- Advertisment -
HomeNew postsOld age Pension: ಈ ಯೋಜನೆಯಡಿ ಪ್ರತಿ ತಿಂಗಳು 1200 ರೂ ವರೆಗೆ ಪಿಂಚಣಿ ಪಡೆಯಬವುದು!

Old age Pension: ಈ ಯೋಜನೆಯಡಿ ಪ್ರತಿ ತಿಂಗಳು 1200 ರೂ ವರೆಗೆ ಪಿಂಚಣಿ ಪಡೆಯಬವುದು!

Last updated on September 30th, 2024 at 03:25 pm

ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರೀಕರಿಗೆ  ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆಯಡಿ(Vrudapya vetana) ಪ್ರತಿ ತಿಂಗಳು ಮಾಸಾಶನವನ್ನು ನೀಡಲಾಗುತ್ತಿದೆ. 

ಸರಕಾರದಿಂದ ಈ ಯೋಜನೆಯನ್ನು ದಿನಾಂಕ:1-1-1965 ರಿಂದ ಮಾಸಾಶನವನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯ ಮೂಲಕ ಹಿರಿಯ ನಾಗರಿಕರಿಗೆ  ವೃದ್ಧಾಪ್ಯದಲ್ಲಿ ಅರ್ಥಿಕವಾಗಿ ಸಹಾಯ ಮಾಡುವ ದೇಸೆಯಲ್ಲಿ ಪ್ರತಿ ತಿಂಗಳು ರೂ 6,00 ರಿಂದ 1,200 ರವರೆಗೆ ಫಲಾನುಭವಿ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗುತ್ತದೆ.

ಈ ಅಂಕಣದಲ್ಲಿ ಈ ಯೋಜನೆಯಡಿ ವೃದ್ಧಾಪ್ಯ ವೇತನ(Old age pension) ಪಡೆಯಲು ಯಾರೆಲ್ಲ ಅರ್ಹರು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ.

ಇದನ್ನೂ ಓದಿ: Business loan- ಸ್ವಂತ ಬಿಸಿನೆಸ್ ಆರಂಭಿಸಲು ಸಬ್ಸಿಡಿಯಲ್ಲಿ ರೂ.2.00ಲಕ್ಷಗಳವರೆಗೆ ಸಾಲ ನೀಡಲು ಅರ್ಜಿ ಆಹ್ವಾನ!

Pension Scheme-ಯಾರೆಲ್ಲ ಅರ್ಜಿ ಸಲ್ಲಿಸಬವುದು:

1) ಫಲಾನುಭವಿಗಳು 60 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು. ಅವರು ಬಡತನ ರೇಖೆಗಿಂತ (ಬಿಪಿಎಲ್) ಕೆಳಗಡೆ ಇರಬೇಕು.

2) ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರೂ.32,000/- ಕ್ಕಿಂತ ಕಡಿಮೆ ಇರಬೇಕು.

3) ಅಂತಹ ವ್ಯಕ್ತಿಯು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.

4) ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದಾಗ್ಯೂ ಅವರು ಫಲಾನುಭವಿಗಳನ್ನು ಘೋಷಿಸದೇ ಇದ್ದಲ್ಲಿ ಈ ಮಾಸಾಶನವನ್ನು ಪಡೆಯಬಹುದಾಗಿದೆ.

5) ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.

ಇದನ್ನೂ ಓದಿ: ಆಧಾರ್ ಕಾರ್ಡ ನವೀಕರಿಸಲು 14 ಡಿಸೆಂಬರ್ 2023 ಕೊನೆಯ ದಿನ! ತಪ್ಪಿದಲ್ಲಿ ಆಧಾರ್ ಕಾರ್ಡ ರದ್ದು!

Old age Pension amount-ಪಿಂಚಣಿ ಮೊತ್ತ ಎಷ್ಟು?

60 ರಿಂದ 64 ವರ್ಷದೊಳಗಿನ ಹಿರಿಯ ನಾಗರೀಕರಿಗೆ- 600 ರೂ
65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ-1200 ರೂ

Required documents for pension yojana application-ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳೇನು?

1)ವಾಸಸ್ಥಳ ದೃಡೀಕರಣ ಪತ್ರ.
2)ವಯಸ್ಸಿನ ದೃಢೀಕೃತ ದಾಖಲೆ.
3)ಬ್ಯಾಂಕ್ ಮತ್ತು ಅಂಚೆ ಖಾತೆ ವಿವರಗಳು.
4)ಆಧಾರ್ ಕಾರ್ಡ್ ಪ್ರತಿ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳ ಸಮೇತ ನಿಮ್ಮ ಹತ್ತಿರದ ನಾಡಕಚೇರಿ/ನೆಮ್ಮದಿ ಕೇಂದ್ರ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Pension Status check-ಸಲ್ಲಿಸಿದ ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:

ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಲು ಅರ್ಜಿದಾರರು ಈ Pension status check link ಲಿಂಕ್ ಮೇಲೆ ಕ್ಲಿಕ್ ನಿಮ್ಮ ಅರ್ಜಿಯ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ “ಸ್ಥಿತಿಯನ್ನು ಪರಿಶೀಲಿಸಿ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ನಿಮ್ಮ ಮೊಬೈಲ್ ನಲ್ಲೇ ನೋಡಬವುದು.

ಇದನ್ನೂ ಓದಿ: How to do GruhaLakshmi eKYC- ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು eKYCಗಾಗಿ ವೆಬ್ಸೈಟ್ ಲಿಂಕ್ ಬಿಡುಗಡೆ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.

- Advertisment -
LATEST ARTICLES

Related Articles

- Advertisment -

Most Popular

- Advertisment -