Garden fair in bangalore-ಸಸ್ಯ ಸಂತೆಯಲ್ಲಿ ಮಾರಾಟ ಮಳಿಗೆ ನೋಂದಣಿಗೆ ಅರ್ಜಿ ಅಹ್ವಾನ!

June 20, 2025 | Siddesh
Garden fair in bangalore-ಸಸ್ಯ ಸಂತೆಯಲ್ಲಿ ಮಾರಾಟ ಮಳಿಗೆ ನೋಂದಣಿಗೆ ಅರ್ಜಿ ಅಹ್ವಾನ!
Share Now:

ಬೆಂಗಳೂರಿನ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಿಂದ ರೈತರಿಗೆ ತಮ್ಮ ಬಳಿಯಿರುವ ವಿವಿಧ ಬಗ್ಗೆಯ ನರ್ಸರಿ ಸಸ್ಯಗಳನ್ನು(Garden Plants) ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಸಸ್ಯ ಸಂತೆಯಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲು ನೋಂದಣಿಯನ್ನು ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಬೆಂಗಳೂರಿನ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ(GKVK Bengalore) ಅಂಚೆ, ವಿದ್ಯಾರಣ್ಯಪುರ- ಯಲಹಂಕ ರಸ್ತೆ ಇಲ್ಲಿ ಜುಲೈ 11 ರಿಂದ ಜುಲೈ 13, 2025 ರ ವರೆಗೆ "ಸಸ್ಯ ಸಂತೆ" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಇದನ್ನೂ ಓದಿ: Bisi uta yojana-ಬಿಸಿಯೂಟದ ಅಡುಗೆಯವರಿಗೆ ವೇತನ ಹೆಚ್ಚಳ ಮಾಡಿದ ಸರ್ಕಾರ!

ಸಸ್ಯ ಸಂತೆಯಲ್ಲಿ(Gardening Tools) ಭಾಗವಹಿಸಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Who Can Apply-ಯಾರೆಲ್ಲ ಮಾರಾಟ ಮಳಿಗೆ ನೋಂದಣಿಗೆ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ತಾವೇ ಸ್ವಂತ ನರ್ಸರಿಯಲ್ಲಿ ಸಸಿಗಳನ್ನು ಹಾಗೂ ಇನ್ನಿತರೆ ಪರಿಕರಗಳನ್ನು ಸಿದ್ದಪಡಿಸಿರಬೇಕು.

ಇದನ್ನೂ ಓದಿ: SSP Scholarship-ರಾಜ್ಯ ಸರ್ಕಾರದಿಂದ ವಿದ್ಯಾರ್ಥಿವೇತನ ಹಾಗೂ ಪ್ರೋತ್ಸಾಹಧನಕ್ಕೆ ಅರ್ಜಿ!

Garden fair-2025: ಸಸ್ಯ ಸಂತೆಯಲ್ಲಿ ಏನೆಲ್ಲ ಮಾರಾಟ ಮಾಡಬಹುದು?

ಈ ಸಸ್ಯ ಸಂತೆಯಲ್ಲಿ ಭಾಗವಹಿಸಿ ಈ ಕೆಳಗಿನ ಪಟ್ಟಿಯಲ್ಲಿರುವ ಸಸಿಗಳನ್ನು ಹಾಗೂ ಇದಕ್ಕೆ ಪೂರಕ ಪರಿಕರಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ.

ಹಣ್ಣಿನ ಕಸಿ ಸಸಿಗಳು/Grafted Fruit Saplings
ತರಕಾರಿ ಬೀಜ Vegetable Seeds
ಔಷಧೀಯ ಮತ್ತು ಸುಗಂಧಿ ಸಸಿಗಳು ಮತ್ತು ಅಲಂಕಾರಿಕ ಸಸಿಗಳು/Medicinal and Aromatic Plants
ಎರೆಹುಳು ಗೊಬ್ಬರ/Vermicompost
ಜೈವಿಕ ಗೊಬ್ಬರ
ಇತರೆ ಸಾವಯವ ಪರಿಕರಗಳು/Organic Fertilizer
ಪೀಡೆನಾಶಕ/Pesticides
ಕೃಷಿ ಉಪಕರಣಗಳು,
ಗಾರ್ಡನ್ ಪರಿಕರಗಳು/Gardening Tools
ಹೂವಿನ ಕುಂಡಗಳನ್ನು(Flower Pots)
ಸಾವಯವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ.

ಇದನ್ನೂ ಓದಿ: Parihara Farmers List-ಬೆಳೆ ಹಾನಿ ಪರಿಹಾರ ಪಡೆದ ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ!

bengalore sasya sante

Garden fair Duration-ಎಷ್ಟು ದಿನ ಸಸ್ಯ ಸಂತೆ ನಡೆಯಲಿದೆ?

ಜುಲೈ 11 ರಿಂದ ಜುಲೈ 13, 2025 ರ ವರೆಗೆ ಒಟ್ಟು ಮೂರು ದಿನ ಬೆಂಗಳೂರಿನಲ್ಲಿ "ಸಸ್ಯ ಸಂತೆ" ಯು ನಡೆಯಲಿದೆ ಎಂದು ಅಧಿಕೃತ ವಾರ್ತಾ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಳಿಗೆಯನ್ನು ಪಡೆಯಲು ನೋಂದಣಿ ಮಾಡಿಕೊಳ್ಳುವುದು ಹೇಗೆ?

ಸಸ್ಯ ಸಂತೆಯಲ್ಲಿ ಮಳಿಗೆಗಳನ್ನು ಪಡೆಯಲು ಅರ್ಜಿದಾರರು ಈ ಮೊಬೈಲ್ 7795072699/ 7892057925/ 9538771475 ಸಂಖ್ಯೆಗೆ ಕರೆ ಮಾಡಿ ಮುಂಚಿನವಾಗಿ ನೋಂದಣಿಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Parihara Farmers List-ಬೆಳೆ ಹಾನಿ ಪರಿಹಾರ ಪಡೆದ ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ!

Garden fair Place-ಸಸ್ಯ ಸಂತೆ ನಡೆಯುವ ಸ್ಥಳ:

ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ ಅಂಚೆ, ವಿದ್ಯಾರಣ್ಯಪುರ- ಯಲಹಂಕ ರಸ್ತೆ

For More Details-ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಮೊಬೈಲ್ ಸಂಖ್ಯೆಗಳು- 7795072699/ 7892057925/ 9538771475

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: