Goods Vehicle Subsidy-ಗೂಡ್ಸ್ ವಾಹನ ಖರೀದಿ ಮಾಡಲು 3 ಲಕ್ಷ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ!

February 12, 2026 | Siddesh
Goods Vehicle Subsidy-ಗೂಡ್ಸ್ ವಾಹನ ಖರೀದಿ ಮಾಡಲು 3 ಲಕ್ಷ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ!
Share Now:

ಸ್ವಂತ ಉದ್ಯೋಗ ಮಾಡಬೇಕೆಂಬ ಹಂಬಲವಿರುವ ಯುವಕರಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿಗೆ 'ಆಹಾರ ವಾಹಿನಿ (ಆಹಾರ ಕಿಯೋಸ್ಕ್)' ಯೋಜನೆಯಡಿ(Goods Vehicle Subsidy Scheme) ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ನಾಲ್ಕು ಚಕ್ರಗಳ ಇ-ಗೂಡ್ಸ್ ವಾಹನಗಳನ್ನು ಖರೀದಿಸಿ, ಅದನ್ನು ಸಂಚಾರಿ ತಿಂಡಿ ಮಳಿಗೆಯಾಗಿ ಪರಿವರ್ತಿಸಲು ಆರ್ಥಿಕ ನೆರವು ನೀಡಲಾಗುತ್ತದೆ.

ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಮಡಿವಾಳ ಸಮುದಾಯದ(Madivala Nigama) ಜನರಿಗೆ ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವುದು. ಬೀದಿ ಬದಿಯ ವ್ಯಾಪಾರಕ್ಕಿಂತ ಆಧುನಿಕ ಶೈಲಿಯ ಇ-ವಾಹನಗಳ ಮೂಲಕ ವ್ಯವಹಾರ ನಡೆಸಲು ಇದು ಉತ್ತಮ ವೇದಿಕೆಯಾಗಿದೆ. ಪ್ರಸ್ತುತ ನಿಗಮದ ವ್ಯಾಪ್ತಿಗೆ ಬರುವ ವರ್ಗದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ನಿಗದಿತ ಅವಧಿಯೊಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: Free Menstrual Cup-ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಹಾಗೂ ಮುಟ್ಟಿನ ಕಪ್!

ವಾಹನ ಖರೀದಿಗೆ ಸರ್ಕಾರವು ದೊಡ್ಡ ಮೊತ್ತದ ಸಬ್ಸಿಡಿಯನ್ನು(Goods Vehicle Subsidy Application) ಘೋಷಿಸಿದ್ದು, ಉಳಿದ ಮೊತ್ತಕ್ಕೆ ಬ್ಯಾಂಕ್‌ಗಳ ಮೂಲಕ ಸಾಲದ ಸೌಲಭ್ಯವನ್ನೂ ಕಲ್ಪಿಸಿಕೊಡಲಾಗುತ್ತದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯದ ಜನರಿಗೆ ತಮ್ಮದೇ ಆದ ಒಂದು ಉದ್ಯಮವನ್ನು ಪ್ರಾರಂಭಿಸಲು ದೊಡ್ಡ ಶಕ್ತಿ ಸಿಕ್ಕಂತಾಗುತ್ತದೆ.

Who Can Apply For Goods Vehicle Subsidy Yojana-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಗೂಡ್ಸ್ ವಾಹನವನ್ನು ಸಬ್ಸಿಡಿಯಲ್ಲಿ ಖರೀದಿ ಮಾಡಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎನ್ನುವ ಮಾಹಿತಿ ಈ ಕೆಳಗಿನಂತಿದೆ:

ಅರ್ಜಿದಾರ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ-2ಎ ಗೆ ಸೇರಿದ ಮಡಿವಾಳ ಮತ್ತು ಅದರ ಉಪಜಾತಿಗಳಾದ (ಅಗಸ, ಚಕಲ, ಧೋಬಿ, ಮಡಿವಾಳ್ ಇತ್ಯಾದಿ) ಜನಾಂಗಕ್ಕೆ ಸೇರಿರಬೇಕು.

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರ ಅಭ್ಯರ್ಥಿಯ ವಯಸ್ಸು 21 ರಿಂದ 45 ವರ್ಷದೊಳಗಿರಬೇಕು.

ಕುಟುಂಬದ ವಾರ್ಷಿಕ ವರಮಾನ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು.

ಈ ಹಿಂದೆ ನಿಗಮದ ಯಾವುದೇ ಯೋಜನೆಯಲ್ಲಿ ಸೌಲಭ್ಯ ಪಡೆದವರು ಮತ್ತು ಅವರ ಕುಟುಂಬದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಇದನ್ನೂ ಓದಿ: Grama Sahayaka Pension-ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ರೂ. 5.00 ಲಕ್ಷ ಇಡಿಗಂಟು ಸೌಲಭ್ಯಕ್ಕೆ ಆದೇಶ ಪ್ರಕಟ!

Goods Vehicle Subsidy Amount-ಯೋಜನೆಯಡಿ ಸಿಗುವ ಸಬ್ಸಿಡಿ ಎಷ್ಟು?

ಈ ಯೋಜನೆಯ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ವಾಹನ ಖರೀದಿಸಲು ₹3.00 ಲಕ್ಷಗಳ ನೇರ ಸಹಾಯಧನ (Subsidy) ನೀಡಲಾಗುತ್ತದೆ. ವಾಹನದ ಉಳಿದ ಮೊತ್ತವನ್ನು ಅಭ್ಯರ್ಥಿಗಳು ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳ ಮೂಲಕ ಸಾಲವಾಗಿ ಪಡೆಯಬಹುದು.

How To Apply For Goods Vehicle Subsidy-ಎಲ್ಲಿ ಅರ್ಜಿ ಸಲ್ಲಿಸಬೇಕು?

ಇ-ಗೂಡ್ಸ್ ವಾಹನವನ್ನು ಸಬ್ಸಿಡಿಯಲ್ಲಿ ಖರೀದಿ ಮಾಡಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದು ನೇರವಾಗಿ ತ್ತಿರದ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎರಡನೇಯದು ಅಭ್ಯರ್ಥಿಗಳು ತಮ್ಮ ಮೊಬೈಲ್ ನಲ್ಲೇ ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ: ಈ ಯೋಜನೆಯು ಅನುದಾನ ಲಭ್ಯತೆ ಆಧಾರದ ಮೇಲೆ ರಾಜ್ಯದ ಕೆಲವು ಆಯ್ದ ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾತ್ರ ಅರ್ಜಿಯನ್ನು ಆಹ್ವಾನಿಸಿದ್ದು ಈ ಯೋಜನೆಯ ಲಭ್ಯತೆ ಮತ್ತು ಅರ್ಜಿ ಸಲ್ಲಿಸುವ ಬಗ್ಗೆ ನಿಖರ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಮಾಹಿತಿಯನ್ನು ಪಡೆಯಿರಿ.

ಇದನ್ನೂ ಓದಿ: Property Rights-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ? ಇಲ್ಲಿದೆ ಅಗತ್ಯ ಮಾಹಿತಿ!

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಮಾರ್ಚ್ 2026

Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಆಭ್ಯರ್ಥಿಗಳು ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಿ ಅಗತ್ಯ ಕ್ರಮಗಳನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.

Step-1: ಅಭ್ಯರ್ಥಿಗಳು ಮೊದಲಿಗೆ ಈ "Apply Now" ಲಿಂಕ್ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Price Money Application-ವಿವಿಧ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ 35,000/- ವರೆಗೆ ಪ್ರೋತ್ಸಾಹಧನ!

Goods Vehicle Subsidy

ಇದನ್ನೂ ಓದಿ: PM Kisan Trator Yojana-ಕೃಷಿ ಇಲಾಖೆಯಿಂದ ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆಯ ಕುರಿತು ಅಧಿಕೃತ ಮಾಹಿತಿ ಪ್ರಕಟ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹೊಸ ಬಳಕೆದಾರ ಅಗಿದ್ದರೆ "New User" ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

Step-3: ಲಾಗಿನ್ ಅದ ಬಳಿಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ಅಥವಾ ಇ-ಗೂಡ್ಸ್ ವಾಹನ/ಆಹಾರ ವಾಹಿನಿ (ಆಹಾರ ಕಿಯೋಸ್ಕ್) ಯೋಜನೆ ಎಂದು ಸರ್ಚ್ ಮಾಡಿದರೆ ಅರ್ಜಿ ನಮೂನೆ ಕಾಣಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಓದಿ: Free Sewing Machine-ಈ 2 ಜಿಲ್ಲೆಯಲ್ಲಿ ಉಚಿತ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Required Documents-ಅರ್ಜಿ ಸಲ್ಲಿಸಲು ದಾಖಲೆಗಳು:

ಅರ್ಜಿ ಸಲ್ಲಿಸಲು ಅವಶ್ಯವಿರುವ ಅಗತ್ಯ ದಾಖಲೆಗಳ ಪಟ್ಟಿ ಹೀಗಿದೆ:

  • ಆಧಾರ್ ಕಾರ್ಡ/Aadhaar Card
  • ಜಾತಿ ಪ್ರಮಾಣ ಪತ್ರ/Caste Certificate
  • ಆದಾಯ ಪ್ರಮಾಣ ಪತ್ರ/Income Certificate
  • ಬ್ಯಾಂಕ್ ಪಾಸ್ ಬುಕ್/Bank Passbook
  • ಫೋಟೋ/Passport size Photo
  • ಡ್ರೈವಿಂಗ್ ಲೈಸೆನ್ಸ್/Driving License
  • ರೇಷನ್ ಕಾರ್ಡ್/Ration Card
  • ನಿವಾಸ ಪ್ರಮಾಣ ಪತ್ರ/Residential Certificate

For More Information-ಇನ್ನು ಹೆಚ್ಚಿನ ಮಾಹಿತಿಗಾಗಿ:

  • Website-ನಿಗಮದ ಅಧಿಕೃತ ವೆಬ್ಸೈಟ್: Click Here
  • Helpline-ಸಹಾಯವಾಣಿ: 080-22374832, 8050770004 ಮತ್ತು 8050770005

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: