Labour Card-ಕಾರ್ಮಿಕ ಕಾರ್ಡ ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು?

March 28, 2026 | Siddesh
Labour Card-ಕಾರ್ಮಿಕ ಕಾರ್ಡ ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು?
Share Now:

ನಮ್ಮ ನಾಡಿನ ಅಭಿವೃದ್ಧಿಯಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಅನನ್ಯವಾದುದು. ಸುಡುವ ಬಿಸಿಲು, ಮಳೆ ಎನ್ನದೆ ಬೆವರು ಸುರಿಸಿ ಭವ್ಯ ಕಟ್ಟಡಗಳನ್ನು ನಿರ್ಮಿಸುವ ಶ್ರಮಿಕ ವರ್ಗದ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ಸರ್ಕಾರವು 'ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ'ಯ ಮೂಲಕ ಸೌಲಭ್ಯಗಳನ್ನು ನೀಡುತ್ತಿದೆ. ಈ ಸೌಲಭ್ಯಗಳನ್ನು ಪಡೆಯಲು 'ಕಾರ್ಮಿಕ ಕಾರ್ಡ್' (Labour Card) ಅತ್ಯಗತ್ಯವಾಗಿದ್ದು, ಇದು ಕೇವಲ ಒಂದು ಗುರುತಿನ ಚೀಟಿಯಲ್ಲ, ಬದಲಿಗೆ ಕಾರ್ಮಿಕರ ಮತ್ತು ಅವರ ಕುಟುಂಬದ ಉಜ್ವಲ ಭವಿಷ್ಯದ ಭರವಸೆಯಾಗಿದೆ.

ಈ ಕಾರ್ಡ್ ಹೊಂದುವುದರಿಂದ ಕಾರ್ಮಿಕರಿಗೆ ಅಪಘಾತ ವಿಮೆ, ವೈದ್ಯಕೀಯ ನೆರವು ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ(Labour Card Application) ಸಹಾಯ ದೊರೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲೀಕರಣದ ಮೂಲಕ ಈ ಕಾರ್ಡ್ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಪ್ರತಿಯೊಬ್ಬ ಅರ್ಹ ಶ್ರಮಿಕರು ಇದರ ಸದುಪಯೋಗ ಪಡೆಯುವುದು ಇಂದಿನ ಅಗತ್ಯವಾಗಿದೆ. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಂಡು, ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳುವುದರಿಂದ ಸಂಕಷ್ಟದ ಸಮಯದಲ್ಲಿ ಸರ್ಕಾರದ ನೆರವು ನೇರವಾಗಿ ಅವರ ಕೈಸೇರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: CCTV Installation Training-ಉಚಿತ ಸಿಸಿಟಿವಿ ತರಬೇತಿಗೆ ಅರ್ಜಿ ಆಹ್ವಾನ!ಇಂದೇ ಅರ್ಜಿ ಸಲ್ಲಿಸಿ!

ಕಾರ್ಮಿಕ ಇಲಾಖೆಯು ನೀಡುವ ಈ ಕಾರ್ಡ್ ಅಸಂಘಟಿತ ವಲಯದ ಶ್ರಮಿಕರಿಗೆ ಗೌರವಯುತ ಜೀವನ ನಡೆಸಲು ದಾರಿದೀಪವಾಗಿದೆ. ವಿವಾಹ ಧನಸಹಾಯದಿಂದ(Labour Card Details) ಹಿಡಿದು ನಿವೃತ್ತಿ ವೇತನದವರೆಗೆ ಹತ್ತಾರು ಯೋಜನೆಗಳು ಇದರ ಅಡಿಯಲ್ಲಿ ಲಭ್ಯವಿವೆ. ನೀವು ಅಥವಾ ನಿಮ್ಮ ಪರಿಚಯಸ್ಥರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ತಡಮಾಡದೆ ಕಾರ್ಮಿಕ ಕಾರ್ಡ್ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಸಿಗುವ ಸೌಲಭ್ಯಗಳು ಬಡತನದ ರೇಖೆಯಲ್ಲಿರುವ ಕುಟುಂಬಗಳಿಗೆ ದೊಡ್ಡ ಆಸರೆಯಾಗುವುದರಲ್ಲಿ ಸಂಶಯವಿಲ್ಲ.

Labour Card Eligibility-ಯಾರೆಲ್ಲ ಕಾರ್ಡ ಪಡೆಯಲು ಅರ್ಹರು:

ಕಾರ್ಮಿಕ ಕಾರ್ಡ ಅನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತಾ ಮಾನದಂಡಗಳನ್ನು ಹೊಂದಿರುವವರು ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿ ಕಾರ್ಮಿಕ ಮಂಡಳಿಯ ಪ್ರಯೋಜನವನ್ನು ಪಡೆಯಲು ಕಾರ್ಡ ಅನ್ನು ಪಡೆದುಕೊಳ್ಳಬಹುದು.

18 ರಿಂದ 60 ವರ್ಷದೊಳಗಿನ ಸ್ತ್ರೀ ಮತ್ತು ಪುರುಷ ಕಾರ್ಮಿಕರು.

ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ, ಸೇತುವೆ ನಿರ್ಮಾಣ, ಪೈಂಟಿಂಗ್, ಪ್ಲಂಬಿಂಗ್, ಎಲೆಕ್ಟ್ರಿಷಿಯನ್, ಬಾರ್ ಬೆಂಡಿಂಗ್ ಮುಂತಾದ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿರುವವರು.

ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡಿರಬೇಕು.

ಇದನ್ನೂ ಓದಿ: Pension Scheme-ಪಿಂಚಣಿದಾರರ ಗಮನಕ್ಕೆ: ಇನ್ಮುಂದೆ ಪ್ರತಿ ತಿಂಗಳು ಪಿಂಚಣಿ ಪಡೆಯಲು ಈ ದಾಖಲೆ ಸಲ್ಲಿಕೆ ಕಡ್ಡಾಯ! ತಪ್ಪಿದರೆ ಹಣ ಸ್ಥಗಿತ!

Labour Card Benefits

ಇದನ್ನೂ ಓದಿ: Government Holiday-ಸರಕಾರಿ ರಜಾ ದಿನದಲ್ಲಿ ಮಹತ್ವದ ಬದಲಾವಣೆ! ತಪ್ಪದೇ ಈ ಸುದ್ದಿ ನೋಡಿ!

Labour Card Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಸಾರ್ವಜನಿಕರು ಕಾರ್ಮಿಕ ಕಾರ್ಡ ಅನ್ನು ಪಡೆಯಲು ನಿಮ್ಮ ಹತ್ತಿರದ 'ಕರ್ನಾಟಕ ಒನ್' (Karnataka One) ಅಥವಾ 'ಗ್ರಾಮ ಒನ್' (Gram One) ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.ಅಥವಾ ತಮ್ಮ ಸ್ವಂತ ಮೊಬೈಲ್ ಮೂಲಕ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಸ್ವತಃ ಅಥವಾ ಸೈಬರ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಕಾರ್ಮಿಕ ಇಲಾಖೆಯ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: Agri Helpline-ರೈತರಿಗೆ ಗುಡ್ ನ್ಯೂಸ್: ಕೃಷಿ ಇಲಾಖೆಯ ಯೋಜನೆಗಳ ಮಾಹಿತಿಗೆ ನೂತನ ಸಹಾಯವಾಣಿ ಬಿಡುಗಡೆ!

Labour Card Benefits-ಕಾರ್ಮಿಕ ಕಾರ್ಡ ಪ್ರಯೋಜನಗಳು:

ಕಾರ್ಮಿಕ ಕಾರ್ಡ್ ಪಡೆಯುವುದರಿಂದ ಆಗುವ ಪ್ರಯೋಜನಗಳ ವಿವರ ಈ ಕೆಳಗಿನಂತಿಚೆ:

ಶೈಕ್ಷಣಿಕ ನೆರವು: ಕಾರ್ಮಿಕರ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿವೇತನ.

ವೈದ್ಯಕೀಯ ಸೌಲಭ್ಯ: ಅಪಘಾತ ಸಂಭವಿಸಿದರೆ ಚಿಕಿತ್ಸಾ ವೆಚ್ಚ ಹಾಗೂ ಗಂಭೀರ ಕಾಯಿಲೆಗಳಿಗೆ ಧನಸಹಾಯ.

ವಿವಾಹ ಧನಸಹಾಯ: ಕಾರ್ಮಿಕರ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ಆರ್ಥಿಕ ನೆರವು.

ಪ್ರಸೂತಿ ಸೌಲಭ್ಯ: ಮಹಿಳಾ ಕಾರ್ಮಿಕರಿಗೆ ಹೆರಿಗೆಯ ಸಮಯದಲ್ಲಿ ಆರ್ಥಿಕ ಸಹಾಯ.

ಪಿಂಚಣಿ ಸೌಲಭ್ಯ: 60 ವರ್ಷ ತುಂಬಿದ ನಂತರ ಮಾಸಿಕ ಪಿಂಚಣಿ ದೊರೆಯುವ ಸಾಧ್ಯತೆ.

ಅಂತ್ಯಕ್ರಿಯೆ ವೆಚ್ಚ: ಕಾರ್ಮಿಕರು ಮೃತಪಟ್ಟಲ್ಲಿ ಅಂತ್ಯಕ್ರಿಯೆಗಾಗಿ ತಕ್ಷಣದ ಧನಸಹಾಯ ಮತ್ತು ಕುಟುಂಬಕ್ಕೆ ಪರಿಹಾರ.

ಇದನ್ನೂ ಓದಿ: Ramayana Exam 2026-ಶೃಂಗೇರಿ ಶಾರದಾ ಪೀಠದಿಂದ ರಾಮಾಯಣ ಪರೀಕ್ಷೆಗೆ ಅರ್ಜಿ! ವಿಜೇತ ವಿದ್ಯಾರ್ಥಿಗಳಿಗೆ ₹50,000 ಬಹುಮಾನ!

Required Documents For Application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು?

ಕಾರ್ಮಿಕ ಕಾರ್ಡ ಅನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ಅವಶ್ಯಕ ದಾಖಲೆ ಪಟ್ಟಿ ಹೀಗಿದೆ:

  • ಆಧಾರ್ ಕಾರ್ಡ್(Aadhar)
  • ಬ್ಯಾಂಕ್ ಪಾಸ್ ಬುಕ್ (ನೇರ ನಗದು ವರ್ಗಾವಣೆಗಾಗಿ)(Bank Pass Book)
  • ರೇಷನ್ ಕಾರ್ಡ್(Ration Card)
  • ನಾಮಿನಿ ಆಧಾರ್ ಕಾರ್ಡ್ (ವಾರಸುದಾರರ ವಿವರ)
  • ಉದ್ಯೋಗ ಪ್ರಮಾಣಪತ್ರ (90 ದಿನ ಕೆಲಸ ಮಾಡಿದ ಬಗ್ಗೆ ಉದ್ಯೋಗದಾತರಿಂದ ಅಥವಾ ಸಂಘಟನೆಯಿಂದ ದೃಢೀಕರಣ)
  • ಸ್ವಯಂ ಘೋಷಣೆ ಪತ್ರ

ಕಾರ್ಮಿಕರೇ, ನೀವು ಇನ್ನೂ ಕಾರ್ಡ್ ಮಾಡಿಸಿಲ್ಲವಾದರೆ ಕೂಡಲೇ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಮತ್ತು ಸರ್ಕಾರದ ಸೌಲಭ್ಯಗಳನ್ನು ನಿಮ್ಮದಾಗಿಸಿಕೊಳ್ಳಿ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: