Krishi Mela Bengaluru-2025: ಜಿಕೆವಿಕೆ ಕೃಷಿ ಮೇಳ-2025ಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ವಿವರ!

November 3, 2025 | Siddesh
Krishi Mela Bengaluru-2025: ಜಿಕೆವಿಕೆ ಕೃಷಿ ಮೇಳ-2025ಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ವಿವರ!
Share Now:

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರುವತಿಯಿಂದ 2025-26 ನೇ ಸಾಲಿನಲ್ಲಿ ಕೃಷಿ ಮೇಳವನ್ನು(Krishi Mela 2025) ಆಯೋಜನೆ ಮಾಡಲು ಅಧಿಕೃತ ದಿನಾಂಕವನ್ನು ನಿಗದಿ ಮಾಡಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದ್ದು ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

ಜಿಕೆವಿಕೆ ಕೃಷಿ ವಿವಿಯಿಂದ(GKVK) "ಸಮೃಧ ಕೃಷಿ-ವಿಕಸಿತ ಭಾರತ: ನೆಲ,ಜಲ ಮತ್ತು ಬೆಳೆ" ಎನ್ನುವ ಘೊಷವಾಕ್ಯದಡಿ ಈ ಬಾರಿಯ ಕೃಷಿ ಮೇಳವನ್ನು ಆಯೋಜನೆ ಮಾಡಿದ್ದು ರಾಜ್ಯ ಸರಕಾರದಡಿ ಬರುವ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು, ನಬಾರ್ಡ್ ಮತ್ತು ಕರ್ನಾಟಕ ಹಾಲು ಮಹಾಮಂಡಳಿಯ ಸಹಯೋಗದಲ್ಲಿ ಕೃಷಿ ಮೇಳವನ್ನು ಆಯೋಜನೆ ಮಾಡಲು ಅಧಿಕೃತ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: Ration Card-ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಪುನಃ ಅವಕಾಶ!

ಇಂದಿನ ಈ ಲೇಖನದಲ್ಲಿ ಜಿಕೆವಿಕೆ ಕೃಷಿ ಮೇಳ-2025(Krishi Mela Bengalure 2025) ದಲ್ಲಿ ಯಾವೆಲ್ಲ ವಿಶೇಷ ಆಕರ್ಷಣೆಗಳನ್ನು ಈ ಬಾರಿ ಆಯೋಜನೆ ಮಾಡಲಾಗಿದೆ? ಮೇಳವನ್ನು ಆಯೋಜನೆ ಮಾಡಿರುವ ದಿನಾಂಕ? ಮೇಳದಲ್ಲಿ ಮಳಿಗೆಯನ್ನು ಹಾಕಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Krishi Mela Bengaluru-2025 Date-ಕೃಷಿ ಮೇಳ ನಡೆಯುವ ದಿನಾಂಕ:

ಬೆಂಗಳೂರು ಜಿಕೆವಿಕೆ ಕೃಷಿ ವಿವಿಯಿಂದ 2025 ನೇ ವರ್ಷದ ಕೃಷಿ ಮೇಳವನ್ನು ಇದೆ ನವೆಂಬರ್ 13,14,15 ಮತ್ತು 16 ತಾರೀಖಿನವರೆಗೆ ಒಟ್ಟು ನಾಲ್ಕು(4) ದಿನ ಬೆಳಿಗ್ಗೆ 9-00 ರಿಂದ ಸಂಜೆ 6-00 ಗಂಟೆಯವರೆಗೆ ನಡೆಯಲಿದೆ.

Krishi Mela Bengaluru-2025 Details-ಕೃಷಿ ಮೇಳದ ವಿಶೇಷ ಆಕರ್ಷಣೆಗಳು:

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಒಟ್ಟು ನಾಲ್ಕು ದಿನ ಆಯೋಜನೆ ಮಾಡಿರುವ ಮೇಳದಲ್ಲಿ ಈ ಕೆಳಗಿನ ಪಟ್ಟಿಯಲ್ಲಿರುವ ವಿಶೇಷ ಪ್ರಾತ್ಯಕ್ಷಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

  • ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ.
  • ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ.
  • ಖುಷಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು.
  • ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು.
  • ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆ.
  • ಮಳೆ ಹಾಗೂ ಮೇಲ್ಲಾವಣಿ ನೀರಿನ ಕೊಯ್ಲು.
  • ತೋಟಗಾರಿಕೆ ಬೆಳೆಗಳು ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆ.
  • ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ.
  • ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳು.

ಇದನ್ನೂ ಓದಿ: High School Scholarship: 9-12 ತರಗತಿ ವಿದ್ಯಾರ್ಥಿಗಳಿಗೆ ರೂ 15,000/ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!

Krishi Mela Bengaluru

ಇದನ್ನೂ ಓದಿ: Power Sprayer-ಸಬ್ಸಿಡಿಯಲ್ಲಿ ರೂ 1,781/- ಪಾವತಿಸಿ ಪವರ್ ಸ್ಪ್ರೇಯರ್ ಪಡೆಯಲು ಅರ್ಜಿ ಆಹ್ವಾನ!

  • ಕೊಯೊಕ್ತರ ತಾಂತ್ರಿಕತೆಗಳು, ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ.
  • ಸಿರಿ ಧಾನ್ಯಗಳು ಮತ್ತು ಅವಗಳ ಮಹತ್ವ.
  • ಬಿತ್ತನೆ ಬೀಜಗಳ ಪರೀಕ್ಷೆ ಹಾಗೂ ಶೇಖರಣೆ.
  • ಜಲಾನಯನ ನಿರ್ವಹಣೆ.
  • ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ.
  • ಸಾವಯವ ಕೃಷಿ ಪದ್ಧತಿಗಳು.
  • ಕೃಷಿಯಲ್ಲಿ ನೂತನ ಮಾಹಿತಿ ತಂತ್ರಜ್ಞಾನ
  • ಸಮಗ್ರ ಕೀಟ, ರೋಗ ಹಾಗೂ ಪೋಷಕಾಂಶಗಳ ನಿರ್ವಹಣೆ
  • ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನ\

  • ಮಣ್ಣು ರಹಿತ ಕೃಷಿ
  • ಕೃಷಿ ಸ್ವಯಂ ಚಾಲಿತ ತಂತ್ರಜ್ಞಾನಗಳು
  • ಮಾರುಕಟ್ಟೆ ನೈಮಣ್ಯದ ಮಾಹಿತಿ
  • ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ವ್ಯವಸ್ಥೆ
  • ರೈತರ ಕೃಷಿ ತಾಂತ್ರಿಕ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ
  • ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ, ಕೃಷಿ ಪರಿಕರಗಳ ಹಾಗೂ ಪ್ರಕಟಣೆಗಳ ಮಾರಾಟ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: SBI Degree Scholarship- ಎಸ್.ಬಿ.ಐ ನಿಂದ ಪದವಿ ವಿದ್ಯಾರ್ಥಿಗಳಿಗೆ ರೂ 75,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!

Krishi Mela Place-ಕೃಷಿ ಮೇಳ-2025 ನಡೆಯುವ ಸ್ಥಳ:

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಅವರಣದಲ್ಲಿ ಒಟ್ಟು ನಾಲ್ಕು ದಿನ ಮೇಳ ನಡೆಯಲಿದೆ.

Krishi Mela Stall Booking-ಕೃಷಿ ಮೇಳದಲ್ಲಿ ಮಳಿಗೆಯನ್ನು ಬುಕ್ ಮಾಡುವುದು ಹೇಗೆ?

ಕೃಷಿ ಉದ್ದಿಮೆದಾರರು ಈ ಮೇಳದ ಪ್ರಯೋಜವನ್ನು ಪಡೆದುಕೊಂಡು ತಮ್ಮ ಉತ್ಪನ್ನವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಮಾಡಲು ಅವಕಾಶವಿರುತ್ತದೆ. ಇದಕ್ಕಾಗಿ ಮೇಳದಲ್ಲಿ ಮಳಿಗೆಯನ್ನು ಹಾಕಲು ಮುಂಚಿತವಾಗಿ ಸ್ಟಾಲ್/ಮಳಿಗೆಯನ್ನು ಬುಕ್ ಮಾಡಲು ಈ 08023638883 ಅಥವಾ 0802330153 ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ.

For More Information-ಮೇಳದ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು:

GKVK Webisite-ಅಧಿಕೃತ ವೆಬ್ಸೈಟ್: Click here
GKVK Helpline-ದೂರವಾಣಿ: 08023638883
GKVK Office Address-ಕಚೇರಿ ವಿಳಾಸ: ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560065

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: