Poultry farm-ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ! ಕೋಳಿ ಸಾಕಾಣಿಕೆಗೆ ಸಬ್ಸಿಡಿ ಯೋಜನೆಗಳು!

June 2, 2025 | Siddesh
Poultry farm-ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ! ಕೋಳಿ ಸಾಕಾಣಿಕೆಗೆ ಸಬ್ಸಿಡಿ ಯೋಜನೆಗಳು!
Share Now:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರದಿಂದ ಆಸಕ್ತ ಯುವಕರಿಗೆ ಉಚಿತವಾಗಿ ಕೋಳಿ ಸಾಕಾಣಿಕೆ(Poultry farm) ತರಬೇತಿ ಮತ್ತು ಕೋಳಿ ಸಾಕಾಣಿಕೆಯನ್ನು ಆರಂಭಿಸಲು ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಸೂಕ್ತ ಮಾರ್ಗದರ್ಶನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಾಮಾನದಲ್ಲಿ ಕೃಷಿ ಜೊತೆಗೆ ಉಪಕಸುಬುಗಳನ್ನು ಮಾಡುವುದು ಅತೀ ಮುಖ್ಯವಾಗಿದೆ ಇದಕ್ಕೆ ಪೂರಕವಾಗಿ ಕೋಳಿ ಸಾಕಾಣಿಕೆಯನ್ನು(Koli sakanike tarabeti) ಆರಂಭಿಸಲು ಆಸಕ್ತಿಯನ್ನು ಹೊಂದಿರುವವರಿಗೆ ಪ್ರಾರಂಭಿಕ ಹಂತದಲ್ಲಿ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರವು ಇದರ ತರಬೇತಿಯನ್ನು ಆಯೋಜನೆ ಮಾಡಿದೆ.

ಇದನ್ನೂ ಓದಿ: Karnataka New Rules-ಇನ್ಮುಂದೆ 21 ವಯಸ್ಸಿಗಿಂತ ಚಿಕ್ಕವರು ತಂಬಾಕು ಉತ್ಪನ್ನ ಖರೀದಿಸಿದರೆ ₹1000 ದಂಡ!

ಉಚಿತವಾಗಿ ಕೋಳಿ ಸಾಕಾಣಿಕೆ ತರಬೇತಿಯನ್ನು(Free Poultry farm Training) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಕೋಳಿ ಸಾಕಾಣಿಕೆ ತರಬೇತಿ ನಡೆಯುವ ಕೇಂದ್ರದ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಅವಶ್ಯವಿರುವ ಲಿಂಕ್ ಸೇರಿದಂತೆ ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Free Poultry Training-ಕೋಳಿ ಸಾಕಾಣಿಕೆ ತರಬೇತಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು?

(A) ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

(B) ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು.

(C) ಅರ್ಜಿದಾರ ಅಭ್ಯರ್ಥಿಗೆ ಕನ್ನಡ ಬಾಷೆಯನ್ನು ಓದಲು ಮತ್ತು ಬರೆಯಲು ಬರುವುದು ಕಡ್ಡಾಯವಾಗಿರುತ್ತದೆ. 

ಇದನ್ನೂ ಓದಿ: Scholarship-SSLC ಮತ್ತು PUC ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ!

Poultry farm Training Details-ಸಂಪೂರ್ಣ ಉಚಿತ ತರಬೇತಿ:

ಕೋಳಿ ಸಾಕಾಣಿಕೆ ತರಬೇತಿಯನ್ನು ಪಡೆಯಲು ಶಿಬಿರದಲ್ಲಿ ಭಾಗವಹಿಸಿದಿ ಅಭ್ಯರ್ಥಿಗ ತರಬೇತಿ ಆರಂಭವಾದ ದಿನದಿಂದ ಮುಕ್ತಾಯವಾಗುವುದರ ವರೆಗೂ ಸಹ ತರಬೇತಿ ಸಂಸ್ಥೆಯಿಂದ ತರಬೇತಿ ನಡೆಯುವ ಅವಧಿಯಲ್ಲಿ ವಾಸ್ತವ್ಯ ಮಾಡಲು ಮತ್ತು ಊಟ ವ್ಯವಸ್ಥೆಯು ಸಂಪೂರ್ಣ ಉಚಿತವಾಗಿರುತ್ತದೆ.

Free Poultry farm Training Duration-ತರಬೇತಿ ಅವಧಿ:

ಉಚಿತ ಕೋಳಿ ಸಾಕಾಣಿಕೆ ತರಬೇತಿಯು 09 ಜೂನ್ 2025 ರಿಂದ ಆರಂಭವಾಗಿ 21 ಜೂನ್ 2025 ಕ್ಕೆ ಮುಕ್ತಾಯವಾಗಲಿದ್ದು ಒಟ್ಟು 13 ದಿನದ ತರಬೇತಿ.

ಇದನ್ನೂ ಓದಿ: Scholarship Application-SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

Training Center Address-ತರಬೇತಿ ಕೇಂದ್ರದ ವಿಳಾಸ:

ಈ ತರಬೇತಿಯನ್ನು ಆಯೋಜನೆ ಮಾಡಿರುವ ಸಂಸ್ಥೆಯ ವಿಳಾಸ ಹೀಗಿದೆ: ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343, ಹೆಚ್ಚಿನ ಮಾಹಿತಿಗಾಗಿ: 9449860007, 9538281989, 9916783825, 888044612

How To Apply For Free Poultry farmTraining-ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ಉಚಿತ ಕೋಳಿ ಸಾಕಾಣಿಕೆ ತರಬೇತಿಯನ್ನು ಪಡೆಯಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದು ಆನ್ಲೈನ್ ಮೂಲಕ ಗೂಗಲ್ ಪಾರ್ಮ್ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ತರಬೇತಿ ನಡೆಯುವ ನೇರವಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ತರಬೇತಿ ಕೇಂದ್ರದಲ್ಲಿ ದಾಖಲೆಗಳನ್ನು ಸಲ್ಲಿಸಿ ಈ ತರಬೇತಿಯಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಸಲು ಲಿಂಕ್- Apply Now

ಸೂಚನೆ: ಆಸಕ್ತ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳಲು ಈ ಮೊಬೈಲ್ 9449860007, 9538281989, 9916783825, 888044612 ಸಂಖ್ಯೆಗಳಿಗೆ ಕರೆ ಮಾಡಿ.

ಇದನ್ನೂ ಓದಿ: Tractor Cultivator Subsidy- ಸಬ್ಸಿಡಿಯಲ್ಲಿ ₹ 9,900/- ಪಾವತಿಸಿ ಟ್ರ್ಯಾಕ್ಟರ್ ಕಲ್ಟಿವೇಟರ್ ಪಡೆಯಲು ಅರ್ಜಿ!

Koli sakanike

Poultry farm Training Required documents- ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ:

  • ಅಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ರೇಶನ್ ಕಾರ್ಡ ಪ್ರತಿ
  • ಮೊಬೈಲ್ ನಂಬರ್
  • ಪೋಟೋ

Poultry farm Usefull Information-ಕೋಳಿ ಸಾಕಾಣಿಕೆ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಹೀಗಿದೆ:

ಕೃಷಿಯ ಜೊತೆಗೆ ಕೋಳಿ ಸಾಕಾಣಿಕೆಯನ್ನು ಉಪಕಸುಬಾಗಿ ಆಯ್ಕೆ ಮಾಡಿಕೊಳ್ಳುವುದು ರೈತರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುವ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಕೋಳಿ ಗೊಬ್ಬರ ಪಡೆಯಬಹುದು. ಕೋಳಿ ಸಾಕಾಣಿಕೆಯು ಗ್ರಾಮೀಣ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಬಲ್ಲದು. ಈ ಕೆಳಗೆ ಕೋಳಿ ಸಾಕಾಣಿಕೆಗೆ ಸಂಬಂಧಿಸಿದ ಕೆಲವು ಪ್ರಮುಖ ಸಲಹೆಗಳನ್ನು ನೀಡಲಾಗಿದೆ:

ಇದನ್ನೂ ಓದಿ: Student Bus Pass-KSRTC ಯಿಂದ ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಅರ್ಜಿ ಅಹ್ವಾನ!

Poultry farm Subsidy Schemes-ಕೋಳಿ ಸಾಕಾಣಿಕೆಗೆ ಕರ್ನಾಟಕದಲ್ಲಿ ಯಾವೆಲ್ಲ ಸಬ್ಸಿಡಿ ಯೋಜನೆಗಳಿವೆ?

1) ನರೇಗಾ ಯೋಜನೆಯಡಿ ಕೋಳಿ ಮನೆ ನಿರ್ಮಾಣಕ್ಕೆ ಸಹಾಯಧನ ಪಡೆಯಬಹುದು- Click Here
2) ಪಶುಸಂಗೋಪನೆ ಇಲಾಖೆಯಲ್ಲಿ ಸಬ್ಸಿಡಿ ಯೋಜನೆಗಳು ಲಭ್ಯ-Click Here
3) ಕೃಷಿ ಪೂರಕ ಪದವಿಯನ್ನು ಪಡೆದಿರುವ ವಿದ್ಯಾರ್ಥಿಗಳು MANAGE ಸಂಸ್ಥೆಯಿಂದ ACABC ಯೋಜನೆಯಡಿ ಸಬ್ಸಿಡಿ ಪಡೆಯಬಹುದು-Click Here
4) ರಾಷ್ಟ್ರ‍ೀಯ ಜಾನವಾರು ಮಿಷನ್ ಯೋಜನೆ(NLM)-Click Here
5) PMEGP ಯೋಜನೆಯಡಿ ಸಹ ಕೋಳಿ ಸಾಕಾಣಿಕೆ ಸಬ್ಸಿಡಿ ಪಡೆಯಲು ಅವಕಾಶವಿರುತ್ತದೆ-Click Here

ಸರಿಯಾದ ತಳಿಯ ಆಯ್ಕೆ:

  • ದೇಸಿ ತಳಿಗಳು: ಗಿರಿರಾಜ, ವನರಾಜ, ಕಾಡುನಾಟಿ ಕೋಳಿಗಳಂತಹ ದೇಸಿ ತಳಿಗಳು ಕಡಿಮೆ ನಿರ್ವಹಣೆ ವೆಚ್ಚ ಮತ್ತು ರೋಗ ನಿರೋಧಕ ಶಕ್ತಿಯಿಂದಾಗಿ ಜನಪ್ರಿಯವಾಗಿವೆ. ಇವು ಸ್ಥಳೀಯ ಮಾರುಕಟ್ಟೆಯಲ್ಲಿ ಮಾಂಸ ಮತ್ತು ಮೊಟ್ಟೆಗೆ ಒಳ್ಳೆಯ ಬೇಡಿಕೆಯನ್ನು ಹೊಂದಿವೆ.
  • ವಾಣಿಜ್ಯ ತಳಿಗಳು: ಬ್ರಾಯ್ಲರ್ (ಮಾಂಸಕ್ಕಾಗಿ) ಮತ್ತು ಲೇಯರ್ (ಮೊಟ್ಟೆಗಾಗಿ) ತಳಿಗಳಾದ ಕಾಬ್, ರಾಸ್ ಅಥವಾ BV-380 ತಳಿಗಳು ವಾಣಿಜ್ಯ ಉದ್ದೇಶಕ್ಕೆ ತ್ವರಿತ ಆದಾಯ ನೀಡುತ್ತವೆ.
  • ಆಯ್ಕೆಯ ಸಲಹೆ: ನಿಮ್ಮ ಪ್ರದೇಶದ ಹವಾಮಾನ, ಮಾರುಕಟ್ಟೆ ಬೇಡಿಕೆ ಮತ್ತು ಸಂಪನ್ಮೂಲ ಲಭ್ಯತೆಯ ಆಧಾರದ ಮೇಲೆ ತಳಿಯನ್ನು ಆಯ್ಕೆ ಮಾಡಿ. ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಹವಾಮಾನಕ್ಕೆ ದೇಸಿ ತಳಿಗಳು ಹೆಚ್ಚು ಸೂಕ್ತವಾಗಿರುತ್ತವೆ.

ಇದನ್ನೂ ಓದಿ: Crop Loan-ಕೇಂದ್ರ ಸರ್ಕಾರದಿಂದ ಬೆಳೆ ಸಾಲ ವಿತರಣೆ ಕುರಿತು ಮಹತ್ವದ ಆದೇಶ ಪ್ರಕಟ!

Koli sakanike mane-ಕೋಳಿಮನೆ ನಿರ್ಮಾಣ:

  • ಸ್ಥಳ ಆಯ್ಕೆ: ಕೋಳಿಮನೆಯನ್ನು ಒಣಗಿರುವ, ಚೆನ್ನಾಗಿ ನೀರು ಬಸಿದು ಹೋಗುವ ಜಾಗ ಮತ್ತು ಒಳಚರಂಡಿ ವ್ಯವಸ್ಥೆಯಿರುವ ಸ್ಥಳದಲ್ಲಿ ನಿರ್ಮಿಸಿ.
  • ಗಾಳಿಯಾಡುವಿಕೆ: ಕೋಳಿಗಳಿಗೆ ಒಳ್ಳೆಯ ಗಾಳಿಯಾಡುವಿಕೆ ಮತ್ತು ಸೂಕ್ತ ತಾಪಮಾನ ನಿರ್ವಹಣೆ ಅಗತ್ಯ. ಕರ್ನಾಟಕದ ಬಿಸಿಲಿನ ದಿನಗಳಲ್ಲಿ ತಂಪಾದ ವಾತಾವರಣಕ್ಕಾಗಿ ಫಾಗಿಂಗ್ ವ್ಯವಸ್ಥೆ ಒದಗಿಸಿ.
  • ಗಾತ್ರ: ಪ್ರತಿ ಕೋಳಿಗೆ ಕನಿಷ್ಠ 1-2 ಚದರ ಅಡಿ ಜಾಗವಿರುವಂತೆ ಯೋಜನೆ ಮಾಡಿ. ಉದಾಹರಣೆಗೆ, 100 ಕೋಳಿಗಳಿಗೆ 200-250 ಚದರ ಅಡಿಯ ಕೋಳಿಮನೆ ಸಾಕು.

Poultry Market-ಮಾರುಕಟ್ಟೆ ಮತ್ತು ಆದಾಯ:

  • ಮಾರುಕಟ್ಟೆ ಸಂಶೋಧನೆ: ಸ್ಥಳೀಯ ಮಾರುಕಟ್ಟೆಯಲ್ಲಿ ಮಾಂಸ ಮತ್ತು ಮೊಟ್ಟೆಗೆ ಬೇಡಿಕೆಯನ್ನು ಅಧ್ಯಯನ ಮಾಡಿ. ಕರ್ನಾಟಕದ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮೊಟ್ಟೆ ಮತ್ತು ಮಾಂಸಕ್ಕೆ ಒಳ್ಳೆಯ ಬೇಡಿಕೆ ಇದೆ.
  • ಮೌಲ್ಯವರ್ಧನೆ: ಮೊಟ್ಟೆಗಳನ್ನು ಸಾವಯವ (ಆರ್ಗಾನಿಕ್) ಎಂದು ಬ್ರಾಂಡ್ ಮಾಡಿದರೆ ಅಥವಾ ಮಾಂಸವನ್ನು ಸಿದ್ಧ-ತಿನ್ನಬಹುದಾದ ಉತ್ಪನ್ನಗಳಾಗಿ ಪರಿವರ್ತಿಸಿದರೆ ಹೆಚ್ಚಿನ ಲಾಭ ಸಿಗಬಹುದು.

ಕೋಳಿ ಸಾಕಾಣಿಕೆ ಆರ್ಥಿಕ ಯೋಜನೆ ಹೀಗಿರಲಿ:

  • ಪ್ರಾರಂಭಿಕ ಹೂಡಿಕೆ: 100 ಕೋಳಿಗಳಿಗೆ ಸುಮಾರು ₹50,000-₹1,00,000 (ಕೋಳಿಮನೆ, ಕೋಳಿಗಳು, ಆಹಾರ, ಲಸಿಕೆ ಸೇರಿದಂತೆ).
  • ಆದಾಯದ ಸಾಧ್ಯತೆ: ಬ್ರಾಯ್ಲರ್ ಕೋಳಿಗಳಿಂದ 45-60 ದಿನಗಳಲ್ಲಿ ಮಾರಾಟಕ್ಕೆ ಸಿದ್ಧವಾಗುತ್ತದೆ, ಕಿಲೋಗೆ ₹120-150 ದರದಲ್ಲಿ. ಲೇಯರ್ ಕೋಳಿಗಳಿಂದ ದಿನಕ್ಕೆ 50-70 ಮೊಟ್ಟೆಗಳು (ಮೊಟ್ಟೆಗೆ ₹6-8).
  • ವೆಚ್ಚ ಕಡಿಮೆಗೊಳಿಸಲು: ಕೃಷಿಯಿಂದ ಲಭ್ಯವಿರುವ ಒಡದು, ರಾಗಿ ಇತ್ಯಾದಿಗಳನ್ನು ಆಹಾರಕ್ಕೆ ಬಳಸಿ ಮತ್ತು ಸರ್ಕಾರಿ ಸಬ್ಸಿಡಿಗಳನ್ನು ಸದುಪಯೋಗಪಡಿಸಿಕೊಳ್ಳಿ.

ಕೋಳಿ ಸಾಕಾಣಿಕೆ ಸವಾಲುಗಳು ಮತ್ತು ಪರಿಹಾರ:

  • ಸವಾಲು: ರೋಗಗಳು, ಮಾರುಕಟ್ಟೆ ಏರಿಳಿತ, ಮತ್ತು ಆಹಾರ ವೆಚ್ಚ.
  • ಪರಿಹಾರ: ನಿಯಮಿತ ಲಸಿಕೆ, ಮಾರುಕಟ್ಟೆ ಸಂಶೋಧನೆ, ಮತ್ತು ಸ್ಥಳೀಯ ಆಹಾರ ಸಂಪನ್ಮೂಲಗಳ ಬಳಕೆ.

WhatsApp Group Join Now
Telegram Group Join Now
Share Now: