Bele Samikshe-2025-ರೈತರ ಜಮೀನಿನ ಬೆಳೆ ಸಮೀಕ್ಷೆಗೂ AI ತಂತ್ರಜ್ಞಾನ! ಇಲ್ಲಿದೆ ಸಂಪೂರ್ಣ ಮಾಹಿತಿ!

November 4, 2025 | Siddesh
Bele Samikshe-2025-ರೈತರ ಜಮೀನಿನ ಬೆಳೆ ಸಮೀಕ್ಷೆಗೂ AI ತಂತ್ರಜ್ಞಾನ! ಇಲ್ಲಿದೆ ಸಂಪೂರ್ಣ ಮಾಹಿತಿ!
Share Now:

ರಾಜ್ಯಾದ್ಯಂತ ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಯ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಮೊಬೈಲ್ ಅಪ್ಲಿಕೇಶನ್(Crop Survey App) ಮೂಲಕ ಕೃಷಿ ಇಲಾಖೆಯಿಂದ(Karnataka Agriculture Department) ಪ್ರತಿ ವರ್ಷ ನಡೆಸುವ ಬೆಳೆ ಸಮೀಕ್ಷೆಗೂ ಸಹ AI ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗಿದ್ದು ಇದರಿಂದ ರೈತರಿಗೆ ಯಾವೆಲ್ಲ ಪ್ರಯೋಜನಗಳಿವೆ? ಇತ್ಯಾದಿ ವಿಷಯದ ಕುರಿತು ಅಗತ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ರೈತರ ಪಹಣಿ/RTC/ಊತಾರ್ ದಾಖಲೆಯಲ್ಲಿ ಬೆಳೆ ಮಾಹಿತಿಯನ್ನು(RTC Crop Name) ಸೇರ್ಪಡೆ ಮಾಡಲು, ಬೆಂಬಲ ಬೆಲೆ, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಯೋಜನೆಯ ಲಾಭವನ್ನು ರೈತರಿಗೆ ಒದಗಿಸಲು ಈ ಬೆಳೆ ಸಮೀಕ್ಷೆಯ(Crop Survey) ಮೂಲಕ ಸಂಗ್ರಹಿಸಿರುವ ಮಾಹಿತಿಯನ್ನು ಮಾತ್ರ ಪರಿಗಣಿಸುವುದರಿಂದ ಪ್ರತಿ ಒಬ್ಬ ರೈತರು ಈ ಸಮೀಕ್ಷೆಯ ಕುರಿತು ಮಾಹಿತಿಯನ್ನು ತಿಳಿದು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.

ಇದನ್ನೂ ಓದಿ: Krishi Mela Bengaluru-2025: ಜಿಕೆವಿಕೆ ಕೃಷಿ ಮೇಳ-2025ಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ವಿವರ!

ಅನೇಕ ರೈತರಿಗೆ ಬೆಳೆ ಸಮೀಕ್ಷೆಯ ಕುರಿತು ಮಾಹಿತಿಯ ಕೊರತೆಯಿದ್ದು ಈ ಸಮೀಕ್ಷೆಯನ್ನು ಏಕೆ ಮಾಡಲಾಗುತ್ತದೆ? ಇದರಿಂದಾಗುವ ಪ್ರಯೋಜನಗಳೇನು? ರೈತರು ತಮ್ಮ ಮೊಬೈಲ್ ಮೂಲಕವೇ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ದಾಖಲಿಸುವ ವಿಧಾನ ಹೇಗೆ? ಬೆಳೆ ಸಮೀಕ್ಷೆಯ ಕುರಿತು ಅಗತ್ಯ ಮಾಹಿತಿಯನ್ನು ತಮ್ಮ ಹಳ್ಳಿ ವ್ಯಾಪ್ತಿಯಲ್ಲಿ ಎಲ್ಲ ಪಡೆಯಬಹುದು? ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ:

Farmer Field Crop Survey-ರೈತರ ಜಮೀನಿನ ಬೆಳೆ ಸಮೀಕ್ಷೆಗೂ AI ತಂತ್ರಜ್ಞಾನ:

ಹಿಂದಿನ ವರ್ಷಗಳಲ್ಲಿ ಬೆಳೆ ಸಮೀಕ್ಷೆಯನ್ನು ಮೊಬೈಲ್ ಅಪ್ಲಿಕೇಶನ್ ಮೂಲಗ ರೈತರ ಜಮೀನನ್ನು ಭೇಟಿ ಮಾಡಿ ಜಿಪಿಎಸ್ ಆಧಾರಿತ ಪೋಟೋವನ್ನು ತೆಗೆದು ಸಮೀಕ್ಷೆಯನ್ನು ಮಾಡಲಾಗುತ್ತಿತ್ತು ಅದರೆ ಈ ಅಪ್ಲಿಕೇಶನ್ ಗೆ AI ತಂತ್ರಜ್ಞಾನವನ್ನು ಅಳವಡಿಕೆ ಮಾಡಿರಲ್ಲಿಲ್ಲ ಅದರೆ ಈ ವರ್ಷದಿಂದ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಗೆ ಎಐ ತಂತ್ರಜ್ಞಾನವನ್ನು ಅಳವಡಿಕೆ ಮಾಡಿದ್ದು, ಇದರಿಂದ ಬೆಳೆ ಸಮೀಕ್ಷೆಯಲ್ಲಿ ಆಗುವ ಲೋಪದೋಷಗಳನ್ನು ನಿಖರವಾಗಿ ಪತ್ತೆ ಹಚ್ಚಲು ಇಲಾಖೆಯ ಅಧಿಕಾರಿಗಳಿಗೆ ಸಹಕಾರಿಯಾಗಿದೆ.

ಇದನ್ನೂ ಓದಿ: Ration Card-ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಪುನಃ ಅವಕಾಶ!

Crop Survey In Karnataka-ಜಮೀನಿನ ಬೆಳೆ ಸಮೀಕ್ಷೆಯಲ್ಲಿ AI ತಂತ್ರಜ್ಞಾನ ಬಳಕೆಯ ಪ್ರಯೋಜನಗಳು:

ಬೆಳೆ ಸಮೀಕ್ಷೆಯ ಅಪ್ಲಿಕೇಶನ್ ನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್(AI) ಟೂಲ್ ಅನ್ನು ಅಳವಡಿಕೆ ಮಾಡಿರುದರಿಂದ ಕೃಷಿ ಇಲಾಕೆಯಿಂದ ಪ್ರತಿ ಹಳ್ಳಿಗೆ ನೇಮಕ ಮಾಡಿರುವ ಬೆಳೆ ಸಮೀಕ್ಷೆದಾರರು(PR) ರೈತರ ಜಮೀನನ್ನು ಭೇಟಿ ಮಾಡಿ ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರ್ ನಲ್ಲೇ ನಿಂತು 30 ರಿಂದ 150 ಡಿಗ್ರಿ ಒಳಗೆ ತೆಗೆದು ಜಿಪಿಎಸ್ ಪೋಟೋ ಗಳು ಮಾತ್ರ ಅಪ್ಲಿಕೇಶನ್ ನಲ್ಲಿ ದಾಖಲಾಗುತ್ತವೆ ಇನ್ನಿತರೆ ಅನಗತ್ಯ ಪೋಟೋಗಳು ದಾಖಲಾಗಿದೆ ತಿರಸ್ಕೃತಗೊಳ್ಳುತ್ತವೆ.

ಇದಲ್ಲದೇ ಜಮೀನಿನಲ್ಲಿ ಬೆಳೆದಿರುವ ಬೆಳೆಯ ಪೋಟೋವನ್ನು ತೆಗೆದಾಗ ಅದರಲ್ಲಿ ಸ್ಪಷ್ಟತೆಯಿಲ್ಲದೆ ಇದ್ದಲ್ಲಿ ಅಥವಾ ಅನ್ಯ ಮಾರ್ಗವನ್ನು ಅನುಸರಿಸಿ ಇತರೆ ಮೊಬೈಲ್ ನಿಂದ ಪೋಟೋ ತೆಗೆದು ಪೋಟೊ ದಾಖಲಿಸಿದ್ದರು ಇದು ತಿರಸ್ಕೃತಗೊಳ್ಳುತ್ತದೆ. ಇದರಿಂದ ನಿಖರವಾಗಿ ಬೆಳೆ ಮಾಹಿತಿಯನ್ನು ದಾಖಲಿಸಲು ಸಹಕಾರಿಯಾಗಿದೆ.

ಇದನ್ನೂ ಓದಿ: High School Scholarship: 9-12 ತರಗತಿ ವಿದ್ಯಾರ್ಥಿಗಳಿಗೆ ರೂ 15,000/ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!

Bele Samikshe

ಇದನ್ನೂ ಓದಿ: Power Sprayer-ಸಬ್ಸಿಡಿಯಲ್ಲಿ ರೂ 1,781/- ಪಾವತಿಸಿ ಪವರ್ ಸ್ಪ್ರೇಯರ್ ಪಡೆಯಲು ಅರ್ಜಿ ಆಹ್ವಾನ!

Bele Samikshe 2025-ನಿಮ್ಮ ಜಮೀನಿನ ಬೆಳೆ ಸಮೀಕ್ಷೆ ಹೇಗೆ ಮಾಡಲಾಗುತ್ತದೆ?

ಪ್ರತಿ ವರ್ಷ ರಾಜ್ಯಾದ್ಯಂತ ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಯ ಮಾಹಿತಿಯನ್ನು ನಿಖರವಾಗಿ ಡಿಜಿಟಲ್ ತಂತ್ರಾಂಶದಲ್ಲಿ ದಾಖಲಿಸಲು ಪ್ರತಿ ರೈತರ ಜಮೀನನ್ನು ಭೇಟಿ ಮಾಡಿ ಜಿಪಿಎಸ್ ಆಧಾರಿತ ಪೋಟೋ ವನ್ನು ತೆಗೆದು ಬೆಳೆ ಮಾಹಿತಿಯನ್ನು ದಾಖಲಿಸಲಾಗುತ್ತದೆ, ಇದಕ್ಕಾಗಿ ಕೃಷಿ ಇಲಾಖೆಯಿಂದ ಸಮೀಕ್ಷೆದಾರರನ್ನು/ಖಾಸಗಿ ನಿವಾಸಿ(PR) ಅನ್ನು ನೇಮಕ ಮಾಡಲಾಗಿರುತ್ತದೆ.

ಪ್ರತಿ ಹಳ್ಳಿ ಮಟ್ಟದಲ್ಲಿ ನೇಮಕ ಮಾಡಿರುವ ಖಾಸಗಿ ನಿವಾಸಿಗಳು(PR) ಮೊದಲಿಗೆ ಆ ಹಳ್ಳಿಯ ಎಲ್ಲಾ ರೈತರ ಸರ್ವೆ ನಂಬರ್ ವಿವರ ಇರುವ ನಕ್ಷೆಯನ್ನು ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಂತರ ನಿರ್ದಿಷ್ಟ ರೈತರ ಜಮೀನಿನ ತಾಕನ್ನು ಭೇಟಿ ಅಲ್ಲಿ ಬೆಳೆದಿರುವ ಬೆಳೆಯ ಜಿಪಿಎಸ್ ಪೋಟೋ ವನ್ನು ತೆಗೆದು ಬೆಳೆ ಮಾಹಿತಿಯನ್ನು ದಾಖಲಿಸಿ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಅಪ್ಲೋಡ್ ಮಾಡುತ್ತಾರೆ.

ಇದನ್ನೂ ಓದಿ: SBI Degree Scholarship- ಎಸ್.ಬಿ.ಐ ನಿಂದ ಪದವಿ ವಿದ್ಯಾರ್ಥಿಗಳಿಗೆ ರೂ 75,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!

Famer Crop Survey App-ರೈತರು ತಮ್ಮ ಮೊಬೈಲ್ ಮೂಲಕ ಬೆಳೆ ಮಾಹಿತಿ ದಾಖಲಿಸಬಹುದು:

ಕೃಷಿ ಇಲಾಖೆಯಿಂದ ನೇಮಕ ಮಾಡಿರುವ ಸಿಬ್ಬಂದಿಯನ್ನು ಹೊರತುಪಡಿಸಿ ರೈತರು ಸಹ ತಮ್ಮ ಮೊಬೈಲ್ ನಲ್ಲಿ "Famer Crop Survey App" ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೈ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಂಡು ಕೆಳಗಿನ ವಿಧಾನವನ್ನು ಅನುಸರಿಸಿ ಸಮೀಕ್ಷೆಯನ್ನು ಮಾಡಲು ಇಲಾಖೆಯಿಂದ ಅವಕಾಶ ನೀಡಲಾಗಿದೆ.

ಗೂಗಲ್ ಪ್ಲೇಸ್ಟೋರ್ > ರೈತರ ಬೆಳೆ ಸಮೀಕ್ಷೆ ಆಪ್-2025->ಡೌನ್ ಲೋಡ್ ಮಾಡಿ-"Famer Crop Survey App Download Link"

ಆ್ಯಪ್ ಓಪನ್ ಮಾಡಿ ಋತು : ಮುಂಗಾರು, ಲಾಗಿನ್ ಮಾಹಿತಿ (E-KYC) ಮೂಲಕ ಆಧಾ‌ರ್ ದೃಢೀಕರಣ (ಆಧಾರ್ ಸಂಖ್ಯೆ > ಒಟಿಪಿ ಜನರೇಷನ್), ರೈತರ ಮಾಹಿತಿ ನಮೂದಿಸಿ ಅಥವಾ ಪರಿಶೀಲಿಸಿ-> ಹೆಸರು ಜನ್ಮ ದಿನಾಂಕ - ವಿಳಾಸ – ಮೊಬೈಲ್ ಸಂಖ್ಯೆ (ನಮೂದಿಸಬೇಕು)- ಲಿಂಗ ನಂತರ ಸಕ್ತಿಯಗೊಳಿಸಿ->ಒಟಿಪಿ ಪಡೆಯಿರಿ -> ಸಲ್ಲಿಸಿ, ರೈತರ ಸರ್ವೆ ನಂ ಮಾಹಿತಿ ಪಡೆಯಿರಿ (ಸದರಿ ರೈತರು ಹೊಂದಿರುವ ಎಲ್ಲ ಸರ್ವೆಗಳ ಮಾಹಿತಿ ದೃಢೀಕರಿಸಿಕೊಳ್ಳುವುದು. ಉದಾ : ಗ್ರಾಮ ಸರ್ವೆ ಸಂಖ್ಯೆ -ಮಾಲೀಕರ ವಿವರ, ವಿಸ್ತೀರ್ಣ)

ಬೆಳೆ ಸಮೀಕ್ಷೆ ಆರಂಭಿಸು ( ಬೆಳೆ ಸಮೀಕ್ಷೆ ಮಾಡುವ ಸರ್ವೆ ನಂ ತಾಕನ್ನು ಆಯ್ಕೆ ಮಾಡಿ ಸದರಿ ಸರ್ವೆ ನಂಬರ್ನಲ್ಲಿಯೇ ನಿಂತು ಪ್ರಾರಂಭಿಸುವುದು), ಬೆಳೆಯ ವಿವರ ದಾಖಲಿಸಿ - ಬೆಳೆ ಹೆಸರು (ಉದಾ: ರಾಗಿ, ಮಾವು, ಹಿಪ್ಪುನೇರಳೆ, ತೆಂಗು, ಇತ್ಯಾದಿ), ಬೆಳೆಯ ವಿಧ (ಏಕಬೆಳೆ, ಅಂತರಬೆಳೆ, ಮಿತ್ತಬೆಳೆ), ಬಿತ್ತನೆ ಸಮಯ(ಕೃಷಿ ಬೆಳೆಗಳಲ್ಲಿ), ನೀರಾವರಿ ವಿಧ(ಮಳೆಯಾಶ್ರಿತ ಅಥವಾ ನೀರಾವರಿ), ವಿಸ್ತೀರ್ಣ(ಎಕರೆ:ಗುಂಟೆ:ಆಣಾ), ಬೆಳೆ ಹೆಸರು, ಬೆಳೆಯ ಛಾಯಚಿತ್ರ ಅಪ್ಲೋಡ್ ಮಾಡಿ

ಒಂದೇ ಸರ್ವೆನಂಬರ್ ನಲ್ಲಿ ಒಂದಕ್ಕಿಂತ ಹೆಚ್ಚಿನ ಬೆಳೆಗಳಿದ್ದಲ್ಲಿ ಮೇಲೆ ಸ್ಕೂಲ್ ಮಾಡಿ ಇತರೆ ಬೆಳೆಗಳನ್ನು ಮೇಲಿನ ಮಾಹಿತಿಗಳಂತೆ ಸೇರಿಸುವುದು, ಎಲ್ಲಾ ಬೆಳೆಗಳನ್ನು ದಾಖಲಿಸಿಕೊಂಡಿರುವ ಮಾಹಿತಿ ನಿಖರಪಡಿಸಿಕೊಳ್ಳಿ, ಸಮೀಕ್ಷೆ ಸೇವ್ ಮಾಡಿ ಅಥವಾ ಅಪ್ಲೋಡ್ ಮಾಡಿ,ಅಪ್ಲೋಡ್ ವಿವರದಲ್ಲಿ ಅಪ್ಲೋಡ್ ಯಶಸ್ವಿಯಾಗಿರುವುದನ್ನು ಖಾತರಿಪಡಿಸಿಕೊಳ್ಳುವುದು.

ಅಪ್ ಲೋಡ್ ಮಾಡಲಾದ ಬೆಳೆ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಇಲಾಖಾ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುತ್ತಾರೆ.

Crop Survey Helpline-ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ:- 8448447715

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: