Gruhalakshmi Amount-ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆಯಲು ಜೀವಿತ ಪ್ರಮಾಣಪತ್ರ ಕಡ್ಡಾಯ!

March 1, 2026 | Siddesh
Gruhalakshmi Amount-ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆಯಲು ಜೀವಿತ ಪ್ರಮಾಣಪತ್ರ ಕಡ್ಡಾಯ!
Share Now:

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಹಾಗೂ ಕೋಟ್ಯಂತರ ಮಹಿಳೆಯರ ಪಾಲಿನ ಆಶಾದಾಯಕ ಯೋಜನೆ ಎಂದರೆ ಅದು ‘ಗೃಹಲಕ್ಷ್ಮಿ/Gruhalakshmi’. ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ ನೇರವಾಗಿ 2,000 ರೂಪಾಯಿಗಳನ್ನು ಜಮಾ ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿರುವ ಈ ಯೋಜನೆಯಲ್ಲಿ ಈಗ ಮಹತ್ವದ ಬದಲಾವಣೆಯೊಂದನ್ನು ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇನ್ಮುಂದೆ ಗೃಹಲಕ್ಷ್ಮಿ ಹಣವನ್ನು ಪಡೆಯಲು ಫಲಾನುಭವಿಗಳು ‘ಜೀವಿತ ಪ್ರಮಾಣಪತ್ರ’ (Life Certificate) ಸಲ್ಲಿಸುವುದು ಕಡ್ಡಾಯವಾಗುವ ಸಾಧ್ಯತೆಗಳಿವೆ.

ಇಂದಿನ ಅಂಕಣದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ(Gruhalakshmi Yojane Latest News) ಆರ್ಥಿಕ ನೆರವನ್ನು ಪಡೆಯುತ್ತಿರುವ ಮಹಿಳೆಯರಿಗೆ ಶೀಘ್ರದಲ್ಲೇ ರಾಜ್ಯ ಸರಕಾರದಿಂದ ನೂತನ ನಿಯಮ ಜಾರಿಗೆ ತರುವ ಸಾಧ್ಯತೆಯಿದ್ದಿ ಈ ನಿಯಮದ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: SSP Scholarship-ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!

ಇದಲ್ಲದೇ ಪ್ರಸ್ತುತ ರಾಜ್ಯ ಸರಕಾರದಿಂದ ಹಂತ-ಹಂತವಾಗಿ ಬಾಕಿಯಿರುವ ಗೃಹಲಕ್ಷ್ಮಿ(Gruhalakshmi Yojana) ಯೋಜನೆಯ ಹಣವನ್ನು ಸಹ ಬಿಡುಗಡೆ ಮಾಡಲಾಗಿದ್ದು ಫಲಾನುಭವಿಗಳು ತಮ್ಮ ಮೊಬೈಲ್ ಮೂಲಕವೇ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಹಣ ಜಮಾ ವಿವರವನ್ನು ಒಂದೇರಡು ಕ್ಲಿಕ್ ನಲ್ಲಿ ಚೆಕ್ ಮಾಡಿಕೊಳ್ಳುವುದು ಹೇಗೆ ಎನ್ನುವ ಮಾಹಿತಿಯನ್ನು ಸಹ ತಿಳಿಸಲಾಗಿದೆ.

Gruhalakshmi Scheme In Karnataka-ಯೋಜನೆಯ ಹಿನ್ನೆಲೆ ಮತ್ತು ಪ್ರಸ್ತುತ ಸ್ಥಿತಿ:

2023ರ ಜೂನ್ ತಿಂಗಳಿನಲ್ಲಿ ಜಾರಿಗೆ ಬಂದ ಗೃಹಲಕ್ಷ್ಮಿ ಯೋಜನೆಯು ಅಲ್ಪಾವಧಿಯಲ್ಲಿಯೇ ರಾಜ್ಯದ ಮನೆಮಾತಾಗಿದೆ. ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಈ ಸೌಲಭ್ಯ ಲಭ್ಯವಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಈವರೆಗೆ ಸುಮಾರು 1.24 ಕೋಟಿಗೂ ಹೆಚ್ಚು ಫಲಾನುಭವಿಗಳ ಖಾತೆಗೆ ಅಂದಾಜು 57,300 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ತಲುಪಿಸಲಾಗಿದೆ.

ಆದರೆ, ಇಷ್ಟು ದೊಡ್ಡ ಮಟ್ಟದ ಯೋಜನೆ ಅನುಷ್ಠಾನಗೊಳ್ಳುತ್ತಿರುವಾಗ ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಸವಾಲುಗಳು ಎದುರಾಗುವುದು ಸಹಜ. ಅಂತಹದ್ದೇ ಒಂದು ಪ್ರಮುಖ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಈಗ ಮುಂದಾಗಿದೆ.

ಇದನ್ನೂ ಓದಿ: Sugarcane Incentive-ಕಬ್ಬು ಬೆಳೆಗಾರರಿಗೆ 300 ಕೋಟಿ ಆರ್ಥಿಕ ನೆರವು ಬಿಡುಗಡೆ: ಸಚಿವ ಶಿವಾನಂದ ಪಾಟೀಲ್!

Gruhalakshmi Life Certificate-ಜೀವಿತ ಪ್ರಮಾಣಪತ್ರದ ಅವಶ್ಯಕತೆ ಏಕೆ?

ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದರು. ಕೆಲವು ಸಂದರ್ಭಗಳಲ್ಲಿ ಯೋಜನೆಯ ಫಲಾನುಭವಿ ಮಹಿಳೆ ಮೃತಪಟ್ಟಿದ್ದರೂ, ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತಿರುವುದು ಕಂಡುಬಂದಿದೆ. ಮರಣ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿ ಹಣ ಬಿಡುಗಡೆಯಾಗುತ್ತಿರುವುದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾತ್ರವಲ್ಲದೆ, ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತದೆ.

ನಿವೃತ್ತ ಸರ್ಕಾರಿ ನೌಕರರು ಪ್ರತಿ ವರ್ಷ ತಮ್ಮ ಪಿಂಚಣಿ ಪಡೆಯಲು ಹೇಗೆ ಬ್ಯಾಂಕ್‌ಗೆ ತೆರಳಿ ತಾವು ಜೀವಂತವಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುತ್ತಾರೋ, ಅದೇ ಮಾದರಿಯನ್ನು ಗೃಹಲಕ್ಷ್ಮಿ ಯೋಜನೆಗೂ ಅಳವಡಿಸಲು ಶಿಫಾರಸು ಮಾಡಲಾಗಿದೆ. ಇದರಿಂದ ಅರ್ಹರಿಗೆ ಮಾತ್ರ ಹಣ ತಲುಪುವುದನ್ನು ಖಚಿತಪಡಿಸಿಕೊಳ್ಳಬಹುದು.

ಇದನ್ನೂ ಓದಿ: Marriage Registration-ಮದುವೆ ನೋಂದಣಿ ಈಗ ಮತ್ತಷ್ಟು ಸುಲಭ! ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ!

Gruhalakshmi Scheme In Karnataka

ಇದನ್ನೂ ಓದಿ: Passport Verification-ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ನೂತನ ನಿಯಮ ಜಾರಿ!

C M Siddaramaiah-ಸಿಎಂ ಸಿದ್ದರಾಮಯ್ಯ ಅವರ ಸೂಚನೆ:

ದಿನೇಶ್ ಗೂಳಿಗೌಡ ಅವರ ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯೋಜನೆಯಲ್ಲಿ ಪಾರದರ್ಶಕತೆ ತರಲು ಕೂಡಲೇ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ. ಜೀವಿತ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸುವ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ತಾಂತ್ರಿಕವಾಗಿ ಇದನ್ನು ಹೇಗೆ ಜಾರಿಗೆ ತರಬಹುದು ಎಂಬ ಬಗ್ಗೆ ವರದಿ ಸಿದ್ಧಪಡಿಸಲು ಆದೇಶಿಸಿದ್ದಾರೆ.

Gruhalakshmi New Rules Benefits-ಹೊಸ ನಿಯಮ ಜಾರಿಯಿಂದ ಆಗುವ ಲಾಭಗಳೇನು?

ದುರುಪಯೋಗಕ್ಕೆ ತಡೆ: ಮರಣ ಹೊಂದಿದವರ ಖಾತೆಗೆ ಹಣ ಜಮಾ ಆಗುವುದನ್ನು ತಡೆಯುವ ಮೂಲಕ ಸರ್ಕಾರದ ಸಾರ್ವಜನಿಕ ಹಣ ಪೋಲಾಗುವುದನ್ನು ತಪ್ಪಿಸಬಹುದು.

ಪಾರದರ್ಶಕತೆ: ಯೋಜನೆಗೆ ಸಾಂಸ್ಥಿಕ ರೂಪ ಸಿಗುತ್ತದೆ ಮತ್ತು ಫಲಾನುಭವಿಗಳ ನಿಖರ ದತ್ತಾಂಶ ಲಭ್ಯವಾಗುತ್ತದೆ.

ಇದನ್ನೂ ಓದಿ: Online Land Documents-'ಇ-ಚಾವಡಿ' ಮೂಲಕ ನಿಮ್ಮ ಗ್ರಾಮದ ಕಂದಾಯ ದಾಖಲೆಗಳು ನಿಮ್ಮ ಬೆರಳ ತುದಿಯಲ್ಲಿ!

ಅರ್ಹರಿಗೆ ಆದ್ಯತೆ: ಸರ್ಕಾರದ ಹಣವು ಅನರ್ಹರ ಪಾಲಾಗುವ ಬದಲು, ಉಳಿತಾಯವಾದ ಹಣವನ್ನು ಇತರ ಜನಪದ ಕಾರ್ಯಗಳಿಗೆ ಅಥವಾ ಯೋಜನೆಯನ್ನು ಇನ್ನಷ್ಟು ಬಲಪಡಿಸಲು ಬಳಸಬಹುದು.

ವಾರ್ಷಿಕ ನವೀಕರಣ: ವರ್ಷಕ್ಕೊಮ್ಮೆ ಈ ಪ್ರಮಾಣಪತ್ರ ಸಲ್ಲಿಸುವುದರಿಂದ ಅರ್ಹ ಫಲಾನುಭವಿಗಳ ಪಟ್ಟಿ ನಿರಂತರವಾಗಿ ಅಪ್‌ಡೇಟ್ ಆಗುತ್ತಿರುತ್ತದೆ.

ಇದನ್ನೂ ಓದಿ: Mutation-ಕಂದಾಯ ಇಲಾಖೆ ಇನ್ಮುಂದೆ ಮ್ಯುಟೇಶನ್ ಪ್ರಕ್ರಿಯೆ ಸರಳ ಮತ್ತು ಸುಲಭ!

Gruhalakshmi-ಫಲಾನುಭವಿಗಳು ಮಾಡಬೇಕಾದುದೇನು?

ಸದ್ಯಕ್ಕೆ ಈ ನಿಯಮ ಪರಿಶೀಲನಾ ಹಂತದಲ್ಲಿದೆ. ಅಧಿಕೃತ ಸರ್ಕಾರಿ ಆದೇಶ ಹೊರಬಿದ್ದ ನಂತರ, ಫಲಾನುಭವಿ ಮಹಿಳೆಯರು ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಥವಾ ಸರ್ಕಾರ ನಿಗದಿಪಡಿಸುವ ತಾಂತ್ರಿಕ ವೇದಿಕೆಗಳ ಮೂಲಕ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಇದು ಸರಳ ಪ್ರಕ್ರಿಯೆಯಾಗಲಿದ್ದು, ಆಧಾರ್ ಆಧಾರಿತ ಬಯೋಮೆಟ್ರಿಕ್ ಅಥವಾ ಮುಖ ಗುರುತಿಸುವಿಕೆ (Face Authentication) ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಯಿದೆ.

Gruhalakshmi Amount Statuts Check-ನಿಮ್ಮ ಮೊಬೈಲ್ ನಲ್ಲೇ ಗೃಹಲಕ್ಷ್ಮಿ ಯೋಜನೆಯ ಜಮಾ ವಿವರ ತಿಳಿಯಿಸಿ:

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಿ ರಾಜ್ಯ ಸರಕಾರದ ಅಧಿಕೃತ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಮನೆಯಲ್ಲೇ ಇದ್ದು ಗೃಹಲಕ್ಷ್ಮಿ ಯೋಜನೆಯ ಜಮಾ ವಿವರವನ್ನು ಚೆಕ್ ಮಾಡಿಕೊಳ್ಳಬಹುದು.

Step-1: ಸಾರ್ವಜನಿಕರು ಮೊದಲ ಹಂತದಲ್ಲಿ ಈ Gruhalakshmi Amount Statuts Check ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಡಿಬಿಟಿ-ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: Free Sewing Training-ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿಗೆ ಅರ್ಜಿ!

Step-2: ಇದಾದ ಬಳಿಕ ಮೊಬೈಲ್ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆ ಮತ್ತು OTP ಅನ್ನು ನಮೂದಿಸಿ ಬಳಕೆದಾರ ಐಡಿ ಮತ್ತು ನಾಲ್ಕು ಅಂಕಿಯ ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಿ.

Step-3: ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಅಗಿ "ಪಾವತಿ ಸ್ಥಿತಿ/Payment Statuts" ಬಟನ್ ಮೇಲೆ ಕ್ಲಿಕ್ ಮಾಡಿ ಗೃಹಲಕ್ಷ್ಮಿ ಯೋಜನೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಪ್ರತಿ ತಿಂಗಳು ಯಾವ ದಿನಾಂಕದಂದು ರೂ 2,000 ಆರ್ಥಿಕ ನೆರವು ಜಮಾ ಅಗಿದೆ? ಬ್ಯಾಂಕ್ ಖಾತೆ ಸಂಖ್ಯೆ, UTR ಸಂಕ್ಯೆಯ ವಿವರವನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: