Gruhalakshmi Hana-ಗೃಹಲಕ್ಷ್ಮಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

September 13, 2025 | Siddesh
Gruhalakshmi Hana-ಗೃಹಲಕ್ಷ್ಮಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಹಣ ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
Share Now:

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಹಣವನ್ನು(Gruhalakshmi Amount) ವರ್ಗಾವಣೆ ಮಾಡುವುದರ ಕುರಿತು ಮಾಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪತ್ರಿಕ ಪ್ರಕಟಣೆಯನ್ನು ಹೊರಡಿಸಿದ್ದು ಇದರ ಸಂಪೂರ್ಣ ವಿವರವಾದ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಮಾಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Laxmi hebbalkar) ಅವರು ಪತ್ರಿಕಾ ಪ್ರಕಟಣೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ ಎಷ್ಟು ಕಂತಿನ ಆರ್ಥಿಕ ನೆರವನ್ನು ಜಮಾ ಮಾಡಲಾಗಿದೆ? ಮತ್ತು ಬಾಕಿ ಇರುವ ಕಂತಿವ ವಿವರ ಹಾಗೂ ಆಗಸ್ಟ್ ಮತ್ತು ಸೆಪ್ಟೆಂಬರ್ 2025 ತಿಂಗಳ ಹಣ ಜಮಾ ಕುರಿತು ಅಧಿಕೃತವಾಗಿ ಹೊರಡಿಸಿರುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: BPL Card-ಅನರ್ಹ ಬಿಪಿಎಲ್ ಕಾರ್ಡದಾರರಿಗೆ ನೋಟಿಸ್! ನಿಮಗೆ ನೋಟಿಸ್ ಬಂದರೆ ಏನು ಮಾಡಬೇಕು

ಕಳೆದ 4-5 ತಿಂಗಳಿನಿಂದ ಸರಿಯಾದ ಸಮಯಕ್ಕೆ ಪ್ರತಿ ತಿಂಗಳು ಗೃಹಲಕ್ಷ್ಮಿ(Gruhalakshmi Scheme)ಯೋಜನೆಯ ಹಣವನ್ನು ಜಮಾ ಮಾಡಲಾಗುತ್ತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ದೂರುಗಳು ಹೆಚ್ಚುತ್ತಿದ್ದು ಇದಕ್ಕೆ ಸೂಕ್ತ ಸ್ಪಷ್ಟನೆಯನ್ನು ನೀಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಾರ್ತಾ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.

Gruhalakshmi DBT Amount-ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮಿ ಹಣ ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

"ಈವರೆಗೆ 21 ಕಂತುಗಳ ಗೃಹಲಕ್ಷ್ಮಿ ಹಣವನ್ನು(Gruhalakshmi Yojane)ಫಲಾನುಭವಿಗಳ ಖಾತೆಗೆ ಜಮೆ ಮಾಡ್ದಿದೇವೆ. ಸುಮಾರು 1 ಕೋಟಿ 24 ಲಕ್ಷ ಮಹಿಳೆಯರು ನಮ್ಮ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡುತ್ತಿವೆ" ಎಂದು ಮಾಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: JK Tyre Shiksha Scholarship-ಜೆಕೆ ಟೈರ್ ಸ್ಕಾಲರ್ಶಿಪ್ ವಿದ್ಯಾರ್ಥಿನಿಯರಿಗೆ ರೂ 25,000/- ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

Gruhalakshmi Yojana Details-2025: ಗೃಹಲಕ್ಷ್ಮಿ ಯೋಜನೆ ಅಂಕಿ-ಅಂಶ:

  • ಗೃಹಲಕ್ಷ್ಮಿ ಯೋಜನೆ ಜಾರಿ- 17 ಜುಲೈ 2025
  • ಈವರೆಗೆ ಬಿಡುಗಡೆಯಾಗಿರುವ ಒಟ್ಟು ಕಂತು- 21 ಕಂತುಗಳು
  • ಒಟ್ಟು ಫಲಾನುಭವಿ ಮಹಿಳೆಯರು- 1 ಕೋಟಿ 24 ಲಕ್ಷ
  • ಒಬ್ಬ ಫಲಾನುಭವಿಗೆ ಬಿಡುಗಡೆಯಾದ ಹಣ- 42,000/-
  • ಬಾಕಿಯಿರುವ ಕಂತುಗಳು- ಆಗಸ್ಟ್ ಮತ್ತು ಸೆಪ್ಟೆಂಬರ್ 2025(2 ಕಂತುಗಳು)
  • ಹಣ ವರ್ಗಾವಣೆ ಆರಂಭ- 30 ಆಗಸ್ಟ್ 2025

ಇದನ್ನೂ ಓದಿ: Traffic Fine 50% Offer-ವಾಹನ ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಬಾಕಿ ದಂಡ ಪಾವತಿಗೆ ಶೇ 50% ರಿಯಾಯಿತಿ!

Gruhalakshmi Amount (10)

ಇದನ್ನೂ ಓದಿ: IDFC First Bank Scholarship-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ IDFC First ಬ್ಯಾಂಕ್ ನಿಂದ 1.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Gruhalakshmi Status Check Mobile App-ಈವರೆಗ ಜಮಾ ಅಗಿರುವ ಗೃಹಲಕ್ಷ್ಮಿ ಕಂತಿನ ವಿವರವನ್ನು ಪಡೆಯಲು ಮೊಬೈಲ್ ಅಪ್ಲಿಕೇಶನ್:

ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆ ಅಡಿಯಲ್ಲಿ ಈವರೆಗೆ ಒಟ್ಟು ಎಷ್ಟು ಕಂತಿನ ಹಣವನ್ನು ಜಮಾ ಮಾಡಲಾಗಿದೆ? ಮತ್ತು ಪ್ರತಿ ಕಂತಿನವಾರು ಹಣ ಜಮಾ ದಿನಾಂಕ, UTR ನಂಬರ್ ಮತ್ತು ಇನ್ನಿತರೆ ಅಗತ್ಯ ಮಾಹಿತಿಯನ್ನು ತಿಳಿಯಲು ರಾಜ್ಯ ಸರಕಾರವು "DBT Karnataka" ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ದಿಪಡಿಸಿದ್ದು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಕೆಳಗಿನ ವಿಧಾನವನ್ನು ಅನುಸರಿಸಿ ಈ ಮಾಹಿತಿಯನ್ನು ತಿಳಿಯಬಹುದು.

Step-1: ಫಲಾನುಭವಿಗಳು ಮೊದಲಿಗೆ ಈ Gruhalakshmi Status ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ "DBT Karnataka" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: BPL Card Cancellation- 3.65 ಲಕ್ಷ ಅನರ್ಹ BPL ಕಾರ್ಡ ರದ್ದು: ಸಿಎಂ ಸಿದ್ದರಾಮಯ್ಯ

Step-2: ಇದಾದ ಬಳಿಕ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ ನಂಬರ್ ಅನ್ನು ಬಳಕೆ ಮಾಡಿಕೊಂಡು ಈ ಅಪ್ಲಿಕೇಶನ್ ಅನ್ನು ಲಾಗಿನ್ ಅಗಲು ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಿ.

Step-3: ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಇದನ್ನು ಹಾಕಿ "DBT Karnataka" ಮೊಬೈಲ್ ಅಪ್ಲಿಕೇಶನ್ ಅನ್ನು ಲಾಗಿನ್ ಅಗಬೇಕು ಇಲ್ಲಿ ಮುಖಪುಟದಲ್ಲಿ ಪಾವತಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ "ಗೃಹಲಕ್ಷ್ಮಿ" ಎನ್ನುವ ಆಯ್ಕೆ ಗೋಚರಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿದರೆ ಈವರೆಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ತಿಂಗಳುವಾರು ಜಮಾ ಅಗಿರುವ ಹಣ ವಿವರ ತೋರಿಸುತ್ತದೆ.

Gruhalakshmi Scheme Website-ಇದರ ಬಗ್ಗೆ ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ಯೋಜನೆಯ ಅಧಿಕೃತ ಜಾಲತಾಣ-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: