Free Sewing Machine-ಈ 2 ಜಿಲ್ಲೆಯಲ್ಲಿ ಉಚಿತ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

February 10, 2026 | Siddesh
Free Sewing Machine-ಈ 2 ಜಿಲ್ಲೆಯಲ್ಲಿ ಉಚಿತ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!
Share Now:

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಕೈಗಾರಿಕೆ ಇಲಾಖೆಯಿಂದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಸ್ವಂತ ಉದ್ಯೋಗಕ್ಕೆ ಉತೇಜನವನ್ನು ನೀಡಲು ಉಚಿತವಾಗಿ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರವನ್ನು(Electric Sewing Machine) ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಬಗ್ಗೆ ಒಂದಿಷ್ಟು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಈ ಯೋಜನೆಯಡಿ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕಗಳು ಪ್ರತಿಯೊಂದು ಜಿಲ್ಲೆಗೆ ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಸಮಯ ಮೀರುವ ಮುನ್ನ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಹಂತ-ಹಂತದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು. ಸೇವಾ ಸಿಂಧು ಪೋರ್ಟಲ್ ಮೂಲಕವೇ ಈ ಅರ್ಜಿಗಳನ್ನು(Free Sewing Machine Application) ಆಹ್ವಾನಿಸಲಾಗಿರುವುದರಿಂದ, ತಾಂತ್ರಿಕ ತೊಂದರೆಗಳಿಲ್ಲದೆ ಅರ್ಜಿಯನ್ನು ಪೂರ್ಣಗೊಳಿಸುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Price Money Application-ವಿವಿಧ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 35,000/- ವರೆಗೆ ಪ್ರೋತ್ಸಾಹಧನ!

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಬೇಕಾಗುವ ಅಗತ್ಯ ದಾಖಲೆಗಳು ಮತ್ತು ಮೊಬೈಲ್ ಮೂಲಕವೇ ಸುಲಭವಾಗಿ ಅರ್ಜಿ(Free Sewing Machine) ಸಲ್ಲಿಸುವ ವಿಧಾನವನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು. ಮನೆಯಲ್ಲಿಯೇ ಕುಳಿತು ಸ್ವಾವಲಂಬಿ ಜೀವನ ನಡೆಸಲು ಬಯಸುವ ಮಹಿಳೆಯರು ಹೊಲಿಗೆ ವೃತ್ತಿ ಮಾಡುತ್ತಿರುವವರಿಗೆ ಈ ಅಂಕಣವು ಒಂದು ಸಂಪೂರ್ಣ ಮಾರ್ಗದರ್ಶಿಯಾಗಿ ಕೆಲಸ ಮಾಡಲಿದೆ. ಸರ್ಕಾರದ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪಲಿ ಎನ್ನುವುದೇ ನಮ್ಮ ಪುಟದ ಮುಖ್ಯ ಉದ್ದೇಶವಾಗಿದೆ.

Free Sewing Machine Scheme-2026: ಪ್ರಸ್ತುತ 2 ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ:

ಕೈಗಾರಿಕೆ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಉಚಿತ ಹೋಲಿಗೆ ಯಂತ್ರವನ್ನು ಒದಗಿಸಲು ಜಿಲ್ಲಾವಾರು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗುತ್ತಿದ್ದು ಪ್ರಸ್ತುತ ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: PM Kisan Trator Yojana-ಕೃಷಿ ಇಲಾಖೆಯಿಂದ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯ ಕುರಿತು ಅಧಿಕೃತ ಮಾಹಿತಿ ಪ್ರಕಟ!

Application Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು:

2025-26ನೇ ಸಾಲಿನಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯುವ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಗಳು:

  • ದಾರವಾಡ ಜಿಲ್ಲೆಯವರಿಗೆ- 20 ಪೆಬ್ರವರಿ 2026
  • ಬಳ್ಳಾರಿ ಜಿಲ್ಲೆಯವರಿಗೆ- 15 ಮಾರ್ಚ್ 2026

Free Sewing Machine Scheme Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ಅರ್ಹತಾ ಮಾನದಂಡಗಳನ್ನು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿದಾರರು ಕಡ್ಡಾಯವಾಗಿ ಬಳ್ಳಾರಿ ಅಥವಾ ಧಾರವಾಡ ಜಿಲ್ಲೆಯ ನಿವಾಸಿಯಾಗಿರಬೇಕು.

ಅರ್ಜಿದಾರರು ವೃತ್ತಿಪರ ಕುಶಲಕರ್ಮಿಗಳಾಗಿರಬೇಕು (ಹೊಲಿಗೆ ವೃತ್ತಿ ಮಾಡುವವರು).

ಅರ್ಜಿದಾರ ಅಭ್ಯರ್ಥಿಯ ವಯಸ್ಸು 18 ರಿಂದ 50 ವರ್ಷದೊಳಗಿರಬೇಕು.

ಕುಟುಂಬದ ವಾರ್ಷಿಕ ಆದಾಯವು ಸರ್ಕಾರ ನಿಗದಿಪಡಿಸಿದ ಮಿತಿಯ ಒಳಗಿರಬೇಕು (ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಅನ್ವಯಿಸುವಂತೆ).

ಈ ಹಿಂದೆ ಸರ್ಕಾರದ ಯಾವುದೇ ಇಲಾಖೆಯಿಂದ ಹೊಲಿಗೆ ಯಂತ್ರದ ಸೌಲಭ್ಯ ಪಡೆದಿರಬಾರದು.

ಇದನ್ನೂ ಓದಿ: Cabinet Meeting Highlights-ಸಚಿವ ಸಂಪುಟ ಸಭೆಯಲ್ಲಿ ಮಹ್ವತದ ನಿರ್ಣಯ! ಕೆರೆ ತುಂಬಿಸುವ ಯೋಜನೆಗೆ 32 ಕೋಟಿ ಅನುದಾನ!

Online Application For Free Sewing Machine Yojana-ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದು:

ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅರ್ಹ ಅರ್ಜಿದಾರರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಒಂದೆರಡು ಕ್ಲಿಕ್ ನಲ್ಲೇ ತಮ್ಮ ಮೊಬೈಲ್ ಮೂಲಕವೇ ಅಗತ್ಯ ದಾಖಲೆ ಮತ್ತು ವಿವರವನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಈ "Online Application For Free Sewing Machine" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ.

ಇದನ್ನೂ ಓದಿ: Bele Parihara List-ಬೆಳೆ ಹಾನಿ ಪರಿಹಾರ ಪಡೆದ ಅರ್ಹ ರೈತರ ಪಟ್ಟಿ ಬಿಡುಗಡೆ!

Free Sewing Machine

ಇದನ್ನೂ ಓದಿ: SBI Women Loan-ಮಹಿಳೆಯರ ಸ್ವಂತ ಉದ್ಯಮಕ್ಕೆ"ಸ್ತ್ರೀ ಶಕ್ತಿ ಪ್ಯಾಕೇಜ್"! ಇಲ್ಲಿದೆ ಸಂಪೂರ್ಣ ಮಾಹಿತಿ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕೇಳಿರುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಕಾಣಿಸುವ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

Required Documents For Free Sewing Machine-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

ಹೊಲಿಗೆ ಯಂತ್ರವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ.

  • ಅರ್ಜಿದಾರರ ಆಧಾರ್ ಕಾರ್ಡ್/Adhar Card
  • ಅರ್ಜಿದಾರ ಕುಟುಂಬದ ರೇಷನ್ ಕಾರ್ಡ್/Ration Card
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste And Income Certificate
  • ಕುಶಲಕರ್ಮಿ ಗುರುತಿನ ಚೀಟಿ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಪಡೆದ ಪ್ರಮಾಣ ಪತ್ರ/Identity Card
  • ಹೊಲಿಗೆ ವೃತ್ತಿ ತರಬೇತಿ ಪಡೆದ ಪ್ರಮಾಣ ಪತ್ರ/Training Certificate
  • ಪಾಸ್‌ಪೋರ್ಟ್ ಅಳತೆಯ ಪೋಟೋ/Photo
  • ಬ್ಯಾಂಕ್ ಪಾಸ್‌ಬುಕ್ ಪ್ರತಿ/Bank Pass Book

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: