IRCTC Tourism-ರೈಲ್ವೆ ಇಲಾಖೆಯಿಂದ ಭರ್ಜರಿ ಗಿಫ್ಟ್: ಬೆಂಗಳೂರಿನಿಂದ ದೇಶ-ವಿದೇಶಗಳಿಗೆ ವಿಶೇಷ ಪ್ರವಾಸದ ಪ್ಯಾಕೇಜ್ ಘೋಷಣೆ!

March 30, 2026 | Siddesh
IRCTC Tourism-ರೈಲ್ವೆ ಇಲಾಖೆಯಿಂದ ಭರ್ಜರಿ ಗಿಫ್ಟ್: ಬೆಂಗಳೂರಿನಿಂದ ದೇಶ-ವಿದೇಶಗಳಿಗೆ ವಿಶೇಷ ಪ್ರವಾಸದ ಪ್ಯಾಕೇಜ್ ಘೋಷಣೆ!
Share Now:

ಬೆಂಗಳೂರು: ಬೇಸಿಗೆ ರಜೆಯ ಮಜಾ ಅನುಭವಿಸಲು ಕಾಯುತ್ತಿರುವ ಪ್ರವಾಸಿಗರಿಗಾಗಿ ಐಆರ್‌ಸಿಟಿಸಿ (IRCTC) ಸುವರ್ಣಾವಕಾಶವೊಂದನ್ನು ತಂದಿದೆ. ಬೆಂಗಳೂರಿನಿಂದ ಹೊರಡುವ ವಿವಿಧ ಆಕರ್ಷಕ ವಿಮಾನ ಮತ್ತು ರೈಲು ಪ್ರವಾಸ ಪ್ಯಾಕೇಜ್‌ಗಳನ್ನು(Irctc Tour Package) ಇಲಾಖೆ ಪ್ರಕಟಿಸಿದ್ದು, ಶ್ರೀಲಂಕಾ, ನೇಪಾಳದಂತಹ ವಿದೇಶಿ ತಾಣಗಳ ಜೊತೆಗೆ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದಂತಹ ದೇಶದ ಪ್ರಮುಖ ಪ್ರವಾಸಿ ತಾಣಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಕುಟುಂಬದೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲು ಬಯಸುವವರಿಗಾಗಿ ಕೈಗೆಟಕುವ ದರದಲ್ಲಿ ವಸತಿ, ಊಟ ಮತ್ತು ಸಾರಿಗೆ ವ್ಯವಸ್ಥೆ ಒಳಗೊಂಡ ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಈ ಪ್ಯಾಕೇಜ್‌ಗಳ ವಿಶೇಷತೆಯೆಂದರೆ, ಪ್ರವಾಸಿಗರು ಟಿಕೆಟ್(Best Package Tours) ಬುಕಿಂಗ್‌ನಿಂದ ಹಿಡಿದು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಯವರೆಗೆ ಯಾವುದೇ ಆತಂಕವಿಲ್ಲದೆ ಪ್ರಯಾಣಿಸಬಹುದು. ಮೇ ತಿಂಗಳಿನಲ್ಲಿ ವಿವಿಧ ದಿನಾಂಕಗಳಂದು ಈ ಪ್ರವಾಸಗಳು ಆರಂಭವಾಗಲಿದ್ದು, ವಿಮಾನ ಪ್ರಯಾಣದ ಪ್ಯಾಕೇಜ್‌ಗಳಲ್ಲಿ ವಿಮಾನ ಟಿಕೆಟ್, ಹೋಟೆಲ್ ವಾಸ್ತವ್ಯ, ಊಟ ಹಾಗೂ ಜಿಎಸ್‌ಟಿ ಸೇರಿವೆ. ಅರುಣಾಚಲ ಪ್ರದೇಶದ ಪ್ರಕೃತಿ ಸೌಂದರ್ಯದಿಂದ ಹಿಡಿದು ಚಾರ್ ಧಾಮ್ ಯಾತ್ರೆಯವರೆಗೆ ಭಕ್ತಾದಿಗಳು ಮತ್ತು ಪ್ರಕೃತಿ ಪ್ರೇಮಿಗಳಿಬ್ಬರಿಗೂ ಅನುಕೂಲವಾಗುವಂತೆ ಈ ಪ್ರವಾಸಗಳನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: Janaganati-2027: ಎಪ್ರಿಲ್ 1ರಿಂದ ಡಿಜಿಟಲ್ ಜನಗಣತಿ! ನಿಮ್ಮ ಮೊಬೈಲ್‌ನಲ್ಲೇ ಮಾಹಿತಿ ದಾಖಲಿಸಲು ಸುವರ್ಣಾವಕಾಶ!

ಕೇವಲ ವಿಮಾನಯಾನ ಮಾತ್ರವಲ್ಲದೆ, ರೈಲು(Indian Railway) ಪ್ರಯಾಣದ ಮೂಲಕ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲು ಇಚ್ಛಿಸುವವರಿಗೂ ವಿಶೇಷ ರೈಲು ಪ್ಯಾಕೇಜ್‌ಗಳನ್ನು ನೀಡಲಾಗಿದೆ. ಶಿರಡಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಪುರಿ ಜಗನ್ನಾಥ ಮತ್ತು ರಾಮೇಶ್ವರಂನಂತಹ ಪವಿತ್ರ ಸ್ಥಳಗಳಿಗೆ ವಾರದಲ್ಲಿ ನಿಗದಿತ ದಿನಗಳಂದು ರೈಲುಗಳು ಸಂಚರಿಸಲಿವೆ. ಈ ಪ್ಯಾಕೇಜ್‌ಗಳಲ್ಲಿ ದೃಢೀಕೃತ ರೈಲು ಟಿಕೆಟ್ ಜೊತೆಗೆ ಸ್ಥಳೀಯ ಸಾರಿಗೆ ಮತ್ತು ವಾಸ್ತವ್ಯದ ಸೌಲಭ್ಯವೂ ಇರಲಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.

ಇದನ್ನೂ ಓದಿ: Government Holiday-ಸರಕಾರಿ ರಜಾ ದಿನದಲ್ಲಿ ಮಹತ್ವದ ಬದಲಾವಣೆ! ತಪ್ಪದೇ ಈ ಸುದ್ದಿ ನೋಡಿ!

Indian Railway Tour Packages-ವಿವಿಧ ಪ್ಯಾಕೇಜ್ ವಿವರಗಳು:

ಪ್ರವಾಸಿ ತಾಣಪ್ರಾರಂಭದ ದಿನಾಂಕಅವಧಿದರ (ಪ್ರತಿ ವ್ಯಕ್ತಿಗೆ)
ಶ್ರೀಲಂಕಾ ರಾಮಾಯಣ ಯಾತ್ರೆ14.05.202605 ರಾತ್ರಿ / 06 ಹಗಲು₹ 64,500/- ರಿಂದ
ಕ್ಲಾಸಿಕ್ ನೇಪಾಳ26.05.202605 ರಾತ್ರಿ / 06 ಹಗಲು₹ 45,500/- ರಿಂದ
ಆನಂದಮಯ ಅರುಣಾಚಲ ಪ್ರದೇಶ05.05.202607 ರಾತ್ರಿ / 08 ಹಗಲು₹ 48,900/- ರಿಂದ
ಚಾರ್‌ಧಾಮ್ ಯಾತ್ರೆ19.05.202612 ರಾತ್ರಿ / 13 ಹಗಲು₹ 65,500/- ರಿಂದ
ಕಾಶ್ಮೀರ21.05.202605 ರಾತ್ರಿ / 06 ಹಗಲು₹ 51,500/- ರಿಂದ

ಇದನ್ನೂ ಓದಿ: 1st Standard Admission Age-1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ!

IRCTC Packages Tour List 2026-ರೈಲು ಪ್ರಯಾಣದ ಪ್ಯಾಕೇಜ್‌ಗಳು:

ಕನ್ಯಾಕುಮಾರಿ - ರಮೇಶ್ವರಂ - ಮಧುರೆ: ಪ್ರತಿ ಗುರುವಾರ.

ಶಿರಡಿ: ಪ್ರತಿ ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ.

ಕಟೀಲು - ಧರ್ಮಸ್ಥಳ - ಕುಕ್ಕೆ: ಪ್ರತಿ ಶನಿವಾರ.

ಪುರಿ - ಕೋನಾರ್ಕ್: ಪ್ರತಿ ಮಂಗಳವಾರ.

ಇದನ್ನೂ ಓದಿ: SSLC Exam 2026-10ನೇ ತರಗತಿ ಅಂತಿಮ ಪರೀಕ್ಷೆ ತೃತೀಯ ಭಾಷೆ ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆ ಜಾರಿ!

Online Ticket Booking Link-ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ?

ಪ್ರವಾಸಿಗರು ಈ ಮೇಲಿನ ಪಟ್ಟಿಯಲ್ಲಿ ತಿಳಿಸಿರುವ ಪ್ಯಾಕೇಜ್ ಪ್ರವಾಸವನ್ನು ಹೋಗಲು ಆಸಕ್ತಿಯನ್ನು ಹೊಂದಿದ್ದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

Step-1: ಸಾರ್ವಜನಿಕರು ಮೊದಲ ಹಂತದಲ್ಲಿ ಈ "IRCTC Online Ticket Booking" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಐಆರ್‌ಸಿಟಿಸಿಯ ಪ್ರವಾಸೋದ್ಯಮ ವೆಬ್‌ಸೈಟ್(www.irctctourism.com) ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Labour Card-ಕಾರ್ಮಿಕ ಕಾರ್ಡ ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು?

irctc tour package

ಇದನ್ನೂ ಓದಿ: CCTV Installation Training-ಉಚಿತ ಸಿಸಿಟಿವಿ ತರಬೇತಿಗೆ ಅರ್ಜಿ ಆಹ್ವಾನ!ಇಂದೇ ಅರ್ಜಿ ಸಲ್ಲಿಸಿ!

Step-2: ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ನಿಮಗೆ ಬೇಕಾದ ಪ್ಯಾಕೇಜ್ (ಉದಾಹರಣೆಗೆ: ಕಾಶ್ಮೀರ ಅಥವಾ ಶ್ರೀಲಂಕಾ) ಹೆಸರನ್ನು ಸರ್ಚ್ ಮಾಡಿ.

Step-3: ನಂತರ ನಿಮ್ಮ ಪ್ರಯಾಣದ ದಿನಾಂಕ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಆಯ್ಕೆ ಮಾಡಿ.

Step-4: ತದನಂತರ ಅಗತ್ಯವಿರುವ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಆನ್‌ಲೈನ್ ಮೂಲಕ ಹಣ ಪಾವತಿಸಿ ಬುಕಿಂಗ್ ಖಚಿತಪಡಿಸಿಕೊಳ್ಳಿ ಬಳಿಕ ಟಿಕೆಟ್ ವಿವರವನ್ನು ಡೌನ್ಲೋಡ್ ಮಾಡಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಅಥವಾ ನೆರವಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆಗಳಾದ 8595931291 ಅಥವಾ 9003140699 ಅನ್ನು ಸಂಪರ್ಕಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: