Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeGovt SchemesHorticulture Department-ತೋಟಗಾರಿಕೆ ಇಲಾಖೆಯಿಂದ ಈ ಯೋಜನೆಯಡಿ ಹಲವು ಸೌಲಭ್ಯ! ಇಲ್ಲಿದೆ ಅರ್ಜಿ ಸಲ್ಲಿಕೆ ವಿವರ!

Horticulture Department-ತೋಟಗಾರಿಕೆ ಇಲಾಖೆಯಿಂದ ಈ ಯೋಜನೆಯಡಿ ಹಲವು ಸೌಲಭ್ಯ! ಇಲ್ಲಿದೆ ಅರ್ಜಿ ಸಲ್ಲಿಕೆ ವಿವರ!

ನಮ್ಮ ದೇಶದಲ್ಲಿ ಕರ್ನಾಟಕ ರಾಜ್ಯವು ತೋಟಗಾರಿಕೆ ಬೆಳೆಗಳನ್ನು(Horticulture Department) ಬೆಳೆಯುವುದರಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು, ಈ ಕ್ಷೇತ್ರವು ದಿನೇ ದಿನೇ ಹೆಚ್ಚುತ್ತಿದ್ದು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಗೆ ಉತೇಜನ ನೀಡಲು ಇಲಾಖೆಯಿಂದ ವಿವಿಧ ಯೋಜನೆಯಡಿ ಸಬ್ಸಿಡಿ ನೀಡಲಾಗುತ್ತದೆ ಇದರಲ್ಲಿ ಇಂದು ಈ ಲೇಖನದಲ್ಲಿ ಎರಡು ಯೋಜನೆಗಳ ಕುರಿತು ಇಲ್ಲಿ ವಿವರಿಸಲಾಗಿದೆ.

ಯಾವೆಲ್ಲ ಯೋಜನೆಯಡಿ ರೈತರು ನರ್ಸರಿ, ತರಕಾರಿ ಬೀಜೋತ್ಪಾದನೆ, ಹೊಸ ತೋಟ ನಿರ್ಮಾಣ,ಕೃಷಿ ಹೊಂಡ ಸೇರಿದಂತೆ ಹಲವು ಸೌಲಭ್ಯ ಪಡೆಯಲು ಸಹಾಯಧನ ಪಡೆಯಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇತರೆ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಕರ್ನಾಟಕ ಸರ್ಕಾರ ತೋಟಗಾರಿಕೆ ಇಲಾಖೆ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ (MIDH) ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM)ಯೋಜನೆಯ ಕಾರ್ಯಕ್ರಮಗಳು:

ಇದನ್ನೂ ಓದಿ: Sukanya Samriddhi Yojana-2024: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ತಪ್ಪದೇ ಈ ಕೆಲಸ ಮಾಡಿ!

ಯಾವೆಲ್ಲ ಸೌಲಭ್ಯಗಳಿಗೆ ಅರ್ಥಿಕ ಸಹಾಯಧನ ಪಡೆಯಲು ಅವಕಾಶವಿದೆ:

1) ಸಸ್ಯಾಗಾರಗಳು (Nurseries) .
2) ಹೊಸ ಅಂಗಾಂಶ ಕೃಷಿ ಘಟಕ ಸ್ಥಾಪನೆ (Establishment of New Tissue Culture Unit).
3) ತರಕಾರಿ ಬೀಜೋತ್ಪಾದನೆ (Seed production for vegetables).
4) ಹೊಸ ತೋಟಗಳ ಸ್ಥಾಪನೆ.
5) ಹಳೆಯ ತೋಟಗಳ ಪುನಃಶ್ಚೇತನ.
6) ಅಣಬೆ ಕೃಷಿ (Mushrooms Production).
7) ನೀರಿನ ಮೂಲಗಳ ನಿರ್ಮಾಣ (Creation of Water resource).
8) ಸಂರಕ್ಷಿತ ಬೇಸಾಯ (Protected Cultivation).
9) ಮಾನವ ಸಂಪನ್ಮೂಲ ಅಭಿವೃದ್ಧಿ.
10) ಕೊಲ್ಲೋತ್ತರ ನಿರ್ವಹಣೆ (PHM).
11) ಶೀಥಲಗೃಹ.
12) ಮಾರುಕಟ್ಟೆಗಳಲ್ಲಿ ಮೂಲಭೂಸೌಕರ್ಯಗಳ ಸ್ಥಾಪನೆ.

ಇದನ್ನೂ ಓದಿ: RGEP Program-ರಾಜೀವ್ ಗಾಂಧಿ ಉದ್ಯಮಶೀಲತೆ ಕಾರ್ಯಕ್ರಮದಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಆಸಕ್ತ ಅರ್ಹ ರೈತರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಘಟಕವಾರು ಸಹಾಯಧನ ವಿವರ ಹೀಗಿದೆ:

ರೈತರಿಗೆ ಉತ್ತಮ ಗುಣಮಟ್ಟದ ಕಸಿ/ಸಸಿ ಗಿಡಗಳನ್ನು (Good quality planting material) ಒದಗಿಸುವ ಸಲುವಾಗಿ ನೀಡುತ್ತಿರುವ ಸೌಲಭ್ಯಗಳು.

1) ಸಸ್ಯಾಗಾರಗಳು (Nurseries) :

4 ಹೆಕ್ಟೇರ್ ಪ್ರದೇಶದಲ್ಲಿ ಹೈಟೆಕ್ ಮಾದರಿಯ ಸಸ್ಯಾಗಾರವನ್ನು ಸ್ಥಾಪಿಸಿ ವಾರ್ಷಿಕ ಕನಿಷ್ಠ 2 ಲಕ್ಷ ಕಸಿ ಗಿಡಗಳನ್ನು ಉತ್ಪಾದಿಸಲು ಶೇ.40 ರಂತೆ ರೂ.40 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಹೆಕ್ಟೇರ್ ಪ್ರದೇಶದಲ್ಲಿ ಸಣ್ಣ ಸಸ್ಯಾಗಾರವನ್ನು ಸ್ಥಾಪಿಸಿ, ವಾರ್ಷಿಕ ಕನಿಷ್ಠ 50,000 ಕಸಿ ಗಿಡಗಳನ್ನು ಉತ್ಪಾದಿಸಲು ಶೇ.50 ರಂತೆ ಗರಿಷ್ಠ ರೂ.7.50 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ:  PM kisan 18th Installment- ಕೇಂದ್ರದಿಂದ ಪಿ ಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆ ದಿನಾಂಕ ಪ್ರಕಟ!

2) ಹೊಸ ಅಂಗಾಂಶ ಕೃಷಿ ಘಟಕ ಸ್ಥಾಪನೆ (Establishment of New Tissue Culture Unit):

ಉತ್ತಮ ಗುಣಮಟ್ಟ ಹಾಗೂ ರೋಗ ನಿರೋಧಕಶಕ್ತಿ ಹೊಂದಿರುವ, ವಾರ್ಷಿಕ ಕನಿಷ್ಠ 25 ಲಕ್ಷ ಅಂಗಾಂಶ ಕೃಷಿ ಸಸಿಗಳನ್ನು ಉತ್ಪಾದಿಸಲು ಅಗತ್ಯವಾದ ಅಂಗಾಂಶ ಕೃಷಿ ಘಟಕ ಸ್ಥಾಪಿಸಲು ಶೇ.40ರಂತೆ ಗರಿಷ್ಠ 1.0 ಕೋಟಿ ವರೆಗೆ ಸಹಾಯಧನವನ್ನು ನೀಡಲು ಅವಕಾಶವಿರುತ್ತದೆ.

3) ತರಕಾರಿ ಬೀಜೋತ್ಪಾದನೆ (Seed production for vegetables):

ಗರಿಷ್ಠ 5 ಹೆಕ್ಟೇರ್ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ತರಕಾರಿ ಬೆಳೆಗಳ ಬೀಜೋತ್ಪಾದನೆ ಮಾಡಲು ವೆಚ್ಚದ ಶೇ.35ರಂತೆ ಪ್ರತಿ ಹೆಕ್ಟೇರ್‍ಗೆ ರೂ.0.1225 ಲಕ್ಷಗಳಿಂದ ಗರಿಷ್ಠ ರೂ.0.525 ಲಕ್ಷಗಳವರೆಗೆ ಸಹಾಯಧನವನ್ನು ನೀಡಲು ಅವಕಾಶವಿರುತ್ತದೆ. ತೋಟಗಾರಿಕೆ ಬೆಳೆಗಳ ಬೀಜ ಸಂಸ್ಕರಣೆಗಾಗಿ ಮೂಲಭೂತಸೌಕರ್ಯ ಅಭಿವೃದ್ಧಿ (Seed Infrastructure for processing, packing, storage etc). ತೋಟಗಾರಿಕೆ ಬೆಳೆಗಳ ಬಿತ್ತನೆ ಬೀಜಗಳ ಸಂಸ್ಕರಣೆ, ವಿಂಗಡಣೆ ಮತ್ತು ಗುಣಮಟ್ಟದ ಅಭಿವೃದ್ಧಿಗಾಗಿ ಬೀಜ ಸಂಸ್ಕರಣೆ ಘಟಕ ಮತ್ತು ಮೂಲಭೂತಸೌಕರ್ಯಗಳನ್ನು ಸ್ಥಾಪಿಸಲು ಶೇ.50ರಂತೆ ಗರಿಷ್ಠ ರೂ.100 ಲಕ್ಷಗಳವರೆಗೆ ಸಹಾಯಧನವನ್ನು ನೀಡಲು ಅವಕಾಶವಿರುತ್ತದೆ.

4) ಹೊಸ ತೋಟಗಳ ಸ್ಥಾಪನೆ:

ಬಹುವಾರ್ಷಿಕ ಹಣ್ಣಿನ ಬೆಳೆಗಳಾದ ದ್ರಾಕ್ಷಿ, ಮಾವು, ದಾಳಿಂಬೆ, ನಿಂಬೆ, ಕಿತ್ತಲೆ, ಮೂಸಂಬಿ, ಸೀಬೆ, ಬಾಳೆ, ಅನಾನಸ್, ಮುಂತಾದ ಹಣ್ಣಿನ ಬೆಳೆಗಳನ್ನು ವಿವಿಧ ಅಂತರಗಳಲ್ಲಿ ಹೊಸದಾಗಿ ಬೆಳೆದು ಪ್ರದೇಶ ವಿಸ್ತರಣೆ ಮಾಡಲು ಮತ್ತು ಅವುಗಳ ನಿರ್ವಹಣೆಗಾಗಿ ಪ್ರತಿ ಹೆಕ್ಟೇರ್‍ಗೆ ರೂ.0.10 ಲಕ್ಷಗಳಿಂದ ಗರಿಷ್ಠ ರೂ.0.50 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಪುಷ್ಪಗಳ ಬೆಳೆಗಳಲ್ಲಿ ಕತ್ತರಿಸಿದ ಪುಷ್ಪಗಳು, ಗಡ್ಡೆ ಜಾತಿಯ ಪುಷ್ಪಗಳು ಮತ್ತು ಬಿಡಿ ಪುಷ್ಪಗಳ ಪ್ರದೇಶ ವಿಸ್ತರಣೆಗಾಗಿ ಪ್ರತಿ ಹೆಕ್ಟೇರ್‍ಗೆ ರೂ.0.10 ಲಕ್ಷಗಳಿಂದ ಗರಿಷ್ಠ ರೂ.0.40 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಸಾಂಬಾರು ಬೆಳೆಗಳು, ಸುಗಂಧಿತ ಬೆಳೆಗಳು ಮತ್ತು ತೋಟದ ಬೆಳೆಗಳ ಪ್ರದೇಶ ವಿಸ್ತರಣೆಗಾಗಿ ಪ್ರತಿ ಹೆಕ್ಟೇರ್‍ಗೆ ರೂ.0.12 ಲಕ್ಷಗಳಿಂದ ಗರಿಷ್ಠ ರೂ.0.40 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

5) ಹಳೆಯ ತೋಟಗಳ ಪುನಃಶ್ಚೇತನ:

ಹಳೆಯ ಹಾಗೂ ಅನುತ್ಪಾದಕ ಮಾವು, ನಿಂಬೆ, ಮೂಸಂಬಿ, ಗೇರು ಮತ್ತು ಕಾಳು ಮೆಣಸು ಬೆಳೆಗಳ ತೋಟಗಳನ್ನು ಪುನಃಶ್ವೇತನಗೊಳಿಸುವ ಸಲುವಾಗಿ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ರೂ.0.40 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

6) ಅಣಬೆ ಕೃಷಿ (Mushrooms Production):

ಅಣಬೆ ಕೃಷಿಯನ್ನು ಉತ್ತೇಜಿಸಲು ಅಣಬೆ ಉತ್ಪಾದನಾ ಘಟಕ, Spawn ತಯಾರಿಕಾ ಘಟಕ ಹಾಗೂ ಕಾಂಪೆÇೀಸ್ಟ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ರೂ.6 ಲಕ್ಷಗಳಿಂದ ಗರಿಷ್ಠ ರೂ.8 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

7) ನೀರಿನ ಮೂಲಗಳ ನಿರ್ಮಾಣ (Creation of Water resource):

ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ವೈಯಕ್ತಿಕ/ಸಮುದಾಯ ಕೃಷಿ ಹೊಂಡಗಳ ನಿರ್ಮಾಣಕ್ಕೆ ರೂ.0.75 ಲಕ್ಷಗಳಿಂದ ಗರಿಷ್ಠ ರೂ.4 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

8) ಸಂರಕ್ಷಿತ ಬೇಸಾಯ (Protected Cultivation):

ಸಂರಕ್ಷಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿ ಉತ್ಕøಷ್ಟ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿವಿಧ ವಿನ್ಯಾಸಗಳ ಗರಿಷ್ಠ 4.000 ಚ.ಮೀ. ಹಸಿರು ಮನೆ (Green House) ಮತ್ತು ನೆರಳು ಪರದೆ (Shಚಿಜe ಓeಣ) ಘಟಕಗಳ ನಿರ್ಮಾಣಕ್ಕಾಗಿ ಶೇ.50 ರಂತೆ ರೂ.7.5 ಲಕ್ಷಗಳಿಂದ ಗರಿಷ್ಠ ರೂ.16.00 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ. ಟಿಲ್ಲರ್‍ಗಳನ್ನು ಖರೀದಿಸಲು ರೈತರಿಗೆ ರೂ.12,000/- ಗಳಿಂದ ಗರಿಷ್ಠ ರೂ.1.00 ಲಕ್ಷಗಳವರೆಗೆ ಸಹಾಯಧನವನ್ನು ನೀಡಲು ಅವಕಾಶವಿರುತ್ತದೆ.

9) ಮಾನವ ಸಂಪನ್ಮೂಲ ಅಭಿವೃದ್ಧಿ:

ತೋಟಗಾರಿಕೆ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ನೂತನ ಆವಿμÁ್ಕರಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ಪಡೆಯಲು ತೋಟಗಾರಿಕೆ ಸಂಶೋಧನಾ ಕೇಂದ್ರಗಳು ಮತ್ತು ಪ್ರಗತಿಪರ ರೈತರ ತಾಕುಗಳಿಗೆ ಭೇಟಿ ನೀಡಲು ಮತ್ತು ರೈತರಿಗೆ ಈ ಬಗ್ಗೆ ಸೂಕ್ತ ತರಬೇತಿ ನೀಡಲು ಪ್ರತಿಯೊಬ್ಬರಿಗೆ ಪ್ರತಿ ದಿನದ ಕಾರ್ಯಕ್ರಮಕ್ಕೆ ರೂ.1.000/-ಗಳಿಂದ ರೂ.1.500/-ಗಳವರೆಗೆ ವೆಚ್ಚ ಭರಿಸಲು ಅವಕಾಶವಿರುತ್ತದೆ.

10) ಕೊಲ್ಲೋತ್ತರ ನಿರ್ವಹಣೆ (PHM):

ಹಣ್ಣು, ತರಕಾರಿ ಹಾಗೂ ಹೂವಿನ ಬೆಳೆಗಳು ಬಹು ಬೇಗನೆ ಹಾಳಾಗುವ ಉತ್ಪನ್ನಗಳಾಗಿದ್ದು, ಇವುಗಳ ಸಮರ್ಪಕ ನಿರ್ವಹಣೆಗಾಗಿ ವಿವಿಧ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಿ ತೋಟಗಾರಿಕೆ ಉತ್ಪನ್ನಗಳ ನಿರ್ವಹಣೆ, ವಿಂಗಡಣೆ, ಶೇಖರಣೆ ಮತ್ತು ಮೌಲ್ಯವರ್ಧನೆ ಮಾಡುವುದರೊಂದಿಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸಲು ಸಹಾಯಧನವನ್ನು ನೀಡಲಾಗುತ್ತಿದೆ.

ರೈತರು ತಮ್ಮ ಜಮೀನಿನಲ್ಲಿ ಪ್ಯಾಕ್ ಹೌಸ್ ನಿರ್ಮಾಣ ಮಾಡಲು ಪ್ರತಿ ಘಟಕಕ್ಕೆ ಗರಿಷ್ಠ ರೂ.2 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ತೋಟಗಾರಿಕೆ ಉತ್ಪನ್ನಗಳನ್ನು ಕಟಾವಿನಿಂದ ಪ್ಯಾಕಿಂಗ್‍ರೆಗೆ ನಿರ್ವಹಣೆ ಮಾಡಲು ಅಗತ್ಯವಾದ ಇಂಟಿಗ್ರೇಟೆಡ್ ಪ್ಯಾಕ್ ಹೌಸ್ ಘಟಕವನ್ನು ಸ್ಥಾಪಿಸಲು ಗರಿಷ್ಠ ರೂ.17.50 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ. ಕಟಾವಿನ ನಂತರ ತೋಟಗಾರಿಕೆ ಬೆಳೆಗಳಲ್ಲಿರುವ ಕ್ಷೇತ್ರಮಟ್ಟದ ತಾಪಮಾನವನ್ನು ಕಡಿಮೆಗೊಳಿಸಲು ಅಗತ್ಯವಾದ Pಡಿe-ಛಿooಟiಟಿg ಘಟಕ ಸ್ಥಾಪಿಸಲು ಪ್ರತಿ ಘಟಕಕ್ಕೆ ಗರಿಷ್ಠ ರೂ.8.75 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ.

11) ಶೀಥಲಗೃಹ:

ತೋಟಗಾರಿಕೆ ಉತ್ಪನ್ನಗಳನ್ನು ಕೆಡದಂತೆ ದೀರ್ಘಕಾಲ ಸಂಗ್ರಹಿಸಿಡಲು ಅಗತ್ಯವಾದ ಶೀಥಲಗೃಹ (ಗರಿಷ್ಠ 5000 ಮೆಟ್ರಿಕ್ ಟನ್ ಶೇಖರಣಾ ಸಾಮಥ್ರ್ಯ ಹೊಂದಿರುವ) ನಿರ್ಮಾಣಕ್ಕೆ ಶೇ.35 ರಂತೆ ರೂ.140 ಲಕ್ಷಗಳಿಂದ ಗರಿಷ್ಠ ರೂ.175 ಲಕ್ಷಗಳವರೆಗೆ ಸಹಾಯಧನ ನೀಡಲು ಅವಕಾಶವಿರುತ್ತದೆ.

ಶೇಖರಿಸಿದ ತೋಟಗಾರಿಕೆ ಉತ್ಪನ್ನಗಳು ಕೆಡದಂತೆ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು 4 ರಿಂದ 9 ಮೆಟ್ರಿಕ್ ಟನ್ ಸಾಮಥ್ರ್ಯದ ಶೀಥಲವಾಹನ ಖರೀದಿಗಾಗಿ ಶೇ.35 ರಂತೆ ಗರಿಷ್ಠ ರೂ.9.10 ಲಕ್ಷಗಳ ಸಹಾಯಧನವನ್ನು ನೀಡಲಾಗುತ್ತದೆ. ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮಾಡಲು ಅಗತ್ಯವಾದ ಪ್ರಾಥಮಿಕ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಗರಿಷ್ಠ ರೂ.10 ಲಕ್ಷಗಳ ಸಹಾಯಧನ ನೀಡಲು ಅವಕಾಶವಿರುತ್ತದೆ. ಮಾವು ಮತ್ತು ಬಾಳೆಹಣ್ಣುಗಳನ್ನು ಕಟಾವಿನ ನಂತರ ವೈಜ್ಞಾನಿಕವಾಗಿ ಮಾಗಿಸಿ ಮಾರುಕಟ್ಟೆಗೆ ಸರಬರಾಜು ಮಾಡುವ ಸಲುವಾಗಿ ಗರಿಷ್ಠ 300 ಮೆಟ್ರಿಕ್ ಟನ್ ಸಾಮಥ್ರ್ಯದ ಹಣ್ಣು ಮಾಗಿಸುವ ಘಟಕದ ನಿರ್ಮಾಣಕ್ಕೆ ಶೇ.35 ರಂತೆ ಗರಿಷ್ಠ ರೂ.105 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ. ಕಟಾವಿನ ನಂತರ ಈರುಳ್ಳಿಯನ್ನು ಶೇಖರಿಸಿ ಉತ್ತಮ ಮಾರುಕಟ್ಟೆ ಬೆಲೆ ಪಡೆಯಲು ಉಪಯೋಗವಾಗುವ ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕದ ನಿರ್ಮಾಣಕ್ಕೆ ಶೇ.50 ರಂತೆ ಗರಿಷ್ಠ ರೂ.0.875 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

12) ಮಾರುಕಟ್ಟೆಗಳಲ್ಲಿ ಮೂಲಭೂಸೌಕರ್ಯಗಳ ಸ್ಥಾಪನೆ:

ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳಿಗೆ ಸೂಕ್ತ ರೀತಿಯ ಮಾರಾಟದ ವ್ಯವಸ್ಥೆ ಕಲ್ಪಿಸಿ ಉತ್ತಮ ಬೆಲೆ ದೊರಕಿಸಿಕೊಡಲು ಅಗತ್ಯವಾದ ವಿವಿಧ ಮಾದರಿಯ ಮಾರಕಟ್ಟೆಗಳ ನಿರ್ಮಾಣಕ್ಕಾಗಿ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತದೆ.

Most Popular

Latest Articles

- Advertisment -

Related Articles