Free sewing machine-ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ!

June 3, 2025 | Siddesh
Free sewing machine-ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ!
Share Now:

ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮದಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ ಅರ್ಹ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು(uchitha holige yantra) ವಿತರಣೆ ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಗ್ರಾಮೀಣ ಭಾಗದ ಬಹುತೇಕ ಮಹಿಳೆಯರು ಹೊಲಿಗೆ ತರಬೇತಿಯನ್ನು(Free sewing machine) ಪಡೆಕೊಂಡಿರುತ್ತಾರೆ ಇಂತಹ ಮಹಿಳೆಯರು ದೇವರಾಜು ಅರಸು ನಿಗಮದಿಂದ ಆರ್ಥಿಕ ನೆರವನ್ನು ಪಡೆದು ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Oil Palm Subsidy-ತೋಟಗಾರಿಕೆ ಇಲಾಖೆಯಿಂದ ₹ 81,000 ಸಬ್ಸಿಡಿಯಲ್ಲಿ ತಾಳೆ ಬೆಳೆಯ ಅರ್ಜಿ ಆಹ್ವಾನ!

ದೇವರಾಜು ಅರಸು ನಿಗಮದಿಂದ(Devaraja arasu nigama) ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಅರ್ಜಿ ವಿಲೇವಾರಿ ಪ್ರಕ್ರಿಯೆ ಇನ್ನಿತರೆ ಅಗತ್ಯ ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Sewing machine scheme eligibility-ಅರ್ಜಿಯನ್ನು ಸಲ್ಲಿಸಲು ಅರ್ಹರು:

ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತದಿಂದ ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ಮಾಹಿತಿ ಹೀಗಿದೆ:

  • ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಈ ಹಿಂದೆ ನಿಗಮದಿಂದ ಉಚಿತ ಹೊಲಿಗೆ ಯಂತ್ರವನ್ನು ಪಡೆದಿರಬಾರದು.
  • ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಸೇರಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 
  • ಕುಟುಂಬದ ವಾರ್ಷಿಕ ಆದಾಯವು ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಪಟ್ಟಣ ಪುದೇಶದವರಿಗೆ ರೂ.1,20,000/-ಗಳ ಒಳಗಿರಬೇಕು, 
  • ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.

ಇದನ್ನೂ ಓದಿ: Krishi Honda Subsidy-ಕೃಷಿ ಹೊಂಡ ನಿರ್ಮಾಣಕ್ಕೆ 2.28ಲಕ್ಷ ಸಬ್ಸಿಡಿ!

last date for application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಸೇವಾ ಸಿಂಧು ಪೋರ್ಟಲ್(Seva Sindhu Portal) ಮೂಲಕ ಅರ್ಜಿಯನ್ನು ಸಲ್ಲಿಸಲು 31 ಜೂನ್ 2025 ಕೊನೆಯ ದಿನಾಂಕವಾಗಿರುತ್ತದೆ.

Required documents for free sewing machine yojana- ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ಆಧಾರ್ ಕಾರ್ಡ ಪ್ರತಿ/Aadhar
2) ಬ್ಯಾಂಕ್ ಖಾತೆ ಪುಸ್ತಕ/Bank pass book
3) ರೇಷನ್ ಕಾರ್ಡ/ration card
4) ಪೋಟೋ/photo
5) ಹೋಲಿಗೆ ಯಂತ್ರ ತರಬೇತಿ ಪ್ರಮಾಣ ಪತ್ರ/ sewing machine training certificate
6) ಜಾತಿ ಮತ್ತು ಆದಾಯ ಪ್ರಮಾಣ ಪತ್ರ/caste and income certificate
7) ಮೊಬೈಲ್ ನಂಬರ್/mobile number

ಇದನ್ನೂ ಓದಿ: Poultry farm-ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ! ಕೋಳಿ ಸಾಕಾಣಿಕೆಗೆ ಸಬ್ಸಿಡಿ ಯೋಜನೆಗಳು!

Uchita Holige Yantra-ಅರ್ಜಿದಾರರಿಗೆ ನಿಗಮದ ವಿಶೇಷ ಸೂಚನೆಗಳು:

1) ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ವಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

2) 2023-24 ಮತ್ತು 2024-25ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಅದೇ ಅರ್ಜಿಯನ್ನು ಈ ವರ್ಷ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

3) ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು, (ಶ್ರೀ/ಶ್ರೀಮತಿ ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಇತರ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ವಾಸ್ ಪುಸ್ತಕದಲ್ಲಿಯೂ ಇದ್ದು ಹೊಂದಾಣಿಕೆಯಾಗಬೇಕು.

4) ಈ ಮೇಲ್ಕಂಡ ಎಲ್ಲಾ ಯೋಜನೆಗಳಡಿಯಲ್ಲಿ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಇದನ್ನೂ ಓದಿ: Karnataka New Rules-ಇನ್ಮುಂದೆ 21 ವಯಸ್ಸಿಗಿಂತ ಚಿಕ್ಕವರು ತಂಬಾಕು ಉತ್ಪನ್ನ ಖರೀದಿಸಿದರೆ ₹1000 ದಂಡ!

Official order-ಅಧಿಕೃತ ಪ್ರಕಟಣೆ ಪ್ರತಿ:

uchitha holige yantra

ಇದನ್ನೂ ಓದಿ: Scholarship-SSLC ಮತ್ತು PUC ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ!

Uchitha Holige Yantra Arji- ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅಭ್ಯರ್ಥಿಗಳು ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದನೇ ವಿಧಾನ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ /CSC ಕೇಂದ್ರವನ್ನು ಭೇಟಿ ಮಾಡಿ ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನೇರವಾಗಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ನೇರವಾಗಿ ಅರ್ಜಿದಾರರೇ ತಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Sewing machine online application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನೇರವಾಗಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Sewing machine online application ಮಾಡಿ ಅಧಿಕೃತ ಸೇವಾ ಸಿಂಧು ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Crop Loan-ಕೇಂದ್ರ ಸರ್ಕಾರದಿಂದ ಬೆಳೆ ಸಾಲ ವಿತರಣೆ ಕುರಿತು ಮಹತ್ವದ ಆದೇಶ ಪ್ರಕಟ!

Step-2: ಇದಾದ ಬಳಿಕ ಬಳಕೆದಾರ ಐಡಿ ಮತ್ತು ಪಾಸ್ವರ್ಡ್/OTP ಅನ್ನು ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Useful Links-ಹೆಚ್ಚಿನ ಮಾಹಿತಿಗಾಗಿ:

Devaraja Arasu Nigama-ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧಿಕೃತ ಜಾಲತಾಣ- Click here
Helpline-ಸಹಾಯವಾಣಿ- 080-22374832/ 8050770004/ 8050770005

WhatsApp Group Join Now
Telegram Group Join Now
Share Now: