Krishi Honda Subsidy-ಕೃಷಿ ಹೊಂಡ ನಿರ್ಮಾಣಕ್ಕೆ 2.28ಲಕ್ಷ ಸಬ್ಸಿಡಿ!

June 3, 2025 | Siddesh
Krishi Honda Subsidy-ಕೃಷಿ ಹೊಂಡ ನಿರ್ಮಾಣಕ್ಕೆ 2.28ಲಕ್ಷ ಸಬ್ಸಿಡಿ!
Share Now:

ಕೃಷಿ ಇಲಾಖೆಯಿಂದ(Agriculture Department) ಕೃಷಿ ಭಾಗ್ಯ(Krishi Bhagya) ಯೋಜನೆಯಡಿ ಸಹಾಯಧನದಲ್ಲಿ ರೈತರು ತಮ್ಮ ಬೆಳೆಗಳಿಗೆ ನೀರನ್ನು ಒದಗಿಸಲು ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಅಂಕಣದಲ್ಲಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಲು ರೈತರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.

ಕೃಷಿ ಭಾಗ್ಯ ಯೋಜನೆಯು ಕರ್ನಾಟಕ ಸರ್ಕಾರದ(Karnataka) ಒಂದು ಜನಪ್ರಿಯ ಯೋಜನೆಯಾಗಿದ್ದು ಮಳೆಯಾಶ್ರಿತ ಕೃಷಿಯನ್ನು(Krishi) ಸುಸ್ಥಿರ ಕೃಷಿಯನ್ನಾಗಿ ಪರಿವರ್ತಿಸುವುದು ಮಳೆಯ ನೀರನ್ನು ಸಂಗ್ರಹಿಸಿ ಸಂಧಿಗ್ಧ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರನ್ನು ಒದಗಿಸಲು ರೈತರಿಗೆ ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಳ್ಳಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Poultry farm-ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ! ಕೋಳಿ ಸಾಕಾಣಿಕೆಗೆ ಸಬ್ಸಿಡಿ ಯೋಜನೆಗಳು!

ಕೃಷಿ ಹೊಂಡವನ್ನು(Krishi Honda) ನಿರ್ಮಾಣ ಮಾಡಿಕೊಳ್ಳಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಕೃಷಿ ಹೊಂಡ(Farm Pond) ನಿರ್ಮಾಣ ಮತ್ತು ಇನ್ನಿತರೆ ಪೂರಕ ಘಟಕಗಳಿಗೆ ಎಷ್ಟು ಸಹಾಯಧನ ನೀಡಲಾಗುತ್ತದೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ಇತ್ಯಾದಿ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Krishi Bhagya-ಕೃಷಿಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿ ಜಾರಿ:

ಕೃಷಿ ಭಾಗ್ಯ ಯೋಜನೆಯು ರಾಜ್ಯ ಸರ್ಕಾರದ ಮಹತ್ವಾಕಾಂಕಿ ಯೋಜನೆಯಾಗಿದ್ದು ರೈತರ ಹಿತದೃಷ್ಟಿಯಿಂದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ಪರಿವರ್ತಿಸುವುದು ಮಳೆಯ ನೀರನ್ನು ಸಂಗ್ರಹಿಸಿ ಸಂಧಿಗ್ಧ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರುಣಿಸಿ ನೀರಿನ ಸಮರ್ಪಕ ಬಳಕೆ ಮಾಡುವುದನ್ನು ಉತ್ತೇಜಿಸುವ ಸಲುವಾಗಿ ಕೃಷಿಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿಯಲ್ಲಿದ್ದು,

ಕ್ಷೇತ್ರ ಬದು, ಕೃಷಿ ಹೊಂಡ, ಪಾಲೀಥೀನ್ ಹೊದಿಕೆ, ಡೀಸೆಲ್/ಪೆಟ್ರೋಲ್ ಪಂಪ್ ಸೆಟ್ / ತುಂತುರು ನೀರಾವರಿ ಘಟಕ ಹಾಗೂ ತಂತಿ ಬೇಲಿ ಒಳಗೊಂಡಂತೆ ಒಟ್ಟು 6 ಘಟಕಗಳನ್ನು ಹೊಂದಿರುತ್ತದೆ. ಅರ್ಜಿದಾರರು ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ಎಲ್ಲಾ ಘಟಕಗಳನ್ನು ಅನುಷ್ಠಾನ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: Karnataka New Rules-ಇನ್ಮುಂದೆ 21 ವಯಸ್ಸಿಗಿಂತ ಚಿಕ್ಕವರು ತಂಬಾಕು ಉತ್ಪನ್ನ ಖರೀದಿಸಿದರೆ ₹1000 ದಂಡ!

Krishi Honda

ಇದನ್ನೂ ಓದಿ: Crop Loan-ಕೇಂದ್ರ ಸರ್ಕಾರದಿಂದ ಬೆಳೆ ಸಾಲ ವಿತರಣೆ ಕುರಿತು ಮಹತ್ವದ ಆದೇಶ ಪ್ರಕಟ!

Krishi Bhagya Yojana-ಕೃಷಿ ಭಾಗ್ಯ ಯೋಜನೆಯಡಿ ಯಾವೆಲ್ಲ ಘಟಕಗಳಿಗೆ ಸಬ್ಸಿಡಿ ನೀಡಲಾಗುತ್ತದೆ?

ಕೃಷಿಭಾಗ್ಯ ಯೋಜನೆಯು ಪ್ಯಾಕೇಜ್ ಮಾದರಿಯಲ್ಲಿದ್ದು ರೈತರು ಕೃಷಿ ಹೊಂಡವನ್ನು ನಿರ್ಮಾಣ ಮಾಡಿಕೊಂಡ ನಂತರ ಒಟ್ಟು 6 ಘಟಕಗಳಿಗೆ ಸಬ್ಸಿಡಿಯನ್ನು ಇಲಾಖೆಯಿಂದ ಪಡೆಯಲು ಅವಕಾಶವಿದ್ದು ಇದರ ವಿವರ ಹೀಗಿದೆ:

1) ಕೃಷಿ ಹೊಂಡ
2) ಕ್ಷೇತ್ರ ಬದು
3) ಪಾಲಿಥೀನ್ ಹೊದಿಕೆ
4) ಡೀಸೆಲ್/ಪೆಟ್ರೋಲ್/ಪಂಪ್ ಸೆಟ್
5) ತಂತಿ ಬೇಲಿ
6) ತುಂತುರು ನೀರಾವರಿ

ಇದನ್ನೂ ಓದಿ: Scholarship-SSLC ಮತ್ತು PUC ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ!

Farm Pond Subsidy Amount-ಸಾಮಾನ್ಯ ವರ್ಗದ ರೈತರು ಗರಿಷ್ಠ ಎಷ್ಟು ಸಬ್ಸಿಡಿ ಪಡೆಯಬಹುದು?

ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮತ್ತು ಇನ್ನಿತರೆ ಘಟಕಗಳಿಗೆ ಸಾಮಾನ್ಯ ವರ್ಗದ ರೈತರು ಗರಿಷ್ಠ ಎಷ್ಟು ಮೊತ್ತದ ಸಹಾಯಧನವನ್ನು ಪಡೆಯಬಹುದು ಎನ್ನುವ ವಿವರವನ್ನು ಈ ಕೆಳಗಿನ ಕೋಷ್ಟಕದಲ್ಲಿ ಹಂಚಿಕೊಳ್ಳಲಾಗಿದೆ.

ಘಟಕಶೇಕಡವಾರು ಸಬ್ಸಿಡಿಸಹಾಯಧನ ಮೊತ್ತ
ಕ್ಷೇತ್ರ ಬದುಶೇ 80%₹ 4,005
ಕೃಷಿ ಹೊಂಡಶೇ 80%₹ 90,911
ಪಾಲಿಥೀನ್ ಹೊದಿಕೆಶೇ 80%₹ 70,000
ಡೀಸೆಲ್/ಪೆಟ್ರೋಲ್/ಪಂಪ್ ಸೆಟ್ಶೇ 80%₹ 29,844
ತಂತಿ ಬೇಲಿಶೇ 40%₹ 14,800
ತುಂತುರು ನೀರಾವರಿಶೇ 90%₹ 19,429
ಗರಿಷ್ಠ ಸಬ್ಸಿಡಿ ಮೊತ್ತ₹ 2,28,991

ಇದನ್ನೂ ಓದಿ: Scholarship Application-SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

Farm Pond Subsidy-ಪ.ಜಾ/ಪ.ಪಂ ವರ್ಗದ ರೈತರು ಗರಿಷ್ಠ ಎಷ್ಟು ಸಬ್ಸಿಡಿ ಪಡೆಯಬಹುದು?

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮತ್ತು ಇನ್ನಿತರೆ ಘಟಕಗಳಿಗೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ವರ್ಗದ ರೈತರು ಗರಿಷ್ಠ ಎಷ್ಟು ಮೊತ್ತದ ಸಬ್ಸಿಡಿಯನ್ನು ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಘಟಕಶೇಕಡವಾರು ಸಬ್ಸಿಡಿಸಹಾಯಧನ ಮೊತ್ತ
ಕ್ಷೇತ್ರ ಬದುಶೇ 90%₹ 4506
ಕೃಷಿ ಹೊಂಡಶೇ 90%₹ 1,02,275
ಪಾಲಿಥೀನ್ ಹೊದಿಕೆಶೇ 90%₹ 80,000
ಡೀಸೆಲ್/ಪೆಟ್ರೋಲ್/ಪಂಪ್ ಸೆಟ್ಶೇ 90%₹ 33,575
ತಂತಿ ಬೇಲಿಶೇ 50%₹ 18,500
ತುಂತುರು ನೀರಾವರಿಶೇ 90%₹ 19,420
ಗರಿಷ್ಠ ಸಬ್ಸಿಡಿ ಮೊತ್ತ₹ 2,58,286

ಇದನ್ನೂ ಓದಿ: Tractor Cultivator Subsidy- ಸಬ್ಸಿಡಿಯಲ್ಲಿ ₹ 9,900/- ಪಾವತಿಸಿ ಟ್ರ್ಯಾಕ್ಟರ್ ಕಲ್ಟಿವೇಟರ್ ಪಡೆಯಲು ಅರ್ಜಿ!

How To Apply For Krishi Honda Scheme-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ರೈತರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹೋಬಳಿಯಲ್ಲಿರುವ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Student Bus Pass-KSRTC ಯಿಂದ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಅರ್ಜಿ ಅಹ್ವಾನ!

Krishi Honda Yojane-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಮೇಲೆ ತಿಳಿಸಿರುವ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸಲು ರೈತರು ಈ ದಾಖಲೆಗಳನ್ನು ಸಲ್ಲಿಸುವುದು ಅತ್ಯಗತ್ಯ.

1) ಆಧಾರ್ ಕಾರ್ಡ ಪ್ರತಿ/Adhar
2) ಪೋಟೋ/Photo
3) ಪಹಣಿ/ಊತಾರ್/RTC
4) ಬ್ಯಾಂಕ್ ಪಾಸ್ ಬುಕ್/Pass book
5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ(ಅನ್ವಯಿಸಿದ್ದಲ್ಲಿ ಮಾತ್ರ)
6) NOC ಪ್ರಮಾಣ ಪತ್ರ
7) ಬಾಂಡ್ ಪೇಪರ್/Bond Paper

Karnataka Agriculture Department Helpline-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ(ರೈತ ಕರೆ ಕೇಂದ್ರ)- 1800 425 3553

ಕೃಷಿ ಇಲಾಖೆ ವೆಬ್ಸೈಟ್-Click Here

WhatsApp Group Join Now
Telegram Group Join Now
Share Now: