Free Mushroom Training-ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ!

December 28, 2025 | Siddesh
Free Mushroom Training-ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ಗ್ರಾಮೀಣ ಮತ್ತು ನಗರ ಭಾಗದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮದೇ ಅದ ಸ್ವಂತ ಉದ್ಯೋಗವನ್ನು ಆರಂಭಿಸಲು ಯೋಜನೆಯನ್ನು ಹಾಕಿಕೊಂಡಿರುವವರು ಸಣ್ಣ ಜಾಗದಲ್ಲಿ ಮನೆ ಬಳಿಯಲ್ಲೇ ಅಣಬೆ ಉತ್ಪಾದನೆಯನ್ನು(Mushroom Training) ಮಾಡಲು ಅವಕಾಶವಿದ್ದು ಇದಕ್ಕಾಗಿ ಅವಶ್ಯವಿರುವ ಕೌಶಲ್ಯ ತರಬೇತಿಯನ್ನು ಪಡೆಯಲು ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಉಚಿತ ಅಣಬೆ ಬೇಸಾಯ(Anabe Besaya Tarabeti) ತರಬೇತಿಯನ್ನು ಪಡೆಯಲು ಅಭ್ಯರ್ಥಿಗಳು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಅಣಬೆ ಕೃಷಿಯನ್ನು ಆರಂಭಿಸಲು ಯಾವೆಲ್ಲ ಯೋಜನೆಯಡಿ ಸಹಾಯಧನವನ್ನು ಪಡೆಯಬಹುದು ಎನ್ನುವ ಮಾಹಿತಿಯನ್ನು ಸಹ ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Land Conversion-ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ!

ಪ್ರಸುತ್ತ ದಿನಗಳಲ್ಲಿ ಅಣಬೆಯನ್ನು(Anabe Krishi Training) ಆಹಾರ ಪದಾರ್ಥವಾಗಿ ಬಳಕೆ ಮಾಡುವವರ ಸಂಖ್ಯೆಯು ಹೆಚ್ಚುತ್ತಲೇ ಇದ್ದು ಸ್ಥಳೀಯ ಹೋಟಲ್ ಇನ್ನಿತರೆ ಮಾರುಕಟ್ಟೆಯಲ್ಲಿಯು ಸಹ ಅಣಬೆಗೆ ಉತ್ತಮ ಬೇಡಿಕೆ ಇದ್ದು ಈ ಕಾರಣದಿಂದ ಅಣಬೆ ಬೇಸಾಯವನ್ನು ಮಾಡಲು ಆಸಕ್ತಿಯನ್ನು ಹೊಂದಿರುವ ಫಲಾನುಭವಿಗಳು ಈ ತರಬೇತಿಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು.

Free Mushroom Training Details-ತರಬೇತಿ ವಿವರ:

ಅಣಬೆ ಬೇಸಾಯವನ್ನು ಮಾಡಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಸೂಕ್ತ ಕೌಶಲ್ಯವನ್ನು ಒದಗಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಉಚಿತ ವಸತಿ ಮತ್ತು ಊಟ ಸಹಿತ ಹತ್ತು ದಿನಗಳ ಅಣಬೆ ಬೇಸಾಯ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.

ಈ ತರಬೇತಿಯಲ್ಲಿ ಅಣಬೆಯನ್ನು ವ್ಯಾವಹಾರಿಕವಾಗಿ ಹೇಗೆ ಬೆಳೆಯಬಹುದು? ಇದಕ್ಕಾಗಿ ಮನೆ ಮಟ್ಟದಲ್ಲಿ ಯಾವೆಲ್ಲ ತಯಾರಿಗಳನ್ನು ಮಾಡಿಕೊಳ್ಳಬೇಕು? ಪ್ರಯೋಗಿಕವಾಗಿ ಅಣಬೆಯನ್ನು ಬೆಳೆಯುವ ಕ್ರಮದ ಕುರಿತು ಹಾಗೂ ಅಣಬೆ ಕೃಷಿಯನ್ನು ಮಾಡಲು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು ಎನ್ನುವ ಮಾಹಿತಿಯನ್ನು ಸಹ ಈ ತರಬೇತಿಯಲ್ಲಿ ತಿಳಿಸಲಾಗುತ್ತದೆ.

ಇದನ್ನೂ ಓದಿ: Ration Card Correction-ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ! 

Who Can Apply For Free Mushroom Training-ತರಬೇಯನ್ನು ಪಡೆಯಲು ಯಾರೆಲ್ಲ ನೋಂದಣಿ ಮಾಡಿಕೊಳ್ಳಬಹುದು?

ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಪ್ರಸ್ತುತ ಆಯೋಜನೆ ಮಾಡಿರುವ ಉಚಿತ ಅಣಬೆ ಬೇಸಾಯ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತಾ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ನೋಂದಣಿಯನ್ನು ಮಾಡಿಕೊಂಡು ತರಬೇತಿಯಲ್ಲಿ ಭಾಗವಹಿಸಬಹುದು.

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅಭ್ಯರ್ಥಿಯ ವಯಸ್ಸು 18 ರಿಂದ 35 ವರ್ಷದ ಒಳಗಿರಬೇಕು.

ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸಲು ನೋಂದಣಿಯನ್ನು ಮಾಡಿಕೊಳ್ಳಬಹುದು.

ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಬಿಪಿಎಲ್ ಕಾರ್ಡ ಅನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ.

ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ಇದನ್ನೂ ಓದಿ: Postal Life Insurance-ಪೋಸ್ಟ್ ಆಫೀಸ್ ಲೈಫ್ ಇನ್ಶೂರೆನ್ಸ್ ಕಡಿಮೆ ಕಂತು ಪಾವತಿಸಿ ಹೆಚ್ಚಿನ ಲಾಭ ಪಡೆಯಿರಿ

Mushroom Training

Mushroom Farming Subsidy Scheme-ಅಣಬೆ ಕೃಷಿಗೆ ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬಹುದು?

ತರಬೇತಿಯನ್ನು ಪಡೆದುಕೊಂಡು ಬಳಿಕ ಅಣಬೆ ಬೇಸಾಯವನ್ನು ಪ್ರಾರಂಭಿಸುವ ಯೋಜನೆಯನ್ನು ಹಾಕಿಕೊಂಡಿರುವವರು ಯಾವೆಲ್ಲ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಬಹುದು ಎನ್ನುವ ವಿವರ ಈ ಕೆಳಗಿನಂತಿವೆ.

PMEGP ಯೋಜನೆ: ಅಣಬೆ ಕೃಷಿಯನ್ನು ಪ್ರಾರಂಭಿಸಲು PMEGP ಯೋಜನೆಯಡಿ ಶೇ 35% ಸಬ್ಸಿಡಿಯನ್ನು ಪಡೆಯಲು ಅವಕಾಶವಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸಲು ನಿಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕ ಕೇಂದ್ರವನ್ನು(DIC) ಭೇಟಿ ಮಾಡಿ.

PMFME ಯೋಜನೆ: ಅಣಬೆಯನ್ನು ಬೆಳೆದ ಬಳಿಕ ಮೌಲವರ್ಧಿತ ಉತ್ಪನ್ನಗಳನ್ನು ತಯಾರಿಸಲು ಅಥವಾ ಅಣಬೆಯನ್ನು ಪ್ಯಾಕ್ ಮಾಡಿ ಮಾರಾಟ ಮಾಡಲು PMFME ಯೋಜನೆಯಡಿ ಶೇ50% ಸಬ್ಸಿಡಿ ಗರಿಷ್ಠ 15 ಲಕ್ಷದ ವರೆಗೆ ಸಹಾಯಧನವನ್ನು ಪಡೆಯಬಹುದು, ಇದಕ್ಕಾಗಿ ಅರ್ಜಿ ಸಲ್ಲಿಸಲು ನಿಮ್ಮ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಮತ್ತು PMFME ಯೋಜನೆಯ ಅವರನ್ನು ಸಂಪರ್ಕಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ತೋಟಗಾರಿಕೆ ಇಲಾಖೆ NHM ಯೋಜನೆ: ಅಣಬೆ ಬೇಸಾಯವನ್ನು ಮಾಡಲು ಅವಶ್ಯವಿರುವ ಪೂರಕ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಳ್ಳಲು NHM ಯೋಜನೆಯಡಿ ಸಹಾಯಧನವನ್ನು ಪಡೆಯಬಹುದು, ಇದಕ್ಕಾಗಿ ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ.

ಇದನ್ನೂ ಓದಿ: Krishi Honda-ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಶೇ 90% ಸಹಾಯಧನ!

Anabe Krishi Training Date-ತರಬೇತಿ ಅವಧಿ:

ಉಚಿತ ಅಣಬೆ ಬೇಸಾಯ ತರಬೇತಿಯು ದಿನಾಂಕ 05 ಜನವರಿ 2026 ರಿಂದ ಪ್ರಾರಂಭವಾಗಿ ಒಟ್ಟು 10 ದಿನ ಆಯೋಜನೆ ಮಾಡಲಾಗಿದೆ.

Mushroom Training Center-ತರಬೇತಿ ಕೇಂದ್ರ ವಿಳಾಸ:

ಉಚಿತ ಅಣಬೆ ಬೇಸಾಯ ತರಬೇತಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಇದನ್ನೂ ಓದಿ: Sewing Machine Training-ಮಹಿಳೆಯರಿಗೆ ಗುಡ್ ನ್ಯೂಸ್! 31 ದಿನಗಳ ಉಚಿತ ಹೊಲಿಗೆ ಯಂತ್ರ ತರಬೇತಿ!

Free Mushroom Training Registration-ತರಬೇತಿಯಲ್ಲಿ ಭಾಗವಹಿಸಲು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಅಣಬೆ ಕೃಷಿ ಬೇಸಾಯ ತರಬೇತಿಯನ್ನು ಪಡೆಯಲು ಅಭ್ಯರ್ಥಿಗಳು ಮುಂಚಿತವಾಗಿ ಹೆಸರುಗಳನ್ನು ನೋಂದಣಿಯನ್ನು ಮಾಡಲು ಈ ಮೊಬೈಲ್ ಸಂಖ್ಯೆ 8970476050, 9591514154, 9686248369, 8970446644, 9505894247 ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬೇಕು.

Free Mushroom Training Facility-ಸಂಪೂರ್ಣ ಉಚಿತ ತರಬೇತಿ:

ಅಣಬೆ ಬೇಸಾಯ ತರಬೇತಿಯಲ್ಲಿ ಭಾಗವಹಿಸುವವರು ತರಬೇತಿಯಲ್ಲಿ ಭಾಗವಹಿಸಲು ಯಾವುದೇ ಬಗ್ಗೆಯ ಶುಲ್ಕವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಇದಲ್ಲದೇ ಈ ತರಬೇತಿಯಲ್ಲಿ ಭಾಗವಹಿಸುವವರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸಹ ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: Digital Property Certificate-ಗ್ರಾಮ ಪಂಚಾಯತಿ ವತಿಯಿಂದ ಕೃಷಿಯೇತರ ಭೂಮಿಗಳಿಗೆ ಡಿಜಿಟಲ್ ಇ-ಖಾತಾ ಪ್ರಮಾಣ ಪತ್ರ!

Required Documents For Mushroom Training- ತರಬೇತಿಯಲ್ಲಿ ಭಾಗವಹಿಸಲು ಅವಶ್ಯವಿರುವ ದಾಖಲೆಗಳು:

ಉಚಿತ ಅಣಬೆ ಬೇಸಾಯ ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಹೊಂದಿರಬೇಕಾದ ದಾಖಲೆಗಳ ಪಟ್ಟಿ ಹೀಗಿದೆ:

  • ಅಭ್ಯರ್ಥಿಯ ಆಧಾರ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ಪೋಟೋ
  • ರೇಶನ್ ಕಾರ್ಡ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: