Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeNew postsIsha foundation: ಇಶಾ ಫೌಂಡೇಶನ್ ಕಾವೇರಿ ಕೂಗು ತಂಡದಿಂದ 3 ರೂಪಾಯಿಗೆ ಸಸಿ ವಿತರಣೆ!

Isha foundation: ಇಶಾ ಫೌಂಡೇಶನ್ ಕಾವೇರಿ ಕೂಗು ತಂಡದಿಂದ 3 ರೂಪಾಯಿಗೆ ಸಸಿ ವಿತರಣೆ!

Isha foundation: ಆತ್ಮೀಯ ರೈತ ಬಾಂಧವರೇ ಇಶಾ ಫೌಂಡೇಶನ್ ಕಾವೇರಿ ಕೂಗು ತಂಡದಿಂದ ಅತೀ ಕಡಿಮೆ ಬೆಲೆಯಲ್ಲಿ ರೈತರಿಗೆ ಅರಣ್ಯ ಜಾತಿಯ ಸಸಿಗಳನ್ನು ವಿತರಣೆ ಮಾಡಲು ಪ್ರಕಟಣೆ ಹೊರಡಿಸಲಾಗಿದೆ ಆಸಕ್ತ ರೈತರು ಈ ಕಾರ್ಯಕ್ರಮದ ಪ್ರಯೋಜನೆ ಪಡೆಯಲು ಈ ಅಂಕಣದಲ್ಲಿ ತಿಳಿಸಿರುವ ವಿವರವನ್ನು ಪಡೆದು ಸಸಿಗಳನ್ನು ಪಡೆದುಕೊಳ್ಳಬವುದು.

Cauvery calling- ಇಶಾ ಫೌಂಡೇಶನ್ ಕಾವೇರಿ ಕೂಗು ತಂಡದ ಪ್ರಕಟಣೆ ವಿವರ ಈ ಕೆಳಗಿನಂತಿದೆ:

ಸಮಸ್ತ ರೈತ ಬಾಂಧವರಿಗೆ ಉಪಯುಕ್ತ ಮಾಹಿತಿ ಇಶಾ ಫೌಂಡೇಶನ್ ಕಾವೇರಿ ಕೂಗು ತಂಡದ ವತಿಯಿಂದ ಈ ವರ್ಷ ಅರಣ್ಯ ಜಾತಿಯ ಸಸಿಗಳನ್ನ ರಿಯಾಯಿತಿ ದರದಲ್ಲಿ ಕೇವಲ 3 ರೂಪಾಯಿಗೆ ಒಂದು ಗಿಡವನ್ನು ವಿತರಣೆ ಮಾಡುತ್ತಿದ್ದು ಈ ಒಂದು ಅನುಕೂಲತೆಯನ್ನ ಸಮಸ್ತ ರೈತ ಬಾಂಧವರು ಪಡೆದುಕೊಳ್ಳಿಲು ವಿನಂತಿಸಿದೆ.

ಈ ಯೋಜನೆಯಡಿ ಸಸಿಗಳನ್ನು ಪಡೆಯಲು ರೈತರು ಯಾವುದೇ ದಾಖಲೆಗಳ ಒದಗಿಸುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: free tailoring machine-ಉಚಿತ ಹೊಲಿಗೆ ಯಂತ್ರ,ಕುಶಲಕರ್ಮಿಗಳು ಉಪಕರಣ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

forest saplings- ಯಾವೆಲ್ಲ ಅರಣ್ಯ ಜಾತಿಯ ಸಸಿಗಳು ಲಭ್ಯ?

  • ತೇಗ
  • ಮಹಾಗಣಿ
  • ರಕ್ತ ಚಂದನ
  • ಶ್ರೀಗಂಧ
  • ಶಿವನೇ (ಕೂಳಿ)
  • ಬೀಟೆ
  • ಹೊನ್ನೆ
  • ಹೇಬ್ಬೆವು
  • ಕರಿಮತ್ತಿ
  • ಬೆಟ್ಟದ ನೆಲ್ಲಿ
  • ಸೀತಾ ಫಲ
  • ನಿಂಬೆ 

ಸಸಿಗಳ ಬೆಲೆ:

ರೂ 3/-

ಇದನ್ನೂ ಓದಿ: Fruits ID: ಸರಕಾರದ ಎಲ್ಲಾ ಬಗ್ಗೆಯ ಬೆಳೆ ಪರಿಹಾರ ಪಡೆಯಲು ಈ ವೆಬ್ಸೈಟ್ ನಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರಿಸುವುದು ಕಡ್ಡಾಯ!

ಸಸಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:- 8925841283-(ಕಿರಣ್)

ಕೆಲವು ಅರಣ್ಯ ಮರಗಳ ಕುರಿತು ಮಾಹಿತಿ:

(1)ಹೊನ್ನೆ ಮರದ(Pterocarpus marsupium) ವಿಶೇಷತೆ:

  • ಕಳಪೆ ಗುಣಮಟ್ಟದ ಮಣ್ಣಿನಲ್ಲಿಯೂ ಸಹ ಚೆನ್ನಾಗಿ ಬೆಳೆಯುತ್ತದೆ
  • ಬರ ಪರಿಸ್ಥಿತಿಗಳಿಗೆ ನಿರೋಧಕ
  • ತೇಗದ ನಂತರ ಇದುವೇ ಅತ್ಯಂತ್ಯ ದುಬಾರಿ ಮರ
  • ಬಲಿಷ್ಠವಾದ ಈ ಮರವು ತಿಳಿ ಕೆಂಪು ಬಣ್ಣವನ್ನು ಹೊಂದಿದ್ದು, ಇದರ ಹಾಲನ್ನು ಔಷಧಿಯಾಗಿ ಬಳಸಲಾಗುತ್ತದೆ
  • ಚೆನ್ನಾಗಿ ಬರಿದಾದ ಮಣ್ಣಿನಲ್ಲಿ ತ್ವರಿತ ಬೆಳವಣಿಗೆ
  • ಮರ ನೆಟ್ಟ 20 ವರ್ಷಗಳ ನಂತರ ಕೊಯ್ಲಿಗೆ ಸಿದ್ಧವಾಗುತ್ತದೆ.

(2)ತೇಗ (Tectona grandis)

  • ಎಲ್ಲ ರೀತಿಯ ಮಣ್ಣಿನಲ್ಲಿಯೂ ಬೆಳೆಯಬಲ್ಲದು (ಜೇಡಿ ಮಣ್ಣು ಮತ್ತು ಲವಣಾಂಶ ಹೊಂದಿದ ಮಣ್ಣನ್ನು ಹೊರತು ಪಡಿಸಿ)
  • ನೀರಿನಲ್ಲಿನ ಲವಣಾಂಶ 1000ppm ಗಿಂತಲೂ ಕಡಿಮೆಯಿದ್ದಲ್ಲಿ, ಈ ಮರದ ಬೆಳವಣಿಗೆ ತ್ವರಿತಗತಿಯಲ್ಲಿ ಆಗುತ್ತದೆ.
  • ಮಾರಾಟದ ಅವಕಾಶ ಬಲುಸುಲಭ
  • 12 ಅಡಿ ಅಂತರದಲ್ಲಿ ಮಹೋಗನಿ, ಹೊನ್ನೆ, ಅರಿಶಿನ ತೇಗ ಮರಗಳೊಂದಿಗೆ ಈ ಮರಗಳನ್ನು ಬೆಳೆಸಿದಲ್ಲಿ, ಕಟಾವಿಗೆ ಕಡಿಮೆ ಅವಧಿಯಲ್ಲಿ ಲಭ್ಯವಾಗುತ್ತವೆ.

(3)ಶಿವನೆ ಮರ (Gmelina arborea)

  • ಉತ್ತಮ ಗುಣಮಟ್ಟದ ಮಣ್ಣು ಮತ್ತು ನೀರಾವರಿ ಸೌಲಭ್ಯವುಳ್ಳ ಜಾಗದಲ್ಲಿ ಮಾತ್ರ ಚೆನ್ನಾಗಿ ಬೆಳೆಯುತ್ತದೆ.
  • ಕೇವಲ 7 ರಿಂದ 10 ವರ್ಷಗಳಲ್ಲಿ ಕಟಾವಿಗೆ ಲಭ್ಯ.
  • ಇದರ ಬೇರುಗಳನ್ನು ಆಯುರ್ವೇದ ಔಷಧಗಳಲ್ಲಿ ಮತ್ತು ಕಾಂಡದ ಭಾಗವನ್ನು ಮರದ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.

ಇದನ್ನೂ ಓದಿ: Data entry operator Job: ಹೊಸದಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಡಾಟಾ ಎಂಟ್ರಿ ಆಪರೇಟ‌ರ್ ನೇಮಕಕ್ಕೆ ಆದೇಶ! 

Most Popular

Latest Articles

- Advertisment -

Related Articles