Gruhalakshmi status check: ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದ್ದರು, ಗೃಹಲಕ್ಷ್ಮಿ ಹಣ ಜಮಾ ಆಗದಿದ್ದರೆ ಏನು ಮಾಡಬೇಕು?

September 1, 2023 | Siddesh

ಗೃಹಲಕ್ಷ್ಮಿ ಯೋಜನೆಯ ಮೊದಲನೆ ಕಂತಿನ ಹಣವನ್ನು 30 ಆಗಸ್ಟ್ 2023 ಅಧಿಕೃತವಾಗಿ ಮೈಸೂರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಅರ್ಜಿ ಸಲ್ಲಿಸಿದ ಅರ್ಹ ಒಟ್ಟು 1.10 ಕೋಟಿ ಪಡಿತರ ಚೀಟಿಯ ಯಜಮಾನಿಯರಿಗೆ ಮೊದಲನೆ ಕಂತಿನ ಹಣವನ್ನು ವರ್ಗಾಹಿಸಲಾಗಿದೆ.

ಅದರೆ ಅರ್ಜಿ ಸಲ್ಲಿಸಿದ ಅನೇಕ ಜನರು ನಮಗೆ ಇನ್ನೂ ಮೊದಲನೆ ಕಂತಿನ 2,000 ರೂ ಜಮಾ ಅಗಿರುವುದಿಲ್ಲ ಎಂದು ಹೆಚ್ಚು ಹೆಚ್ಚು ಪ್ರತಿಕ್ರಿಯೆಗಳನ್ನು ನಮ್ಮ ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸಿದ್ದರಿಂದ ಈ ಪ್ರಶ್ನೆಗೆ ಉತ್ತರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಮನೆಯ ಯಜಮಾನಿಯನ್ನು ಅರ್ಥಿಕವಾಗಿ ಸ್ವಾವಲಂಬನೆಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ರಾಜ್ಯ ಸರಕಾರ ಅನುಷ್ಥಾನಗೊಳಿಸಲಾಗುತ್ತದೆ. ಈ ಅರ್ಥಿಕ ವರ್ಷಕ್ಕೆ 17,500 ಕೋಟಿಯನ್ನು ಮೀಸಲಿಡಲಾಗಿದೆ.

ಅದಕ್ಕಿಂತ ಮೊದಲನೆಯದಾಗಿ ನೀವು ತಿಳಿಯಬೇಕಾದ ವಿಷಯ ಹೀಗಿದೆ ಲಕ್ಷ್ಮೀ ಹೆಬ್ಬಾಲ್ಕರ್ ರವರ ಇತ್ತೀಚಿನ ಸುದ್ದಿಗೋಷ್ಠಿ ಪ್ರಕಾರ 30 ಆಗಸ್ಟ್ 2023 ರಂದು ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮೊದಲನೆ ಕಂತಿನ ಹಣ ಜಮಾ ಅಗದಿದ್ದರೆ ಅಂತವರು ಗೊಂದಲಕ್ಕೆ ಒಳಗಾಗುವುದು ಬೇಡ ಏಕೆಂದರೆ ಮೊದಲನೆ ಹಂತದಲ್ಲಿ ಹಣ ವರ್ಗಾವಣೆ ಅಗದಿರುವ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಎರಡನೇ ಹಂತದಲ್ಲಿ ಒಂದ ವಾರದ ಒಳಗಾಗಿ ಉಳಿದ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ ಹಣ ವರ್ಗಾಹಿಸಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನು ಹೊರತುಪಡಿಸಿ ಒಮ್ಮೆಈ ಕೆಳಗಿನ ವಿಧಾನ ಅನುಸರಿಸಿ  ನಿಮ್ಮ ಅರ್ಜಿ ಸ್ಥಿತಿ(Gruhalakshmi status check) ಕುರಿತು ಒಂದಿಷ್ಟು ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ. 

ಇದನ್ನೂ ಓದಿ: Ration Card update: ಇಂದಿನಿಂದ ರೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ! ಯಾವೆಲ್ಲ ದಾಖಲಾತಿಗಳು  ಬೇಕಾಗುತ್ತದೆ?

1)ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆ ಅಗಿದಿಯೋ? ಇಲ್ಲವೋ ಎಂದು ಮೊದಲು ಖಚಿತಪಡಿಸಿಕೊಳ್ಳಿ.

ಮೊದಲಿಗೆ ನಿಮ್ಮ ರೇಷನ್ ಕಾರ್ಡನ 12 ಅಂಕಿಯ RC number ಅನ್ನು ಗೃಹಲಕ್ಷ್ಮಿ ಯೋಜನೆಯೆ ಈ 8147500500 ಸಹಾಯವಾಣಿ ಸಂಖ್ಯೆಗೆ ಸಂದೇಶವನ್ನು ಕಳುಹಿಸಿ, ನಿಮ್ಮ ರೇಷನ್ ಕಾರ್ಡನ ನಂಬರ್ ಅನ್ನು ಸಂದೇಶ ಕಳುಹಿಸಿದ ನಂತರ ಮರು ಸಂದೇಶ "ನಿಮ್ಮ ಗೃಹಲಕ್ಷ್ಮಿಯೋಜನೆಯ ಅರ್ಜಿ ಸಂಖ್ಯೆ GL12020026#### ಅನ್ನು ಯಶಸ್ವಿಯಾಗಿ ಸಲ್ಲಿಸಲಾಗಿದೆ.- ಕರ್ನಾಟಕ ಸರ್ಕಾರ" ಈ ರೀತಿ ಬಂದರೆ ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದೆ ಎಂದು ಅಥವಾ "ನಿಮ್ಮ ಗೃಹಲಕ್ಷ್ಮಿಯೋಜನೆಯ ಅರ್ಜಿ ಸಲ್ಲಿಕೆ ಬಾಕಿಯಿದೆ, ದಯವಿಟ್ಟು ಹತ್ತಿರದ ಬೆಂಗಳೂರು  ಒನ್/ ಕರ್ನಾಟಕ ಒನ್ /ಗ್ರಾಮ ಒನ್ /ಬಾಪೂಜಿ ಸೇವಾ ಕೇಂದ್ರ ಗೆ ಭೇಟಿ ನೀಡಿ.- ಕರ್ನಾಟಕ ಸರ್ಕಾರ" ಈ ರೀತಿ ಬಂದರೆ ಅರ್ಜಿ ಸಲ್ಲಿಕೆಯಾಗಿಲ್ಲವೆಂದು.

ಅರ್ಜಿ ಸಲ್ಲಿಕೆಯಾಗದವರು ಅಧಾರ್ ಕಾರ್ಡ, ರೇಷನ್ ಕಾರ್ಡ, ಮೊಬೈಲ್ ಸಮೇತ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಮುಂದಿನ ಕಂತಿನ ಹಣವನ್ನು ಪಡೆಯಬವುದು.

2)ನಿಮ್ಮ ಬ್ಯಾಂಕ್ ಆಧಾರ್ ಲಿಂಕ್ ಅಗಿರುವುದನ್ನು ತಿಳಿಯಿರಿ.

https://play.google.com/store ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ DBT karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು "Seeding Status of Aadhar in bank account" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಕಾರ್ಡ ಲಿಂಕ್ ಅಗಿರುವುದನು ಖಚಿತಪಡಿಸಿಕೊಳ್ಳಿ.

ಒಂದು ವೇಳೆ ನೀವು ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಖಾತೆ ವಿವರ ಕೊಟ್ಟಿದ್ದರೆ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ ಇರುವುದು ಕಡ್ದಾಯವಾಗಿರುವುದಿಲ್ಲ.

ಈ ಮೇಲಿನ ವಿಧಾನ ಅನುಸರಿಸಿ ಚೆಕ್ ಮಾಡಿದಾಗ ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ ಇಲ್ಲ ಎಂದು ಸಂದೇಶ ತೋರಿಸಿದರೆ ನಿಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಗೆ ಭೇಟಿ ಮಾಡಿ "NPCI link" ಮಾಡಿಕೊಳ್ಳಿ.

3)ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ:

ಕೆಲವೊಮ್ಮೆ ನಿಮ್ಮ ಖಾತೆಗೆ ಹಣ ಜಮಾ ಅದರು ನಿಮ್ಮ ಬ್ಯಾಂಕ್ ವತಿಯಿಂದ ಸಂದೇಶ ಬರುವುದಿಲ್ಲ ಅದ್ದರಿಂದ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಬ್ಯಾಂಕ್ ಶಾಖೆಗೆ ಭೇಟಿ ನೀಡದಯೇ ಈ ಲಿಂಕ್ https://krushikamitra.com/Bank-balance-check-mobil-numbers ಮೇಲೆ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವ ಸಹಾಯವಾಣಿ ಸಂಖ್ಯೆ ಪಡೆದು ಗೃಹಲಕ್ಷ್ಮಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳಬವುದು.

4)ಅನ್ನಬಾಗ್ಯ(annabhagya status check) ಯೋಜನೆಯ ಹಣ ಜಮಾ ಅಗಿದರೆ ಈ ಹಣವು ಜಮಾ ಅಗುತ್ತದೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಸಹಾಯಧನ ನಿಮ್ಮ ಖಾತೆಗೆ ಈ ಹಿಂದೆ ವರ್ಗಾವಣೆ ಅಗಿದರೆ ಅಂತಹ ಫಲಾನುಭವಿಗಳಿಗೆ ಈ ಯೋಜನೆಯ ಹಣವು ಸಹ ವರ್ಗಾವಣೆ ಅಗುತ್ತದೆ. ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿರುವುದನ್ನು ಚೆಕ್ ಮಾಡಲು ಈ ಲಿಂಕ್ https://krushikamitra.com/annabhagya-DBT-amount ಮೇಲೆ ಕ್ಲಿಕ್ ಮಾಡಿ.

5)ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಪಡಿತರ ಚೀಟಿಯ ಕುಟುಂಬದ ಯಜಮಾನಿಯ ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದರೆ ಆ ಅರ್ಜಿ ಇತ್ಯರ್ಥವಾಗುವವರೆಗೆ ಈಗ ಸಲ್ಲಿಸಿರುವ ಅರ್ಜಿದಾರರಿಗೆ ಈ ಯೋಜನೆಯ ಮೊದಲನೆ ಕಂತಿನ ಹಣ ವರ್ಗಾವಣೆ ಅಗುವುದಿಲ್ಲ.

ಇಲ್ಲಿಯವರೆಗೂ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡುವ ಅಧಿಕೃತ ಲಿಂಕ್ ಅನ್ನು ಸರಕಾರದಿಂದ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಅಂಕಣಗಳು:

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

Gruha Lakshmi : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: