HomeGovt SchemesDBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

ಸಂಧ್ಯಾ ಸುರಕ್ಷಾ, ಗೃಹಲಕ್ಷ್ಮಿ ಸೇರಿದಂತೆ ನೇರ ನಗದು ವರ್ಗಾವಣೆ(DBT Status) ಮೂಲಕ ಜಮಾ ಅಗಿರುವ ಎಲ್ಲಾ ಯೋಜನೆಯ ಹಣ ಜಮಾ ವಿವರವನ್ನು ತಿಳಿಯಲು ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ.

ಸಾರ್ವಜನಿಕರು ಪ್ರತಿ ತಿಂಗಳು ರಾಜ್ಯ ಸರಕಾರದಿಂದ ಸಂಧ್ಯಾ ಸುರಕ್ಷಾ, ಗೃಹಲಕ್ಷ್ಮಿ ಇನ್ನಿತರೆ ಅರ್ಥಿಕ ಸಹಾಯಧನ(DBT Payment Status ) ನೀಡುವ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಲು ಸುಲಭವಾಗಿ ಬಳಕೆ ಮಾಡುವ ಮೊಬೈಲ್ ಅಪ್ಲಿಕೇಶನ್ ಅನ್ನು ಈ ಅಂಕಣದಲ್ಲಿ ತಿಳಿಸಿಕೊಡಲಾಗಿದೆ.

ಇದನ್ನೂ ಓದಿ: BPL card cancellation order- ಬಿಪಿಎಲ್ ಕಾರ್ಡ ರದ್ದು ಆಹಾರ ಇಲಾಖೆಯಿಂದ ಅಧಿಕೃತ ಆದೇಶ! ಇಲ್ಲಿದೆ ಅದೇಶದ ಪ್ರತಿ!

ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿಪಡಿಸಿರುವ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಡೌನ್ಲೋಡ್ ಮಾಡಿಕೊಂಡು ನಾಗರಿಕರು ತಮ್ಮ ಮೊಬೈಲ್ ನಲ್ಲೇ ಎಲ್ಲಾ ಯೋಜನೆಯಡಿ ತಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಜಮಾ ಅಗಿರುವ ವಿವರವನ್ನು ಪಡೆಯಬಹುದು,

DBT karnataka mobile app- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್:

DBT karnataka mobile ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ ಡೌನ್ಲೋಡ್ ಮಾಡಿಕೊಂಡು ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿ ಫಲಾನುಭವಿಗಳು ಯಾವುದೇ ಸರಕಾರಿ ಕಚೇರಿ ಅಥವಾ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡದೇ ತಮಗೆ ಯಾವ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ? ಬ್ಯಾಂಕ್ ಅಕೌಂಟಿನ ಕೊನೆಯ ಸಂಖ್ಯೆ, ಹಣ ಜಮಾ ಅಗಿರುವ ದಿನಾಂಕ ಎಲ್ಲಾ ಮಾಹಿತಿಯನ್ನು ಬೆರಳ ತಿದಿಯಲ್ಲೇ ಪಡೆಯಬಹುದು.

ಇದನ್ನೂ ಓದಿ: Power tiller subsidy- ಶೇ.90ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ!

Step-1: Download DBT Karnataka App ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಅಧಿಕೃತ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

DBT payment

Step-2: ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಅಧಾರ್ ಕಾರ್ಡಿನ ಸಂಖ್ಯೆಯನ್ನು ನಮೂದಿಸಿ OTP ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: OTP ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿ OTP ಪಡೆದು ಅದನ್ನು ನಮೂದಿಸಿದರೆ ನಿಮ್ಮ ವಿವರ ಗೋಚರಿಸುತ್ತದೆ ಇಲ್ಲಿ ಕೊನೆಯಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ ಸರಿ ಎಂದು ಕ್ಲಿಕ್ ಮಾಡಿ ಕೊನೆಯಲ್ಲಿ ಈ ಅಪ್ಲಿಕೇಶನ್ ಲಾಗಿನ್ ಅಗಲು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕು.

DBT karnataka app

Step-4: ರಚನೆ ಮಾಡಿಕೊಂಡಿರುವ ಪಾಸ್ವರ್ಡ ಅನ್ನುಒಂದು ಕಡೆ ಬರೆದುಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಪಾಸ್ವರ್ಡ ಅನ್ನು ಹಾಕಿ ಲಾಗಿನ್ ಅಗಬೇಕು.

ಇದನ್ನೂ ಓದಿ: Vidyasiri scholarship-ವಿದ್ಯಾಸಿರಿ ವಿದ್ಯಾರ್ಥಿವೇತನ ಪ್ರತಿ ತಿಂಗಳಿಗೆ ರೂ 2,000 ಕ್ಕೆ ಏರಿಕೆ!

Payment status -ಪೇಮೆಂಟ್ ಸ್ಟೇಟಸ್ ಚೆಕ್ ಮಾಡುವ ವಿಧಾನ:

Step-1: DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡ ಬಳಿಕ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ “ಪಾವತಿ ಸ್ಥಿತಿ” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

anabbhagya status

Step-2: ಪಾವತಿ ಸ್ಥಿತಿ ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ವಿವಿಧ ಯೋಜನೆಯ ಹೆಸರು ತೋರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಪ್ರತಿ ತಿಂಗಳು ಆ ಯೋಜನೆಯಡಿ ಯಾವ ದಿನಾಂಕದಂದು ಹಣ ಜಮಾ ಅಗಿದೆ ಎಂದು ತೋರಿಸುತ್ತದೆ. ಹಣದ ವಿವರದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿದರೆ ಬ್ಯಾಂಕ್ ಹೆಸರು ಮತ್ತು UTR ನಂಬರ್ ವಿವರವು ಸಹ ತೋರಿಸುತ್ತದೆ.

gruhalakshmi status

ಇದನ್ನೂ ಓದಿ: Mobile addiction- ನಿಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಮಾಡಿ! ನಿಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸಿ!

Aadhar link status-ಆಧಾರ್ ಕಾರ್ಡ ಲಿಂಕ್ ಅಗಿರುವ ವಿವರವನ್ನು ತಿಳಿಯಬಹುದು:

DBT Karnataka ಮೊಬೈಲ್ ಅಪ್ಲಿಕೇಶನ್ ಒಪನ್ ಮಾಡಿಕೊಂಡು ವಿವಿಧ ಯೋಜನೆಯ ಹಣ ಜಮಾ ವಿವರ ನೋಡುವುದರ ಜೊತೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿದಿಯೋ ಇಲ್ಲವೋ ಎನ್ನುವ ಮಾಹಿತಿಯನ್ನು ಸಹ ಚೆಕ್ ಮಾಡಿಕೊಳ್ಳಬಹುದು.

ಇದನ್ನು ಚೆಕ್ ಮಾಡಲು ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿ “Seeding Status of aadhar in bank account” ಬಟನ್ ಮೇಲೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿದರೆ Seeding Status: ನಲ್ಲಿ “Active” ಎಂದು ತೋರಿಸುತ್ತದೆ ಆಧಾರ್ ಲಿಂಕ್ ಅಗದಿದ್ದರೆ Inactive ಎಂದು ತೋರಿಸುತ್ತದೆ. ಇದರ ಜೊತೆಗೆ ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿದೆ ಎನ್ನುವ ಮಾಹಿತಿಯನ್ನು ತೋರಿಸುತ್ತದೆ.

Most Popular

Latest Articles

Related Articles