HomeNew postsKMF: ಕೆ ಎಂ ಎಫ್ ನಿಂದ ಮೆಕ್ಕೆಜೋಳ ಬೆಳೆಗಾರರರಿಗೆ ಗುಡ್ ನ್ಯೂಸ್!

KMF: ಕೆ ಎಂ ಎಫ್ ನಿಂದ ಮೆಕ್ಕೆಜೋಳ ಬೆಳೆಗಾರರರಿಗೆ ಗುಡ್ ನ್ಯೂಸ್!

ಕರ್ನಾಟಕ ಹಾಲು ಮಹಾಮಂಡಳಿ(karnataka milk federation)ಯು ಉತ್ತಮ ದರದಲ್ಲಿ ರೈತರಿಂದ ನೇರವಾಗಿ ಮೆಕ್ಕಜೋಳ ಖರೀದಿ ಮಾಡಲು ಮುಂದಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಮೆಕ್ಕೆಜೋಳ ಬೆಳೆಗಾರರರಿಂದ ನೇರವಾಗಿ ಮೆಕ್ಕಜೋಳ ಖರೀದಿ ಪ್ರಕ್ರಿಯನ್ನು ಆರಂಭಿಸಲು ತಯಾರಿ ನಡೆಸಿದೆ.

ಹೊರಗಿನ ಮಾರುಕಟ್ಟೆಯಲ್ಲಿ ಸಧ್ಯ ಮೆಕ್ಕಜೋಳದ ದರವು 1950 ರಿಂದ 2100 ರ ವರೆಗೆ ನಡೆಯುತ್ತಿದ್ದು ಈ ಬಾರಿ ಉತ್ತಮ ದರ ನಿರೀಕ್ಷೆಯಲ್ಲಿದ ರೈತರಿಗೆ ಈ ಬೆಳವಣಿಗೆಯು ನಿರಾಸೆ ಮೂಡಿಸಿದೆ.

ಈಗ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಪಶು ಆಹಾರ ತಯಾರಿಕೆಗಾಗಿ ರೈತರಿಂದ ನೇರವಾಗಿ ಪ್ರತಿ ಕ್ವಿಂಟಾಲ್‌ಗೆ ₹2,250ರಂತೆ ಒಂದು ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆಜೋಳವನ್ನು ಖರೀದಿ ಮಾಡಲು ನೊಂದಣಿ ಪ್ರಕ್ರಿಯೆ ಆರಂಭಿಸಿದೆ ಎಂದು ಮಂಡಳಿಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್ ಗೆ ರೂ 2,000 ನೀಡಿ ರೈತರಿಂದ ಖರೀದಿ ಮಾಡಿತ್ತು ಈ ಬಾರಿ ರೂ 250 ಹೆಚ್ಚಳ ಮಾಡಿ ನೇರವಾಗಿ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಲು ಕೆ ಎಂ ಎಫ್ ಮುಂದಾಗಿದೆ.

ಇದನ್ನೂ ಓದಿ: Drought relief amount: ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ಬರುತ್ತದೆ: ಸಚಿವ ಕೃಷ್ಣ ಬೈರೇಗೌಡ

KMF- ರೈತರು ಖರೀದಿ ಮಾಡಿಕೊಂಡು ಮೆಕ್ಕೆಜೋಳ ಮಾರಾಟ ಮಾಡಬೇಕು:

ರೈತ ಬಾಂಧವರೇ ಸಾಮಾನ್ಯವಾಗಿ ಇತರೆ ಮಾರುಕಟ್ಟೆಗಳಿಗೆ ನೀವು ಉತ್ಪನ್ನವನ್ನು ಮಾರಾಟ ನೇರವಾಗಿ ಉತ್ಪನ್ನವನ್ನು ಸರಕು ವಾಹನದ ಮೂಲಕ ತೆಗೆದುಕೊಂಡು ಹೋಗುತ್ತೀರ,

ಅದರೆ ಇಲ್ಲಿ ಕರ್ನಾಟಕ ಹಾಲು ಮಹಾಮಂಡಳಿ(KMF)ಗೆ ಮೆಕ್ಕೆಜೋಳವನ್ನು ತೆಗೆದುಕೊಂಡು ಹೋಗುವ ಮೊದಲು ನಿಮ್ಮ ಬಳಿಯಿರುವ ಮೆಕ್ಕೆಜೋಳದ 1 ಕೆಜಿ ಸ್ಯಾಂಪಲ್ ತೆಗೆದುಕೊಂಡು ಇದರ ಜೊತೆಗೆ ನಿಮ್ಮ ಆಧಾರ್ ಕಾರ್ಡ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಅನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಕೆ ಎಮ್ ಎಫ್ ನ ಹಾಲು ಅಳೆಸುವ ಸಂಘದ ಕಚೇರಿ ಅದರೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸಂಪರ್ಕಿಸಿ  ಆನ್ಲೈನ್ ಮೂಲಕ ನೊಂದಣಿ ಮಾಡಿಕೊಂಡ ಬಳಿಕ ಅವರು ನಿಮಗೆ ಯಾವ ದಿನದಂದು ಮೆಕ್ಕೆಜೋಳ ತರಲು ಹೇಳುತ್ತಾರೋ ಆ ದಿನ ಮೆಕ್ಕೆಜೋಳವನ್ನು ನಿಮ್ಮ ಹತ್ತಿರದ  ಕೆ ಎಮ್ ಎಫ್ ನ  ಪಶು ಆಹಾರ ತಯಾರಿಕಾ ಘಟಕಕ್ಕೆ ತೆಗೆದುಕೊಂಡು ಹೋಗಬೇಕು.

ಇದನ್ನೂ ಓದಿ: Ration card cancellation: ಈ ನಿಯಮ ಪಾಲನೆ  ಮಾಡದಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ! ಇಲ್ಲಿದೆ ಸಂಪೂರ್ಣ ವಿವರ.

ಹೀಗೆ ನೀವು ಮೆಕ್ಕೆಜೋಳ ಮಾರ‍ಾಟ ಮಾಡಿದ ಬಳಿಕ ನಿಮ್ಮ ಖಾತೆಗೆ ಸ್ವಲ್ಪ ದಿನದ ಬಳಿಕ ನೇರವಾಗಿ ಮೆಕ್ಕೆಜೋಳದ ಒಟ್ಟು ತೂಕದ ಆಧಾರದ ಮೇಲೆ ಹಣವನ್ನು ಕೆ ಎಮ್ ಎಫ್ ನಿಂದ ಜಮಾ ಮಾಡಲಾಗುತ್ತದೆ.

ಯಾವ ದಿನಾಂಕದಿಂದ ನೊಂದಣಿ ಆರಂಭ?

ಪ್ರಸ್ತುತ ಮಾಹಿತಿಯ ಪ್ರಕಾರ ನವೆಂಬರ್‌ 13ರಿಂದ ಮೆಕ್ಕೆಜೋಳ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಕರ್ನಾಟಕ ಹಾಲು ಮಹಾಮಂಡಳಿಯು ತಿಳಿಸಿದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಪಶು ಆಹಾರ ತಯಾರಿಕಾ ಘಟಕಗಳಿವೆ?

ನಮ್ಮ ರಾಜ್ಯದಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ ಪಶು ಆಹಾರ ತಯಾರಿಕಾ ಘಟಕಗಳು ಒಟ್ಟು 5 ಕಡೆ ಇವೆ ರೈತರು ನಿಮಗೆ ಯಾವ ಘಟಕ ಹತ್ತಿರವಾಗುತ್ತದೆವೋ ಆ ಘಟಕಕ್ಕೆ ನಿಮ್ಮ ಉತ್ಪನ್ನವನ್ನು ಸರಬರಾಜು ಮಾಡಬವುದು.

  • ರಾಜಾನುಕುಂಟೆ
  • ಗುಬ್ಬಿ 
  • ಧಾರವಾಡ
  • ಹಾಸನ
  • ಶಿಕಾರಿಪುರ

ಇದನ್ನೂ ಓದಿ: November pension amount: ರಾಜ್ಯ ಸರಕಾರದಿಂದ 77 ಲಕ್ಷ ಜನರಿಗೆ ನವೆಂಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ! ಹಣ ಬಂದಿರುವುದನ್ನು ಚೆಕ್ ಮಾಡಲು ಈ ವೆಬ್ಸೈಟ್ ಭೇಟಿ ಮಾಡಿ.

ಸಹಾಯವಾಣಿ:

1800 425 8030 ,10.00AM – 5.30PM(ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಹಾಗು ಇತರೆ ರಾಜ್ಯ ಸರ್ಕಾರ ರಜಾ ದಿನಗಳನ್ನು ಹೊರತು ಪಡಿಸಿ)

ಕರ್ನಾಟಕ ಹಾಲು ಮಹಾಮಂಡಳಿ ವೆಬ್ಸೈಟ್ ಲಿಂಕ್: Click here 

Most Popular

Latest Articles

Related Articles