ರತಿ ಎಕರೆಗೆ 06 ಕ್ವಿಂಟಾಲ್ ಗರಿಷ್ಠ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಿ ಖರೀದಿಸತಕ್ಕದ್ದು.

4) ಖರೀದಿ ಕೇಂದ್ರಗಳಲ್ಲಿ ಉಂಡೆ ಕೊಬ್ಬರಿಯನ್ನು ಖರೀದಿಸುವ ಪೂರ್ವದಲ್ಲಿ ರೈತರ ನೋಂದಣಿಯನ್ನು NIC ಸಂಸ್ಥೆಯು ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಬೆಳೆಗಳ ಉತ್ಪನ್ನವನ್ನು ಖರೀದಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಸೂಕ್ತವಾಗಿ ಉನ್ನತೀಕರಿಸಿ ಉಂಡೆ ಕೊಬ್ಬರಿಯನ್ನು ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಲು ಬಳಸುವುದು. NIC ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸದರಿ ನೋಂದಣಿ ತಂತ್ರಾಂಶವನ್ನು ಈಗಾಗಲೇ FRUITS ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದೆ. FRUITS ದತ್ತಾಂಶದಲ್ಲಿ ರೈತರಿಗೆ ಸಂಬಂಧಿಸಿದ ವಿವರಗಳನ್ನು ಭೂಮಿ, UIDAI ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ವಿವರಗಳನ್ನು ಇಂದೀಕರಿಸಲಾಗಿದೆ. 

ಸದರಿ ವಿವರಗಳನ್ನು ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಲು ಸಿದ್ಧಪಡಿಸಿದ ತಂತ್ರಾಂಶಕ್ಕೆ ವಿದ್ಯುನ್ಮಾನ ರೀತಿಯಲ್ಲಿ ಒದಗಿಸಲಾಗುತ್ತದೆ. ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದ ನಂತರ NIC ತಂತ್ರಾಂಶದಿಂದ ನಾಫೆಡ್ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ಮಾಹಿತಿಯನ್ನು ಒದಗಿಸಲಾಗುವುದು. ನಾಫೆಡ್ ಸಂಸ್ಥೆಯು ತಮ್ಮ ತಂತ್ರಾಂಶದಲ್ಲಿ ಈ ಮಾಹಿತಿಯನ್ನು ಬಳಸಿ ರೈತರಿಂದ ಉಂಡ ಕೊಬ್ಬರಿಯನ್ನು ಖರೀದಿ ಕೇಂದ್ರಗಳಿಂದ ಖರೀದಿಸುವುದು.

ಇದನ್ನೂ ಓದಿ: Karnataka budget-  ಈ ಬಾರಿಯ ಬಜೆಟ್ ನಲ್ಲಿ ಯಾವ ಜಿಲ್ಲೆಗೆ ಎಷ್ಟು ಅನುದಾನ? ಇಲ್ಲಿದೆ ಇಲಾಖಾವಾರು ಹಂಚಿಕೆಯಾದ ಅನುದಾನದ ವಿವರ.

5) 2024ನೇ ಸಾಲಿನ ಉಂಡೆ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ರೈತರ ನೋಂದಣಿಯನ್ನು Adhaar Based Biometric authentication ಮೂಲಕ ಕೈಗೊಳ್ಳತಕ್ಕದ್ದು.

6) ಖರೀದಿ ಸಂಸ್ಥೆಗಳು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಬೆಂಬಲ ಬೆಲೆ ಮಾರ್ಗಸೂಚಿಯನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ PACS/VSSN/FPO/TAPCMS ಮುಖಾಂತರ ಖರೀದಿ ಕೇಂದ್ರಗಳನ್ನು ತೆರೆಯುವುದು.

7) ಉಂಡೆ ಕೊಬ್ಬರಿ ಖರೀದಿ ಪ್ರಕ್ರಿಯೆಗೆ ಸಾರಿಗೆ ಮತ್ತು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ರಚಿಸಿರುವ ಸಮಿತಿಯ ನಿರ್ಧಾರದ ಮೇಲೆ ಅಂತಿಮವಾಗಿ 09 ಜಿಲ್ಲೆಗಳಿಗೆ ಆಯ್ಕೆಗೊಂಡ ಸಂಬಂಧಿಸಿದ ಗುತ್ತಿಗೆದಾರರಿಂದ ಸಾರಿಗೆ ಮತ್ತು ಹಸ್ತಾಂತರ ಸೇವೆಗಳನ್ನು ಪಡೆಯತಕ್ಕದ್ದು ಹಾಗೂ ಸದರಿ ಸೇವೆಗಳನ್ನು ಸಮಿತಿಯು ಈಗಾಗಲೇ ನಿರ್ಧರಿಸಿರುವ ದರದಲ್ಲಿ ನಿರ್ವಹಿಸತಕ್ಕದ್ದು ಹಾಗೂ ಗೋಣಿಚೀಲ ವ್ಯವಸ್ಥೆಗೆ ಸಂಬಂಧಿಸಿದಂತೆ ನಾಫೆಡ್ ಸಂಸ್ಥೆಯೊಂದಿಗೆ ಸಮಾಲೋಚಿಸಿ ಈಗಾಗಲೇ ನಿರ್ಧರಿಸಿರುವ ದರದಲ್ಲಿ ನಿರ್ವಹಿಸತಕ್ಕದ್ದು.

8) ಖರೀದಿ ಪ್ರಕ್ರಿಯೆಗೆ ಕೃಷಿ ಮಾರಾಟ ಇಲಾಖೆಯಲ್ಲಿ ಲಭ್ಯವಿರುವ ಸಿಬ್ಬಂದಿಗಳನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ನಿಯೋಜಿಸಿಕೊಂಡು ಸುಗಮವಾಗಿ ಉಂಡೆ ಕೊಬ್ಬರಿ ಖರೀದಿ ಕಾರ್ಯವನ್ನು ಜರುಗಿಸಲು ಸೂಚಿಸಲಾಗಿದೆ ಮತ್ತು ಅಂತಹ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲು ಸಂಬಂಧಪಟ್ಟ ಖರೀದಿ ಸಂಸ್ಥೆ ಕ್ರಮವಹಿಸತಕ್ಕದ್ದು.

ಇದನ್ನೂ ಓದಿ: Business loan- ಸ್ವಯಂ ಉದ್ಯೋಗ ಆರಂಭಿಸಲು ಈ ಯೋಜನೆಯಡಿ 1 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್.

9) ಖರೀದಿ ಸಂಸ್ಥೆಗಳು ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳನ್ನಯ ಉಂಡೆ ಕೊಬ್ಬರಿಯ ಎಫ್.ಎ.ಕ್ಕೂ ಗುಣಮಟ್ಟವನ್ನು ಖರೀದಿ ಕೇಂದ್ರದ ಹಂತದಲ್ಲಿಯೇ ಖಾತರಿಪಡಿಸಿಕೊಂಡು
ಖರೀದಿ ಪ್ರಕ್ರಿಯೆ ಕೈಗೊಳ್ಳತಕ್ಕದ್ದು ಹಾಗೂ ಖರೀದಿಸಿದ ಉಂಡೆ ಕೊಬ್ಬರಿಯನ್ನು ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳನ್ವಯ ವೈಜ್ಞಾನಿಕ ಗೋದಾಮುಗಳಲ್ಲಿ ದಾಸ್ತಾನು ಮಾಡತಕ್ಕದ್ದು.

10) ರೈತರಿಂದ ಮಾತ್ರ ಉಂಡೆ ಕೊಬ್ಬರಿಯನ್ನು ಖರೀದಿಸತಕ್ಕದು ಮತ್ತು ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಉಂಡೆ ಕೊಬ್ಬರಿಯನ್ನು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗವಾಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸತಕ್ಕದ್ದು. ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿ ಹಾಗೂ ಅವರ್ತನಿಧಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

11) ಈ ಯೋಜನೆಯಡಿಯಲ್ಲಿ ಖರೀದಿಸುವ ಪ್ರಗತಿಯ ವಿವರವನ್ನು ಪ್ರತಿದಿನ ಸರ್ಕಾರಕ್ಕೆ ಹಾಗೂ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಇವರಿಗೆ e-mail ಮೂಲಕ ಸಲ್ಲಿಸತಕ್ಕದ್ದು.

ಇದನ್ನೂ ಓದಿ: Sheep and Goat farming-ಕುರಿ,ಮೇಕೆ ಸಾಕಾಣಿಕೆಗಾಗಿ 1.75 ಲಕ್ಷ ಘಟಕ ವೆಚ್ಚದಲ್ಲಿ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ!