Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

January 1, 2026 | Siddesh
Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!
Share Now:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಳ್ಳಿ ಮಟ್ಟದಲ್ಲಿ ಸಾರ್ವಜನಿಕರಿಗೆ ಆನ್ಲೈನ್ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಗ್ರಾಮ ಒನ್ ಕೇಂದ್ರವನ್ನು(Gramaone Online Application) ತೆರೆಯಲು ಪ್ರಾಂಚೈಸಿ ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇಂದಿನ ಲೇಖನದಲ್ಲಿ ಈ ಕುರಿತು ಸಂಪೂರ್ಣ ವಿವರವನ್ನು ಪ್ರಕಟಿಸಲಾಗಿದೆ.

ನಾಗರಿಕ ಸೇವೆಗಳನ್ನು ಮತ್ತು ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಹಳ್ಳಿ ಮಟ್ಟದಲೇ ಸೂಕ್ತ ನೆರವನ್ನು ಒದಗಿಸಲು ರಾಜ್ಯ ಸರಕಾರದಿಂದ ಇಡಿಸಿಎಸ್ ನಿರ್ದೇಶನಾಲಯ(ಇ-ಆಡಳಿತ)ದಿಂದ ವಿವಿಧ ಜಿಲ್ಲೆಗಳಲ್ಲಿ ಗ್ರಾಮ ಒನ್ ಕೇಂದ್ರವನ್ನು(Grama One) ಆರಂಭಿಸಲು ಪ್ರಾಂಚೈಸಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Milk Payment Status-ನಿಮ್ಮ ಹಾಲಿನ ಲೆಕ್ಕ ಈಗ ನಿಮ್ಮ ಬೆರಳ ತುದಿಯಲ್ಲಿ! ಇಲ್ಲಿದೆ ಮೊಬೈಲ್ ಅಪ್ಲಿಕೇಶನ್!

ಗ್ರಾಮ ಒನ್ ಕೇಂದ್ರವನ್ನು ಪ್ರಾರಂಭಿಸಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲಾತಿಗಳೇನು? ಇನ್ನಿತರೆ ಅವಶ್ಯವಿರುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Who can apply For Gramaone One Center-ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು:

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅಭ್ಯರ್ಥಿಯು ಕನಿಷ್ಠ ದ್ವಿತೀಯ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು.
ಅರ್ಜಿದಾರ ಅಭ್ಯರ್ಥಿಯು ಗ್ರಾಮ ಒನ್ ಕೇಂದ್ರವನ್ನು ಪ್ರಾರಂಭಿಸಲು ಅವಶ್ಯವಿರುವ ಕನಿಷ್ಠ 1 ರಿಂದ 2 ಲಕ್ಷ ಬಂಡವಾಳವನ್ನು ಹೂಡಿಕೆ ಮಾಡಲು ಸಿದ್ದವಿರಬೇಕು.
ಗ್ರಾಮ ಒನ್ ಕೇಂದ್ರವನ್ನು ಪ್ರಾರಂಭಿಸಲು ಇಚ್ಚಿಸಿರುವ ಜಾಗವು ಸಾರ್ವಜನಿಕರಿಗೆ ಸುಲಭವಾಗಿ ಸಂಪರ್ಕಿಸುವಂತಿರಬೇಕು.

ಇದನ್ನೂ ಓದಿ: Survey Number-ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಮಾಹಿತಿ ತಿಳಿಯುವುದು ಹೇಗೆ?

Grama One Center-ಗ್ರಾಮ ಒನ್ ಕೇಂದ್ರವನ್ನು ಪ್ರಾರಂಭಿಸಲು ಅವಶ್ಯವಿರುವ ಉಪಕರಣಗಳು:

ಅರ್ಜಿದಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಗ್ರಾಮ ಒನ್ ಕೇಂದ್ರವನ್ನು ಪಡೆಯಲು ಅನುಮೋದನೆಯನ್ನು ಪಡೆದುಕೊಂಡ ಬಳಿಕ ಕೇಂದ್ರವನ್ನು ಆರಂಭಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ಉಪಕರಣಗಳನ್ನು ಖರೀದಿ ಮಾಡಬೇಕು ಅಥವಾ ಈಗಾಲೇ ಹೊಂದಿರಬೇಕಾಗುತ್ತೆ.

  • ಲ್ಯಾಪ್ ಟಾಪ್/ಡೆಸ್ಕ್ ಟಾಪ್Desktop / Laptop
  • ಪ್ರಿಂಟರ್/Multi-Function Printer
  • ಬಯೋಮೆಟ್ರಿಕ್/Biometric scanner
  • ವೆಬ್ ಕ್ಯಾಮರಾ/Web Camera
  • ವೈ-ಪೈ ರಿಸೀವರ್/Wi-Fi Receiver
  • ಯುಪಿಎಸ್/UPS backup

ಇದನ್ನೂ ಓದಿ: Ashraya Vasati Yojana-ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 2.0 ಲಕ್ಷ ಸಹಾಯಧನ!

How To Apply For Grama One-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಗ್ರಾಮ ಒನ್ ಕೇಂದ್ರವನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರುವವರು ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಅರ್ಜಿದಾರರು ಮೊದಲಿಗೆ ಈ "Online Application" ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ತದನಂತರ ಈ ಪುಟದಲ್ಲಿ ಕೊನೆಯಲ್ಲಿ ಕಾಣುವ ಘೋಷಣೆ ಬಟನ್ ಮೇಲೆ ಕ್ಲಿಕ್ ಮಾಡಿ "ನೋಂದಣಿ ಮಾಡಿ/Register Now" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸವನ್ನು ಹಾಕಿ OTP ಬಟನ್ ಮೇಲೆ ಕ್ಲಿಕ್ ಮಾಡಿ ಒಟಿಪಿ ಅನ್ನು ಪಡೆದು ಒಟಿಪಿ ಅನ್ನು ನಮೂದಿಸಿ "Validate OTP" ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-3: ಇಲ್ಲಿ ಅವಶ್ಯವಿರುವ ಎಲ್ಲಾ ವಿವರ ಮತ್ತು ದಾಖಲಾತಿಗಳನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Land Conversion-ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ!

Gramaone Online

ಇದನ್ನೂ ಓದಿ: Solar Pumpset Helpline-ಸೋಲಾರ್ ಪಂಪ್ ಸೆಟ್ ಸಹಾಯಧನ ಪಡೆಯಲು ಸಹಾಯವಾಣಿ ಸ್ಥಾಪನೆ!

Required Documents For Gramaone One-ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳು:

ಗ್ರಾಮ ಒನ್ ಕೇಂದ್ರವನ್ನು ತೆರೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಅಭ್ಯರ್ಥಿಯ ಆಧಾರ್ ಕಾರ್ಡ/Adhar Card
ಪಾನ್ ಕಾರ್ಡ/Pan Card
ಬ್ಯಾಂಕ್ ಪಾಸ್ ಬುಕ್/Bank Pass Book
ಪೋಟೋ/Photo
ವಿದ್ಯಾರ್ಹತೆ ಪ್ರಮಾಣ ಪತ್ರ/Education Certificate

ಇದನ್ನೂ ಓದಿ: Federal Bank Scholarship-ಫೆಡರಲ್ ಬ್ಯಾಂಕ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅವಕಾಶ!

For More Information- ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಉಪಯುಕ್ತ ಮಾಹಿತಿ ಹೀಗಿದೆ:

Grama One Official Website-ಅಧಿಕೃತ ಗ್ರಾಮ ಒನ್ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ- Click Here
Grama One Helpline-ಸಹಾಯವಾಣಿ- 8431435031

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: