HomeNew postsload shedding: ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದ ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ ನೀಡಿದ ರಾಜ್ಯ ಸರಕಾರ!

load shedding: ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದ ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ ನೀಡಿದ ರಾಜ್ಯ ಸರಕಾರ!

load shedding: ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ವಿದ್ಯುತ್ ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು  ನೆಮ್ಮದಿಯ ಸುದ್ದಿ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಇಂಧನ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಪ್ರಗತಿ ಪರಿಶೀಲನಾ ಸಭೆ ಮಾಡಿ ರೈತರಿಗೆ ನಿತ್ಯ ಮೂರುಪಾಳಿಯಲ್ಲಿ5 ಗಂಟೆಗಳ ವಿದ್ಯುತ್ ನೀಡುವ ಬಗ್ಗೆ ನಿರ್ಣಯ ಕೈಗೊಂಡು ಅನುಷ್ಠಾಣಕ್ಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಟ್ವೀಟ್​ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮಾಹಿತಿ ಹಂಚಿಕೊಂಡಿರುವ ಅವರು ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್‌ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡುವಂತೆ ಹಾಗೂ ಲೋಡ್‌ ಶೆಡ್ಡಿಂಗ್‌ ಆಗದಂತೆ ಎಚ್ಚರಿಕೆ ವಹಿಸುವಂತೆ ಎಸ್ಕಾಂ ಎಂ.ಡಿ.ಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: sheep and goat training- ಶೇ 50% ಸಹಾಯಧನದಲ್ಲಿ ಕುರಿ-ಆಡು ಸಾಕಾಣಿಕೆ ಆರಂಭಿಸಲು ಇಲ್ಲಿದೆ ಸುವರ್ಣಾವಕಾಶ!

ಹೊರ ರಾಜ್ಯದಿಂದ ಖರೀದಿಗೆ ಖರೀದಿ ಅಸ್ತು:

ನವೆಂಬರ್​ನಲ್ಲಿ ಉತ್ತರಪ್ರದೇಶದಲ್ಲಿ 300 ಮೆಗಾವ್ಯಾಟ್, ಪಂಜಾಬ್​ನಿಂದ 600 ಮೆಗಾವ್ಯಾಟ್​ ವಿದ್ಯುತ್ ಪಡೆಯಲಾಗುವುದು ಎಂದು ಮಾಹಿತಿ ತಿಳಿಸಲಾಗಿದ್ದು. KERC ಅನುಮೋದನೆಯೊಂದಿಗೆ 1500 ಮೆಗಾವ್ಯಾಟ್ ಖರೀದಿಗೆ ಸಜ್ಜಾಗಿದ್ದು, ಆ ಮೂಲಕ ರಾಜ್ಯದಲ್ಲಿ ವಿದ್ಯುತ್ ಕೊರತೆ ನಿವಾರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಿದ ರಾಜ್ಯದ ವಿದ್ಯುತ್ ಉತ್ಪಾದನೆ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ರಾಜ್ಯದ ವಾಸ್ತವ ಚಿತ್ರಣದ ವಿವರ ಈ ಕೆಳಗಿನಂತಿದೆ:

ಅಸ್ತಿತ್ವದಲ್ಲಿರುವ ಎಲ್ಲಾ ಕಲ್ಲಿದ್ದಲು ಸಂಸ್ಥೆಗಳಿಂದ ತಿಂಗಳಿಗೆ 15 ಲಕ್ಷ MT ಪಡೆಯಲು ದಿನವಹಿ ಕ್ರಮವಹಿಸಲಾಗಿದೆ ಹಾಗೂ ನಿಗದಿಯಂತೆ ಪಡೆಯಲಾಗುತ್ತಿದ್ದು, ಪ್ರಸ್ತುತ ಕೊರತೆಯಿರುವುದಿಲ್ಲ

ನಿರಂತರ ಪರಿಶ್ರಮದಿಂದ ಸೆಪ್ಟೆಂಬರ್ ತಿಂಗಳಿನಲ್ಲಿ MCL – RSR ನಿಂದ 2 ಲಕ್ಷ MT ಹೆಚ್ಚುವರಿ ಕಲ್ಲಿದ್ದಲು ಪಡೆಯಲಾಗಿದೆ.

2.5 ಲಕ್ಷ ಟನ್ ಆಮದು ಮಾಡಿದ ಕಲ್ಲಿದ್ದಲು ಪಡೆಯಲು ಟೆಂಡರ್ ಮಾಡಲಾಗಿದ್ದು, ಮೌಲ್ಯಮಾಪನ ಮಾಡಲಾಗುತ್ತಿದೆ, ಆಮದು ಕಲ್ಲಿದ್ದಲಿನಲ್ಲಿ high Calorific Value ಇರುವುದರಿಂದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ವರ್ಧಿಸುತ್ತದೆ.

ಗುಣಮಟ್ಟವನ್ನು ಸುಧಾರಿಸಲು ತೊಳೆದ ಕಲ್ಲಿದ್ದಲನ್ನು ಪಡೆಯುವ ಪ್ರಸ್ತಾವನೆಯನ್ನು ಸಕ್ರಿಯವಾಗಿ ಪರಿಗಣಿಸಲಾಗುತ್ತಿದೆ.

ವಿನಿಮಯ / ದ್ವಿಪಕ್ಷೀಯ ವಿನಿಮಯದಿಂದ ವಿದ್ಯುತ್ತನ್ನು ಪಡೆಯುವುದು.

ಇದನ್ನೂ ಓದಿ: free sewing machine scheme-2023: ಉಚಿತವಾಗಿ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಕ್ರಮ:

  • ಜಲವಿದ್ಯುತ್ ಲಭ್ಯತೆಯಲ್ಲಿ 3,000 MU ರಷ್ಟು ಕಡಿಮೆಯಾಗಿದೆ. ಪ್ರತಿ ದಿನಕ್ಕೆ ಸರಾಸರಿ 10MUs ಜಲವಿದ್ಯುತ್ತನ್ನು ಗರಿಷ್ಠ ಬೇಡಿಕೆ ಪೂರೈಸಲು ಮತ್ತು ವಿದ್ಯುತ್ ಜಾಲದ ನಿರ್ವಹಣೆಗಾಗಿ ಮಾತ್ರ ಬಳಸಲಾಗುತ್ತಿದೆ.
  • ಹಲವಾರು ಶಾಖೋತ್ಪನ್ನ ಘಟಕಗಳಿಗೆ AOH ಅನ್ನು ಮಳೆಗಾಲದಲ್ಲಿ ನಿಗದಿಪಡಿಸಲಾಗಿತ್ತು. ಹೆಚ್ಚಿನ ಬೇಡಿಕೆಯ ಕಾರಣದಿಂದ ಶಾಖೋತ್ಪನ್ನ ಘಟಕಗಳನ್ನು ಮರುಚಾಲನೆಗೊಳಿಸಲಾಗಿದೆ.
  • ನಾಗಪುರ / ರಾಮಗೊಂಡಂ ಪ್ರದೇಶದಲ್ಲಿ ಮಳೆಯಿಂದಾಗಿ ಕಲ್ಲಿದ್ದಲಿನ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಸದರಿ ಸಮಸ್ಯೆಗಳ ಬಗ್ಗೆ ಕಲ್ಲಿದ್ದಲು ಮಂತ್ರಾಲಯದೊಂದಿಗೆ ವ್ಯವಹರಿಸಲಾಗಿದೆ.
  • ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಡಿಕೆ 40-50% ಹೆಚ್ಚಾಗಿದೆ. ಮಳೆಯ ಕೊರತೆ, ಕೃಷಿ ಪಂಪ್ ಸೆಟ್ ಗಳ ಹೆಚ್ಚಿನ ವಿದ್ಯುತ್ ಬೇಡಿಕೆ.
  • ದೈನಂದಿನ ಬಳಕೆಯು 180 ಮಿಲಿಯನ್ ಯೂನಿಟ್ ನಿಂದ 260 ಮಿಲಿಯನ್ ಯೂನಿಟ್ ಗಳಿಗೆ ಏರಿಕೆಯಾಗಿದೆ. ಗರಿಷ್ಠ ಹಗಲಿನ ವಿದ್ಯುತ್ ಬೇಡಿಕೆ 11,000 MW ನಿಂದ 16,000 MW ಗೆ ಏರಿಕೆಯಾಗಿದೆ.
  • ಜಲವಿದ್ಯುತ್ ಮತ್ತು ಪವನ ವಿದ್ಯುತ್ ಲಭ್ಯತೆಯಲ್ಲಿನ ಕೊರತೆಯಿಂದಾಗಿ, ರಾತ್ರಿಯ ವೇಳೆಯಲ್ಲಿ ಸುಮಾರು 10,000 MW ವಿದ್ಯುತ್ ಕೊರತೆ ಎದುರಿಸಲಾಗುತ್ತಿದೆ.
  • ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿಯೂ ಸಹ ಹೆಚ್ಚಿನ ಬೇಡಿಕೆಯಿರುತ್ತದೆ, ಅದರ ಹೊರತಾಗಿಯೂ ರಾಜ್ಯದಿಂದ 1000 ರಿಂದ 1500 MW ಖರೀದಿಸಲು ಪ್ರಯತ್ನಗಳು ನಡೆಯುತ್ತಿವೆ.

ಇದನ್ನೂ ಓದಿ: FID Number-2023: ಈ ನಂಬರ್ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮೆ! ಕೂಡಲೇ FID ಮಾಡಿಸಿಕೊಳ್ಳಿ.

ವಿದ್ಯುತ್ ಸರಬರಾಜು / ವಿದ್ಯುತ್ ವಿತರಣೆಯ ಮೇಲ್ವಿಚಾರಣೆ:

  • ವಿದ್ಯುತ್ ಪೂರೈಕೆಯ ದೈನಂದಿನ ಮೇಲ್ವಿಚಾರಣೆಯನ್ನು ಅಪರ ಮುಖ್ಯ ಕಾರ್ಯದರ್ಶಿ, ಇ೦ಧನ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು KPTCL ರವರ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿದೆ.
  • ಪ್ರತಿ ಜಿಲ್ಲೆಯಲ್ಲಿ ಉಪಕೇಂದ್ರವಾರು ಮತ್ತು ಫೀಡರ್‌ವಾರು ವಿದ್ಯುತ್ ಪೂರೈಕೆ ಬಗ್ಗೆ ಮೇಲ್ವಿಚಾರಣೆ ನಡೆಸಲು KPTCL / ESCOM ಗಳ ಮುಖ್ಯ ಇಂಜಿನಿಯರ್ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
  • ವಿದ್ಯುತ್ ಸರಬರಾಜು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರುಗಳು, ಎಲ್ಲಾ ಭಾಗೀದಾರರೊಂದಿಗೆ ಸಮರ್ಪಕ ರೀತಿಯಲ್ಲಿ ಸಂವಹನವನ್ನು ಮತ್ತು ವಿದ್ಯುತ್ ಪೂರೈಕೆಯ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯನಿರ್ವಹಿಸುತ್ತಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಬಲವರ್ಧನೆ:

  • KPCLನ 370MW ಅನಿಲ ವಿದ್ಯುತ್ ಉತ್ಪಾದನಾ ಘಟಕವನ್ನು (YCCP) ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗಿದೆ.
  • ವಿಕೇಂದ್ರಿಕೃತ ಸೌರ ವಿದ್ಯುತ್ ಮೂಲಕ IP ಸೆಟ್‌ಗಳಿಗೆ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ KUSUM-C ಅಡಿಯಲ್ಲಿ ಮೊದಲ ಹಂತದಲ್ಲಿ 1300MW ಹಾಗೂ ಎರಡನೇ ಹಂತದಲ್ಲಿ 1200MW ಕೈಗೆತ್ತಿಕೊಳ್ಳಲಾಗುವುದು.
  • ಪಾವಗಡದಲ್ಲಿ ಹೆಚ್ಚುವರಿಯಾಗಿ 300MW ಮತ್ತು ಕಲಬುರ್ಗಿಯಲ್ಲಿ 500MW ಸೋಲಾರ್ ಪಾರ್ಕ್ ಸ್ಥಾಪನೆ.
  • ಶರಾವತಿಯಲ್ಲಿ 2,000 MW ಪಂಪ್ ಹೈದ್ರೋ ಪ್ಲಾಂಟ್ ಕೈಗೆತ್ತಿಕೊಳ್ಳಲಾಗುತ್ತಿದೆ. ಇದಕ್ಕೆ ಬೇಕಾದ CEA, CWC ಮತ್ತು MOEFCC ಅನುಮೋದನೆಗಳ ಬಗ್ಗೆ ಶೀಘ್ರವಾಗಿ ಕ್ರಮವಹಿಸಲಾಗುತ್ತಿದ್ದು, ಡಿಸೆಂಬರ್-2023 ರೊಳಗೆ ಪಡೆಯಲಾಗುವುದು.
  • ಛತ್ತೀಸ್‌ಗಢದ ಗೋದ್ರಾದಲ್ಲಿ ರಾಜ್ಯದ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಯನ್ನು ಖಾಸಗಿ ಹೂಡಿಕೆ / ಜಂಟಿ ಹೂಡಿಕೆಯಡಿ ಕೈಗೊಳ್ಳಲು ಕ್ರಮವಹಿಸಲಾಗುತ್ತಿದೆ.
  • ಇತರ ರಾಜ್ಯಗಳಲ್ಲಿನ stressed out ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಖರೀದಿಸಲು ಪ್ರಸ್ತಾಪಿಸಲಾಗಿದೆ.
  • ವಿದ್ಯುತ್ ವಿನಿಮಯದಲ್ಲಿನ ವಿದ್ಯುತ್ ಲಭ್ಯತೆಯ ಮೇಲ್ವಿಚಾರಣೆಯನ್ನು ಪ್ರತಿ ಗಂಟೆಯ ಆಧಾರದಲ್ಲಿ ಕೈಗೊಳ್ಳಲಾಗುತ್ತಿದ್ದು, SLDC ಯ projections ಹಾಗೂ ಅವಶ್ಯಕತೆ ಅನುಗುಣವಾಗಿ ವಿದ್ಯುತ್ ಖರೀದಿಸಲು Bid ಗಳನ್ನು ಕರೆಯಲಾಗುತ್ತಿದೆ.
  • ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳೊಂದಿಗೆ bilateral power swapping ಆಧಾರದಲ್ಲಿ ವಿದ್ಯುತ್ ಪಡೆಯಲಾಗುತ್ತಿದೆ. – ಈಗ ಪಡೆಯುತ್ತಿರುವ ವಿದ್ಯುತ್ ಅನ್ನು ಮು೦ದಿನ ಮುಂಗಾರು ಅವಧಿಗಳಲ್ಲಿ ಹಿಂತಿರುಗಿಸಲಾಗುವುದು.
  • ಅಲ್ಪಾವಧಿ ಆಧಾರದಲ್ಲಿ 1300 MW ವಿದ್ಯುತ್ ಖರೀದಿ ಕೈಗೊಳ್ಳಲು KERC ರವರ ಅನುಮೋದನೆ ಪಡೆಯಲಾಗಿದ್ದು, ಟೆಂಡರ್ ಕರೆಯಲಾಗುತ್ತಿದೆ.
  • ರಾಜ್ಯದಲ್ಲಿನ open access generators (ಶಾಖೋತ್ಪನ್ನ, ಸಹ-ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಮೂಲ) ಗಳಿಂದ ವಿದ್ಯುತ್ ಪಡೆಯಲು “ರಾಷ್ಟ್ರೀಯ ವಿಪತ್ತಿನ ಅಡಿಯಲ್ಲಿ” ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಅನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಸುಮಾರು 800 MW ವಿದ್ಯುತ್ ಸಿಗಲಿದೆ.

ಇದನ್ನೂ ಓದಿ: Annabhagya DBT Status: “ಅನ್ನಭಾಗ್ಯ ಯೋಜನೆ” ರೂ 240 ಕೋಟಿ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ವರ್ಗಾವಣೆ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.

ನವೆಂಬರ್‌ನಿಂದ ಉತ್ತರ ಪ್ರದೇಶದಿಂದ 300 ಮೆ.ವ್ಯಾ., ಪಂಜಾಬ್‌ ನಿಂದ 600 ಮೆ.ವ್ಯಾ, ಕೆ.ಇ.ಆರ್.ಸಿ.. ಅನುಮೋದನೆಯೊಂದಿಗೆ 1,300 – 1500 ಮೆಗಾವ್ಯಾಟ್‌ ಅಲ್ಪಾವಧಿ ವಿದ್ಯುತ್‌ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು.
– ಮುಖ್ಯಮಂತ್ರಿ @siddaramaiah #Electricity pic.twitter.com/zHRAVDvbdh — CM of Karnataka (@CMofKarnataka) October 13, 2023

Most Popular

Latest Articles

Related Articles