2023-24 ನೇ ಸಾಲಿನ ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ! ಯಾವ ಬೆಳೆಗೆ ಎಷ್ಟು ಮೊತ್ತ ಪಾವತಿಸಬೇಕು?

2023-24 ನೇ ಸಾಲಿನ ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ! ಯಾವ ಬೆಳೆಗೆ ಎಷ್ಟು ಮೊತ್ತ ಪಾವತಿಸಬೇಕು?

ಪ್ರತಿ ವರ್ಷದಂತೆ ಈ ವರ್ಷವು ರೈತರು ಬೆಳೆದ ಬೆಳೆಗಳಿಗೆ ವಿಮೆ ಒದಗಿಸುವ ಯೋಜನೆಯನ್ನು ಅನುಷ್ಥಾನ ಮಾಡಲು ರಾಜ್ಯ ಸರಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ.

ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಯದಲ್ಲಿ ಹಾನಿಯದ ಬೆಳೆಗೆ ಬೆಳೆ ವಿಮೆ ಪಾವತಿ ಮಾಡಿ ರೈತರಿಗೆ ಅರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ "ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು" ನಮ್ಮ ರಾಜ್ಯದಲ್ಲಿ ಕಾರ್ಯರೂಪಕ್ಕೆ ತರಲಾಗಿದೆ.

2023-24 ಮುಂಗಾರು ಹಂಗಾಮಿನಲ್ಲಿ ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬವುದು?

ಭತ್ತ ನೀರಾವರಿ ಮತ್ತು ಮಳೆಯಾಶ್ರಿತ, ಅಲಸಂದೆ(ಮ.ಆ), ಆಲೂಗಡ್ಡೆ (ನೀ), ಆಲೂಗಡ್ಡೆ (ಮ.ಆ), ಈರುಳ್ಳಿ(ಮ.ಆ), ಈರುಳ್ಳಿ(ನೀ), ಉದ್ದು (ಮ.ಆ), ಎಲೆಕೋಸು , ಎಳ್ಳು (ಮ.ಆ), ಕೆಂಪು ಮೆಣಸಿನಕಾಯಿ(ನೀ), ಕೆಂಪು ಮೆಣಸಿನಕಾಯಿ(ಮ.ಆ), ಕೆಂಪು ಮೆಣಸಿನಕಾಯಿ(ಮ.ಆ),  ಜೋಳ(ನೀ), ಜೋಳ(ಮ.ಆ), ತೊಗರಿ(ನೀ), ತೊಗರಿ(ಮ.ಆ), ನವಣೆ(ಮ.ಆ), ನೆಲಗಡಲೆ (ಶೇಂಗಾ)(ನೀ), ನೆಲಗಡಲೆ (ಶೇಂಗಾ)(ಮ.ಆ), ಭತ್ತ(ನೀ), ಭತ್ತ(ನೀ), ಮುಸುಕಿನ ಜೋಳ(ನೀ), ಮುಸುಕಿನ ಜೋಳ(ಮ.ಆ), ರಾಗಿ(ಮ.ಆ), ಸಜ್ಜೆ (ಮ.ಆ), ಸಾವೆ(ಮ.ಆ), ಸೂರ್ಯಕಾಂತಿ(ನೀ), ಸೂರ್ಯಕಾಂತಿ(ಮ.ಆ), ಸೋಯಾಅವರೆ(ನೀ) ಸೋಯಾಅವರೆ(ಮ.ಆ), ಹತ್ತಿ(ನೀ), ನವಣೆ, ಹತ್ತಿ(ಮ.ಆ), ಹುರುಳಿ(ಮ.ಆ), ಹೆಸರು(ಮ.ಆ), ಟೊಮ್ಯಾಟೊ, ನೀ ಎಂದರೆ ನೀರಾವರಿ ಪ್ರದೇಶ, ಮ.ಆ ಎಂದರೆ- ಮಳೆಯಾಶ್ರಿತಿ ಎಂದು.

ಬೆಳೆವಾರು ಬೆಳೆ ವಿಮೆ ಕಟ್ಟಲು ಕೊನೆ ದಿನಾಂಕ ಯಾವುದು?

ಸಂರಕ್ಷಣೆ ವೆಬ್ಸೈಟ್ ಭೇಟಿ ಮಾಡಿ "farmers" ಕಾಲಂ ನಲ್ಲಿ 
"View cut off Dates" (https://www.samrakshane.karnataka.gov.in/PublicView/FindCutOff.aspx)ಮೇಲೆ ಕ್ಲಿಕ್ ಮಾಡಿ ನಂತರ "Distict" ಆಯ್ಕೆಯಲ್ಲಿ ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮಯಲ್ಲಿ ಬೆಳೆ ವಿಮೆ ವ್ಯಾಪ್ತಿಗೆ ಬರುವ ಬೆಳೆಗಳಿಗೆ ವಿಮೆ ಮಾಡಿಸಲು ಕೊನೆಯ ದಿನಾಂಕದ ಮಾಹಿತಿಯು ಗೋಚರಿಸುತ್ತದೆ. 

ನಿಮ್ಮ ಗ್ರಾಮಕ್ಕೆ ಬೆಳೆ ವಿಮೆ ವ್ಯಾಪ್ತಿಗೆ ಬರುವ ಬೆಳೆಗಳ ಮಾಹಿತಿ ತಿಳಿಯಲು ಹೀಗೆ ಮಾಡಿ:

https://www.samrakshane.karnataka.gov.in/Premium/Crops_You_Can_Insure.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ,ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು "Display" ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಗ್ರಾಮಕ್ಕೆ ಬೆಳೆ ವಿಮೆ ವ್ಯಾಪ್ತಿಗೆ ಬರುವ ಬೆಳೆಗಳ ಮಾಹಿತಿಯನ್ನು ಪಡೆಯಬವುದು. ಇದರ ಆಧಾರ‍ ಮೇಲೆ ನೀವು ಬೆಳೆ ವಿಮೆ ಮಾಡಿಸಲು ಬರುವ ಬೆಳೆಗಳ ಮಾಹಿತಿಯನ್ನು ಬಿತ್ತನೆಗೂ ಮುಂಚಿತವಾಗಿ ತಿಳಿದುಕೊಳ್ಳಬವುದು.

ಯಾವ ಬೆಳೆಗೆ ಎಷ್ಟು ಮೊತ್ತ ಕಟ್ಟಬೇಕು? ಬೆಳೆ ವಿಮೆ ಪರಿಹಾರದ ಹಣ ಎಷ್ಟು?

ಸಂರಕ್ಷಣೆ ಜಾಲಾತಾಣದ ಈ https://www.samrakshane.karnataka.gov.in/Premium/Premium_Chart.aspx ಕೊಂಡಿಯ ಮೇಲೆ ಒತ್ತಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ , ಬೆಳೆ ಮತ್ತು ಜಮೀನ ವಿಸ್ತೀರ್ಣವನ್ನು ಆಯ್ಕೆ ಮಾಡಿಕೊಂಡು ನೀವು ಎಷ್ಟು ಬೆಳೆ ವಿಮೆ ಮೊತ್ತವನ್ನು ಪಾವತಿ ಮಾಡಬೇಕು ಮತ್ತು ಬೆಳೆ ಹಾನಿ ಅದರೆ ನಿಮಗೆ ಎಷ್ಟು ಬೆಳೆ ವಿಮೆ ಪರಿಹಾರ ಬರುತ್ತದೆ ಎಂದು ಗೋಚರಿಸುತ್ತದೆ.

ಬೆಳೆ ವಿಮೆ ಎಲ್ಲಿ ಮಾಡಿಸಬೇಕು?

ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಂಘ/ಸೊಸೈಟಿ(VSS), ನಾಗರೀಕ ಸೇವಾ ಕೇಂದ್ರ(CSC), ಗ್ರಾಮ್ ಒನ್ ಕೇಂದ್ರ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲಿ ಬೆಳೆ ವಿಮೆಯನ್ನು ಮಾಡಿಸಬವುದು.

ಬೆಳೆ ವಿಮೆ ಪಾವತಿಸಿದ ಕಂಪನಿ ವಿವರ ತಿಳಿಯಲು ಈ https://www.samrakshane.karnataka.gov.in/HomePages/frmKnowYourInsCompany.aspx ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ತಿಳಿಯಬವುದು.

ಇದನ್ನೂ ಓದಿ: ಪ್ರಮುಖ ಸುದ್ದಿ: ಗೃಹ ಜ್ಯೋತಿ ಮಾರ್ಗಸೂಚಿ ಸಡಿಲಿಕೆ! ಕುಟುಂಬದ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ.

ಬೆಳೆ ವಿಮೆ ಪರಿಹಾರವನ್ನು ಹೇಗೆ ನಿರ್ಧಾರ ಮಾಡಲಾಗುತ್ತದೆ?

ಕೃಷಿ ಇಲಾಖೆಗೆ ಒಳಪಡುವ ಬೆಳೆಗಳಿಗೆ ಗ್ರಾಮ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ವಿಮಾ ಕಂಪನಿಯ ಪ್ರತಿನಿಧಿ ಮೂಲಕ ಬೆಳೆ ಅಂದಾಜು ಸಮೀಕ್ಷೆ ಕೈಗೊಂಡು ಕಡಿಮೆ ಇಳುವರಿ ಬಂದ ಬೆಳೆಗೆ ವಿಮೆ ಪಾವತಿ ಮಾಡಲಾಗುತ್ತದೆ.

ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಬರುವ ಬೆಳೆಗಳಿಗೆ ಮಳೆ ಪ್ರಮಾಣ ಆಧಾರ‍ ಮೇಲೆ ಬೆಳೆ ವಿಮೆ ಪಾವತಿ ಮಾಡಲಾಗುತ್ತದೆ ಹಿಂದಿನ ವರ್ಷಕ್ಕಿಂತ ಹೆಚ್ಚು ಮಳೆ ಬಂದು ಬೆಳೆ ಹಾನಿಯಾದಲ್ಲಿ ಅಥವಾ ಕಡಿಮೆ ಮಳೆ ಬಂದು ಬೆಳೆ ಹಾನಿಯಾದ ಸಂದರ್ಭದಲ್ಲಿ ರೈತರಿಗೆ ಬೆಳೆ ವಿಮೆ ಪಾವತಿ ಮಾಡಲಾಗುತ್ತದೆ.

2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.


ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳುನ್ನು ಭೇಟಿ ಮಾಡಿ.

ಬೆಳೆ ವಿಮೆ ಕಂಪನಿವಾರು ಸಹಾಯವಾಣಿಗಳು:

Agriculture Insurance Company(AIC): 1800-425-0505
Universal Sompo GIC: 1800-200-5142
SBI GIC: 1800-180-1551
HDFC Ergo: 1800-266-0700
Future Generali: 1800-266-4141
ICICI LOMBARD: 1800-103-7712
Bajaj Allianz GIC: 1800-209-5959