Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeNew postsBusiness loan- ಸ್ವಂತ ಬಿಸಿನೆಸ್ ಆರಂಭಿಸಲು ಸಬ್ಸಿಡಿಯಲ್ಲಿ ರೂ.2.00ಲಕ್ಷಗಳವರೆಗೆ ಸಾಲ ನೀಡಲು ಅರ್ಜಿ ಆಹ್ವಾನ!

Business loan- ಸ್ವಂತ ಬಿಸಿನೆಸ್ ಆರಂಭಿಸಲು ಸಬ್ಸಿಡಿಯಲ್ಲಿ ರೂ.2.00ಲಕ್ಷಗಳವರೆಗೆ ಸಾಲ ನೀಡಲು ಅರ್ಜಿ ಆಹ್ವಾನ!

ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಸ್ವಯಂ ಉದ್ಯೋಗಕ್ಕೆ/ಆರ್ಥಿಕ ಚಟವಟಿಕೆ ಕೈಗೊಳ್ಳಲು ರೂ.2.00ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಒದಗಿಸಲು ಅರ್ಜಿ ಆಹ್ವಾನ ಮಾಡಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವ್ಯಾಪ್ತಿಯಡಿ ಬರುವ ವಿವಿಧ ನಿಗಮಗಳಲ್ಲಿ ಹಿಂದುಳಿದ ವರ್ಗಗಳ ಫಲಾನುಭವಿಗಳು ಸ್ವಯಂ ಉದ್ಯೋಗ ಆರ್ಧಿಕ ಚಟುವಟಿಕೆ ಕೈಗೊಳ್ಳಲು ಹಾಲಿ ನೀಡಲಾಗುತ್ತಿರುವ ರೂ.50,000/-ಗಳ ನೇರ ಸಾಲ ಯೋಜನೆಯ ಮೊತ್ತವು ಕಡಿಮೆ ಇದ್ದು, ಸದರಿ ಸಾಲದ ಮೊತ್ತದಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ವಯಂ ಉದ್ಯೋಗ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ.

ಆದ್ದರಿಂದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಸಾಲದ ಮೊತ್ತವನ್ನು ರೂ.50,000/- ಗಳಿಂದ ರೂ.2,00,000/-ಗಳಿಗೆ ಹೆಚ್ಚಿಸುವಂತೆ ವಿವಿಧ ಸಮುದಾಯಗಳ ಒಕ್ಕೂಟಗಳು/ಜನಪ್ರತಿನಿಧಿಗಳು/ಸಾರ್ವಜನಿಕರು ಹಾಗೂ ಇತರರಿಂದ ಮನವಿಗಳು ಸ್ವೀಕೃತವಾಗುತ್ತಿರುವುದರಿಂದ ಹಿಂದುಳಿದ ವರ್ಗಗಳ ಫಲಾನುಭವಿಗಳು ಪರಿಣಾಮಕಾರಿಯಾಗಿ ಸ್ವಯಂ ಉದ್ಯೋಗ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುವಂತೆ, 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನಿಗಮಗಳ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಸಾಲದ ಮೊತ್ತವನ್ನು ರೂ.50,000/-ಗಳಿಂದ ರೂ.2,00,000/- ಗಳಿಗೆ ಹೆಚ್ಚಿಸಲು ತೀರ್ಮಾನಿಸಿ ಉದ್ಯೋಗ ಸಾಲ ಯೋಜನೆಯ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಅರ್ಜಿ ಆಹ್ವಾನ ಮಾಡಿದೆ.

ಇದನ್ನೂ ಓದಿ: ಒಂದು ಭಾರಿಯು ಅನ್ನಭಾಗ್ಯ ಯೋಜನೆಯಡಿ ಹಣ ಜಮಾ ಅಗಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ ಕ್ರಮಗಳು.

Bussiness Loan Subsidy scheme- ಯೋಜನಯ ಉದ್ದೇಶ:

ಹಿಂದುಳಿದ ವರ್ಗಗಳ ವುವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ನಿರುದ್ಯೋಗಿ ಫಲಾನುಭವಿಗಳು ಕೃಷಿ ಅವಲಂಬಿತ ಚಟುವಟಿಕೆಗಳು, ವ್ಯಾಪಾರ, ಕೈಗಾರಿಕ, ಸಾರಿಗೆ ಮತ್ತು ಸೇವಾ ವಲಯದಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸಾಲದ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬವುದು:

1) ಈ ಯೋಜನೆಯಲ್ಲಿ ಆರ್ಥಿಕ ಸಹಾಯ ಪಡೆಯಲು ಅಭ್ಯರ್ಥಿಯು ಸರ್ಕಾರದ ಆದೇಶ ಸಂಖ್ಯೆ ಸಕಇ 225 ಬಿಸಿಎ 2000, ದಿನಾಂಕ 30/03/2002 ರಲ್ಲಿ ಗುರುತಿಸಿದ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.
2) ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮೀಣ ಪ್ರದೇಶದವರಾದರೆ ರೂ.98,000/ಗಳು ಹಾಗೂ ನಗರ ಪ್ರದೇಶದವರಿಗೆ ರೂ.1,20,000/-ಗಳನ್ನು ಮೀರಿರಬಾರದು,
3) ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
4)ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷಗಳು ಹಾಗೂ ಮಿತಿಯೊಳಗಿರಬೇಕು. ಗರಿಷ, 55 ವರ್ಷಗಳ
5)ಪವರ್ಗ-1 ರಡಿಯಲ್ಲಿನ ಜಾತಿಗಳಲ್ಲಿ ಬರುವ ಅರ್ಜಿದಾರರು ಕನಿಷ್ಠ, 7ನೇ ತರಗತಿ ಹಾಗೂ ಉಳಿದ ಇತರ ಪವರ್ಗಗಳಲ್ಲಿನ ಅರ್ಜಿದಾರರು 10ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ನಿರುದ್ಯೋಗಿಯಾಗಿರಬೇಕು.
6)ಸರ್ಕಾರದ/ನಿಗಮದ ಬೇರೆ ಯಾವುದಾದರೂ ಯೋಜನೆಗಳಲ್ಲಿ ಸಾಲ ಅಥವಾ ಇತರ ಆರ್ಥಿಕ ಸವಲತ್ತು ಪಡೆದಿರಬಾರದು.
7)ಮಹಿಳೆಯರಿಗೆ ಈ ಯೋಜನೆಯಲ್ಲಿ ಶೇ.50ರಷ್ಟು ಮೀಸಲು ನಿಗದಿಪಡಿಸಿದ. 
8)ಅಂಗವಿಕಲರಿಗೆ ಈ ಯೋಜನೆಯಲ್ಲಿ ಶೇ 4ರಷ್ಟು ಮೀಸಲು ನಿಗದಿಪಡಿಸಿದ.
9)ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು,
10)ಅಭ್ಯರ್ಥಿಯು ಕೈಗೊಳ್ಳುವ ಆರ್ಥಿಕ ಚಟುವಟಿಕೆಯ ಬಗ್ಗೆ ತರಬೇತಿ/ ಅನುಭವ/ ತಿಳುವಳಿಕ ಹೊಂದಿರಬೇಕು.

ಇದನ್ನೂ ಓದಿ: How to do GruhaLakshmi eKYC- ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು eKYCಗಾಗಿ ವೆಬ್ಸೈಟ್ ಲಿಂಕ್ ಬಿಡುಗಡೆ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

ಸಾಲ ಮತ್ತು ಸಹಾಯಧನ ಮೊತ್ತ ಎಷ್ಟು?

1) ಘಟಕ ವೆಚ್ಚ ರೂ.1,00,000/- ಲಕ್ಷಗಳಿಗೆ ಶೇ.20 ರಷ್ಟು ಗರಿಷ್ಠ ರೂ.20,000/- ಗಳ ಸಹಾಯಧನ ಉಳಿಕೆ ಶೇ.80 ರಮ್ಮ ರೂ.80,000/- ಗಳಿಗೆ ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

2) ಘಟಕ ವೆಚ್ಚ ರೂ.2,00,00/- ಲಕ್ಷಗಳಿಗೆ  ಶೇ.15 ರಷ್ಟು ಗರಿಷ್ಥ ರೂ.30,000/- ಗಳ ಸಹಾಯಧನ ಉಳಿಕೆ ಶೇ.85 ರಷ್ಟು ರೂ.1,70,000/- ಗಳಿಗೆ ವಾರ್ಷಿಕ ಶೇ.4 ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ಫಲಾನುಭವಿಯು ಒಂದು ಬಾರಿ ಸಾಲ ಪಡೆದು, ಪಡೆದ ಸಾಲವನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಮರು ಪಾವತಿಸಿದಲ್ಲಿ ಅಂತಹ ಫಲಾನುಭವಿಗಳಿಗೆ ಒಂದು ಬಾರಿಗೆ ಮಾತ್ರ ದುಪ್ಪಟ್ಟು ಸಾಲವನ್ನು ಗರಿಷ್ಠ ರೂ.2.00 ಲಕ್ಷಗಳವರೆಗೆ ಯಾವುದೇ ಸಹಾಯಧನವಿಲ್ಲದೇ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ನೀಡಲು ಅವಕಾಶವಿರುತ್ತದೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:.

  • ಹಿಂದುಳಿದ ವರ್ಗಗಳಿಗೆ ಸೇರಿರುವುದಕ್ಕೆ ಸಂಬಂಧಿಸಿದ ತಾಲ್ಲೂಕು ತಹಶಿಲ್ದಾರ್ ರಿಂದ ನಿಗದಿತ ನಮೂನೆಯಲ್ಲಿ ಪಡೆದ ಜಾತಿ/ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ. 
  • ಅರ್ಜಿದಾರರು ನಿಗಧಿತ ವಿದ್ಯಾರ್ಹತೆ ಹೊಂದಿರುವ ಬಗ್ಗೆ ಅಂಕಪಟ್ಟಿ/ದಾಖಲೆಗಳು.
  • ಅರ್ಜಿದಾರರ ವಾಸದ ಪುರಾವೆಗಾಗಿ ಸಕ್ಷಮ ಪ್ರಾಧಿಕಾರಿಗಳು ನೀಡಿದ ಪಡಿತರ ಚೀಟಿ/ಚುನಾವಣಾ ಗುರುತಿನ ಚೀಟಿ/ಆಧಾರ ಕಾರ್ಡ್‌.
  • ಅರ್ಜಿದಾರರ ಪಾಸ್‌ ಪೋರ್ಟ್ ಅಳತೆಯ ಇತ್ತೀಚಿನ ಫೋಟೋ, 
  • ಅರ್ಜಿದಾರರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹೊಂದಿರಬೇಕು ಸದರಿ ಬ್ಯಾಂಕ್‌ ಖಾತೆಗೆ ಆಧಾರ್ ಸೀಡಿಂಗ್ ಮಾಡಿರಬೇಕು. 
  • ಅರ್ಜಿದಾರರು ಕೈಗೊಳ್ಳುವ ಆರ್ಥಿಕ ಚಟುವಟಿಕೆಯ ಅನುಭವ ತರಬೇತಿ ಬಗ್ಗೆ ಪ್ರಮಾಣ ಪತ್ರ/ಸ್ವಯಂ ಘೋಷಣ ಪತ್ರ.

ಇದನ್ನೂ ಓದಿ: Swavalambi sarati yojana- ವಾಹನ ಖರೀದಿಗೆ ರೂ.3.00 ಲಕ್ಷಗಳ ಸಹಾಯಧನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬವುದು? ಆಯ್ಕೆ ವಿಧಾನ ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್ , ಕರ್ನಾಟಕ ಅಥವಾ ಕಂಪ್ಯೂಟರ್ ಸೆಂಟರ್ ಗಳ ಮೂಲಕ ಅನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಜಿ ಸಲ್ಲಿಸಲು 30 ಅಕ್ಟೋಬರ್ 2023 ಕೊನೆಯ ದಿನಾಂಕವಾಗಿದೆ.

ಫಲಾನುಭವಿ ಆಯ್ಕೆ ವಿಧಾನ:

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಮಾನ್ಯ ಶಾಸಕರ ಅಧ್ಯಕ್ಷತೆಯ ಸಮಿತಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

1) ಅರ್ಜಿದಾರರು ಆನ್‌ಲೈನ್ ಮುಖಾಂತರ ಸಲ್ಲಿಸಿರುವ ಅರ್ಜಿಗಳನ್ನು ಜಿಲ್ಲಾ ವ್ಯವಸ್ಥಾಪಕರು ನಿಯಮಗಳನ್ವಯ ಪರಿಶೀಲಿಸಿ ಅಗತ್ಯ ಎಲ್ಲಾ ದಾಖಲಾತಿಗಳನ್ನು ಒದಗಿಸಿರುವ ಬಗ್ಗೆ ದೃಢೀಕರಿಸಿಕೊಂಡು ಅಂತಹ ಅರ್ಜಿಗಳನ್ನು ಆಯ್ಕೆ ಸಮಿತಿ ಮುಂದೆ ಮಂಡಿಸಲಾಗುತ್ತದೆ.

2) ಆಯ್ಕೆ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು. ನಿಗಮದ ಜಿಲ್ಲಾ ವ್ಯವಸ್ಥಾಪಕರು ಆಯ್ಕೆ ಪಟ್ಟಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸಾಲ ಮಂಜೂರಾತಿಗಾಗಿ ವಿಶ್ವಾಸ್ ಪೋರ್ಟಲ್ ಮುಖಾಂತರ ವ್ಯವಸ್ಥಾಪಕ ನಿರ್ದೇಶಕರ ಲಾಗಿನ್‌ಗೆ ಸಲ್ಲಿಸಲಾಗುತ್ತದೆ.

ಮರುಪಾವತಿ ಅವಧಿ:-

ಈ ಯೋಜನೆಯಲ್ಲಿ ಪಡೆದ ಸಾಲವನ್ನು ಫಲಾನುಭವಿ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ 60 (5 ವರ್ಷಗಳು) ಕಂತುಗಳಲ್ಲಿ ಮರುಪಾವತಿಸಬೇಕು. ಇದರಲ್ಲಿ 3 ತಿಂಗಳ ವಿರಮಾವಧಿ ಇರುತ್ತದೆ.

ವಿವಿಧ ನಿಗಮದ ಯೋಜನೆಗಳ ಮಾಹಿತಿ ನೀಡುವ ಅಂಕಣಗಳು:

ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇತರೆ 6 ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಅಹ್ವಾನ!

ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮದಿಂದ ಗಂಗ ಕಲ್ಯಾಣ ಯೋಜನೆ ಸೇರಿ ಇತರೆ 6 ಯೋಜನೆಗಳಿಗೆ ಅರ್ಜಿ ಆಹ್ವಾನ!

Ganga kalyana yojane- ಯಾವೆಲ್ಲ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸಲು ಸಹಾಯಧನ ಪಡೆಯಬವುದು?

ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ!

ವಾಹನ ಖರೀದಿಸಲು 3 ಲಕ್ಷದವರೆಗೆ ಸಹಾಯಧನ ಪಡೆಯಲು  ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ! ಇಲ್ಲಿದೆ ವೆಬ್ಸೈಟ್ ಲಿಂಕ್.

Ganga kalyana yojane-2023: ಬೋರ್ವೆಲ್ ಗೆ ಸಹಾಯಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ! ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ.

Most Popular

Latest Articles

- Advertisment -

Related Articles