Free Bike Repair Training-ಉಚಿತ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

September 16, 2025 | Siddesh
Free Bike Repair Training-ಉಚಿತ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಯಿಂದ(Canara Bank Rseti) ಗ್ರಾಮೀಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಯುವಕರಿಗೆ ತಮ್ಮದೇ ಅದ ಸ್ವಂತ ಉದ್ಯೋಗವನ್ನು ಆರಂಭಿಸಲು ಅವಶ್ಯಕ ಕೌಶಲ್ಯವನ್ನು ಉಚಿತವಾಗಿ ಕಳಿಸಲು ಉಚಿತ ದ್ವಿಚಕ್ರವಾಹನ ದುರಸ್ತಿ ತರಬೇತಿಗೆ(Bike Repair Training) ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ದಿನಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಸರಿದೂಗಿಸಲು ನಿರುದ್ಯೋಗಿ ಯುವಕ/ಯುವತಿಯರು ತಮ್ಮದೇ ಅದ ಸ್ವಂತ ಉದ್ದಿಮೆಯನ್ನು ಆರಂಭಿಸುವುದರ ಕಡೆಗೆ ಗಮನ ಹರಿಸುವುದು ಅತೀ ಮುಖ್ಯವಾಗಿ ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದಿಂದ ಉಚಿತ ಬೈಕ್ ರಿಪೇರಿ ತರಬೇತಿಯನ್ನು(Bike Repair Training Application) ಪಡೆಯಲು ಅವಕಾಶವಿದ್ದು ಈ ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸುವುದರ ಕುರಿತು ಸಂಪೂರ್ಣ ವಿವರವನ್ನು ಇಂದಿನ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: NMMS Scholarship-ಎನ್‍ಎಂಎಂಎಸ್ ಯೋಜನೆಯಡಿ ಪ್ರತಿ ತಿಂಗಳು 1,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಉಚಿತ ಬೈಕ್ ರಿಪೇರಿ ತರಬೇತಿಯನ್ನು(Bike Repair) ಭಾಗವಹಿಸಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ತಮ್ಮ ಮೊಬೈಲ್ ಮೂಲಕವೇ ತರಬೇತಿಯನ್ನು ಪಡೆಯಲು ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Who Can Apply For Bike Repair Training-ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅಭ್ಯರ್ಥಿಯ ವಯಸ್ಸು18 ರಿಂದ 45 ವರ್ಷದ ಒಳಗಿರಬೇಕು.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮತ್ತು ಕನ್ನಡ ಒದಲು ಬರೆಯಲು ಬರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತರಬೇತಿಯನ್ನು ಪಡೆದು ಸ್ವಂತ ಉದ್ಯೋಗವನ್ನು ಆರಂಭಿಸಲು ಇಚ್ಚೆಯನ್ನು ಹೊಂದಿರುವವರಿಗೆ ಮೊದಲ ಆದ್ಯತೆಯಿರುತ್ತದೆ.

ಇದನ್ನೂ ಓದಿ: Ration Card Correction-ರ‍ೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ!

Free Bike Repair Training Date-ತರಬೇತಿ ಅವಧಿ:

ಉಚಿತ ಬೈಕ್ ರಿಪೇರಿ ತರಬೇತಿಯು ದಿನಾಂಕ: 08 ಅಕ್ಟೋಬರ್ 2025 ರಿಂದ ಆರಂಭವಾಗಿ ದಿನಾಂಕ: 06 ನವೆಂಬರ್ 2025ಕ್ಕೆ ಮುಕ್ತಾಯವಾಗುತ್ತದೆ ಒಟ್ಟು 3೦ ದಿನದ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.

Training Center Address-ತರಬೇತಿ ಕೇಂದ್ರದ ವಿಳಾಸ:

ಬೈಕ್ ರಿಪೇರಿ ತರಬೇತಿಯನ್ನು ಆಯೋಜನೆ ಮಾಡಿರುವ ಕೇಂದ್ರ ವಿಳಾಸ ಹೀಗಿದೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ,ಕುಮಟಾ,ಉತ್ತರಕನ್ನಡ-581343

ಇದನ್ನೂ ಓದಿ: Free Mushroom Training-ಉಚಿತ ಅಣಬೆ ಬೇಸಾಯ ತರಬೇತಿ ಈಗಲೇ ಅರ್ಜಿ ಸಲ್ಲಿಸಿ!

Bike Repair Training

Bike Repair Training Online Application-ನಿಮ್ಮ ಮೊಬೈಲ್ ಮೂಲಕವೇ ತರಬೇತಿಗೆ ನೋಂದಣಿಯನ್ನು ಮಾಡಿ:

ಆಸಕ್ತ ಅಭ್ಯರ್ಥಿಗಳು ತರಬೇತಿಯನ್ನು ಪಡೆಯಲು ತಮ್ಮ ಮೊಬೈಲ್ ಮೂಲಕವೇ ಕೆಳಗೆ ವಿವರಿಸುವ ವಿಧಾನವನ್ನು ಅನುಸರಿಸಿ ತರಬೇತಿ ಪಡೆಯಲು ನೋಂದಣಿಯನ್ನು ಮಾಡಿಕೊಳ್ಳಬಹುದು.

Step-1: ಪ್ರಥಮದಲ್ಲಿ ಈ "Bike Repair Training Online Application" ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪಾರ್ಮ್ ಅನ್ನು ಒಪನ್ ಮಾಡಬೇಕು.

ಇದನ್ನೂ ಓದಿ: Mysuru Udyogamela-2025: ಮೈಸೂರಿನಲ್ಲಿ ಉದ್ಯೋಗ ಮೇಳ ನಿರುದ್ಯೋಗಿಗಳಿಗೆ ನೋಂದಣಿಗೆ ಅವಕಾಶ!

Step-2: ನಂತರ ಇಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ ಅವಶ್ಯಕ ವಿವರವನ್ನು ಭರ್ತಿ ಮಾಡಿ ಅಂತಿಮವಾಗಿ ಕೊನೆಯಲ್ಲಿ ಕಾಣುವ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Helpline-ತರಬೇತಿಯಲ್ಲಿ ಭಾಗವಹಿಸುವುದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ ಸಂಖ್ಯೆಗಳು- 08386-220530/ 9449860007/ 9538281989/ 9916783825/ 8880444612

Documents For Free Bike Repair Course-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಆಸಕ್ತ ಅಭ್ಯರ್ಥಿಗಳು ಬೈಕ್ ರಿಪೇರಿ ತರಬೇತಿಯಲ್ಲಿ ಭಾಗವಹಿಸಲು ಅವಶ್ಯಕ ದಾಖಲಾತಿಗಳ ಪಟ್ಟಿ ಈ ಕೆಳಗಿನಂತಿದೆ:

  • ಅಭ್ಯರ್ಥಿಯ ಆಧಾರ್ ಕಾರ್ಡ ಪ್ರತಿ/Aadhar.
  • ಅಭ್ಯರ್ಥಿಯಬ್ಯಾಂಕ್ ಪಾಸ್ ಬುಕ್/Bank Pass Book.
  • ಅಭ್ಯರ್ಥಿಯ ರೇಶನ್ ಕಾರ್ಡ ಪ್ರತಿ/Ration Card.
  • ಅಭ್ಯರ್ಥಿಯ ಪಾನ್ ಕಾರ್ಡ ಪ್ರತಿ/Pan Card.
  • ಅಭ್ಯರ್ಥಿಯ ನಾಲ್ಕು ಪೋಟೋ/Photo.
  • ಅಭ್ಯರ್ಥಿಯ ಮೊಬೈಲ್ ನಂಬರ್/Mobile Number.

ಇದನ್ನೂ ಓದಿ: Gruhalakshmi Hana-ಗೃಹಲಕ್ಷ್ಮಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Bike Repair Training-ಪೂರ್ಣ ಪ್ರಮಾಣದ ಉಚಿತ ತರಬೇತಿ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದಿಂದ ಪ್ರಸ್ತುತ ಆಯೋಜನೆ ಮಾಡಿರುವ ಬೈಕ್ ರಿಪೇರಿ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಇದಕ್ಕಾಗಿ ಯಾವುದೇ ಶುಲ್ಕವನ್ನು ಪಾವತಿಸುವಾಗಿಲ್ಲ ಇದಲ್ಲದೇ ತರಬೇತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತವಾಗಿ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ತರಬೇತಿ ಕೇಂದ್ರದಲ್ಲೇ ಒದಗಿಸಲಾಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: