Education Loan-ಅರಿವು ಯೋಜನೆಯಡಿ ಕೇವಲ ಶೇ 2% ಬಡ್ಡಿದರದಲ್ಲಿ ₹5.0 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ!

June 6, 2025 | Siddesh
Education Loan-ಅರಿವು ಯೋಜನೆಯಡಿ ಕೇವಲ ಶೇ 2% ಬಡ್ಡಿದರದಲ್ಲಿ ₹5.0 ಲಕ್ಷ ಶಿಕ್ಷಣ ಸಾಲ ಪಡೆಯಲು ಅರ್ಜಿ!
Share Now:

ದೇವರಾಜ ಅರಸು ನಿಗಮ(Devaraj arasu nigama)ದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ(Arivu Education Loan) ಅರ್ಹ ವಿದ್ಯಾರ್ಥಿಗಳಿಗೆ ಸಾಲವನ್ನು ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯಡಿ CET ಮತ್ತು NEET ಇನ್ನಿತರೆ ಪರೀಕ್ಷೆಗಳ ಮೂಲಕ ಆಯ್ಕಯಾಗಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ ಗಳ ವ್ಯಾಸಂಗ ಶೇ 2% ಬಡ್ಡಿದರದಲ್ಲಿ ₹5.0 ಲಕ್ಷ ಶಿಕ್ಷಣ ಸಾಲವನ್ನು(Education Loan Subsidy Scheme) ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: PM Kisan 20th installment-ಪಿಎಂ ಕಿಸಾನ್ 20ನೇ ಕಂತು ಈ ಅವಧಿಯಲ್ಲಿ ಬಿಡುಗಡೆ ಸಾಧ್ಯತೆ!

ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ(Education Loan Scheme) ಅತೀ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಈ ಯೋಜನೆಯಡಿ ಎಷ್ಟು ಮೊತ್ತದ ಸಾಲವನ್ನು ಪಡೆಯಲು ಅವಕಾಶವಿದೆ ಇನ್ನಿತರೆ ಅಗತ್ಯ ಮತ್ತು ಉಪಯುಕ್ತ ಮಾಹಿತಿಯನ್ನು ತಿಳಿಸಲಾಗಿದೆ ಈ ಮಾಹಿತಿಯು ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

Last Date for Online Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ದೇವರಾಜ ಅರಸು ನಿಗಮದಿಂದ ಅರಿವು ಯೋಜನೆಯ ಮೂಲಕ ಅತೀ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು ಪಡೆಯಲು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗಮದಿಂದ ಪ್ರಕಟಿಸಿರುವ ಪ್ರಮುಖ ದಿನಾಂಕಗಳು.

ಅರ್ಜಿ ಸಲ್ಲಿಕೆ ಪ್ರಾರಂಭ- ಅರ್ಜಿ ಸಲ್ಲಿಕೆ ಪ್ರಾರಂಭವಾಗಿರುತ್ತದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 30 ಜೂನ್ 2025

ಇದನ್ನೂ ಓದಿ: Navodaya school admission-ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ!

Education Loan scheme in karnataka- ಯಾರೆಲ್ಲ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದು:

ಅರಿವು ಯೋಜನೆಯಡಿ ಶೇ 2% ಬಡ್ಡಿದರದಲ್ಲಿ ₹5.0 ಲಕ್ಷ ಶಿಕ್ಷಣ ಸಾಲ ಪಡೆಯಲು ನಿಗಮದಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ಮಾಹಿತಿ ಹೀಗಿದೆ:

1) ವಿದ್ಯಾರ್ಥಿಗಳು ಪ್ರವರ್ಗ-1, 2ಎ, 3ಎ, ಮತ್ತು 3ಬಿ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬಹುದು.
2) ವಿದ್ಯಾರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
3) ವಿದ್ಯಾರ್ಥಿಗಳ ವಯಸ್ಸು 30 ವರ್ಷದ ಒಳಗಿರಬೇಕು.
4) ಅರಿವು ಯೋಜನೆಯ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ 3.50 ಲಕ್ಷದ ಮಿತಿಯೊಳಗಿರಬೇಕು.

ಇದನ್ನೂ ಓದಿ: Car Subsidy-ಸ್ವಾವಲಂಬಿ ಸಾರಥಿ ಯೋಜನೆ ಟ್ಯಾಕ್ಸಿ,ಗೂಡ್ಸ್ ವಾಹನ ಖರೀದಿಗೆ ₹3.00 ಲಕ್ಷ ಸಬ್ಸಿಡಿ!

Business loan subsidy

ಇದನ್ನೂ ಓದಿ: Ganga Kalyana 2025-ಗಂಗಾ ಕಲ್ಯಾಣ ಯೋಜನೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

Arivu Education Loan Benefits-ಅರಿವು ಯೋಜನೆಯ ಪ್ರಯೋಜನಗಳು:

ಅರ್ಜಿ ಸಲ್ಲಿಸಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷಕ್ಕೆ ರೂ ₹1.00 ದಂತೆ ಕೋರ್ಸ್ ನ ಅವಧಿಯ ವರೆಗೆ ಗರಿಷ್ಠ ₹4.00 ಲಕ್ಷ ದಿಂದ ₹5.00 ಲಕ್ಷದ ವರೆಗೆ ಶೇ 2% ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು ಪಡೆಯಲು ಅವಕಾಶವಿರುತ್ತದೆ.

Arivu Education Loan online application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ವಿದ್ಯಾರ್ಥಿಗಳು ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು ನೇರವಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿಯು ಸಹ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Seva Sindhu Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಲಿಂಕ್- Apply Now

ಇದನ್ನೂ ಓದಿ: Business subsidy loan-ಸ್ವಂತ ಉದ್ಯೋಗ ಆರಂಭಿಸಲು ಸಬ್ಸಿಡಿಯಲ್ಲಿ ₹2 ಲಕ್ಷ ಪಡೆಯಲು ಅರ್ಜಿ!

Required Documents For Arivu Education Loan-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಅರ್ಹ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲಾತಿಗಳ ಮಾಹಿತಿ ಹೀಗಿದೆ:

  • ವಿದ್ಯಾರ್ಥಿಯ ಆಧಾರ್ ಕಾರ್ಡ ಪ್ರತಿ.
  • ಬ್ಯಾಂಕ್ ಪಾಸ್ ಬುಕ್.
  • ಕಾಲೇಜು ಶುಲ್ಕದ ವಿವರ.
  • ಹಿಂದಿನ ವರ್ಷ ಶೈಕ್ಷಣಿಕ ಅಂಕಪಟ್ಟಿ.
  • KEA ದಾಖಲಾತಿ ಆದೇಶ ಪ್ರತಿ.
  • ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ವಿದ್ಯಾರ್ಥಿಯ ಪೋಟೋ.
  • ಮೊಬೈಲ್ ನಂಬರ್.

For More Information-ಹೆಚ್ಚಿನ ಮಾಹಿತಿಗಾಗಿ:

ಅರಿವು ಶೈಕ್ಷಣಿಕ ಸಾಲ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಗಮದ ಸಹಾಯವಾಣಿ ಸಂಖ್ಯೆ- 80-22374832, 8050770004, 805077000 ಮತ್ತು
ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: