- Advertisment -
HomeNew postsRation card cancellation: ಈ ನಿಯಮ ಪಾಲನೆ ಮಾಡದಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ! ಇಲ್ಲಿದೆ...

Ration card cancellation: ಈ ನಿಯಮ ಪಾಲನೆ ಮಾಡದಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ! ಇಲ್ಲಿದೆ ಸಂಪೂರ್ಣ ವಿವರ.

Last updated on September 29th, 2024 at 11:53 am

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ಬಳಿಕ ಪಡಿತರ ಚೀಟಿ ವಿತರಣೆ ಮತ್ತು ಹಾಲಿ ಪಡಿತರ ಚೀಟಿಯ ಮಾರ್ಗಸೂಚಿಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಕಟ್ಟುನಿಟ್ಟಾಗಿ ಅನುಷ್ಥಾನ ಮಾಡುತ್ತಿದ್ದು.

ಈಗ ಪಡಿತರ ಚೀಟಿ ಕುರಿತು ಮಾರ್ಗಸೂಚಿ ಕುರಿತಂತೆ ಆಹಾರ ಇಲಾಖೆಯಿಂದ ಮತ್ತೊಂದು ಕ್ರಮ ಕೈಗೊಳ್ಳಲು ಇಲಾಕೆ ಅಧಿಕಾರಿಗಳು ಅನುಷ್ಥಾನ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: November pension amount: ರಾಜ್ಯ ಸರಕಾರದಿಂದ 77 ಲಕ್ಷ ಜನರಿಗೆ ನವೆಂಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ! ಹಣ ಬಂದಿರುವುದನ್ನು ಚೆಕ್ ಮಾಡಲು ಈ ವೆಬ್ಸೈಟ್ ಭೇಟಿ ಮಾಡಿ.

ಈ ನಿಯಮ ಪಾಲನೆ  ಮಾಡದಿದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ!

ರೇಷನ್ ಕಾರ್ಡ ಹೊಂದಿರುವವರು ಕಳೆದ 6 ತಿಂಗಳಲ್ಲಿ ರೇಷನ್ ಪಡೆಯದೇ ಇದ್ದಲ್ಲಿ ಅಂತಹ ಕಾರ್ಡದಾರರ ವಿವರವನ್ನು ಪರಿಶೀಲನೆ ಮಾಡಿ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ಕಾರ್ಡಾನ್ನು ರದ್ದು ಮಾಡಲು ಇಲಾಖೆಯು ಮುಂದಾಗಿದೆ.

ಹೌದು ಗ್ರಾಹಕರೇ ನಿವೇನಾದರು ಪ್ರತಿ ತಿಂಗಳು ಸರಿಯಾಗಿ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ನೀಡುವ ಆಹಾರ ಧಾನ್ಯವನ್ನು ಕಳೆದ 6 ತಿಂಗಳಿನಿಂದ ತೆಗೆದುಕೊಳ್ಳದೆ ಇದ್ದಲಿ ನಿಮ್ಮ ರೇಷನ್ ಕಾರ್ಡ ರದ್ದಾಗುತ್ತದೆ.

ಇದನ್ನೂ ಓದಿ: PMKSY-OI Yojana: ಶೇ.50ರ ಸಹಾಯಧನದಲ್ಲಿ ಡೀಸೆಲ್ ಮತ್ತು ವಿದ್ಯುತ್ ಚಾಲಿತ ನೀರೆತ್ತುವ ಯಂತ್ರ ಪಡೆಯಲು ಅರ್ಜಿ ಆಹ್ವಾನ!

3 ಲಕ್ಷಕ್ಕೂ ಹೆಚ್ಚಿನ ಕಾರ್ಡ ಪತ್ತೆ ಹಚ್ಚಿದ ಇಲಾಖೆ:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿ-ಅಂಶದ ಪ್ರಕಾರ ಕಳೆದ 6 ತಿಂಗಳಲ್ಲಿ ರೇಷನ್ ಪಡೆಯದೇ ಇರುವ ಕಾರ್ಡಗಳ ಸಂಖ್ಯೆಯು 3,47,297 ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪಟ್ಟಿಯಲ್ಲಿರುವವರು ಯಾವ ಕಾರಣದಿಂದಾಗಿ ರೇಷನ್ ತೆಗೆದುಕೊಳ್ಳುತಿಲ್ಲ ಎಂದು ಸರ್ವೆ ಮಾಡಿ ಇಲಾಖೆ ಮಾರ್ಗಸೂಚಿ ಪ್ರಕಾರ ಅನರ್ಹ ಪಡಿತರ ಚೀಟಿಯನ್ನು ರದ್ದು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ರೇಷನ್ ಕಾರ್ಡ ರದ್ದಾದರೆ ಈ ಯೋಜನೆಯ ಸೌಲಭ್ಯ ಸಿಗುವುದಿಲ್ಲ!

ಒಂದೊಮ್ಮೆ ಈ ರೀತಿ ರೇಷನ್ ಪಡೆಯದೇ ಇರುವವರ ಪಡಿತರ ಚೀಟಿಯು ರದ್ದಾದಲ್ಲಿ ರಾಜ್ಯ ಸರಕಾರದಿಂದ ಚಾಲನೆಯಲ್ಲಿರುವ ಗೃಹಲಕ್ಷ್ಮಿ, ಅನ್ನಭಾಗ್ಯ ಇತರೆ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ.

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಸೂಕ್ತ ಕಾರಣ ಇದ್ದಲ್ಲಿ ರೇಷನ್ ಕಾರ್ಡಾ ರದ್ದಾಗುವುದಿಲ್ಲ:

ಇಲಾಖೆ ಅಧಿಕಾರಿಗಳ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ ಒಟ್ಟು ಎಷ್ಟು ಜನ ಕಳೆದ 6 ತಿಂಗಳಲ್ಲಿ ರೇಷನ್ ತೆಗೆದುಕೊಳ್ಳುತಿಲ್ಲ ಎಂದು ಪಟ್ಟಿಯನ್ನು ಸಿದ್ದಪಡಿಸಿ ನಂತರ ಎರಡನೇ ಹಂತದಲ್ಲಿ ಈ ಫಲಾನುಭವಿಗಳು ಏಕೆ ರೇಷನ್ ಪಡೆಯುತ್ತಿಲ್ಲ ಎಂದು ಪರಿಶೀಲನೆ ಮಾಡಿ ಸೂಕ್ತ ಕಾರಣದಿಂದ ರೇಷನ್ ಪಡೆಯದೇ ಇದ್ದಲ್ಲಿ ಅಂತಹ ಕಾರ್ಡಗಳನ್ನು ರದ್ದುಪಡಿಸುವುದಿಲ್ಲ ಎಂದು ತಿಳಿಸಲಾಗಿದೆ.

ಉದಾಹರಣೆಗೆ: ಪಡಿತರ ಚೀಟಿ ಹೊಂದಿರುವವರು ಅನಾರೋಗ್ಯದಿಂದ ಹಾಸಿಗೆ ಹಿಡಿದು ರೇಷನ್ ಪಡೆಯದೇ ಇರುವುದು, ಪಡಿತರ ಚೀಟಿದಾರರು ಮರಣ ಹೊಂದಿರಬಹುದು, ಪಡಿತರ ಚೀಟಿದಾರರ ಕುಟುಂಬ ಬೇರೆಡೆಗೆ ಸ್ಥಳಾಂತರವಾಗಿರುವುದು.

ಈ ರೀತಿ ಮಾಡಿದರು ರೇಷನ್ ಕಾರ್ಡ ರದ್ದು:

ಒಂದಿಷ್ಟು ಜನ ಕೇವಲ ವೈದ್ಯಕೀಯ ವೆಚ್ಚದ ಸಹಾಯಧನ ಅಥವಾ ಇತರೆ ಸರಕಾರಿ ಯೋಜನೆಯಡಿ ಸಹಾಯಧನ ಪಡೆಯಲು ಮಾತ್ರ ರೇಷನ್ ಕಾರ್ಡ ಬಳಕೆ ಮಾಡಿಕೊಳ್ಳುತ್ತಿದ್ದು ರೇಷನ್ ಕಾರ್ಡ ಪಡೆಯುತ್ತಿಲ್ಲ ಅಂತಹ ರೇಷನ್ ಕಾರ್ಡಗಳನ್ನು ಪತ್ತೆ ಹಚ್ಚಿರುವ ಇಲಾಖೆ ಈ ಕಾರ್ಡಗಳನ್ನು ರದ್ದು ಮಾಡಲು ಮುಂದಾಗಿದೆ. ಈ ರೀತಿ ರದ್ದಾದ ಕಾರ್ಡದಾರರಿಗೆ ಇನ್ನು ಮುಂದೆ ರೇಷನ್ ಕಾರ್ಡ್ ಬಳಕೆ ಮಾಡಿಕೊಂಡು ಸಿಗುವ ಸರಕಾರಿ ಸೌಲಭ್ಯ ಸ್ಥಗಿತಗೊಳ್ಳಲಿವೆ.

ಇದನ್ನೂ ಓದಿ: Farm pond: ರಾಜ್ಯ ಸರ್ಕಾರದಿಂದ ಮತ್ತೆ ಕೃಷಿ ಭಾಗ್ಯ ಯೋಜನೆಗೆ ಮರು ಚಾಲನೆ! ಅನುದಾನ ಎಷ್ಟು? ಎಷ್ಟು ಜಿಲ್ಲೆ ಆಯ್ಕೆ ಮಾಡಲಾಗಿದೆ?

- Advertisment -
LATEST ARTICLES

Related Articles

- Advertisment -

Most Popular

- Advertisment -