Car Subsidy-ಸ್ವಾವಲಂಬಿ ಸಾರಥಿ ಯೋಜನೆ ಟ್ಯಾಕ್ಸಿ,ಗೂಡ್ಸ್ ವಾಹನ ಖರೀದಿಗೆ ₹3.00 ಲಕ್ಷ ಸಬ್ಸಿಡಿ!

June 5, 2025 | Siddesh
Car Subsidy-ಸ್ವಾವಲಂಬಿ ಸಾರಥಿ ಯೋಜನೆ ಟ್ಯಾಕ್ಸಿ,ಗೂಡ್ಸ್ ವಾಹನ ಖರೀದಿಗೆ ₹3.00 ಲಕ್ಷ ಸಬ್ಸಿಡಿ!
Share Now:

ದೇವರಾಜ ಅರಸು ನಿಗಮ(Devaraj arasu nigama)ದಿಂದ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್(taxi/swift dzire/ashok leyland dost/bajaj auto) ವಾಹನಗಳನ್ನು ಖರೀದಿ ಮಾಡಲು ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇದರ ಕುರಿತು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ದೇವರಾಜ ಅರಸು ನಿಗಮದಿಂದ 2025-26 ನೇ ಸಾಲಿನ ಸ್ವಾವಲಂಬಿ ಸಾರಥಿ ಯೋಜನೆಯಡಿ (swavalambi sarati application) ಅರ್ಹ ಫಲಾನುಭವಿಗಳಿಗೆ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್ ವಾಹನವನ್ನು ಖರೀದಿ ಮಾಡಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಸಬ್ಸಿಡಿಯಲ್ಲಿ ವಾಹನವನ್ನು ಖರೀದಿ ಮಾಡಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Business subsidy loan-ಸ್ವಂತ ಉದ್ಯೋಗ ಆರಂಭಿಸಲು ಸಬ್ಸಿಡಿಯಲ್ಲಿ ₹2 ಲಕ್ಷ ಪಡೆಯಲು ಅರ್ಜಿ!

ಪ್ರಸ್ತುತ ಈ ಲೇಖನದಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯಡಿ(Karnataka taxi subsidy)ವಾಹನ ಖರೀದಿಗೆ ಆರ್ಥಿಕ ನೆರವನ್ನು ಪಡೆಯಲು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಮಾನದಂಡಗಳೇನು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಇನ್ನಿತರೆ ಅವಶ್ಯಕ ಅಗತ್ಯ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Last Date for Online Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ದೇವರಾಜ ಅರಸು ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್(Car Subsidy Scheme) ವಾಹನಗಳನ್ನು ಖರೀದಿ ಮಾಡಲು ಸಹಾಯಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಮುಖ ದಿನಾಂಕಗಳ ವಿವರ ಹೀಗಿದೆ:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ಈಗಾಗಲೇ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸ್ವೀಕಾರ ಆರಂಭಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 30 ಜೂನ್ 2025

ಇದನ್ನೂ ಓದಿ: Ganga Kalyana 2025-ಗಂಗಾ ಕಲ್ಯಾಣ ಯೋಜನೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

Business loan subsidy

ಇದನ್ನೂ ಓದಿ: Oil Palm Subsidy-ತೋಟಗಾರಿಕೆ ಇಲಾಖೆಯಿಂದ ₹ 81,000 ಸಬ್ಸಿಡಿಯಲ್ಲಿ ತಾಳೆ ಬೆಳೆಯ ಅರ್ಜಿ ಆಹ್ವಾನ!

Taxi subsidy-ಸಹಾಯಧನ ಮೊತ್ತ ಎಷ್ಟು?

ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅರ್ಹ ಫಲಾನುಭವಿಗಳಿಗೆ ಸರಕು ಸಾಗಾಣಿಕೆ/ಟ್ಯಾಕ್ಸಿ /ಹಳದಿ ಬೋರ್ಡ್ ವಾಹನಗಳನ್ನು ಖರೀದಿ ಮಾಡಲು ಶೇ.50 ರಷ್ಟು ಅಥವಾ ಗರಿಷ್ಟ ರೂ ₹3.00 ಲಕ್ಷಗಳವರೆಗೆ ಸಹಾಯಧನವನ್ನು ಮಂಜೂರು ಮಾಡಿ ಬ್ಯಾಂಕ್‌ ಸಹಯೋಗದೊಂದಿಗೆ ಅಭ್ಯರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ.

Car subsidy-ಈ ಯೋಜನೆಯಡಿ ಯಾವೆಲ್ಲ ವಾಹನಗಳನ್ನು ಖರೀದಿ ಮಾಡಬಹುದು?

ಟ್ಯಾಕ್ಸಿ/Swift dzire
ಸರಕು ಸಾಗಣಿಕೆ ವಾಹನ//Tata ace
ನಾಲ್ಕು ಚಕ್ರಗಳ ವಾಹನ/Ashok leyland dost
ಆಟೋ/Bajaj auto

ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ!

Four wheeler subsidy scheme in karnataka- ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಸಬ್ಸಿಡಿಯಲ್ಲಿ ವಾಹನವನ್ನು ಖರೀದಿ ಮಾಡಲು ನಿಗಮದಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ವಿವರ ಈ ಕೆಳಗಿನಂತಿದೆ.

1) ಅಭ್ಯರ್ಥಿಗಳು ಪ್ರವರ್ಗ-1, 2ಎ, 3ಎ, ಮತ್ತು 3ಬಿ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬಹುದು.
2) ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
3) ಅರ್ಜಿದಾರರು ವಯಸ್ಸು 21 ವರ್ಷದಿಂದ 45 ವರ್ಷದ ಮಿತಿಯೊಳಗಿರಬೇಕು.
4) ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಭಾಗದಲ್ಲಿ ರೂ 98,000/- ಹಾಗೂ ನಗರ ಪ್ರದೇಶದಲ್ಲಿ ರೂ 1,20,000/- ಮಿತಿಯೊಳಗಿರಬೇಕು.
6) ಲಘು ವಾಹನದ ಡ್ರೈವಿಂಗ್ ಲೆಸೈನ್ಸ್ ಅನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
7) ಅರ್ಜಿದಾರರ ಕುಟುಂಬದ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರಕಾರಿದ ನೌಕರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಇದನ್ನೂ ಓದಿ: Poultry farm-ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ! ಕೋಳಿ ಸಾಕಾಣಿಕೆಗೆ ಸಬ್ಸಿಡಿ ಯೋಜನೆಗಳು!

Swavalambi sarati online application-ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅರ್ಹ ಅಭ್ಯರ್ಥಿಗಳು ಅಗತ್ಯ ಡಾಕುಮೆಂಟ್ಸ್ ಗಳನ್ನು ತೆಗೆದುಕೊಂಡು ನೇರವಾಗಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್- Apply Now

Car Subsidy Yojane

ಇದನ್ನೂ ಓದಿ: Krishi Honda Subsidy-ಕೃಷಿ ಹೊಂಡ ನಿರ್ಮಾಣಕ್ಕೆ 2.28ಲಕ್ಷ ಸಬ್ಸಿಡಿ!

Swavalambi sarati documents- ಅರ್ಜಿ ಸಲ್ಲಿಸಲು ಅಗತ್ಯ ಡಾಕುಮೆಂಟ್ಸ್ ಗಳು:

1) ಅರ್ಜಿದಾರರ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್
3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4) ಪೋಟೋ
5) ಡ್ರೈವಿಂಗ್ ಲೈಸೆನ್ಸ್
6) ರೇಶನ್ ಕಾರ್ಡ ಪ್ರತಿ.
7) ಮೊಬೈಲ್ ನಂಬರ್

ಇದನ್ನೂ ಓದಿ: Crop Loan-ಕೇಂದ್ರ ಸರ್ಕಾರದಿಂದ ಬೆಳೆ ಸಾಲ ವಿತರಣೆ ಕುರಿತು ಮಹತ್ವದ ಆದೇಶ ಪ್ರಕಟ!

ಸ್ವಾವಲಂಬಿ ಸಾರಥಿ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಗಮದ ಸಹಾಯವಾಣಿ ಸಂಖ್ಯೆ- 80-22374832, 8050770004, 805077000
ಅಧಿಕೃತ ಜಾಲತಾಣ- Click Here

WhatsApp Group Join Now
Telegram Group Join Now
Share Now: