Oil Palm Subsidy-ತೋಟಗಾರಿಕೆ ಇಲಾಖೆಯಿಂದ ₹ 81,000 ಸಬ್ಸಿಡಿಯಲ್ಲಿ ತಾಳೆ ಬೆಳೆಯ ಅರ್ಜಿ ಆಹ್ವಾನ!

June 3, 2025 | Siddesh
Oil Palm Subsidy-ತೋಟಗಾರಿಕೆ ಇಲಾಖೆಯಿಂದ ₹ 81,000 ಸಬ್ಸಿಡಿಯಲ್ಲಿ ತಾಳೆ ಬೆಳೆಯ ಅರ್ಜಿ ಆಹ್ವಾನ!
Share Now:

ತೋಟಗಾರಿಕೆ ಇಲಾಖೆಯಿಂದ ಪ್ರಸ್ತುತ ವರ್ಷದಲ್ಲಿ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ್ ಅಭಿಯಾನ ತಾಳೆ ಬೆಳೆ(Oil Palm Subsidy Yojana) ಯೋಜನೆಯಡಿ ಸಬ್ಸಿಡಿಯಲ್ಲಿ ತಾಳೆ ಕೃಷಿಯನ್ನು ಮಾಡಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆಸಕ್ತ ರೈತರು ತಾಳೆ ಬೆಳೆಯನ್ನು(Thale subsidy yojane) ಬೆಳೆಯಲು ತೋಟಗಾರಿಕೆ ಇಲಾಖೆಯಿಂದ(Karnataka Horticulture Department)ಆರ್ಥಿಕ ನೆರವನ್ನು ಪಡೆಯಲು ಕೂಡಲೇ ಅರ್ಜಿಯನ್ನು ಸಲ್ಲಿಸಲು ಇಲಾಖೆಯಿಂದ ಅವಕಾಶ ನೀಡಲಾಗಿದ್ದು ಈ ಯೋಜನೆ ಮತ್ತು ತಾಳೆ ಬೆಳೆ ವಿವರ ಮತ್ತು ಮಾರುಕಟ್ಟೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Krishi Honda Subsidy-ಕೃಷಿ ಹೊಂಡ ನಿರ್ಮಾಣಕ್ಕೆ 2.28ಲಕ್ಷ ಸಬ್ಸಿಡಿ!

ಈ ಅಂಕಣದಲ್ಲಿ ತೋಟಗಾರಿಕೆ ಇಲಾಖೆಯಿಂದ(Thotagarike ilake) ತಾಳೆ ಬೆಳೆ ಬೆಳೆಯಲು ಆಸಕ್ತಿಯಿರುವ ರೈತರಿಗೆ ಯಾವೆಲ್ಲೆ ಸಹಾಯಧನ ಆಧಾರಿತ ಯೋಜನೆಗಳು ಲಭ್ಯವಿವೆ? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ತಾಳೆ ಬೆಳೆ ಮಾರುಕಟ್ಟೆ ಸೇರಿದಂತೆ ಇನ್ನಿತರೆ ಅವಶ್ಯಕ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

Oil Palm Subsidy Scheme Details-ರಾಷ್ಟ್ರೀಯ ಖಾದ್ಯ ತೈಲ್ ಅಭಿಯಾನ ತಾಳೆ ಬೆಳೆ ಯೋಜನೆ:

ಭಾರತದ ಖಾದ್ಯ ತೈಲದ ವಾರ್ಷಿಕ ಬೇಡಿಕೆ 289.10 ಲಕ್ಷ ಟನ್ ಗಳಿದ್ದು, 2022-23ನೇ ಸಾಲಿನಲ್ಲಿ ಖಾದ್ಯ ತೈಲದ ಉತ್ಪಾದನೆ ಕೇವಲ126.40 ಲಕ್ಷ ಟನ್ ಗಳಿದ್ದು, ಉಳಿದ ಖಾದ ತೈಲದ ಬೇಡಿಕೆಯನ್ನು ಸರಿದೂಗಿಸಲು, 2022-23 ನೇ ಸಾಲಿನಲ್ಲಿ ಸುಮಾರು ರೂ.1.38 ಲಕ್ಷ ಕೋಟಿ ಮೌಲ್ಯದ 164.7 ಲಕ್ಷ ಟನ್ ಖಾದ್ಯ ತೈಲವನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. 2025-26 ನೇ ಸಾಲಿಗೆ ಅಂದಾಜು 28.00 ಮಿಲಿಯನ್ ಟನ್ ಗಳ ಖಾದ್ಯ ತೈಲಗಳ ಅವಶ್ಯಕತೆ ಇರುತ್ತದೆ.

ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ತಾಳೆ ಬೆಳೆ ಬೇಸಾಯ ಪ್ರಮುಖ ಪಾತ್ರ ವಹಿಸಬಹುದಾಗಿದೆ. ಕಾರಣ ಇತರೆ ಸಂಪ್ರಾದಾಯಿಕ ಎಣ್ಣೆ ಕಾಳುಗಳಿಗೆ ಹೋಲಿಸಿದ್ದಲ್ಲಿ, ಪ್ರತಿ ಹೆಕ್ಟೇರಿಗೆ ಅತ್ಯಧಿಕ ಖಾದ್ಯ ತೈಲ ನೀಡುವಂತಹ ಬೆಳೆ, ತಾಳೆ ಬೆಳೆಯಾಗಿದ್ದು, ಪ್ರತಿ ಹೆಕ್ಟೇರಿಗೆ 4-5 ಟನ್ ಖಾದ್ಯ ತೈಲ ಪಡೆಯಬಹುದಾಗಿರುತ್ತದೆ. ಅಲ್ಲದೇ ಪೌಷ್ಟಿಕಾಂಶದ ದೃಷ್ಟಿಯಿಂದಲೂ ಸಹ ತಾಳೆ ಎಣ್ಣೆಯು Vitamin A ಮತ್ತು E ಸತ್ವವನ್ನು ಹೇರಳವಾಗಿ ಹೊಂದಿದೆ. ಬೆಳೆಯುತ್ತಿರುವ ಖಾದ್ಯ ತೈಲಗಳ ಅಂತರಿಕ ಬೇಡಿಕೆ ಹಿನ್ನೆಲೆಯಲ್ಲಿ.

ಇದನ್ನೂ ಓದಿ: Poultry farm-ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ! ಕೋಳಿ ಸಾಕಾಣಿಕೆಗೆ ಸಬ್ಸಿಡಿ ಯೋಜನೆಗಳು!

ಖಾದ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಖಾದ್ಯ ತೈಲಗಳ ಆಮದು ಅನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ತಾಳೆಬೆಳೆ ಬೇಸಾಯವನ್ನು ಪ್ರೋತ್ಸಾಹಿಸುತ್ತಿದೆ. ತಜ್ಞರ ಸಮೀಕ್ಷೆ ಮೇರೆಗೆ, ಭಾರತ ದೇಶದಲ್ಲಿ ಸುಮಾರು 28 ಲಕ್ಷ ಹೆಕ್ಟೇರ್ ಗಳಲ್ಲಿ ಮತ್ತು ಕರ್ನಾಟಕ ರಾಜ್ಯದಲಿ 72,642 ಹೆಕ್ಟೇರ್ ಪ್ರದೇಶವು ತಾಳೆ ಬೆಳೆಯನ್ನು ಬೆಳೆಯಲು ಸೂಕ್ತವಾಗಿರುತ್ತದೆ.

horticulture department (2)

ಇದನ್ನೂ ಓದಿ: Karnataka New Rules-ಇನ್ಮುಂದೆ 21 ವಯಸ್ಸಿಗಿಂತ ಚಿಕ್ಕವರು ತಂಬಾಕು ಉತ್ಪನ್ನ ಖರೀದಿಸಿದರೆ ₹1000 ದಂಡ!

Karnataka Oil Palm Scheme-ಯೋಜನೆಯ ಉದ್ದೇಶಗಳು.

ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲಗಳ ಅಭಿಯಾನ -ತಾಳೆ ಬೆಳೆ ಯೋಜನೆಯಡಿತಾಳೆ ಬೆಳೆ ಪ್ರದೇಶವನ್ನು ಹೆಚ್ಚಿಸುವುದು.

ಈ ಹಿಂದೆ ಅಭಿವೃದ್ಧಿ ಪಡಿಸಲಾದ ತಾಳೆ ಬೆಳೆ ತೋಟಗಳಲ್ಲಿ ಉತ್ತಮ ಬೇಸಾಯ ಪದ್ಧತಿಗಳನ್ನು ಅಳವಡಿಸುವ ಹಾಗೂ ವಿವಿಧ ಪರಿಕರಗಳನ್ನು ಒದಗಿಸುವ ಮೂಲಕ ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವುದು.

ಸುಧಾರಿತ ಕ್ರಮಗಳ ಬಗ್ಗೆ ತಾಳೆ ರೈತರಿಗೆ ಹಾಗೂ ಸಂಬಂಧಿತ ಸಂಸ್ಥೆ/ ಅಧಿಕಾರಿಗಳಿಗೆ ಅರಿವು ಮೂಡಿಸಲು ತರಬೇತಿ ನೀಡುವುದು.

Oil Palm Subsidy Amount-ತಾಳೆ ಬೆಳೆಗೆ ಎಷ್ಟು ಸಬ್ಸಿಡಿ ಪಡೆಯಬಹುದು?

(1) ಉಚಿತವಾಗಿ 2.5 ಎಕರೆಗೆ ಸಸಿಯನ್ನು ವಿತರಣೆ ಮಾಡಲಾಗುತ್ತದೆ.

(2) ನಾಟಿ ನಿರ್ವಹಣೆ ಹಾಗೂ ಅಂತರ ಬೆಳೆಗಾಗಿ ರೂ 71,000(4 ವರ್ಷಕ್ಕೆ) ಸಹಾಯಧನವನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗುತ್ತದೆ.

(3) ಪಂಪ್ ಸೆಟ್ ಖರೀದಿಗೆ ರೂ 10,000/- ಸಹಾಯಧನ ಒದಗಿಸಲಾಗುತ್ತದೆ.

ಉಚಿತ ಸಸಿ ವಿತರಣೆ ಇನ್ನಿತರೆ ಘಟಕಗಳನ್ನು ಸೇರಿ 81 ಸಾವಿರಕ್ಕಿಂತ ಅಧಿಕ ಸಹಾಯಧನವನ್ನು ತಾಳೆ ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ರೈತರು ಪಡೆಯಬಹುದು.

ಇದನ್ನೂ ಓದಿ: Crop Loan-ಕೇಂದ್ರ ಸರ್ಕಾರದಿಂದ ಬೆಳೆ ಸಾಲ ವಿತರಣೆ ಕುರಿತು ಮಹತ್ವದ ಆದೇಶ ಪ್ರಕಟ!

Oil Palm Subsidy

ಇದನ್ನೂ ಓದಿ: Scholarship-SSLC ಮತ್ತು PUC ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ!

Oil Palm Crop Income-2.5 ಎಕರೆಯಿಂದ ಎಷ್ಟು ಆದಾಯ ಪಡೆಯಬಹುದು?

ಹೆಚ್ಚು ನೀರು ಇರುವ ಪ್ರದೇಶದ ರೈತರು ಈ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬಹುದು 2.5 ಎಕರೆಗೆ 25 ರಿಂದ 30 ಟನ್ ಇಳುವರಿಯನ್ನು ಪಡೆಯಬಹುದು ಇದರಿಂದ ₹ 4.5 ದಿಂದ ₹ 5.5 ಲಕ್ಷ ಆದಾಯವನ್ನು ನಿರೀಕ್ಷೆ ಮಾಡಬಹುದು.

How To Apply For Oil Palm Subsidy-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಆಸಕ್ತ ರೈತರು ತಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Scholarship Application-SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

Documents For Oil Palm Subsidy-ಅರ್ಜಿ ಸಲ್ಲಿಸಲು ದಾಖಲೆಗಳು:

  • ರೈತರ ಆಧಾರ್ ಕಾರ್ಡ
  • ಜಮೀನಿನ ಪಹಣಿ/ಊತಾರ್/RTC
  • ಬೆಳೆ ದೃಡೀಕರಣ ಪ್ರಮಾಣ ಪತ್ರ
  • ರೇಶನ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಪೋಟೋ
  • ಮೊಬೈಲ್ ನಂಬರ್

ತಾಳೆಗೆ ಮಾರುಕಟ್ಟೆ ಸಮಸ್ಯೆಯಿಲ್ಲ:

ತಾಳೆ ಬೆಳೆಗೆ ಹೆಚ್ಚು ನೀರುವ ಇದ್ದರೆ ಸಾಕು ಉತ್ತಮವಾಗಿ ನಾಟಿ ಮಾಡಿದ 3 ನೇ ವರ್ಷದಿಂದಲೇ ಫಸಲನ್ನು ಪಡೆಯಬಹುದು ತಾಳೆ ಬಂದ ನಂತರ ಇದನ್ನು ಮಾರಾಟ ಮಾಡಲು ರೈತರಿಗೆ ಮಾರುಕಟ್ಟೆ ಸಮಸ್ಯೆಯೇ ಇಲ್ಲ ನೇರವಾಗಿ ಆಯಿಲ್ ಪಾಮ್ ಸಂಸ್ಕರಣ ಕಂಪನಿಯವರು ರೈತರಿಂದ ಉತ್ಪನ್ನವನ್ನು ಖರೀದಿ ಮಾಡುತ್ತಾರೆ ಪ್ರಸ್ತುತ ದಾವಣೆಗೆರೆ ಅಕ್ಕ-ಪಕ್ಕದ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಪ್ರಸ್ತುತ ತಾಳೆಗೆ ಉತ್ತಮ ದರವು ಇರುತ್ತದೆ.

ಇದನ್ನೂ ಓದಿ: Tractor Cultivator Subsidy- ಸಬ್ಸಿಡಿಯಲ್ಲಿ ₹ 9,900/- ಪಾವತಿಸಿ ಟ್ರ್ಯಾಕ್ಟರ್ ಕಲ್ಟಿವೇಟರ್ ಪಡೆಯಲು ಅರ್ಜಿ!

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:

Oil Palm Subsidy Scheme Guideline-ಯೋಜನೆಯ ಅಧಿಕೃತ ಮಾರ್ಗಸೂಚಿ-Download Now
Karnataka Horticulture Department Website-ತೋಟಗಾರಿಕೆ ಇಲಾಖೆಯ ಅಧಿಕೃತ ಜಾಲತಾಣ-Click Here

WhatsApp Group Join Now
Telegram Group Join Now
Share Now: