Free Menstrual Cup-ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಹಾಗೂ ಮುಟ್ಟಿನ ಕಪ್!

February 11, 2026 | Siddesh
Free Menstrual Cup-ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಹಾಗೂ ಮುಟ್ಟಿನ ಕಪ್!
Share Now:

ಕರ್ನಾಟಕ ಸರ್ಕಾರವು ಮಹಿಳೆಯರ ಆರೋಗ್ಯ ಹಾಗೂ ಮಾಸಿಕ ಧರ್ಮದ ಸಮಯದಲ್ಲಿ ಸ್ವಚ್ಚತೆ(Menstrual Cup scheme) ಹಾಗೂ ಆರೋಗ್ಯ ಕಾಳಜಿಯ ಹಿನ್ನಲೆಯಲ್ಲಿ "ಶುಚಿ ಕಾರ್ಯಕ್ರಮದ" ಅಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರ್ಕಾರಿ ಅನುದಾನಿತ ಶಾಲೆಗಳು ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿನ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ಗಳು ಹಾಗೂ ಮುಟ್ಟಿನ ಕಪ್ ಗಳನ್ನು ವಿತರಿಸಲು ಆದೇಶವನ್ನು ಹೊರಡಿಸಲಾಗಿದೆ.

ಹಳೆಯ ಪೂರ್ವಜರ ಕಾಲದಲ್ಲಿ ಈ ಮುಟ್ಟಿನ ವಿಷಯದ ಬಗ್ಗೆ ಮಾತನಾಡಲು ಸಂಕೋಚ ಪಡುತ್ತಿದ್ದರು ಆದರೆ ಈಗ ಕಾಲ ಬದಲಾಗುತ್ತಿದ್ದಂತೆ(School Health Program)ಎಲ್ಲವೂ ಕೂಡ ಬದಲಾಗುತ್ತಾ ಬಂದಿದ್ದು,ಈ ಯೋಜನೆಯು ನಮ್ಮ ಹೆಣ್ಣುಮಕ್ಕಳ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೇವಲ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆಯಷ್ಟೇ ಅಲ್ಲದೆ, ಇಂದಿನ ಆಧುನಿಕ ಹಾಗೂ ಪರಿಸರ ಸ್ನೇಹಿ 'ಮುಟ್ಟಿನ ಕಪ್‌'ಗಳನ್ನು ಪರಿಚಯಿಸಿರುವುದು ನಿಜಕ್ಕೂ ಅತ್ಯಂತ ಸಹಾಯಕಾರಿಯಾಗಿದೆ.

ಇದನ್ನೂ ಓದಿ: Grama Sahayaka Pension-ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ರೂ. 5.00 ಲಕ್ಷ ಇಡಿಗಂಟು ಸೌಲಭ್ಯಕ್ಕೆ ಆದೇಶ ಪ್ರಕಟ!

ಇಂದಿನ ಈ ಅಂಕಣದಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಕಾರಣವೇನು? ಈ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಆಗುವ ಬದಲಾವಣೆಗಳಾವುವು? ಶುಚಿ ಯೋಜನೆಯ ಹಿನ್ನೆಲೆ ಏನು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಶುಚಿ ಕಾರ್ಯಕ್ರಮ ಜಾರಿಗೆ ತರಲು ಉದ್ದೇಶವೇನು?

ಹಿಂದಿನ ಕಾಲದ ಮಹಿಳೆಯರಿಗೆ ಅತೀ ಹೆಚ್ಚಾಗಿ ತಿಂಗಳ ಸಮಯದಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಸರಿಯಾದ ಸೌಲಭ್ಯಗಳು ಮತ್ತು ಆರೋಗ್ಯಕರ ಉತ್ಪನ್ನಗಳು ಲಭ್ಯವಾಗುತ್ತಿರಲಿಲ್ಲ. ಅವರು ಹಳೆಯ ಬಟ್ಟೆಗಳನ್ನು ಮರುಬಳಕೆ ಮಾಡುತ್ತಿದ್ದರಿಂದ ಸೋಂಕುಗಳು ಮತ್ತು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆಗೆ ಅತ್ಯಂತ ಅಗತ್ಯ ಹಾಗೂ ಉಪಯುಕ್ತವಾಗಿದ್ದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದರಂತೆ ಗ್ರಾಮೀಣ ಹಾಗೂ ಆರ್ಥಿಕ ಹಿಂದುಳಿದ ಮಹಿಳೆಯರಿಗೆ ಉಚಿತ ಸೌಲಭ್ಯವನ್ನು ನೀಡುವುದು ಹಾಗೂ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಆರೋಗ್ಯಕರ ರಕ್ಷಣೆಯನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: Property Rights-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ? ಇಲ್ಲಿದೆ ಅಗತ್ಯ ಮಾಹಿತಿ!

ಸ್ಯಾನಿಟರ್ ಪ್ಯಾಡ್ ಗಳ ಜೊತೆ ಮುಟ್ಟಿನ ಕಪ್ ಗಳನ್ನು ಏಕೆ ನೀಡಲಾಗುತ್ತಿದೆ?

ಸ್ಯಾನಿಟರಿ ನ್ಯಾಪ್ಕಿನ್ ಗಳಲ್ಲಿರುವ ರಾಸಾಯನಿಕ ಗಳಿಂದ ಮಹಿಳೆಯರಿ ಚರ್ಮದ ಕಿರಿಕಿರಿ ಅಥವಾ ಸೋಂಕುಗಳು ಹೆಚ್ಚಾಗುತ್ತಿದ್ದವು ಇದರ ಹಿನ್ನಲೆಯಲ್ಲಿ ಆರೋಗ್ಯ ಹಾಗೂ ಸ್ವಚ್ಚತೆಯನ್ನು ಹೆಚ್ಚಿಸಲು ಈ ಕಪ್ ಗಳನ್ನು ನೀಡಲು ನಿರ್ಧಾರ ಮಾಡಲಾಗಿದೆ.

ಮುಟ್ಟಿನ ಕಪ್ (Menstrual Cup):

ಇದು ಕೇವಲ ವಸ್ತುವಲ್ಲ ಒಂದು ಪರಿಸರ ಸ್ನೇಹಿ ಹಾಗೂ ದೀರ್ಘಕಾಲ ಬಳಕೆ ಮಾಡಬಹುದಾದ ಆಯ್ಕೆಯಾಗಿದೆ. ಇದು ಸಿಲಿಕೋನ್ ಅಥವಾ ರಬ್ಬರ್‌ನಿಂದ ತಯಾರಾಗಿದ್ದು, ಸರಿಯಾಗಿ ಬಳಕೆ ಮಾಡಿದರೆ ಹಲವು ವರ್ಷಗಳವರೆಗೆ ಉಪಯೋಗಿಸಬಹುದು. ಹಾಗೂ ಹೆಚ್ಚಾಗಿ ಶುಚಿತ್ವವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Free Sewing Machine-ಈ 2 ಜಿಲ್ಲೆಯಲ್ಲಿ ಉಚಿತ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

ಮುಟ್ಟಿನ ಕಪ್ ಗಳಿಂದಾಗುವ ಲಾಭಗಳಾವುವು?

ಈ ಕಪ್ ಗಳನ್ನು 5 ರಿಂದ 10 ವರ್ಷಗಳವರೆಗೆ ಮರು ಬಳಕೆ ಮಾಡಬಹುದು.

ಇದರಿಂದ ಹಣದ ಉಳಿತಾಯವನ್ನು ಸಹ ಮಾಡಬಹುದು.

ಇದಲ್ಲದೆ ಹೆಚ್ಚಾಗಿ ಪರಿಸರ ಮಾಲಿನ್ಯ ವನ್ನು ಕಡಿಮೆ ಮಾಡಬಹುದು.

ಸುರಕ್ಷಿತ ಹಾಗೂ ಆರಾಮದಾಯಕ ಮಾಸಿಕ ಧರ್ಮದ ಸಮಯವನ್ನು ನಿರ್ವಹಿಸಲು ಸರಿಯಾದ ಸ್ಯಾನಿಟರಿ ಉತ್ಪನ್ನಗಳ ಬಳಕೆ ಅತ್ಯಂತ ಮುಖ್ಯವಾಗಿದೆ.

ಮುಟ್ಟಿನ ಕಪ್‌ಗಳಂತಹ ಆಯ್ಕೆಗಳು ಮಹಿಳೆಯರಿಗೆ ಆರೋಗ್ಯ ರಕ್ಷಣೆ ಜೊತೆಗೆ ಆತ್ಮವಿಶ್ವಾಸವೂ ನೀಡುತ್ತವೆ.

ಇದನ್ನೂ ಓದಿ: Price Money Application-ವಿವಿಧ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 35,000/- ವರೆಗೆ ಪ್ರೋತ್ಸಾಹಧನ!

free sanitary pad

ಇದನ್ನೂ ಓದಿ: PM Kisan Trator Yojana-ಕೃಷಿ ಇಲಾಖೆಯಿಂದ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯ ಕುರಿತು ಅಧಿಕೃತ ಮಾಹಿತಿ ಪ್ರಕಟ!

ಈ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಆಗುವ ಬದಲಾವಣೆಗಳಾವುವು?

೧. ಆರೋಗ್ಯದ ಮೇಲೆ ಉಂಟಾಗುವ ಪರಿಣಾಮ:

ಅಶುದ್ಧ ಬಟ್ಟೆಗಳನ್ನು ಬಳಸುವುದರಿಂದ ಆಗುತ್ತಿದ್ದ ಚರ್ಮದ ಕಿರಿಕಿರಿ, ಕೆಂಪು ಗುಳ್ಳೆಗಳು ಮತ್ತು ಗಂಭೀರವಾದ ಮೂತ್ರನಾಳದ ಸೋಂಕುಗಳು (UTI) ಗಣನೀಯವಾಗಿ ಕಡಿಮೆಯಾಗಿವೆ.

ಮುಟ್ಟಿನ ದಿನಗಳಲ್ಲಿ ದೈಹಿಕವಾಗಿ ಆರಾಮದಾಯಕ ಅನುಭವ ನೀಡುವ ಸ್ಯಾನಿಟರಿ ಪ್ಯಾಡ್ ಮತ್ತು ಕಪ್‌ಗಳು, ಹೆಣ್ಣುಮಕ್ಕಳು ಲವಲವಿಕೆಯಿಂದ ಇರಲು ಸಹಕಾರಿಯಾಗಿವೆ.

೨. ಶಿಕ್ಷಣ ಮತ್ತು ಶಾಲಾ ಹಾಜರಾತಿಯಲ್ಲಿ ಸುಧಾರಣೆ:

ಈ ಮೊದಲು ಮುಟ್ಟಿನ ಸಮಯದಲ್ಲಿ ಶಾಲೆಯನ್ನು ತಪ್ಪಿಸಿಕೊಳ್ಳುತ್ತಿದ್ದ ವಿದ್ಯಾರ್ಥಿನಿಯರು, ಈಗ ಯೋಜನೆಯಡಿ ಸಿಗುವ ಸೌಲಭ್ಯಗಳಿಂದಾಗಿ ಧೈರ್ಯವಾಗಿ ಶಾಲೆಗೆ ಹೋಗುತ್ತಿದ್ದಾರೆ.

ಸೋರುವಿಕೆ ಅಥವಾ ಕಲೆಗಳಾಗುವ ಭಯವಿಲ್ಲದೆ ತರಗತಿಯ ಪಾಠಗಳಲ್ಲಿ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿದೆ.

ಇದನ್ನೂ ಓದಿ: Cabinet Meeting Highlights-ಸಚಿವ ಸಂಪುಟ ಸಭೆಯಲ್ಲಿ ಮಹ್ವತದ ನಿರ್ಣಯ! ಕೆರೆ ತುಂಬಿಸುವ ಯೋಜನೆಗೆ 32 ಕೋಟಿ ಅನುದಾನ!

೩. ಮಾನಸಿಕ ಮತ್ತು ಸಾಮಾಜಿಕ ಬದಲಾವಣೆಗಳು:

ಮುಟ್ಟಿನ ಬಗ್ಗೆ ಇದ್ದ ಮುಜುಗರ ಮತ್ತು ಕೀಳರಿಮೆ ದೂರವಾಗಿ, ಈಗ ಹೆಣ್ಣು ಮಕ್ಕಳಲ್ಲಿ "ಇದು ನೈಸರ್ಗಿಕ ಪ್ರಕ್ರಿಯೆ" ಎಂಬ ವೈಜ್ಞಾನಿಕ ಅರಿವು ಮೂಡಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಮೈದಾನದಲ್ಲಿ ಆಟವಾಡಲು ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ.

೪. ಆರ್ಥಿಕ ಸ್ವತಂತ್ರ ಮತ್ತು ಪರಿಸರ ಪ್ರಜ್ಞೆ:

ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಪ್ಯಾಡ್ ಖರೀದಿಸುವ ಹೊರೆ ತಪ್ಪಿಸಿ ಅವರ ಹಣವನ್ನು ಇತರೆ ಅಗತ್ಯಗಳಿಗೆ ಬಳಸಲು ಸಹಾಯಕಾರಿಯಾಗಿದೆ.

ಮುಟ್ಟಿನ ಕಪ್‌ಗಳ ಪರಿಚಯದಿಂದಾಗಿ, ಹೆಣ್ಣುಮಕ್ಕಳು ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Bele Parihara List-ಬೆಳೆ ಹಾನಿ ಪರಿಹಾರ ಪಡೆದ ಅರ್ಹ ರೈತರ ಪಟ್ಟಿ ಬಿಡುಗಡೆ!

೫. ಮನೆಯಲ್ಲಿ ಜಾಗೃತಿ

ಈ ಯೋಜನೆಯ ಜಾರಿಯಿಂದ ಮನೆಯಲ್ಲಿ ತಾಯಿ, ಅಕ್ಕ ಅಥವಾ ಗೆಳತಿಯರೊಂದಿಗೆ ಮುಕ್ತವಾಗಿ ಮಾತನಾಡುವ ವಾತಾವರಣ ನಿರ್ಮಾಣವಾಗಿದ್ದು, ಇದರಿಂದ ಮನೆಯಲ್ಲಿರುವ ಹಿರಿಯರಿಗೂ ಸಹ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡುತ್ತಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: