Gruhalakshmi Pending Amount-ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ವರ್ಗಾವಣೆಗೆ ಡೇಟ್ ಫಿಕ್ಸ್!

May 7, 2025 | Siddesh
Gruhalakshmi Pending Amount-ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ವರ್ಗಾವಣೆಗೆ ಡೇಟ್ ಫಿಕ್ಸ್!
Share Now:

ಗೃಹಲಕ್ಷ್ಮಿ ಯೋಜನೆಯಡಿ(Gruhalakshmi amount)ಒಟ್ಟು ಮೂರು ತಿಂಗಳ ಹಣವನ್ನು ಬಿಡುಗಡೆ ಮಾಡುವುದನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದ್ದು ಇದರ ಕುರಿತು ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ.

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ(Gruhalaksmi Instalment)ಪ್ರತಿ ತಿಂಗಳು ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿಯ ಖಾತೆಗೆ ರೂ 2,000/- ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ ಆದರೆ ಕೆಲವು ತಾಂತ್ರಿಕ ಕಾರಣ ಮತ್ತು ರಾಜ್ಯ ಸರ್ಕಾರದಲ್ಲಿನ ಅನುದಾನದ ಕೊರತೆಯಿಂದಾಗಿ ಕಳೆದ ಮೂರು ತಿಂಗಳ ಹಣವು ಫಲಾನುಭವಿಗಳಿಗೆ ಜಮಾ ಆಗಿರುವುದಿಲ್ಲ.

ಇದನ್ನೂ ಓದಿ: Horticulture Training-ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ! ರೂ 1,750/- ಮಾಸಿಕ ಶಿಷ್ಯವೇತನ!

ಪ್ರಸ್ತುತ ಬಾಕಿ ಉಳಿದಿರುವ ಗೃಹಲಕ್ಷ್ಮಿ ಯೋಜನೆಯ(Gruhalakshmi Status)ಮೂರು ತಿಂಗಳ ಒಟ್ಟು 6,000/- ಹಣ ವರ್ಗಾವಣೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈಗಾಗಲೇ ಸಿಹಿ ಸುದ್ದಿಯನ್ನು ಪ್ರಕಟಿಸಿದ್ದು, ಇದರನ್ವಯ ಈ ತಿಂಗಳಲ್ಲಿ ಬಾಕಿ ಹಣ ಬಿಡುಗಡೆಗೊಳಿಸಲು ಸರ್ಕಾರ ಮುಂದಾಗಿದೆ.

ಈ ಅಂಕಣದಲ್ಲಿ ಗೃಹಲಕ್ಷ್ಮಿ ಯೋಜನೆಯ(Gruhalakshmi Hana)ಒಟ್ಟು ರೂ 6,000 /- ಬಾಕಿ ಹಣ ಯಾವಾಗ ಜಮಾ ಆಗುವ ಸಾಧ್ಯತೆ ಇದೆ? ಯಾರಿಗೆಲ್ಲ ಈ ಆರ್ಥಿಕ ನೆರವು ದೊರೆಯಲಿದೆ? ಇನ್ನಿತರೆ ಅಗತ್ಯ ಮತ್ತು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದ್ದು, ಮಾಹಿತಿಯು ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕಾರಿ.

ಇದನ್ನೂ ಓದಿ: Morarji College Admission-ಉಚಿತ ಮೊರಾರ್ಜಿ ಪಿಯು ವಸತಿ ಕಾಲೇಜು ಪ್ರವೇಶಕ್ಕೆ ಅರ್ಜಿ ಆಹ್ವಾನ!

gruhalakshmi (18)

Gruhalakshmi Pending Amount-ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ವರ್ಗಾವಣೆ ಡೇಟ್ ಫಿಕ್ಸ್:

ಗೃಹಲಕ್ಷ್ಮಿ ಯೋಜನೆಯಡಿ ಇಲ್ಲಿಯವರಿಗೆ ಸಂದಾಯ ಮಾಡದೇ ಹಾಗೆಯೇ ಬಾಕಿ ಉಳಿಸಿಕೊಂಡಿರುವ ಒಟ್ಟು 3 ತಿಂಗಳ ರೂ 6,000/- ಹಣವನ್ನು ಇದೆ ತಿಂಗಳು ಅಂದರೆ ಮೇ -2025 ತಿಂಗಳಲ್ಲಿ ಅರ್ಹ ಫಲಾನುಭವಿಗಳ ಖಾತೆಗೆ DBT ಮೂಲಕ ಹಂತ ಹಂತವಾಗಿ ಅಂದರೆ ಮೇ-2025 ಕೊನೆಯ ವಾರದ ಒಳಗಾಗಿ ಒಂದೊಂದು ಕಂತುಗಳಲ್ಲಿ ರೂ 2,000/- ದಂತೆ ಹಣ ಜಮಾ ಆಗುವ ಸಾಧ್ಯತೆ ಇದೆ.

Gruhalakshmi Pending Amount release Date-ಯಾವೆಲ್ಲಾ ತಿಂಗಳ ಹಣ ಬಾಕಿ?

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ರೂ 2,000/ ಹಣವನ್ನು ರೇಷನ್ ಕಾರ್ಡ್ ಅನ್ನು ಹೊಂದಿರುವ ಕುಟುಂಬದ ಯಜಮಾನಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಇದರಂತೆ ಜನವರಿ-2025, ಫೆಬ್ರವರಿ-2025, ಮಾರ್ಚ್-2025 ಒಟ್ಟು 6,000/- ಆರ್ಥಿಕ ನೆರವನ್ನು ಅರ್ಹ ಫಲಾನುಭವಿಗಳಿಗೆ ಜಮಾ ಮಾಡುವುದು ಬಾಕಿ ಉಳಿದುಕೊಂಡಿರುತ್ತದೆ.

ಇದನ್ನೂ ಓದಿ: Free Residential School-ಉಚಿತ ವಸತಿ ಶಾಲೆಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ!

Karnataka Gruhalakshmi Yojane-ಗೃಹಲಕ್ಷ್ಮಿ ಯೋಜನೆಗೆ 2 ವರ್ಷ:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಮೇ-2025 ಕ್ಕೆ ಎರಡು ವರ್ಷ ಪೂರ್ಣಗೊಳಿಸುತ್ತಿದ್ದು ಈ ಸಮಯದಲ್ಲಿ ಈ ಯೋಜನೆಯ ಎಲ್ಲ ಬಾಕಿ ಹಣವನ್ನು ಜಮಾ ಮಾಡಲು ರಾಜ್ಯ ಸರ್ಕಾರದ ಆಡಳಿತ ಮಂಡಳಿಯು ಸಂಬಂಧಪಟ್ಟ ಇಲಾಖೆಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕೃತವಾಗಿ ಸೂಚನೆಯನ್ನು ನೀಡಲಾಗಿದೆ.

Gruhalakshmi Status Check-ಗೃಹಲಕ್ಷ್ಮಿ ಹಣ ವರ್ಗಾವಣೆ ಸ್ಟೇಟಸ್ ಚೆಕ್ ಮಾಡುವ ವಿಧಾನ ಹೇಗೆ?

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣವನ್ನು ಪಡೆಯುತ್ತಿರುವ ಫಲಾನುಭವಿಗಳು ಈ Gruhalakshmi Status Check ಲಿಂಕ್ ಮೇಲೆ ಕ್ಲಿಕೆ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಅಧಿಕೃತ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿದಾರರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಮೊಬೈಲ್ ನಂಬರ್ ಗೆ ಬರುವ ಓಟಿಪಿ ಅನ್ನು ಹಾಕಿ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಂಡು ಲಾಗಿನ್ ಆಗಿ "ಪಾವತಿ ಸ್ಥಿತಿ"ಬಟನ್ ಮೇಲೆ ಕ್ಲಿಕ್ ಮಾಡಿ ಪ್ರತಿ ತಿಂಗಳು ಜಮಾ ಆಗಿರುವ ಹಣದ ಸಂಪೂರ್ಣ ವಿವರವನ್ನು ಪಡೆಯಬಹುದು.

ಇದನ್ನೂ ಓದಿ: Raagi Kharidi-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಮಹತ್ವದ ಬದಲಾವಣೆ!

Gruhalakshmi Scheme Eligibility- ಯಾರಿಗೆಲ್ಲ ಸಿಗಲಿದೆ ಈ ಯೋಜನೆಯ ಪ್ರಯೋಜನ?

ಈಗಾಗಲೇ ಅರ್ಜಿ ಸಲ್ಲಿಸಿ ಈ ಯೋಜನೆಯಡಿಯಲ್ಲಿ ಹಣವನ್ನು ಪಡೆಯುತ್ತಿರುವವರಿಗೆ ಈ ತಿಂಗಳ ಹಣ ನೇರ ನಗದು ವರ್ಗಾವಣೆಯ ಮೂಲಕ ಜಮಾ ಅಗಲಿದೆ.

Gruhalakshmi Application-ಪ್ರಸ್ತುತ ಅರ್ಜಿ ಸಲ್ಲಿಸಲು ಅವಕಾಶವಿದೆಯೇ?

ಗೃಹಲಕ್ಷ್ಮಿ ಯೋನೆಯಡಿ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಆರ್ಥಿಕ ನೆರವು ಪಡೆಯಲು ಅವಕಾಶವಿದ್ದು ಇದರನ್ವಯ ಇಲ್ಲಿಯವರಿಗೆ ಅರ್ಹರಿದ್ದು ಅರ್ಜಿಯನ್ನು ಸಲ್ಲಿಸಿದ ನಾಗರಿಕರು ಕೂಡಲೇ ನಿಮ್ಮ ಹತ್ತಿರದ ಗ್ರಾಮ on/ಕರ್ನಾಟಕ ಒನ್ ಕೇಂದ್ರವನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Yuvanidhi Yojane-ನಿರುದ್ಯೋಗಿಗಳು ಪ್ರತಿ ತಿಂಗಳು ರೂ 3,000/- ಪಡೆಯಲು ಸ್ವಯಂ ಘೋಷಣೆ ಸಲ್ಲಿಸಲು ಅವಕಾಶ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: