HomeNew postsKarnataka weather forecast: ಕರ್ನಾಟಕ ಮಳೆ ಮುನ್ಸೂಚನೆ! ಇಲ್ಲಿದೆ ಹಿಂಗಾರು ಮಳೆ ಮಾಹಿತಿ.

Karnataka weather forecast: ಕರ್ನಾಟಕ ಮಳೆ ಮುನ್ಸೂಚನೆ! ಇಲ್ಲಿದೆ ಹಿಂಗಾರು ಮಳೆ ಮಾಹಿತಿ.

ಕರ್ನಾಟಕದ ಮಳೆ ನಕ್ಷೆ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಿರವಾಸೆಯಲ್ಲಿ ಅತ್ಯಧಿಕ 42 ಮಿಮೀ ಮಳೆ ದಾಖಲಾಗಿರುತ್ತದೆ. 

ಉಳಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆದಿದ್ದು, ಮುಂಗಾರು ಸಂಪೂರ್ಣವಾಗಿ ಹಿಂದೆ ಸರಿದಿದ್ದು, ವಾತಾವರಣದ ತೇವಾಂಶ ಹಾಗೂ ಅಧಿಕ ತಾಪಮಾನದ ಕಾರಣದಿಂದ ಹಿಂಗಾರು ಆರಂಭವಾಗುವ ಮೊದಲೇ ದಕ್ಷಿಣ ಕನ್ನಡ, ಉಡುಪಿಗೆ ಮಳೆಯ‌ ಸಾಧ್ಯತೆ ಇರುತ್ತದೆ.

Weather forecast- ನಾಳೆ ಬೆಳಿಗ್ಗೆ(05.0.2023) ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ:

ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ. ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇರುತ್ತದೆ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಕನ್ನಡ, ಕಾಸರಗೋಡು, ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಮಧ್ಯಾಹ್ನ ನಂತರ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇರುತ್ತದೆ. ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.

ಇದನ್ನೂ ಓದಿ: Old age Pension: ಈ ಯೋಜನೆಯಡಿ ಪ್ರತಿ ತಿಂಗಳು 1200 ರೂ ವರೆಗೆ ಪಿಂಚಣಿ ಪಡೆಯಬವುದು!

ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ಸಂಜೆ ಅಲ್ಲಲ್ಲಿ ಮೋಡ ಸ್ವಲ್ಪ ಜಾಸ್ತಿ ಇರಲಿದ್ದು ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಯೂ ಇದೆ.

ಕೊಡಗು ಸಂಜೆ ಅಲ್ಲಲ್ಲಿ ಮೋಡದ ವಾತಾವರಣದ ನಡುವೆ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಚಿಕ್ಕಮಗಳೂರು ಅಲ್ಲಲ್ಲಿ ಹಾಗೂ ಶಿವಮೊಗ್ಗ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 

ಧಾರವಾಡ, ಬೆಳಗಾವಿ  ಮತ್ತು ಉತ್ತರ ಕನ್ನಡ ಗಡಿ ಭಾಗಗಳಲ್ಲಿ, ದಾವಣಗೆರೆ ದಕ್ಷಿಣ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇರುತ್ತದೆ.

ತುಮಕೂರು, ಪಾವಗಡ, ಭಾಗಗಳಲ್ಲಿ ಮೋಡದೊಂದಿಗೆ ಗುಡುಗು ಸಹಿತ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಹಗುರವಾಗಿ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದೆ. 

ಇದನ್ನೂ ಓದಿ: Business loan- ಸ್ವಂತ ಬಿಸಿನೆಸ್ ಆರಂಭಿಸಲು ಸಬ್ಸಿಡಿಯಲ್ಲಿ ರೂ.2.00ಲಕ್ಷಗಳವರೆಗೆ ಸಾಲ ನೀಡಲು ಅರ್ಜಿ ಆಹ್ವಾನ!

Weather Report-ಉತ್ತಮ ಹಿಂಗಾರು ಮಳೆ ಸಾಧ್ಯತೆ:

ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್‌ ಅವಧಿಯಲ್ಲಿ ರಾಜ್ಯ ದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.40 ರಿಂದ 50 ರಷ್ಟು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ಮಾಹಿತಿ ನೀಡಿದ್ದಾರೆ. 

ಈ ಮೂಲಕ ಬರದಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ನೆಮ್ಮದಿ ಲಭಿಸುವ ಸಾಧ್ಯತೆ ಇದೆ. ಮುಂಗಾರು ಮಳೆ ಹಿಂಬರುವಿಕೆಗೆ ಆರಂಭಗೊಂಡಿದೆ. ಅ.15ರ ವೇಳೆ ರಾಜ್ಯದಿಂದ ಹಿಂಮುಖವಾಗಲಿದೆ. ಬಳಿಕ ಹಿಂಗಾರು ಆರಂಭಗೊಳ್ಳಲಿದೆ. ಸದ್ಯದ ಮಾಹಿತಿ ಪ್ರಕಾರ ಹಿಂಗಾರು ಅವಧಿಯ ಒಟ್ಟಾರೆ ಮಳೆ ಪ್ರಮಾಣಕ್ಕಿಂತ ಶೇ.40 ರಿಂದ 50 ರಷ್ಟು ಹೆಚ್ಚಿನ ಮಳೆ ಆಗಲಿದೆ. ಅದರಲ್ಲೂ ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಕೊಡಗು, ಮಂಡ್ಯ, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.

Weather Map-ಮುಂದಿನ 2 ವಾರದ ಮಳೆ ಮುನ್ಸೂಚನೆ ನಕ್ಷೆ:

04-10-2023 ರಿಂದ 12-10-2023 ರವರೆಗೆ ಮುನ್ಸೂಚನೆ ನಕ್ಷೆ:

ಇದನ್ನೂ ಓದಿ: ಆಧಾರ್ ಕಾರ್ಡ ನವೀಕರಿಸಲು 14 ಡಿಸೆಂಬರ್ 2023 ಕೊನೆಯ ದಿನ! ತಪ್ಪಿದಲ್ಲಿ ಆಧಾರ್ ಕಾರ್ಡ ರದ್ದು!

12-10-2023 ರಿಂದ 20-10-2023 ರವರೆಗೆ ಮುನ್ಸೂಚನೆ ನಕ್ಷೆ:

ಮೇಲಿನ ನಕ್ಷೆಯಲ್ಲಿ ಸೂಚಿಸಿದಂತೆ ರಾಜ್ಯದಲ್ಲಿ ಮುಂದಿನ 2 ವಾರ ಬಹುತೇಕ ಭಾಗಗಳಲ್ಲಿ ಮಳೆ ಬೀಳುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: How to do GruhaLakshmi eKYC- ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು eKYCಗಾಗಿ ವೆಬ್ಸೈಟ್ ಲಿಂಕ್ ಬಿಡುಗಡೆ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

Most Popular

Latest Articles

Related Articles